ಪ್ರಧಾನ ಮಂತ್ರಿಯವರ ಕಛೇರಿ

ಜಾಗೃತಿ ಮತ್ತು ಭ್ರಷ್ಟಾಚಾರ ವಿರೋಧಿ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಅವರ ಉದ್ಘಾಟನಾ ಭಾಷಣದ

Posted On: 27 OCT 2020 6:41PM by PIB Bengaluru

ನಮಸ್ಕಾರ !

ನನ್ನ ಸಂಪುಟ ಸಹೋದ್ಯೋಗಿ, ಡಾ. ಜಿತೇಂದ್ರ ಸಿಂಗ್ ಜೀ, ಸಿ.ವಿ.ಸಿ ಸದಸ್ಯರೇ ಮತ್ತು ಆರ್.ಬಿ..ಸದಸ್ಯರೇ, ಭಾರತ ಸರಕಾರದ ಕಾರ್ಯದರ್ಶಿಗಳೇ, ಸಿ.ಬಿ.. ಅಧಿಕಾರಿಗಳೇ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೇ, ರಾಜ್ಯ ಸಿ..ಡಿ. ತಂಡಗಳ ಮುಖ್ಯಸ್ಥರೇ, ಬ್ಯಾಂಕುಗಳ ಹಿರಿಯ ಮ್ಯಾನೇಜರುಗಳೇ, ಮತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಗಣ್ಯರೇ! ಜಾಗೃತಿ ಮತ್ತು ಭ್ರಷ್ಟಾಚಾರ ವಿರೋಧಿ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿರುವುದಕ್ಕೆ ನಾನು ಸಿ.ಬಿ.. ತಂಡವನ್ನು ಅಭಿನಂದಿಸುತ್ತೇನೆ.

ಇಂದಿನಿಂದ ಜಾಗೃತಿ ಸಪ್ತಾಹ ಆರಂಭವಾಗುತ್ತಿದೆ. ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವನ್ನು ಅಚರಿಸಲು ಸಿದ್ದವಾಗುತ್ತಿದೆ. ಸರ್ದಾರ್ ಸಾಹೇಬ್ ಅವರು ಏಕ ಭಾರತ್, ಶ್ರೇಷ್ಟ ಭಾರತ್ಜೊತೆಗೆ ದೇಶದ ಆಡಳಿತ ವ್ಯವಸ್ಥೆಯ ಶಿಲ್ಪಿಯಾಗಿದ್ದರು. ದೇಶದ ಮೊದಲ ಗೃಹ ಸಚಿವರಾಗಿ ಅವರು ದೇಶದ ಸಾಮಾನ್ಯ ನಾಗರಿಕರಿಗಾಗಿ ವ್ಯವಸ್ಥೆಯೊಂದನ್ನು ರೂಪಿಸಲು ಪ್ರಯತ್ನಿಸಿದರು ಮತ್ತು ಅದರ ನೀತಿಗಳಲ್ಲಿ ನೈತಿಕತೆಯನ್ನು ಅಳವಡಿಸಿದರು. ಆದರೆ ಬಳಿಕದ ದಶಕಗಳಲ್ಲಿ ವಿವಿಧ ಪರಿಸ್ಥಿತಿಗಳು ಸೃಷ್ಟಿಯಾದುದನ್ನು ನಾವು ಕಂಡಿದ್ದೇವೆ. ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳು , ಶೆಲ್ ಕಂಪೆನಿಗಳ ಜಾಲ, ತೆರಿಗೆ ಕಿರುಕುಳ, ತೆರಿಗೆ ತಪ್ಪಿಸುವಿಕೆ, ಇತ್ಯಾದಿಗಳು ಹಲವಾರು ವರ್ಷ ಕಾಲ ಚರ್ಚೆಯ ಕೇಂದ್ರವಾಗಿದ್ದವು ಎಂಬುದನ್ನು ನೀವೆಲ್ಲರೂ ನೆನಪು ಮಾಡಿಕೊಂಡಿರಬಹುದು.

