ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಸೋಂಕು ನಿಯಂತ್ರಣದಲ್ಲಿ ಅಭೂತಪೂರ್ವ ದಾಖಲೆಗಳನ್ನು ನಿರ್ಮಿಸಿದ ಭಾರತ
5 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳ ಸಂಖ್ಯೆ
80 ಲಕ್ಷ ದಾಟಿದ ಒಟ್ಟು ಗುಣಮುಖರಾದವರ ಸಂಖ್ಯೆ; 12 ಲಕ್ಷ ಒಟ್ಟು ಪ್ರಕರಣಗಳ ಸಂಖ್ಯೆ
Posted On:
11 NOV 2020 11:58AM by PIB Bengaluru
ಜಾಗತಿಕ ಸಾಂಕ್ರಾಮಿಕ ಕೋವಿಡ್ ವಿರುದ್ಧದ ಸಮಗ್ರ ಹೋರಾಟದಲ್ಲಿ ಭಾರತ ಹಲವು ಮಹತ್ವದ ಮೈಲಿಗಲ್ಲುಗಳನ್ನು ದಾಟಿದೆ. 106 ದಿನಗಳ ನಂತರ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷಕ್ಕಿಂತ ಕೆಳಗಿಳಿದಿದೆ. ಇಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,94,657 ತಲುಪಿಸಿದೆ. ಕಳೆದ ಜುಲೈ 28ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 4,96,988 ಇತ್ತು. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಶೇ.5.73ರಷ್ಟಿದೆ.
ಇದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಪ್ರವೃತ್ತಿಯನ್ನು ತೋರುತ್ತದೆ. ಜಾಗತಿಕ ಮಟ್ಟದಲ್ಲಿ ಹಲವು ದೇಶಗಳಲ್ಲಿ ಹೊಸ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಬೆಳವಣಿಗೆ ಅತ್ಯಂತ ಮಹತ್ವದ್ದಾಗಿದೆ.
ಕೇಂದ್ರ ಸರ್ಕಾರ ಹಂತ, ಹಂತವಾಗಿ ಮತ್ತು ನಿರ್ದಿಷ್ಠ ಕಾರ್ಯತಂತ್ರ ಜಾರಿಗೊಳಿಸಿದ್ದರಿಂದ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಹಾಗೂ ವೈದ್ಯರು ಮತ್ತು ಎಲ್ಲ ಕೋವಿಡ್ ಯೋಧರ ಸ್ವಾರ್ಥರಹಿತ ಮತ್ತು ಸಮರ್ಪಣಾ ಸೇವಾಯಿಂದಾಗಿ ಈ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ.
27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 20ಸಾವಿರಕ್ಕೂ ಕಡಿಮೆ ಸಕ್ರಿಯ ಪ್ರಕರಣಗಳಿವೆ.
ಕೇವಲ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 20 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಮತ್ತು ಎರಡು ರಾಜ್ಯ (ಮಹಾರಾಷ್ಟ್ರ ಮತ್ತು ಕೇರಳ) ಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 50ಸಾವಿರಕ್ಕೂ ಅಧಿಕ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ 44,281 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಮತ್ತು ಈ ಅವಧಿಯಲ್ಲಿ ಒಟ್ಟು 50,326 ಸೋಂಕಿತರು ಗುಣಮುಖರಾಗಿದ್ದಾರೆ. ಸತತ 39 ದಿನವೂ ಸಹ ಹೊಸ ಸೋಂಕು ಪ್ರಕರಣಗಳಿಗಿಂತ, ಗುಣಮುಖರಾಗಿರುವ ಪ್ರಕರಣಗಳೇ ಅತ್ಯಧಿಕವಾಗಿವೆ.
ಅದೇ ಅವಧಿಯಲ್ಲಿ ಒಟ್ಟು ಗುಣಮುಖವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ಒಟ್ಟು ಗುಣಮುಖವಾಗುತ್ತಿರುವ ಪ್ರಕರಣಗಳು ಮತ್ತು ಒಟ್ಟು ಸಕ್ರಿಯ ಪ್ರಕರಣಗಳ ನಡುವೆ ವ್ಯತ್ಯಾಸ ಮುಂದುವರಿದಿದೆ.
ಒಟ್ಟು ಗುಣಮುಖವಾಗುತ್ತಿರುವ ಪ್ರಕರಣಗಳ ಸಂಖ್ಯೆ 80 ಲಕ್ಷ ದಾಟಿದೆ. ಒಟ್ಟು ಗುಣಮುಖವಾಗಿರುವ ಪ್ರಕರಣಗಳು ಇಂದು 80,13,783 ಇತ್ತು. ಗುಣಮುಖವಾಗಿರುವ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ 75,19,126 ಇತ್ತು ಮತ್ತು ಚೇತರಿಕೆ ಪ್ರಮಾಣ ಶೇ.92.79ಕ್ಕೆ ಏರಿಕೆಯಾಗಿದೆ.
ಮತ್ತೊಂದು ಮಹತ್ವದ ಮೈಲಿಗಲ್ಲೆಂದರೆ, ಒಟ್ಟು ಸೋಂಕು ಪತ್ತೆ ಪರೀಕ್ಷೆಗಳು 12 ಲಕ್ಷ ದಾಟಿರುವುದು. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11,53,294 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.
ಸೋಂಕು ಪತ್ತೆ ಪರೀಕ್ಷಾ ಮೂಲಸೌಕರ್ಯವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದ್ದು, ಇದರಿಂದಾಗಿ ಪ್ರತಿದಿನ ಕಡಿಮೆ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ಪ್ರವೃತ್ತಿ ಮುಂದುವರಿಯುವಂತೆ ಮಾಡಿದೆ.
ಗರಿಷ್ಠ ಸೋಂಕು ಪತ್ತೆ ಪರೀಕ್ಷೆಗಳಿಂದಾಗಿ ಸೋಂಕು ಹೊಂದಿರುವವರನ್ನು ಬಹುಬೇಗ ಗುರುತಿಸಿ, ಸೋಂಕು ಇತರರಿಗೆ ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಪ್ರತಿದಿನ ಹೊಸ ಸೋಂಕು ಪತ್ತೆ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತಲೂ ಕಡಿಮೆಯಾಗಿದೆ.
ಶೇ.77ರಷ್ಟು ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳು 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿವೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ ಅಂದರೆ 6,718 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ನಂತರದ ಸ್ಥಾನದಲ್ಲಿ ಕೇರಳದಲ್ಲಿ 6,698 ಸೋಂಕಿತರು ಗುಣಮುಖರಾಗಿದ್ದಾರೆ. ನಂತರ ದೆಹಲಿಯಲ್ಲಿ 6,157 ಮಂದಿ ಹೊಸದಾಗಿ ಗುಣಮುಖರಾಗಿದ್ದಾರೆ.
ಶೇ.78ರಷ್ಟು ಹೊಸ ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದಾಗಿವೆ.
ದೆಹಲಿಯಲ್ಲಿ ಒಂದೇ ದಿನ ಅತ್ಯಧಿಕ ಪ್ರಕರಣಗಳು 7,830 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಆನಂತರದ ಸ್ಥಾನದಲ್ಲಿ ಕೇರಳ ಇದ್ದು, ಅಲ್ಲಿ 6,010 ಪ್ರಕರಣಗಳು ವರದಿಯಾಗಿವೆ.
ಶೇ. 79ರಷ್ಟು ಕೋವಿಡ್ ಸೋಂಕು ಪ್ರಕರಣಗಳ ಸಾವು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ 512 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಮರಣ ಪ್ರಮಾಣ ಶೇ.1.48ಕ್ಕೆ ಇಳಿಕೆಯಾಗಿದೆ ಮತ್ತು ನಿರಂತರವಾಗಿ ದಿನೇ ದಿನೇ ಇಳಿಕೆಯಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಸೋಂಕಿತರು 110 ಮಂದಿ ಮೃತಪಟ್ಟಿದ್ದಾರೆ. ನಂತರ ಕ್ರಮವಾಗಿ ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ 83 ಹಾಗೂ 53 ಮಂದಿ ಸೋಂಕಿತರು ಸಾವನಪ್ಪಿದ್ದಾರೆ.
***
(Release ID: 1671919)
Visitor Counter : 202
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam