ಪ್ರಧಾನ ಮಂತ್ರಿಯವರ ಕಛೇರಿ

ಗೋವಾ ವಿಮೋಚನಾ ದಿನದ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಕಟಣಾ ದಿನಾಂಕ: 19 DEC 2020 9:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗೋವಾ ವಿಮೋಚನಾ ದಿನದ ಅಂಗವಾಗಿ ಗೋವಾದ ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಗೋವಾ ವಿಮೋಚನಾ ದಿನದ ಈ ವಿಶೇಷ ಸಂದರ್ಭದಲ್ಲಿ ಗೋವಾದ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಶುಭಾಶಯಗಳನ್ನು ಕೋರುತ್ತೇನೆ. ಗೋವಾವನ್ನು ಸ್ವತಂತ್ರಗೊಳಿಸಲು ಶ್ರಮವಹಿಸಿ, ಹೋರಾಡಿದ ಎಲ್ಲಾ ಶೌರ್ಯವಂತರನ್ನು ನಾವು ಹೆಮ್ಮೆಯಿಂದ ಸ್ಮರಿಸೋಣ. ಮುಂದಿನ ದಿನಗಳಲ್ಲಿ ಗೋವಾ ರಾಜ್ಯ ನಿರಂತರ ಪ್ರಗತಿ ಪಥದಲ್ಲಿ ಸಾಗಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1682291) ವಿಸಿಟರ್ ಕೌಂಟರ್ : 263