ಸ್ನೇಹಿತರೇ,

2014 ರಲ್ಲಿ ದೇಶವು ಪ್ರಮುಖ ಪರಿವರ್ತನೆಯನ್ನು ತರಲು ನಿರ್ಧರಿಸಿದಾಗ, ಅದು ಹೊಸ ದಿಕ್ಕಿನಲ್ಲಿ ಚಲಿಸಲಾರಂಭಿಸಿದಾಗ, ಪ್ರಮುಖವಾಗಿ ಇದ್ದ ಸವಾಲು ಆಗ ಇದ್ದ ಪರಿಸರವನ್ನು ಬದಲಾಯಿಸುವುದಾಗಿತ್ತು. ರೀತಿಯಲ್ಲಿ ದೇಶವು ಸಾಗುವುದೇ; ಅದು ಮುಂದುವರೆಯುವುದೇ ? ಎಂಬಂತಿದ್ದ ಚಿಂತನೆಯನ್ನು ಬದಲಾಯಿಸುವುದು ಆಗ ಅವಶ್ಯವಾಗಿತ್ತು. ಪ್ರಮಾಣ ವಚನ ಸ್ವೀಕಾರದ ನಂತರ, ಸರಕಾರದ ಮೊದಲ 2-3 ಆದೇಶಗಳು ಕಪ್ಪು ಹಣದ ವಿರುದ್ದ ಸಮಿತಿ ರಚಿಸುವ ನಿರ್ಧಾರವನ್ನು ಒಳಗೊಂಡಿದ್ದವು. ಸುಪ್ರೀಂ ಕೋರ್ಟ್ ಆದೇಶದ ಬಳಿಕವೂ ಇದು ಬಾಕಿಯಾಗಿತ್ತು. ನಿರ್ಧಾರವು ಭ್ರಷ್ಟಾಚಾರದ ವಿರುದ್ದ ಸರಕಾರದ ಬದ್ದತೆಯನ್ನು ತೋರ್ಪಡಿಸಿತು. ಕಳೆದ ಕೆಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ದ ಶೂನ್ಯ ಸಹನೆಯ ಧೋರಣೆಯೊಂದಿಗೆ ದೇಶ ಮುನ್ನಡೆಯುತ್ತಿದೆ. 2014 ರಿಂದೀಚೆಗೆ ದೇಶದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಸುಧಾರಣೆಗಳು ಆಗುತ್ತಿವೆ. ಬ್ಯಾಂಕಿಂಗ್ ವ್ಯವಸ್ಥೆ, ಆರೋಗ್ಯ ವಲಯ, ಶಿಕ್ಷಣ ವಲಯ, ಕಾರ್ಮಿಕ, ಕೃಷಿ ಮತ್ತು ಇತರ ವಲಯಗಳಲ್ಲಿಯೂ ಇದುವರೆಗೆ ಸುಧಾರಣೆಗಳು ನಡೆದಿವೆ. ಇದು ಬೃಹತ್ ಸುಧಾರಣೆಗಳ ಕಾಲ. ಇಂದು ಸುಧಾರಣೆಗಳ ಆಧಾರದ ಮೇಲೆ, ಭಾರತವು ಸ್ವಾವಲಂಬಿ ಭಾರತ ಪ್ರಚಾರಾಂದೋಲನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದೆ.

ನಾವು ಭಾರತವನ್ನು ವಿಶ್ವದ ಮುಂಚೂಣಿ ದೇಶಗಳತ್ತ ಕೊಂಡೊಯ್ಯುವ ಉದ್ದೇಶ ಹೊಂದಿದ್ದೇವೆ. ಆದರೆ ಸ್ನೇಹಿತರೇ, ಅಭಿವೃದ್ಧಿಗೆ ನಾವು ಹೊಂದಿರುವ ಆಡಳಿತಾತ್ಮಕ ವ್ಯವಸ್ಥೆ ಪಾರದರ್ಶಕ, ಜವಾಬ್ದಾರಿಯುತ, ಉತ್ತರದಾಯಿತ್ವ ಮತ್ತು ಸಾರ್ವಜನಿಕರಿಗೆ ಉತ್ತರ ನೀಡುವಂತೆ ಇರುವುದನ್ನು ಖಾತ್ರಿಪಡಿಸುವ ಅವಶ್ಯಕತೆ ಇದೆ. ಎಲ್ಲಾ ವ್ಯವಸ್ಥೆಗಳ ದೊಡ್ಡ ವೈರಿ ಎಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಎಂದರೆ ಕೆಲವು ರೂಪಾಯಿಗಳ ವಿಷಯ ಅಲ್ಲ. ಒಂದೆಡೆ ಭ್ರಷ್ಟಾಚಾರ ದೇಶದ ಅಭಿವೃದ್ಧಿಯನ್ನು ಘಾಸಿಗೊಳಿಸುತ್ತಿದೆ ಮತ್ತು ಇದೇ ವೇಳೆ ಭ್ರಷ್ಟಾಚಾರವು ಸಾಮಾಜಿಕ ಸಮತೋಲನವನ್ನು ಅಸ್ತವ್ಯಸ್ತ ಮಾಡುತ್ತಿದೆ. ಮತ್ತು ಬಹಳ ಮುಖ್ಯವಾಗಿ ಭ್ರಷ್ಟಾಚಾರವು ದೇಶದ ವ್ಯವಸ್ಥೆಯಲ್ಲಿ ಒಬ್ಬರು ಇಟ್ಟಿರುವ ನಂಬಿಕೆಗೆ ಪಿಡುಗಾಗಿ ಕಾಡುತ್ತದೆ ಮತ್ತು ಅದು ಏಕತೆಯ ಭಾವನೆಯನ್ನು ರೂಪಿಸುತ್ತಿದೆ. ಆದುದರಿಂದ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುವುದು ಏಜೆನ್ಸಿಯೊಂದರ ಅಥವಾ ಸಂಸ್ಥೆಯೊಂದರ ಜವಾಬ್ದಾರಿ ಮಾತ್ರವಲ್ಲ, ಅದು ಸಾಮೂಹಿಕ ಜವಾಬ್ದಾರಿ.

