ಪ್ರಧಾನ ಮಂತ್ರಿಯವರ ಕಛೇರಿ

ಸ್ವಾಹಿದ್ ದಿವಸದ ಸಂದರ್ಭದಲ್ಲಿ ಅಸ್ಸಾಂ ಚಳವಳಿಯ ಹುತಾತ್ಮರಿಗೆ ಪ್ರಧಾನಿ ಗೌರವ ಸಲ್ಲಿಕೆ

ಪ್ರಕಟಣಾ ದಿನಾಂಕ: 10 DEC 2020 7:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಸ್ಸಾಂ ಚಳವಳಿಯ ಹುತಾತ್ಮರಿಗೆ ಸ್ವಾಹಿದ್ ದಿನದಂದು ಗೌರವ ನಮನ ಸಲ್ಲಿಸಿದ್ದಾರೆ.

ಟ್ವೀಟ್ ನಲ್ಲಿ ಶ್ರೀ ಮೋದಿ "ಸ್ವಾಹಿದ್ ದಿನದಂದು, ನಾವು ಅಸ್ಸಾಂ ಚಳವಳಿಯ ಮಹಾನ್ ಹುತಾತ್ಮರಿಗೆ ಗೌರವ ಸಲ್ಲಿಸುತ್ತೇವೆ. ಅಸ್ಸಾಂನ ಪ್ರಗತಿ ಮತ್ತು ರಾಜ್ಯದ ನಾಗರಿಕರ ಸಬಲೀಕರಣದ ಬಗ್ಗೆ ಅವರಿಗಿದ್ದ ಕಾಳಜಿ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿದೆ." ಎಂದು ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1679929) ವಿಸಿಟರ್ ಕೌಂಟರ್ : 127