ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 3.05 ಲಕ್ಷಕ್ಕೆ ಕುಸಿತ
ಕಳೆದ 21 ದಿನಗಳಂಚೆಗೆ ನಿರಂತರವಾಗಿ ಪ್ರತಿದಿನ 40ಸಾವಿರಕ್ಕಿಂತ ಕಡಿಮೆ ಹೊಸ ಸೋಂಕು ಪ್ರಕರಣ
ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.66ರಷ್ಟು ಪ್ರಕರಣ 10 ರಾಜ್ಯಗಳು/ ಕೇಂದ್ರಾಳಿತ ಪ್ರದೇಶದಲ್ಲಿ ದಾಖಲು
Posted On:
20 DEC 2020 11:28AM by PIB Bengaluru
ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಇಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3.05ಲಕ್ಷ (3,05,344)ಕ್ಕೆ ಇಳಿಕೆಯಾಗಿದೆ.
ಪ್ರತಿದಿನ ಹೊಸ ಪ್ರಕರಣಗಳಿಗಿಂತ ಹೆಚ್ಚಿನ ಸಂಖ್ಯೆಯ ಸೋಂಕಿತರು ಗುಣಮುಖರಾಗುತ್ತಿರುವುದರಿಂದ ಇದು ಸಾಧ್ಯವಾಗಿದ್ದು, ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಿವ್ವಳ ಕಡಿಮೆಯಾಗಿದೆ.
ದೇಶದ ಒಟ್ಟು ಪಾಸಿಟಿವ್ ಪ್ರಕರಣದಲ್ಲಿ ಸದ್ಯ ಭಾರತದಲ್ಲಿನ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇ.3.04ರಷ್ಟು ಮಾತ್ರ. ಕಳೆದ 24 ಗಂಟೆಗಳಲ್ಲಿ 29,690 ಸೋಂಕಿತರು ಗುಣಮುಖರಾಗಿವುದರಿಂದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ನಿವ್ವಳ 3,407 ಪ್ರಕರಣ ಇಳಿಕೆಯಾಗಿದೆ.
ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.66ರಷ್ಟು ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.
ಕಳೆದ 24 ಗಂಟೆಗಳಲ್ಲಿ 26,624 ಹೊಸ ಸೋಂಕು ಪ್ರಕರಣ. ದೃಢಪಟ್ಟಿವೆ. ಅದೇ ರೀತಿ ಕಳೆದ 21 ದಿನಗಳಿಂದ ಪ್ರತಿದಿನ ಹೊಸದಾಗಿ 40ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿವ
ಒಟ್ಟಾರೆ ಗುಣಮುಖವಾಗಿರುವ ಪ್ರಕರಣಗಳು 96 ಲಕ್ಷದ ಸನಿಹದಲ್ಲಿ(95,80,402)ದೆ.
ಹೊಸದಾಗಿ ದಾಖಲಾಗುತ್ತಿರುವ ಸೋಂಕು ಪ್ರಕರಣಗಳಿಗೂ ಮತ್ತು ಹೊಸದಾಗಿ ಗುಣಮುಖವಾಗುತ್ತಿರುವ ಪ್ರಕರಣಗಳ ನಡುವಿನ ಅಂತರ ಸುಧಾರಿಸುತ್ತಿದ್ದು, ಚೇತರಿಕೆ ಪ್ರಮಾಣ ಇಂದು ಶೇ.95.51ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.74.68ರಷ್ಟು ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.
ಕೇರಳದಲ್ಲಿ ಪ್ರತಿದಿನ ಸೋಂಕು ಪ್ರಕರಣಗಳು ಗರಿಷ್ಠ ಅಂದರೆ 4,749 ಸೋಂಕಿತರು ಗುಣಮುಖರಾಗಿದ್ದಾರೆ. ಆನಂತರ ಮಹಾರಾಷ್ಟ್ರದಲ್ಲಿ 3,119 ಮತ್ತು ಪಶ್ಚಿಮ ಬಂಗಾಳದಲ್ಲಿ 2,717 ಸೋಂಕಿತರು ಗುಣಮುಖರಾಗಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಶೇ 76.62ರಷ್ಟು ಪ್ರಕರಣಗಳು ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.
ಕೇರಳದಲ್ಲಿ ಪ್ರತಿದಿನ ಅತಿ ಹೆಚ್ಚಿನ ಹೊಸ ಪ್ರಕರಣಗಳು 6,293 ದೃಢಪಟ್ಟಿವೆ ಮತ್ತು ಆನಂತರ ಮಹಾರಾಷ್ಟ್ರದಲ್ಲಿ 3940 ಪ್ರಕರಣಗಳು ವರದಿಯಾಗವೆ.
ಕಳೆದ 24 ಗಂಟೆಗಳಲ್ಲಿ 341 ಸೋಂಕಿತರು ಸಾವನ್ನಪ್ಪಿದ್ದಾರೆ.
ಹೊಸದಾಗಿ ಮರಣವನ್ನಪ್ಪಿರುವ ಸೋಂಕಿತರಲ್ಲಿ ಶೇ 81.23ರಷ್ಟು ಪ್ರಕರಣ ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.
ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆ(74) ಸಾವು ಸಂಭವಿಸಿವೆ. ನಂತರ ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ಕ್ರಮವಾಗಿ 43 ಮತ್ತು 32 ಮಂದಿ ಸಾವನಪ್ಪಿದ್ದರು.
***
(Release ID: 1682174)
Visitor Counter : 188
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam