ಪ್ರಧಾನ ಮಂತ್ರಿಯವರ ಕಛೇರಿ

12ನೇ ಬ್ರಿಕ್ಸ್ ವರ್ಚುವಲ್ ಶೃಂಗಸಭೆ ವೇಳೆ ಪ್ರಧಾನಿ ಭಾಷಣ

Posted On: 17 NOV 2020 7:04PM by PIB Bengaluru

ಗೌರವಾನ್ವಿತರೇ,

ಹಲವು ಬ್ರಿಕ್ಸ್ ಸಂಸ್ಥೆಗಳು ಮಾತನಾಡುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಾನು ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ 10ನೇ ಸಭೆಯ ಪುನರಾವಲೋಕನಕ್ಕಾಗಿ ಶ್ರೀ ಪಟ್ರುಶೇವ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

ಮೊದಲೆ ಹೇಳಿದಂತೆ ಬ್ರಿಕ್ಸ್ ರಾಷ್ಟ್ರಗಳ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರ ಅಂತಿಮಗೊಳಿಸಿರುವುದು ಪ್ರಮುಖ ಸಾಧನೆಯಾಗಿದೆ. ನನ್ನ ಸಲಹೆ ಏನೆಂದರೆ, ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಯೋತ್ಪಾದನಾ ನಿಗ್ರಹ ಕ್ರಿಯಾ ಯೋಜನೆ ಕುರಿತು ಚರ್ಚಿಸಬೇಕು ಎಂಬುದು.

ನಾನು ಬ್ರಿಕ್ಸ್ ವಾಣಿಜ್ಯ ಮಂಡಳಿಯ ಹಂಗಾಮಿ ಅಧ್ಯಕ್ಷರಾದ ಶ್ರೀ ಸರ್ಗೈ ಕ್ಯಾಟರಿನ್ ಅವರಿಗೂ ಸಹ ಧನ್ಯವಾದವನ್ನು ಹೇಳುತ್ತೇನೆ.

ನಮ್ಮ ನಡುವಿನ ಆರ್ಥಿಕ ಒಗ್ಗೂಡುವಿಕೆಯ ಅತ್ಯಂತ ಪ್ರಮುಖ ಕೆಲಸವೆಂದರೆ ಖಾಸಗಿ ವಲಯ ಜೊತೆ ಕೈಜೋಡಿಸುವುದಾಗಿದೆ. ಬ್ರಿಕ್ಸ್ ವಾಣಿಜ್ಯ ಮಂಡಳಿ ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಡಾಲರ್ ಗುರಿ ತಲುಪಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂಬುದು ನನ್ನ ಸಲಹೆಯಾಗಿದೆ.

ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ ಮಾರ್ಕೋಸ್   ಟ್ರಾಯ್ಜೊ ಅವರನ್ನು ನಾನು ಅಭಿನಂದಿಸುತ್ತೇನೆ.

ಕೋವಿಡ್ ಸನ್ನಿವೇಶದಲ್ಲಿ ಎನ್ ಡಿ ಬಿಯ ಆರ್ಥಿಕ ನೆರವು ಅತ್ಯಂತ ಉಪಯುಕ್ತವಾಗಿದೆ. ಎನ್ ಡಿ ಬಿ ರಷ್ಯಾದಲ್ಲಿ ಕಚೇರಿ ಆರಂಭಿಸಿರುವುದು ನನಗೆ ಸಂತಸ ತಂದಿದೆ ಮತ್ತು ಮುಂದಿನ ವರ್ಷ ನಿಮ್ಮ ಪ್ರಾದೇಶಿಕ ಕಚೇರಿಯೂ ಭಾರತದಲ್ಲಿ ಆರಂಭವಾಗಲಿದೆ ಎಂಬ ವಿಶ್ವಾಸ ನನಗಿದೆ.

ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ಕಾರ್ಯತಂತ್ರಕ್ಕಾಗಿ ಕೆಲಸ ಮಾಡುತ್ತಿರುವ ಶ್ರೀ ಐಗೋರ್ ಶುವಾಲೋವ್ ಅವರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಅಭಿವೃದ್ಧಿ ಬ್ಯಾಂಕ್ಜವಾಬ್ದಾರಿಯುತ ಹಣಕಾಸು ತತ್ವಗಳನ್ನುಒಪ್ಪಿಕೊಂಡಿರುವುದು ಅತ್ಯುತ್ತಮ ಬೆಳವಣಿಗೆ ಎಂದು ಉಲ್ಲೇಖಿಸ ಬಯಸುತ್ತೇನೆ.

ಬ್ರಿಕ್ಸ್ ಮಹಿಳಾ ಒಕ್ಕೂಟ ಆಯೋಜಿಸುವುದು ಅಧ್ಯಕ್ಷ ಪುಟಿನ್ ಅವರ ವಿಶೇಷ ಆದ್ಯತೆಯಾಗಿದೆ ಮತ್ತು ಅವರ ಕನಸು ಇದೀಗ ಸಾಕಾರವಾಗುತ್ತಿದೆ.

ನಾನು ಒಕ್ಕೂಟದ ಅಧ್ಯಕ್ಷೆಯಾಗಿರುವ ಶ್ರೀಮತಿ ಅನ್ನಾ ನೆಸ್ಟೆರೋವಾ ಅವರನ್ನು ವರದಿ ಸಲ್ಲಿಸಿರುವುದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ.

ಭಾರತದಲ್ಲಿ ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಒಕ್ಕೂಟದಿಂದಾಗಿ ವಲಯಲ್ಲಿ ಅಂತರ ಬ್ರಿಕ್ಸ್ ಸಹಕಾರ ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ, ವಿಶೇಷವಾಗಿ ಆತಿಥ್ಯವಹಿಸಿರುವ ಪುಟಿನ್ ಅವರಿಗೂ ಆತ್ಮೀಯ ಕೃತಜ್ಞತೆಗಳನ್ನು ಹೇಳಲು ಬಯಸುತ್ತೇನೆ.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಸಾರಾಂಶದ ಅನುವಾದ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿತ್ತು.

***



(Release ID: 1676008) Visitor Counter : 152