ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಸಭಾ ಸಂಸದ ಶ್ರೀ ಅಭಯ್ ಭಾರದ್ವಾಜ್ ನಿಧನಕ್ಕೆ ಪ್ರಧಾನಿ ಸಂತಾಪ

प्रविष्टि तिथि: 01 DEC 2020 5:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಸಂಸತ್ ಸದಸ್ಯ ಶ್ರೀ ಅಭಯ್ ಭಾರದ್ವಾಜ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ಟ್ವೀಟ್ ನಲ್ಲಿ "ಗುಜರಾತ್ ನಿಂದ ರಾಜ್ಯಸಭಾ ಸಂಸತ್ ಸದಸ್ಯರಾಗಿದ್ದ ಶ್ರೀ ಅಭಯ್ ಭಾರದ್ವಾಜ್ ಅವರು ಗೌರವಾನ್ವಿತ ವಕೀಲರಾಗಿದ್ದರು ಮತ್ತು ಸಮಾಜ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ದೇಶದ ಅಭಿವೃದ್ಧಿಯ ಬಗ್ಗೆ ಉಜ್ವಲ ಮತ್ತು ಒಳನೋಟ ಹೊಂದಿದ್ದ ಮನಸ್ಸನ್ನು ನಾವು ಕಳೆದುಕೊಂಡಿರುವುದು ದುಃಖದಾಯಕ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ." ಎಂದು ತಿಳಿಸಿದ್ದಾರೆ.

***


(रिलीज़ आईडी: 1677414) आगंतुक पटल : 166
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Tamil , Telugu , Malayalam