ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ: ಒಟ್ಟು ಸೋಂಕಿತರ ಪೈಕಿ ಕೇವಲ ಶೇ.4.35ರಷ್ಟು ಸಕ್ರಿಯ ಪ್ರಕರಣ


ಕಳೆದ 7 ದಿನಗಳಿಂದ ಪ್ರತಿದಿನ ಹೊಸ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಹೆಚ್ಚು

ಒಟ್ಟು ಗುಣಮುಖವಾದವರ ಪ್ರಮಾಣ 0.9 ಕೋಟಿಗೂ  ಅಧಿಕ

Posted On: 04 DEC 2020 10:34AM by PIB Bengaluru

ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ನಿನ್ನೆ ಶೇ.4.44ರಷ್ಟಿದ್ದ ಪ್ರಮಾಣ ಇಂದು ಮತ್ತೆ ಶೇ.4.35ಕ್ಕೆ ಕುಸಿದಿದೆ

ಕಳೆದ 7 ದಿನಗಳಿಂದ ಪ್ರವೃತ್ತಿ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ದಿನದ ಹೊಸ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಅಧಿಕವಾಗಿವೆ. ಪ್ರತಿದಿನ ಹೊಸ ಪ್ರಕರಣಗಳಿಗಿಂತ ಹೆಚ್ಚಿನ ಸೋಂಕಿತರು ಗುಣಮುಖವಾಗುತ್ತಿರುವುದರಿಂದ ಭಾರತದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಇಂದು ಅದು 4,16,082 ಇದೆ.

ಭಾರತದಲ್ಲಿ ಹೊಸದಾಗಿ 36,595 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, ಅದೇ ಅವಧಿಯಲ್ಲಿ 42,916 ಸೋಂಕಿತರು ಗುಣಮುಖರಾಗಿದ್ದಾರೆ. ಹೊಸದಾಗಿ ಗುಣಮುಖವಾಗಿರುವ ಮತ್ತು ಹೊಸ ಸೋಂಕು ಪ್ರಕರಣಗಳ ನಡುವಿನ ವ್ಯತ್ಯಾಸ 6,321 ಇದೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ನಿವ್ವಳ ಇಳಿಕೆ 6,861ಕ್ಕೆ ಕುಸಿದಿದೆ.

http://static.pib.gov.in/WriteReadData/userfiles/image/image001Z3UU.jpg

ಭಾರತದಲ್ಲಿ ಸದ್ಯ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಸೋಂಕು ಪ್ರಕರಣ(6,936) ಇದ್ದು, ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಅತಿ ಕಡಿಮೆಯಾಗಿದೆ.

http://static.pib.gov.in/WriteReadData/userfiles/image/image002WPCW.jpg

ಚೇತರಿಕೆ ಪ್ರಮಾಣ ಸುಧಾರಿಸಿ, ಇಂದು ಶೇ94.2ಕ್ಕೆ ಏರಿಕೆಯಾಗಿದೆ.ಒಟ್ಟು ಗುಣಮುಖರಾದವರ ಪ್ರಕರಣಗಳು 90,16,289. ಗುಣಮುಖವಾಗುತ್ತಿರುವ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಕ್ರಮೇಣ ಏರಿಕೆಯಾಗುತ್ತಿದೆ ಮತ್ತು ಅದು ಸದ್ಯ 86,00,207 ರಷ್ಟಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ 80.19ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಅತ್ಯಧಿಕ 8,066 ಸೋಂಕಿತರು ಗುಣಮುಖರಾಗಿದ್ದರೆ, ನಂತರ ಕೇರಳದಲ್ಲಿ 5,590 ಮತ್ತು ದೆಹಲಿಯಲ್ಲಿ 4,834 ಸೋಂಕಿತರು ಗುಣಮುಖರಾಗಿದ್ದಾರೆ.

http://static.pib.gov.in/WriteReadData/userfiles/image/image003PPU4.jpg

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.75.76ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 5,376 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ 5,182 ಮತ್ತು ದೆಹಲಿಯಲ್ಲಿ ನಿನ್ನೆ ಹೊಸದಾಗಿ 3,734 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿವೆ.

http://static.pib.gov.in/WriteReadData/userfiles/image/image004PTV0.jpg

ಕಳೆದ 24 ಗಂಟೆಗಳಲ್ಲಿ 540 ಸೋಂಕಿತರು ಸಾವನ್ನಪ್ಪಿದ್ದಾರೆ. ಪೈಕಿ ಶೇ.77.78ರಷ್ಟು ಪ್ರಕರಣಗಳು  ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದವು.

ಮಹಾರಾಷ್ಟ್ರವೊಂದರಲ್ಲೇ ಶೇ.22.19ರಷ್ಟು ಅಂದರೆ 115 ಸೋಂಕಿತರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 82 ಮತ್ತು ಪಶ್ಚಿಮ ಬಂಗಾಳದಲ್ಲಿ 49 ಸೋಂಕಿತರು ಹೊಸದಾಗಿ ಸಾವನ್ನಪ್ಪಿದ್ದಾರೆ.

http://static.pib.gov.in/WriteReadData/userfiles/image/image005ABIP.jpg

ಜಾಗತಿಕ ಮಟ್ಟಕ್ಕೆ ಹೋಲಿಸಿದರೆ, ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಮರಣ ಪ್ರಮಾಣ(101) ಇದೆ.

http://static.pib.gov.in/WriteReadData/userfiles/image/image006WNIS.jpg

***



(Release ID: 1678528) Visitor Counter : 174