ಪ್ರಧಾನ ಮಂತ್ರಿಯವರ ಕಛೇರಿ
ಡಿಸೆಂಬರ್ 15ರಂದು ಕಚ್ ಗೆ ಪ್ರಧಾನಿ ಭೇಟಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ
Posted On:
13 DEC 2020 6:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಕಚ್ ನ ಧೋರ್ಡೋಗೆ 2020ರ ಜನವರಿ 15ರಂದು ಭೇಟಿ ನೀಡಲಿದ್ದು, ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ಉಪ್ಪುನೀರು ಶುದ್ಧೀಕರಣ ಘಟಕ, ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ಮತ್ತು ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಸ್ಥಾವರ ಸೇರಿವೆ. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಉಪಸ್ಥಿತರಿರುತ್ತಾರೆ. ಪ್ರಧಾನಮಂತ್ರಿ ವೈಟ್ ರಾನ್ ಗೆ ಭೇಟಿ ನೀಡಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.
ತನ್ನ ವಿಶಾಲವಾದ ಕರಾವಳಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗುಜರಾತ್, ಕಚ್ ನ ಮಾಂಡ್ವಿಯಲ್ಲಿ ಉದ್ದೇಶಿತ ಉಪ್ಪು ನೀರು ಶುದ್ಧೀಕರಣ ಘಟಕದೊಂದಿಗೆ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮಹತ್ವದ ಹೆಜ್ಜೆ ಇಡುತ್ತಿದೆ. ನಿತ್ಯ 10 ಕೋಟಿ ಲೀಟರ್ ಸಾಮರ್ಥ್ಯ (100 ಎಂಎಲ್.ಡಿ) ಹೊಂದಿರುವ ಈ ಉಪ್ಪು ನೀರು ಶುದ್ಧೀಕರಣ ಘಟಕವು ನರ್ಮದಾ ಗ್ರಿಡ್, ಸೌನಿ ನೆಟ್ ವರ್ಕ್ ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರಿನ ಮೂಲಸೌಕರ್ಯಗಳಿಗೆ ಪೂರಕವಾಗಿ ಗುಜರಾತ್ ನಲ್ಲಿ ನೀರಿನ ಸುರಕ್ಷತೆಯನ್ನು ಬಲಪಡಿಸುತ್ತದೆ. ಇದು ದೇಶದಲ್ಲಿ ಸುಸ್ಥಿರ ಮತ್ತು ಕೈಗೆಟುಕುವ ಜಲ ಸಂಪನ್ಮೂಲ ಕೊಯ್ಲಿಗೆ ಪ್ರಮುಖ ಮೈಲಿಗಲ್ಲಾಗಲಿದೆ. ಮುಂಡ್ರಾ, ಲಖಪತ್, ಅಬ್ದಾಸಾ ಮತ್ತು ನಖತ್ರಾನಾ ತಾಲೂಕು ಪ್ರದೇಶಗಳ ಸುಮಾರು 8 ಲಕ್ಷ ಜನರು ಈ ಸ್ಥಾವರದಿಂದ ಉಪ್ಪಿನ ಅಂಶ ಇಲ್ಲದ ನೀರನ್ನು ಪಡೆಯಲಿದ್ದಾರೆ, ಇದು ಭಚೌ, ರಾಪರ್ ಮತ್ತು ಗಾಂಧಿಧಾಮ ಮೇಲ್ದಂಡೆ ಜಿಲ್ಲೆಗಳಿಗೆ ಹೆಚ್ಚುವರಿ ನೀರಿನ ಹಂಚಿಕೆಗೂ ಇದು ಸಹಕಾರಿಯಾಗುತ್ತದೆ. ಗುಜರಾತ್ ನಲ್ಲಿ ಮುಂಬರುವ ಐದು ಉಪ್ಪು ನೀರು ಶುದ್ಧೀಕರಣ ಘಟಕಗಳಲ್ಲಿ ಇದು ಒಂದಾಗಿದೆ, ದಹೇಜ್ (100 ಎಂಎಲ್.ಡಿ), ದ್ವಾರಕಾ (70 ಎಂಎಲ್.ಡಿ), ಘೋಘಾ ಭಾವನಗರ (70 ಎಂಎಲ್.ಡಿ) ಮತ್ತು ಗಿರ್ ಸೋಮನಾಥ್ (30 ಎಂಎಲ್.ಡಿ) ಈ ಘಟಕಗಳಾಗಿವೆ.
ವಿಘಕೋಟ್ ಗ್ರಾಮದ ಬಳಿಯ ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ದೇಶದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಪಾರ್ಕ್ ಆಗಲಿದೆ. ಇದು 30 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಉತ್ಪಾದಿಸಲಿದೆ. 72,600 ಹೆಕ್ಟೇರ್ ಭೂಮಿಯಲ್ಲಿರುವ ಈ ಉದ್ಯಾನವನವು ಪವನ ಮತ್ತು ಸೌರವಿದ್ಯುತ್ ಸಂಗ್ರಹಣೆಗಾಗಿ ಮೀಸಲಾದ ಹೈಬ್ರೀಡ್ ಪಾರ್ಕ್ ವಲಯವನ್ನು ಹೊಂದಿರುತ್ತದೆ, ಜೊತೆಗೆ ಪವನ ಪಾರ್ಕ್ ಚಟುವಟಿಕೆಗಳಿಗೆ ವಿಶೇಷ ವಲಯವನ್ನು ಹೊಂದಿರುತ್ತದೆ.
ಕಚ್ ನ ಸರ್ಹಾದ್ ಡೈರಿ ಅಂಜರ್ ನಲ್ಲಿ ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಘಟಕಕ್ಕೆ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನೆರವೇರಿಸದ್ದಾರೆ. ಸ್ಥಾವರಕ್ಕೆ 121 ಕೋಟಿ ರೂ. ವೆಚ್ಚವಾಗಲಿದ್ದು, ದಿನಕ್ಕೆ 2 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುತ್ತದೆ.
***
(Release ID: 1680477)
Visitor Counter : 169
Read this release in:
Malayalam
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu