ಪ್ರಧಾನ ಮಂತ್ರಿಯವರ ಕಛೇರಿ

ನವೆಂಬರ್ 13 ರಂದು ಜಾಮ್‌ನಗರ ಮತ್ತು ಜೈಪುರದಲ್ಲಿ ಪ್ರಧಾನಿಯವರಿಂದ ಆಯುರ್ವೇದ ಸಂಸ್ಥೆಗಳ ಉದ್ಘಾಟನೆ

Posted On: 11 NOV 2020 3:08PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 5 ನೇ ಆಯುರ್ವೇದ ದಿನವಾದ ನವೆಂಬರ್ 13, 2020 ರಂದು ಜಾಮ್ನಗರದ ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ ( ಟಿ ಆರ್ ) ಮತ್ತು ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ (ಎನ್ ) ಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಸಂಸ್ಥೆಗಳು 21 ನೇ ಶತಮಾನದಲ್ಲಿ ಆಯುರ್ವೇದದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ನಾಯಕತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಹಿನ್ನೆಲೆ:

ಧನ್ವಂತರಿ ಜಯಂತಿಯಂದು 2016 ರಿಂದ ಪ್ರತಿ ವರ್ಷ ಆಯುರ್ವೇದ ದಿನವನ್ನು ಆಚರಿಸಲಾಗುತ್ತಿದೆ. ವರ್ಷ ಅದು ನವೆಂಬರ್ 13, 2020 ರಂದು ಬರುತ್ತದೆ. ಆಯುರ್ವೇದ ದಿನವು ಒಂದು ಹಬ್ಬ ಅಥವಾ ಆಚರಣೆಗಿಂತ ವೃತ್ತಿಗೆ ಮತ್ತು ಸಮಾಜಕ್ಕೆ ಮರು ಸಮರ್ಪಣೆಯ ಸಂದರ್ಭವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಆಯುರ್ವೇದದ ಸಂಭಾವ್ಯ ಪಾತ್ರವು ವರ್ಷದಆಯುರ್ವೇದ ದಿನಾಚರಣೆಯ ಕೇಂದ್ರಬಿಂದುವಾಗಿದೆ.

ಭಾರತದ ಸಾರ್ವಜನಿಕ ಆರೋಗ್ಯ ಸವಾಲುಗಳಿಗೆ ಪರಿಣಾಮಕಾರಿ ಮತ್ತು ಕೈಗೆಟುಕುವ ಪರಿಹಾರಗಳನ್ನು ಒದಗಿಸಲು ಆಯುಷ್ ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಆಯುಷ್ ಶಿಕ್ಷಣದ ಆಧುನೀಕರಣವೂ ಒಂದು ಆದ್ಯತೆಯ ಕ್ಷೇತ್ರವಾಗಿದೆ. ಕಳೆದ 3-4 ವರ್ಷಗಳಲ್ಲಿ ಇದಕ್ಕಾಗಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಾಮ್ನಗರದ ಟಿ ಆರ್ ಎನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದು ಮತ್ತು ಜೈಪುರ ಎನ್ಐಎಯನ್ನು ಡೀಮ್ಡ್ ವಿಶ್ವವಿದ್ಯಾಲಯವೆಂದು ಪರಿಗಣಿಸಲ್ಪಟ್ಟಿರುವುದು ಆಯುರ್ವೇದ ಶಿಕ್ಷಣದ ಆಧುನೀಕರಣದಲ್ಲಿ ಮಾತ್ರವಲ್ಲ, ಸಾಂಪ್ರದಾಯಿಕ ಔಷಧದ ವಿಕಸನದಲ್ಲಿಯೂ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಇದು ಸಂಸ್ಥೆಗಳಿಗೆ ಆಯುರ್ವೇದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬೇಡಿಕೆಗೆ ಅನುಗುಣವಾಗಿ ವಿವಿಧ ಕೋರ್ಸ್ಗಳನ್ನು ರೂಪಿಸಲು ಮತ್ತು ಆಧುನಿಕ ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಲು ಹೆಚ್ಚು ಹೆಚ್ಚು ಸಾಕ್ಷ್ಯಗಳನ್ನು ಸೃಷ್ಟಿಸಲು ಸ್ವಾಯತ್ತತೆಯನ್ನು ಒದಗಿಸುತ್ತದೆ.

***



(Release ID: 1671907) Visitor Counter : 173