ಪ್ರಧಾನ ಮಂತ್ರಿಯವರ ಕಛೇರಿ

ಮೌಲಾನಾ ಆಜಾದ್ ಮತ್ತು ಆಚಾರ್ಯ ಕೃಪಲಾನಿ ಜಯಂತಿ: ಪ್ರಧಾನಿ ಗೌರವ ನಮನ

Posted On: 11 NOV 2020 2:24PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೌಲಾನಾ ಆಜಾದ್ ಮತ್ತು ಆಚಾರ್ಯ ಕೃಪಲಾನಿ ಅವರಿಗೆ ಅವರ ಜಯಂತಿಯ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದ್ದಾರೆ.

"ಮೌಲಾನಾ ಆಜಾದ್ ಮತ್ತು ಆಚಾರ್ಯ ಕೃಪಲಾನಿ ಅವರು ರಾಷ್ಟ್ರೀಯ ಪ್ರಗತಿಗೆ ಮಹೋನ್ನತ ಕೊಡುಗೆಗಳನ್ನು ನೀಡಿದ ಅನುಕರಣೀಯ ವ್ಯಕ್ತಿಗಳು ಎಂದು ಸ್ಮರಿಸಲಾಗುತ್ತದೆ. ಅವರು ಬಡವರು ಮತ್ತು ಯುವಜನರ ಸಬಲೀಕರಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು. ಅವರ ಜಯಂತಿಯಂದು ಅವರಿಗೆ ನಾನು ನಮಿಸುತ್ತೇನೆ. ಅವರ ಆದರ್ಶಗಳು ನಮಗೆ ಯಾವಾಗಲೂ ಪ್ರೇರಣೆಯಾಗಿರುತ್ತವೆ" ಎಂದು ಪ್ರಧಾನ ಮಂತ್ರಿಯವರು ಹೇಳಿದ್ದಾರೆ.

***(Release ID: 1671908) Visitor Counter : 172