ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಇಟಲಿ ವರ್ಚುವಲ್ ಶೃಂಗಸಭೆ (2020 ನವೆಂಬರ್ 6)

Posted On: 06 NOV 2020 7:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಪ್ರೊ. ಗೈಸೆಪೆ ಕಾಂಟೆ ನಡುವೆ ದ್ವಿಪಕ್ಷೀಯ ವರ್ಚುವಲ್ ಶೃಂಗಸಭೆ 2020 ರ ನವೆಂಬರ್ 6 ರಂದು ನಡೆಯಿತು.

ಪ್ರಧಾನಮಂತ್ರಿ ಮೋದಿ ಅವರು 2018ರಲ್ಲಿ ಪ್ರೊ. ಗೈಸೆಪೆ ಕಾಂಟೆ ಅವರು ಭಾರತಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿ, ಇತ್ತೀಚಿನ ವರ್ಷಗಳಲ್ಲಿ ಭಾರತ ಇಟಲಿ ಬಾಂಧವ್ಯ ತ್ವರಿತವಾಗಿ ವೃದ್ಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಿ ಪ್ರೊ. ಕಾಂಟೆ ಪರಿಸ್ಥಿತಿ ಅನುಕೂಲಕರವಾದ ಬಳಿಕ ಶೀಘ್ರ ಇಟಲಿಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಮೋದಿ ಅವರಿಗೆ ಆಹ್ವಾನ ನೀಡಿದರು.

ಈ ಶೃಂಗಸಭೆ ದ್ವಿಪಕ್ಷೀಯ ಸಂಬಂಧದ ವಿಶಾಲ ಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಲು ಉಭಯ ನಾಯಕರಿಗೆ ಅವಕಾಶವನ್ನು ಒದಗಿಸಿತು. ಕೋವಿಡ್ -19 ಸಾಂಕ್ರಾಮಿಕ ಸೇರಿದಂತೆ ಸಾಮಾನ್ಯ ಜಾಗತಿಕ ಸವಾಲುಗಳ ವಿರುದ್ಧ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ಇಬ್ಬರೂ ನಾಯಕರು, ರಾಜಕೀಯ, ಆರ್ಥಿಕತೆ, ವೈಜ್ಞಾನಿಕ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ರಕ್ಷಣಾ ಸಹಕಾರ ಸೇರಿದಂತೆ ವಿಸ್ತೃತ ಶ್ರೇಣಿಯ ವಿಷಯಗಳ ಬಗ್ಗೆ ಚರ್ಚಿಸಿದರು. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ, ಎರಡೂ ಕಡೆಯವರು ಬಹುಪಕ್ಷೀಯ ವೇದಿಕೆಗಳಲ್ಲಿ ವಿಶೇಷವಾಗಿ ಜಿ -20ರಲ್ಲಿ ಸಮನ್ವಯ ಸಾಧಿಸಲು ಒಪ್ಪಿಕೊಂಡವು. ಇಟಲಿ 2021ರ ಡಿಸೆಂಬರ್‌ ನಲ್ಲಿ ಜಿ -20 ಅಧ್ಯಕ್ಷತೆಯನ್ನು ವಹಿಸಲಿದ್ದರೆ, 2022ರಲ್ಲಿ ಭಾರತ ಅದನ್ನು ವಹಿಸಿಕೊಳ್ಳುತ್ತದೆ. ಭಾರತ ಮತ್ತು ಇಟಲಿ ಒಟ್ಟಾಗಿ 2020ರ ಡಿಸೆಂಬರ್‌ ನಿಂದ ಜಿ 20 ಟ್ರೋಯಿಕಾದ ಭಾಗವಾಗಲಿವೆ. ಸ್ಥಿರೀಕರಣ ಪ್ರಕ್ರಿಯೆ ಮುಗಿದ ಕೂಡಲೇ ಐಎಸ್‌.ಎ.ಗೆ ಸೇರ್ಪಡೆಗೊಳ್ಳುವ ಇಟಲಿಯ ನಿರ್ಧಾರವನ್ನು ಭಾರತ ಸ್ವಾಗತಿಸಿತು. ವಿವಿಧ ವಲಯಗಳಲ್ಲಿ ಅಂದರೆ ಇಂಧನ, ಮೀನುಗಾರಿಕೆ, ಹಡಗು ನಿರ್ಮಾಣ, ವಿನ್ಯಾಸ ಮತ್ತಿತರ ಕ್ಷೇತ್ರಗಳಲ್ಲಿ 15 ಎಂ.ಓಯುಗಳು/ಒಪ್ಪಂದಗಳಿಗೆ ಶೃಂಗದ ವೇಲೆ ಅಂಕಿತ ಹಾಕಲಾಯಿತು.

***



(Release ID: 1671490) Visitor Counter : 122