ಪ್ರಧಾನ ಮಂತ್ರಿಯವರ ಕಛೇರಿ
ಡಿಸೆಂಬರ್ 12ರಂದು ಎಫ್.ಐ.ಸಿ.ಸಿ.ಐ.ನ 93ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಾರ್ಷಿಕ ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ
प्रविष्टि तिथि:
10 DEC 2020 7:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಫ್.ಐ.ಸಿ.ಸಿ.ಐನ 93ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಾರ್ಷಿಕ ಸಮಾವೇಶ ಉದ್ದೇಶಿಸಿ 2020ರ ಡಿಸೆಂಬರ್ 12ರಂದು 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಎಫ್.ಐ.ಸಿ.ಸಿ.ಐನ ವಾರ್ಷಿಕ ಎಕ್ಸ್ ಪೋ 2020ಯನ್ನೂ ಉದ್ಘಾಟಿಸಲಿದ್ದಾರೆ.
ಎಫ್.ಐ.ಸಿ.ಸಿ.ಐ ವಾರ್ಷಿಕ ಸಮಾವೇಶ ವರ್ಚುವಲ್ ಮೂಲಕ 2020ರ ಡಿಸೆಂಬರ್ 11, 12 ಮತ್ತು 14ರಂದು ನಡೆಯಲಿದೆ. ಈ ವರ್ಷದ ವಾರ್ಷಿಕ ಸಮಾವೇಶದ ಧ್ಯೇಯವಾಕ್ಯ “ಪ್ರೇರಣೆಯ ಭಾರತ” ಎಂಬುದಾಗಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಚಿವರು, ಅಧಿಕಾರಿಗಳು, ಉದ್ಯಮದ ನಾಯಕರು, ರಾಜತಾಂತ್ರಿಕರು, ಅಂತಾರಾಷ್ಟ್ರೀಯ ತಜ್ಞರು ಮತ್ತು ಇತರ ಪ್ರಮುಖ ಪ್ರಕಾಶಕರು ಭಾಗವಹಿಸಲಿದ್ದಾರೆ. ಈ ಸಮಾವೇಶವು ವಿವಿಧ ಬಾಧ್ಯಸ್ಥರು ಆರ್ಥಿಕತೆಯ ಮೇಲೆ ಕೋವಿಡ್ -19 ರ ಪರಿಣಾಮಗಳು, ಸರ್ಕಾರವು ಕೈಗೊಳ್ಳುತ್ತಿರುವ ಸುಧಾರಣೆಗಳು ಮತ್ತು ಭಾರತೀಯ ಆರ್ಥಿಕತೆಗೆ ಮುಂದಿನ ದಾರಿಗಳ ಕುರಿತು ಚರ್ಚಿಸುವುದಕ್ಕೆ ಸಾಕ್ಷಿಯಾಗಲಿದೆ.
ಎಫ್.ಐ.ಸಿ.ಸಿ.ಐ ವಾರ್ಷಿಕ ಎಕ್ಸ್ ಪೋ 2020 2020ರ ಡಿಸೆಂಬರ್ 11ರಂದು ಆರಂಭವಾಗಲಿದೆ ಮತ್ತು ಒಂದು ವರ್ಷಗಳ ಕಾಲ ನಡೆಯಲಿದೆ. ವರ್ಚುವಲ್ ಎಕ್ಸ್ ಪೋ ಪ್ರಪಂಚದಾದ್ಯಂತದ ಪ್ರದರ್ಶಕರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಅವರ ವ್ಯಾಪಾರ ಭವಿಷ್ಯವನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ.
***
(रिलीज़ आईडी: 1679925)
आगंतुक पटल : 186
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam