ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಡಿಜಿಟಲ್ ಮಾಧ್ಯಮದಲ್ಲಿ ತಿಂಗಳೊಳಗೆ ಎಫ್.ಡಿ.ಐ ನೀತಿ ಪಾಲನೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಮನವಿ

Posted On: 16 NOV 2020 2:23PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಇಂದು ಡಿಜಿಟಲ್ ಮಾದ್ಯಮದ ಮೂಲಕ ಪ್ರಸಕ್ತ ವ್ಯವಹಾರಗಳು ಮತ್ತು ಸುದ್ದಿಗಳ ಅಪ್ ಲೋಡಿಂಗ್ ಮತ್ತು  ಸ್ಟ್ರೀಮಿಗ್ ಒಳಗೊಂಡಂತೆ ಅರ್ಹ ಸಂಸ್ಥೆಗಳಿಗೆ ಸಹಕರಿಸಲು ಸಾರ್ವಜನಿಕ ನೋಟಿಸ್ ನೀಡಲಾಗಿದೆ. ಕೇಂದ್ರ ಸರ್ಕಾರ 2019 ಸೆಪ್ಟಂಬರ್ 18ರಂದು ಸರ್ಕಾರದ ಅನುಮೋದಿತ ಮಾರ್ಗದಲ್ಲಿ ಶೇ.26ರಷ್ಟು ಎಫ್ ಡಿಐ (ವಿದೇಶಿ ನೇರ ಬಂಡವಾಳ ) ಹೂಡಿಕೆಗೆ ಅನುಮೋದನೆ ನೀಡಿತ್ತು.

ಸಾರ್ವಜನಿಕ ನೋಟಿಸ್, ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಿದೆ ಮತ್ತು ಇಂದು ಸಚಿವಾಲಯ, ಒಂದು ತಿಂಗಳೊಳಗೆ ನಿರ್ಧಾರದ ಪಾಲನೆಗೆ ಅರ್ಹ ಸಂಸ್ಥೆಗಳು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವಿವರಿಸಲಾಗಿದೆ. ನೋಟಿಸ್ ನಲ್ಲಿ ಕೆಳಗಿನಂತೆ ವಿವರಿಸಲಾಗಿದೆ.

  1.   ಶೇಕಡ 26ಕ್ಕಿಂತ ಕಡಿಮೆ ವಿದೇಶಿ ಬಂಡವಾಳ ಹೂಡಿಕೆ ಇರುವ ಸಂಸ್ಥೆಗಳು ಇಂದಿನಿಂದ ಒಂದು ತಿಂಗಳೊಳಗೆ ಕೆಳಗಿನ ದಾಖಲೆಗಳೊಂದಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಮಾಹಿತಿ ನೀಡಬೇಕಾಗಿದೆ.

() ಕಂಪನಿಯ ಹೆಸರು ಮತ್ತು ವಿಳಾಸದ ಜೊತೆಗೆ ನಿರ್ದೇಶಕರು/ಷೇರುದಾರರ ವಿವರ ಸಹಿತ ಕಂಪನಿಯ ಷೇರು ಹಂಚಿಕೆ ಪದ್ದತಿ ಸೇರಿ ಕಂಪನಿ/ಸಂಸ್ಥೆಯ ವಿವರಗಳು.

(ಬಿ) ಪ್ರವರ್ತಕರು/ಮಹತ್ವದ ಫಲಾನುಭವಿ ಮಾಲೀಕರ ಹೆಸರು ಮತ್ತು ವಿಳಾಸ

(ಸಿ) ವಿದೇಶಿ ನೇರ ಬಂಡವಾಳ ನೀತಿಯಡಿ, ವಿದೇಶಿ ವಿನಿಮಯ ನಿರ್ವಹಣೆ (ಸಾಲ ರಹಿತ ಉಪಕರಣಗಳು) ನಿಯಮ 2019 ಮತ್ತು ವಿದೇಶಿ ವಿನಿಮಯ ನಿರ್ವಹಣೆ (ಪಾವತಿ ವಿಧಾನ ಮತ್ತು ಸಾಲ ರಹಿತ ಉಪಕರಣಗಳ ವರದಿ ಸಲ್ಲಿಸುವಿಕೆ) ನಿಯಂತ್ರಣಗಳು 2019ರಡಿ ದರ, ದಾಖಲೆಗಳು ಮತ್ತು ವರದಿ ಸಲ್ಲಿಸುವ ಅಗತ್ಯತೆಗಳ ಪಾಲನೆ ಕುರಿತಂತೆ ಖಚಿತ ಮಾಹಿತಿಯನ್ನು ಒದಗಿಸುವುದು. ಹಿಂದಿನ/ಹಾಲಿ ವಿದೇಶಿ ಬಂಡವಾಳ ಹೂಡಿಕೆ ಕುರಿತು ಪೂರಕ ಮಾಹಿತಿ ನೀಡುವ ದಾಖಲೆಗಳ ಪತ್ರಗಳನ್ನು ಯಾವುದಾದರೂ ಇದ್ದರೆ ಅದನ್ನು ಸಲ್ಲಿಸಬಹುದು.

(ಡಿ) ಪರ್ಮೆನೆಂಟ್ ಅಕೌಂಟ್ ನಂಬರ್(ಪ್ಯಾನ್ ) ಮತ್ತು ಇತ್ತೀಚಿನ ಲೆಕ್ಕ ಪರಿಶೋಧಿತ/ ಲೆಕ್ಕ ಪರಿಶೋಧನೆ ಮಾಡದ ಲಾಭ ಮತ್ತು ನಷ್ಟದ ವಿವರ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಸಹಿತ ಲೆಕ್ಕ ಪರಿಶೋಧಕರ ವರದಿಯನ್ನು ಸಲ್ಲಿಸಬಹುದು.

(ii)   ಪ್ರಸ್ತುತ ಸಂಸ್ಥೆಗಳು ಶೇ.26ಕ್ಕಿಂತ ಅಧಿಕ ವಿದೇಶಿ ಬಂಡವಾಳ ಹೂಡಿಕೆಯೊಂದಿಗೆ ಷೇರು ವ್ಯವಸ್ಥೆ ಹೊಂದಿದ್ದರೆ ಕೆಳಗಿನ ಸಮಾನ ವಿವರಗಳನ್ನು ನೀಡಬೇಕು, (i)ರಲ್ಲಿ ಉಲ್ಲೇಖಿಸಿರುವ ವಿವರಗಳನ್ನು ಇಂದಿನಿಂದ ಒಂದು ತಿಂಗಳೊಳಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಸಲ್ಲಿಸಬೇಕು ಮತ್ತು 2012 ಅಕ್ಟೋಬರ್ 15ರೊಳಗೆ ವಿದೇಶಿ ಬಂಡವಾಳ ಹೂಡಿಕೆಯನ್ನು ಶೇ.26ಕ್ಕೆ ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅದಕ್ಕೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು.

(iii)   ಯಾವುದೇ ಸಂಸ್ಥೆ ದೇಶಕ್ಕೆ ಯಾವುದೇ ಹೊಸ ವಿದೇಶಿ ಹೂಡಿಕೆಯನ್ನು ತರಬೇಕಾದರೆ ಅದಕ್ಕೆ ಕೇಂದ್ರ ಸರ್ಕಾರದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಆಗ ಡಿಪಿಐಐಟಿನ ವಿದೇಶಿ ಹೂಡಿಕೆ ನೆರವು ಪೋರ್ಟಲ್   ಅಗತ್ಯತೆಗಳನ್ನು ಪಾಲಿಸಬೇಕು () ಭಾರತದ ಸರ್ಕಾರದ ಎಫ್ ಡಿಐ ನೀತಿ ಮತ್ತು ಸಂಬಂಧ ಡಿಪಿಐಐಟಿ ಪತ್ರಿಕಾ ಪ್ರಕಟಣೆ ಸಂಖ್ಯೆ 4/2019 (ದಿನಾಂಕ 18.09.2019) ಮತ್ತು (ಬಿ) ವಿದೇಶಿ ವಿನಿಮಯ ನಿರ್ವಹಣೆ (ಸಾಲ ರಹಿತ ಉಪಕರಣಗಳು) (ತಿದ್ದುಪಡಿ) ನಿಯಮ 2019 ಅಧಿಸೂಚನೆ ದಿನಾಂಕ 15.12.2019.

ಟಿಪ್ಪಣಿ: ಬಂಡವಾಳ ಹೂಡಿಕೆ ಎಂದರೆ ಭಾರತೀಯ ವಾಸಿ ಪ್ರಜೆಯಿಂದ ಯಾವುದೇ ಘಟಕದ ಅಥವಾ ಭದ್ರತೆಯಲ್ಲಿ ವಂತಿಗೆ, ಪಾಲು ಹೊಂದುವುದು, ಷೇರು ಹೊಂದಿರುವುದು ಅಥವಾ ಖಾತ್ರಿಯನ್ನು ಸ್ವೀಕರಿಸುವುದು.

(iv)   ಮಂಡಳಿ ನಿರ್ದೇಶಕರ ಪೌರತ್ವ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಯಾವುದೇ ಹೆಸರಿನಿಂದ ಕರೆದರೂ) ಅಗತ್ಯತೆಗಳನ್ನು ಪ್ರತಿಯೊಂದು ಸಂಸ್ಥೆ ಪಾಲಿಸಬೇಕು. ಎಲ್ಲ ವಿದೇಶಿ ವ್ಯಕ್ತಿಗಳನ್ನು 60 ದಿನಕ್ಕಿಂತಲೂ ಹೆಚ್ಚಾಗಿ ನೇಮಕ, ಗುತ್ತಿಗೆ ಅಥವಾ ಸಲಹೆಯ ರೂಪದಲ್ಲಿ ಅಥವಾ ಸಂಸ್ಥೆಯ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಯಾವುದೇ ರೂಪದಲ್ಲಿ ಅವರನ್ನು ನಿಯೋಜಿಸಿಕೊಳ್ಳಬೇಕಾಗಿದ್ದರೂ ಅವರ ನಿಯೋಜನೆಗೂ ಮುನ್ನ ಸಂಸ್ಥೆಗಳು ಭದ್ರತಾ ಅನುಮೋದನೆಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಉದ್ದೇಶಕ್ಕಾಗಿ, ಸಂಬಂಧಿಸಿದ ಸಂಸ್ಥೆಗಳು 60 ದಿನ ಮುಂಚಿತವಾಗಿಯೇ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಸಚಿವಾಲಯದ ಅನುಮೋದನೆ ನಂತರವೇ ಆಂತಹ ವಿದೇಶಿ ಸಿಬ್ಬಂದಿಯನ್ನು ಸಂಸ್ಥೆಯ ಕೆಲಸ ಕಾರ್ಯಕ್ಕೆ ನಿಯೋಜಿಸಿಕೊಳ್ಳಬಹುದು.

ಸಾರ್ವಜನಿಕ ನೋಟಿಸ್ ಸಂಪೂರ್ಣ ವಿವರಗಳನ್ನು ಕೆಳಗಿನ ಯುಆರ್ ಎಲ್ ಲಿಂಕ್ ಮೂಲಕ ವೀಕ್ಷಿಸಬಹುದು.https://mib.gov.in/sites/default/files/Public%20Notice%20%20regarding%20FDI%20Policy%20.pdf

***(Release ID: 1673203) Visitor Counter : 23