ಸಂಪುಟ
ಬ್ರಿಕ್ಸ್ ರಾಷ್ಟ್ರಗಳ ನಡುವೆ ಕ್ರೀಡೆ ಮತ್ತು ಭೌತಿಕ ಸಂಸ್ಕೃತಿ ವಲಯದಲ್ಲಿ ಸಹಕಾರ ಒಪ್ಪಂದಕ್ಕೆ ಸಂಪುಟ ಅನುಮೋದನೆ
Posted On:
25 NOV 2020 3:32PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಬ್ರಿಕ್ಸ್ ರಾಷ್ಟ್ರಗಳು ಸಹಿ ಹಾಕಿರುವ ಕ್ರೀಡಾ ಮತ್ತು ಭೌತಿಕ ಸಂಸ್ಕೃತಿ ವಲಯದಲ್ಲಿ ಪರಸ್ಪರ ತಿಳುವಳಿಕೆಯ ಒಪ್ಪಂದ(ಎಂಒಯು)ಕ್ಕೆ ಅನುಮೋದನೆ ನೀಡಿತು.
ಐದು ರಾಷ್ಟ್ರಗಳ ನಡುವೆ ಕ್ರೀಡಾ ವಲಯದಲ್ಲಿ ಸಹಕಾರ ಸ್ಥಾಪನೆಯಿಂದಾಗಿ ಕ್ರೀಡಾ ವಿಜ್ಞಾನ, ಕ್ರೀಡಾ ವೈದ್ಯಕೀಯ, ತರಬೇತಿ ತಂತ್ರಗಳ ವಲಯದಲ್ಲಿ ಜ್ಞಾನ ಮತ್ತು ಪರಿಣಿತಿಯನ್ನು ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ. ಇದರಿಂದ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ಬಲವರ್ಧನೆಯಾಗುವುದಲ್ಲದೆ, ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಕ್ರೀಡಾ ವ್ಯಕ್ತಿಗಳ ಸಾಧನೆಯೂ ಸಹ ಗಣನೀಯವಾಗಿ ಸುಧಾರಣೆಯಾಗಲಿದೆ.
ಐದು ರಾಷ್ಟ್ರಗಳ ನಡುವೆ ಕ್ರೀಡಾ ವಲಯದ ಸಹಕಾರದಿಂದಾಗಿ ಜಾತಿ, ಮತ, ಧರ್ಮ, ಪ್ರಾಂತ್ಯ ಮತ್ತು ಲಿಂಗ ತಾರತಮ್ಯವಿಲ್ಲದೆ ಎಲ್ಲಾ ಕ್ರೀಡಾ ವ್ಯಕ್ತಿಗಳಿಗೂ ಸಮಾನ ರೀತಿಯಲ್ಲಿ ಪ್ರಯೋಜನಗಳಾಗಲಿವೆ.
***
(Release ID: 1675671)
Visitor Counter : 188
Read this release in:
Telugu
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam