ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಸಕ್ರಿಯ ಪ್ರಕರಣಗಳ ಇಳಿಕೆ; 149 ದಿನಗಳಲ್ಲಿ 3.52 ಲಕ್ಷಕ್ಕೆ ಕುಸಿತ
ಕಳೆದ 17 ದಿನಗಳಿಂದ ದೈನಂದಿನ ಹೊಸ ಕೊರೊನಾ ಪ್ರಕರಣಗಳನ್ನು ಹಿಂದಿಕ್ಕಿದ ಚೇತರಿಕೆ ದರ
ಒಟ್ಟು ಚೇತರಿಕೆ ಪ್ರಮಾಣ 93.88 ಲಕ್ಷಕ್ಕೆ ಏರಿಕೆ, 95% ಸಮೀಪಿಸಿದ ಚೇತರಿಕೆ ದರ
Posted On:
14 DEC 2020 10:44AM by PIB Bengaluru
ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 3,52,586ಕ್ಕೆ ಇಳಿಕೆ ಕಂಡಿದೆ. ದೇಶಾದ್ಯಂತ ಇದುವರೆಗೆ ಕಾಣಿಸಿಕೊಂಡಿರುವ ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ 3.57%ಗೆ ತಗ್ಗಿದೆ. 149 ದಿನಗಳ ನಂತರ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ. 2020 ಜುಲೈ 18ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 3,58,692 ದಾಖಲಾಗಿತ್ತು.
ದಿನನಿತ್ಯ ಪತ್ತೆಯಾಗುತ್ತಿರುವ ಕೊರೊನಾ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಿದೆ. ಕಳೆದ 24 ತಾಸುಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,960ರಷ್ಟು ಇಳಿಕೆ ಕಂಡಿದೆ.
ಸಕ್ರಿಯ ಪ್ರಕರಣಗಳ ಕುಸಿತ ಮುಂದುವರಿಕೆ, ಇದೀಗ 4 ಲಕ್ಷ ಮಟ್ಟದಿಂದ ಕೆಳಗೆ
ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 27,071 ಹೊಸ ಪ್ರಕರಣಗಳು ದೃಢಪಟ್ಟರೆ, ಒಂದೇ ದಿನದಲ್ಲಿ 30,695 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 17 ದಿನಗಳಲ್ಲಿ ಚೇತರಿಕೆ ಪ್ರಮಾಣ ಹೊಸ ಪ್ರಕರಣಗಳನ್ನು ಹಿಂದಿಕ್ಕಿದೆ.
ಕಳೆದ 17 ದಿನಗಳಲ್ಲಿ ಹೊಸ ಪ್ರಕರಣಗಳನ್ನು ಹಿಂದಿಕ್ಕಿದ ಚೇತರಿಕೆ ದರ
ದೇಶಾದ್ಯಂತ ಒಟ್ಟು ಚೇತರಿಕೆ ಪ್ರಕರಣಗಳ ಸಂಖ್ಯೆ 94 ಲಕ್ಷಕ್ಕೆ ಸಮೀಪಿಸುತ್ತಿದೆ(93,88,159). ಇದರೊಂದಿಗೆ ಚೇತರಿಕೆ ದರ 94.98%ಗೆ ಸುಧಾರಣೆ ಕಂಡಿದೆ. ಚೇತರಿಕೆ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ನಿರಂತರ ಬೆಳವಣಿಗೆ ಕಾಣುತ್ತಿದ್ದು, ಅದೀಗ 90,35,573ರಷ್ಟಿದೆ.
ಚೇತರಿಕೆ ಪ್ರಕರಣ 93 ಲಕ್ಷ ದಾಟಿದೆ ಮತ್ತು 4 ಲಕ್ಷಕ್ಕಿಂತ ಕೆಳಕ್ಕೆ ತಗ್ಗಿದ ಸಕ್ರಿಯ ಪ್ರಕರಣಗಳು
ಶೇಕಡ 75.58 ಹೊಸ ಚೇತರಿಕೆ ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿದೆ.
ಕೇರಳ ರಾಜ್ಯದಲ್ಲಿ ನಿನ್ನೆ ಒಂದೇ ದಿನ ಗರಿಷ್ಠ ಸಂಖ್ಯೆಯ ಅಂದರೆ, 5,258 ಸೋಂಕಿತರು ಗುಣಮುಖರಾದರೆ, ಮಹಾರಾಷ್ಟ್ರದಲ್ಲಿ 3,083 ಮತ್ತು ಪಶ್ಚಿಮ ಬಂಗಾಳದಲ್ಲಿ 2,994 ಜನರು ಗುಣಮುಖರಾಗಿದ್ದಾರೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 76% ಹೊಸ ಚೇತರಿಕೆ ಪ್ರಕರಣಗಳು
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ 75.82% ಹೊಸ ಪ್ರಕರಣಗಳು ಪತ್ತೆಯಾಗಿವೆ.
ಕೇರಳದಲ್ಲಿ ನಿನ್ನೆ ಗರಿಷ್ಠ 4,698, ಮಹಾರಾಷ್ಟ್ರದಲ್ಲಿ 3,717 ಮತ್ತು ಪಶ್ಚಿಮ ಬಂಗಾಳದಲ್ಲಿ 2,580 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 76% ಹೊಸ ಪ್ರಕರಣಗಳು
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 336 ಸಾವುಗಳು ಸಂಭವಿಸಿದ್ದು, ಅದರಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 79.46% ಸಾವಿಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 70 ಸಾವುಗಳು ಅಂದರೆ 20.83%, ಪಶ್ಚಿಮ ಬಂಗಾಳದಲ್ಲಿ 47 ಮತ್ತು ದೆಹಲಿಯಲ್ಲಿ 33 ಸಾವುಗಳು ವರದಿಯಾಗಿವೆ.
***
(Release ID: 1680551)
Visitor Counter : 169
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam