ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಿಂದ ದೇಶಾದ್ಯಂತ 4.39 ಕೋಟಿ ನಕಲಿ ಪಡಿತರ ಚೀಟಿಗಳ ರದ್ದು


ನೈಜ ಮತ್ತು ಅರ್ಹ ಫಲಾನುಭವಿಗಳು / ಕುಟುಂಬಗಳಿಗೆ ಹೊಸ ಕಾರ್ಡ್ಗಳನ್ನು ನಿಯಮಿತವಾಗಿ ನೀಡಲಾಗುತ್ತಿದೆ

Posted On: 06 NOV 2020 11:06AM by PIB Bengaluru

ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಿಂದ ದೇಶಾದ್ಯಂತ 4.39 ಕೋಟಿ ನಕಲಿ ಪಡಿತರ ಚೀಟಿಗಳನ್ನುರದ್ದುಪಡಿಸಲಾಗಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಟಿಪಿಡಿಎಸ್) ಆಧುನೀಕರಿಸಲು ಮತ್ತು ಪಡಿತರ ಚೀಟಿಗಳು/ಫಲಾನುಭವಿಗಳ ದತ್ತಾಂಶಗಳ ಡಿಜಿಟಲೀಕರಣ, ಆಧಾರ್ ಅಳವಡಿಕೆ, ಅನರ್ಹ/ನಕಲಿ ಪಡಿತರ ಚೀಟಿಗಳ ಪತ್ತೆ ಕಾರ್ಯಾಚರಣೆಯ ಮೂಲಕ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ದೇಶಾದ್ಯಂತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 2013 ರಿಂದ 2020 ರವರೆಗೆ ಒಟ್ಟು 4.39 ಕೋಟಿ ಅನರ್ಹ / ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಿವೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯಡಿ ಬಿಡುಗಡೆಯಾದ ಪಾಲನ್ನು ಸಂಬಂಧಪಟ್ಟ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಸೂಕ್ತ ಫಲಾನುಭವಿಗಳನ್ನು ತಲುಪಲು ಬಳಸಿಕೊಳ್ಳುತ್ತಿವೆ. ಕಾಯಿದೆಯಡಿ ಪ್ರತಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಖ್ಯಾನಿಸಲಾದ ವ್ಯಾಪ್ತಿಯ ಮಿತಿಗಳಲ್ಲಿ ನೈಜ, ಅರ್ಹ ಫಲಾನುಭವಿಗಳು/ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ನೀಡುವ ಮೂಲಕ ಅವು ತಮ್ಮ ಪಾಲು ಬಳಸಿಕೊಳ್ಳುತ್ತಿವೆ.

http://static.pib.gov.in/WriteReadData/userfiles/image/image001L0U2.jpg

2011 ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಅಂದರೆ, 81.35 ಕೋಟಿ ಜನರು ಟಿಪಿಡಿಎಸ್ ಮೂಲಕ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಎನ್ಎಫ್ಎಸ್ಎ ಅವಕಾಶ ಒದಗಿಸುತ್ತದೆ. ಪ್ರಸ್ತುತ, ಎನ್‌ಎಫ್‌ಎಸ್‌ಎ ಅಡಿಯಲ್ಲಿ ದೇಶದಲ್ಲಿ 80 ಕೋಟಿಗೂ ಹೆಚ್ಚು ಜನರು ಪ್ರತಿ ತಿಂಗಳು ಕೇಂದ್ರದ ಹೆಚ್ಚು ಸಬ್ಸಿಡಿಯ ಬೆಲೆಗಳಲ್ಲಿ ಪ್ರತಿ ಕೆ.ಜಿ.ಗೆ ಕ್ರಮವಾಗಿ 3, 2 ಮತ್ತು 1.ರೂ.ಗಳಲ್ಲಿ ಅಕ್ಕಿ, ಗೋಧಿ ಮತ್ತು ಒರಟು ಧಾನ್ಯಗಳನ್ನು ಪಡೆಯುತ್ತಿದ್ದಾರೆ.

******


(Release ID: 1670600) Visitor Counter : 230