ಪ್ರಧಾನ ಮಂತ್ರಿಯವರ ಕಛೇರಿ

ನವೆಂಬರ್ 26, ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ 2020 ಉದ್ಘಾಟಿಸಲಿರುವ ಪ್ರಧಾನಮಂತ್ರಿ

Posted On: 24 NOV 2020 6:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 3ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಮೇಳ (ಆರ್.. ಇನ್ವೆಸ್ಟ್ 2020) ವರ್ಚುವಲ್ ಗೆ 2020 ನವೆಂಬರ್ 26ರಂದು ಸಂಜೆ 5.30ಕ್ಕೆ ಚಾಲನೆ ನೀಡಲಿದ್ದಾರೆ. ಶೃಂಗಸಭೆಯನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದು, 2020 ನವೆಂಬರ್ 26-28ರವರೆಗೆ ನಡೆಯಲಿದೆ.

ಆರ್.. ಇನ್ವೆಸ್ಟ್ 2020 ಬಗ್ಗೆ

ಆರ್.-ಇನ್ವೆಸ್ಟ್ 2020 ಧ್ಯೇಯವಾಕ್ಯಸುಸ್ಥಿರ ಇಂಧನ ಪರಿವರ್ತನೆಗೆ ನಾವಿನ್ಯತೆಎಂಬುದಾಗಿದೆ. ಇದು ನವೀಕರಿಸಬಹುದಾದ ಮತ್ತು ಭವಿಷ್ಯದ ಇಂಧನ ಆಯ್ಕೆಗಳ ಕುರಿತು 3 ದಿನಗಳ ಸಮ್ಮೇಳನವಾಗಿದ್ದು, ಉತ್ಪಾದಕರು, ಡೆವಲಪರುಗಳು, ಹೂಡಿಕೆದಾರರು ಮತ್ತು ನವ ಪ್ರವರ್ತಕರುಗಳ ಪ್ರದರ್ಶನವಾಗಿರುತ್ತದೆ. ಇದರಲ್ಲಿ 75 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಚಿವಾಲಯ ಮಟ್ಟದ ನಿಯೋಗಗಳು, 1000 ಕ್ಕೂ ಹೆಚ್ಚು ಜಾಗತಿಕ ಉದ್ಯಮದ ಮುಖಂಡರು ಮತ್ತು 50,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ನವೀಕರಿಸಬಹುದಾದ ಇಂಧನದ ಅಭಿವೃದ್ಧಿ ಮತ್ತು ನಿಯೋಜನೆಯ ಜಾಗತಿಕ ಪ್ರಯತ್ನವನ್ನು ಹೆಚ್ಚಿಸುವ ಮತ್ತು ಜಾಗತಿಕ ಹೂಡಿಕೆ ಸಮುದಾಯವನ್ನು ಭಾರತೀಯ ಇಂಧನ ಬಾಧ್ಯಸ್ಥರುಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಇದು ಹೊಂದಿದೆ. ಇದನ್ನು 2015 ಮತ್ತು 2018 ರಲ್ಲಿ ನಡೆದ ಮೊದಲ ಎರಡು ಆವೃತ್ತಿಗಳ ಯಶಸ್ಸಿನ ಮೇಲೆ ನಿರ್ಮಿಸಲು ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಉತ್ತೇಜನಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

***



(Release ID: 1675492) Visitor Counter : 194