ಹಣಕಾಸು ಸಚಿವಾಲಯ

2020 ರ ನವೆಂಬರ್ ನಲ್ಲಿ 1,04,963 ಕೋಟಿ ರೂ. ಜಿಎಸ್‌ಟಿ ಸಂಗ್ರಹ

Posted On: 01 DEC 2020 1:45PM by PIB Bengaluru

2020 ರ ನವೆಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,04,963 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ.ಇದರಲ್ಲಿ ಕೇಂದ್ರ ಜಿಎಸ್‌ಟಿ 19,189 ಕೋಟಿ ರೂ., ರಾಜ್ಯ ಜಿಎಸ್‌ಟಿ 25,540 ಕೋಟಿ ರೂ., ಐಜಿಎಸ್‌ಟಿ 51,992 ಕೋಟಿ (ಸರಕುಗಳ ಆಮದಿನಿಂದ ಸಂಗ್ರಹಿಸಿದ 22,078 ಕೋಟಿ ರೂ.ಸೇರಿದಂತೆ) ಮತ್ತು ಸೆಸ್, 8,242 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 9 809 ಕೋಟಿ ಸೇರಿದಂತೆ) ಗಳಾಗಿದೆ. 2020 ರ ನವೆಂಬರ್ 30 ರವರೆಗೆ ನವೆಂಬರ್ ತಿಂಗಳಿಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಂಖ್ಯೆ 82 ಲಕ್ಷವಾಗಿದೆ.

ನಿಯಮಿತವಾಗಿ ಇತ್ಯರ್ಥಪಡಿಸಿದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಸಿಜಿಎಸ್‌ಟಿಗೆ ಮತ್ತು ಎಸ್‌ಜಿಎಸ್‌ಟಿಗೆ, ಕೋಟಿ.

ಕೇಂದ್ರ ಜಿಎಸ್‌ಟಿಗೆ 22,293  ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 16,286  ಕೋಟಿ ರೂ.ಗಳನ್ನು ಐಜಿಎಸ್‌ಟಿಯಿಂದ ನಿಯಮಿತ ಇತ್ಯರ್ಥವಾಗಿ ಸರ್ಕಾರ ಇತ್ಯರ್ಥಪಡಿಸಿದೆ. 2020 ರ ನವೆಂಬರ್ ತಿಂಗಳಲ್ಲಿ ನಿಯಮಿತ ಇತ್ಯರ್ಥದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಕೇಂದ್ರ ಜಿಎಸ್‌ಟಿಗೆ 41,482 ಕೋಟಿ ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 8 41,826 ಕೋಟಿ ರೂ. ಗಳಾಗಿದೆ.

ಜಿಎಸ್‌ಟಿ ಆದಾಯದಲ್ಲಿನ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, 2020 ರ ನವೆಂಬರ್ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯಕ್ಕಿಂತ ಶೇ.1.4 ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಬಂದ ಆದಾಯಕ್ಕೆ ಹೋಲಿಸಿದರೆ ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇ. 4.9 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಶೇ. 0.5 ರಷ್ಟು ಹೆಚ್ಚಾಗಿದೆ.  

ಕೆಳಗಿನ ಕೋಷ್ಟಕವು ಪ್ರಸಕ್ತ ವರ್ಷದಲ್ಲಿ ಮಾಸಿಕ ಒಟ್ಟು ಜಿಎಸ್‌ಟಿ ಆದಾಯದ ಪ್ರವೃತ್ತಿಯನ್ನು ತೋರಿಸುತ್ತದೆ. ನವೆಂಬರ್ 2019 ಕ್ಕೆ ಹೋಲಿಸಿದರೆ 2020 ರ ನವೆಂಬರ್ ತಿಂಗಳಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿಎಸ್‌ಟಿಯ ರಾಜ್ಯವಾರು ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ.

https://ci3.googleusercontent.com/proxy/j6odMI1QP06geqe6BxOM-WAhcbXTn2t63_0hEL2Bd9xNd60eD90_gku5mAPpK3g67a8Yr4Eh9Wga3bg5pYKzRmlWKIvnUnGxktdpr4Y0aAkeJOlO8oVcx6NfUw=s0-d-e1-ft#https://static.pib.gov.in/WriteReadData/userfiles/image/image00129HA.png

ನವೆಂಬರ್ 2020 ರ ರಾಜ್ಯವಾರು ಜಿಎಸ್ಟಿ ಸಂಗ್ರಹ [1]

ರಾಜ್ಯ

ನವೆಂಬರ್-2019

ನವೆಂಬರ್-2020

ಬೆಳವಣಿಗೆ

ಜಮ್ಮು ಮತ್ತು ಕಾಶ್ಮೀರ

363

369

-1%

ಹಿಮಾಚಲ ಪ್ರದೇಶ 

701

758

8%

ಪಂಜಾಬ್

1,375

1,396

2%

ಚಂಡೀಗಢ

165

141

-14%

ಉತ್ತರಾಖಂಡ

1,280

1,286

0%

ಹರಿಯಾಣ

5,904

5,928

0%

ದೆಹಲಿ

3,995

3,413

-15%

ರಾಜಸ್ಥಾನ

3,071

3,130

2%

ಉತ್ತರ ಪ್ರದೇಶ 

5,678

5,528

-3%

ಬಿಹಾರ 

1,107

970

-12%

ಸಿಕ್ಕಿಂ 

157

223

42%

ಅರುಣಾಚಲ ಪ್ರದೇಶ  

36

60

68%

ನಾಗಾಲ್ಯಾಂಡ್ 

23

30

31%

ಮಣಿಪುರ

35

32

-9%

ಮಿಜೋರಾಂ 

17

17

0%

ತ್ರಿಪುರ  

51

58

13%

ಮೇಘಾಲಯ

117

120

2%

ಅಸ್ಸಾಂ 

958

946

-1%

ಪಶ್ಚಿಮ ಬಂಗಾಳ

3,460

3,747

8%

ಜಾರ್ಖಂಡ್

1,720

1,907

11%

ಒಡಿಶಾ

2,347

2,528

8%

ಛತ್ತೀಸ್‌ಗಢ

2,176

2,181

0%

ಮಧ್ಯಪ್ರದೇಶ

2,453

2,493

2%

ಗುಜರಾತ್

6,805

7,566

11%

ದಮನ್ ಮತ್ತು ದಿಯು

101

2

-98%

ದಾದ್ರಾ ಮತ್ತು ನಗರ ಹವೇಲಿ 

145

296

105%

ಮಹಾರಾಷ್ಟ್ರ

15,968

15,001

-6%

ಕರ್ನಾಟಕ

6,972

6,915

-1%

ಗೋವಾ

342

300

-12%

ಲಕ್ಷದ್ವೀಪ  

2

0

-75%

ಕೇರಳ

1,691

1,568

-7%

ತಮಿಳುನಾಡು

6,449

7,084

10%

ಪುದುಚೇರಿ  

157

158

1%

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 

25

23

-7%

ತೆಲಂಗಾಣ

3,349

3,175

-5%

ಆಂಧ್ರಪ್ರದೇಶ

2,230

2,507

12%

ಲಡಾಖ್ 

0

9

 

ಇತರೆ ಪ್ರದೇಶ  

153

79

-48%

ಕೇಂದ್ರ ವ್ಯಾಪ್ತಿ  

95

138

45%

ಒಟ್ಟು

81,674

82,075

0.5%

***



(Release ID: 1677370) Visitor Counter : 266