ಸ್ನೇಹಿತರೇ,

ಸಿ.ಬಿ.. ಜೊತೆಗೆ , ಸಮ್ಮೇಳನದಲ್ಲಿ ಇತರ ಏಜೆನ್ಸಿಗಳು ಕೂಡಾ ಪಾಲ್ಗೊಳ್ಳುತ್ತಿವೆ. ರೀತಿಯಲ್ಲಿ , ಮೂರು ದಿನಗಳ ಕಾಲ ಎಚ್ಚರಿಕೆಯ ಭಾರತ, ಸಮೃದ್ಧ ಭಾರತ್ನಲ್ಲಿ ಎಲ್ಲಾ ಏಜೆನ್ಸಿಗಳು ಏಕ ವೇದಿಕೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿವೆ. ಮೂರು ದಿನಗಳು ನಮಗೊಂದು ಅವಕಾಶದಂತೆ, ಯಾಕೆಂದರೆ ಭ್ರಷ್ಟಾಚಾರ ತನ್ನೊಳಗೇ ಮಾತ್ರವೇ ಸವಾಲುಗಳನ್ನು ಹುದುಗಿಸಿಕೊಂಡಿರುವುದಲ್ಲ. ದೇಶದ ವಿಷಯ ಬಂದಾಗ ಜಾಗೃತಿಯ ವ್ಯಾಪ್ತಿ ಬಹಳ ವಿಸ್ತಾರವಾದುದು. ಭ್ರಷ್ಟಾಚಾರವಿರಲಿ, ಆರ್ಥಿಕ ಅಪರಾಧಗಳಿರಲಿ, ಮಾದಕ ದ್ರವ್ಯಗಳ ಜಾಲವಿರಲಿ, ಹಣಕಾಸು ವಂಚನೆ ಇರಲಿ ಅಥವಾ ಭಯೋತ್ಪಾದನೆ ಇರಲಿ, ಭಯೋತ್ಪಾದನೆಗೆ ಹಣಕಾಸು ಇರಲಿ, ಇವೆಲ್ಲವೂ ಪರಸ್ಪರ ಸಂಬಂಧಿಗಳು. ಆದುದರಿಂದ ನಾವು ವ್ಯವಸ್ಥಿತ ತಪಾಸಣೆಗಳನ್ನು , ತಡೆಗಳನ್ನು , ಸಮರ್ಪಕವಾದ ಅಡಿಟ್ ಗಳನ್ನು ಮತ್ತು ಸಾಮರ್ಥ್ಯ ವರ್ಧನೆ ಹಾಗು ಭ್ರಷ್ಟಾಚಾರದ ವಿರುದ್ದ ತರಬೇತಿಯನ್ನು ಸಮಗ್ರ ಧೋರಣೆಯೊಂದಿಗೆ ಅಳವಡಿಸಿಕೊಂಡಿರಬೇಕು. ಎಲ್ಲಾ ಏಜೆನ್ಸಿಗಳ ನಡುವೆ ಏಕತಾ ಭಾವ, ಹೊಂದಾಣಿಕೆ , ಸಹಕಾರದ ಸ್ಪೂರ್ತಿ ಇಂದಿನ ಸಮಯದ ಅವಶ್ಯಕತೆಯಾಗಿದೆ. ಸಮ್ಮೇಳನವು ನಿಟ್ಟಿನಲ್ಲಿ ಒಂದು ಸಮರ್ಪಕ ವೇದಿಕೆಯಾಗಿ ಉದಯಿಸಲಿದೆ ಮತ್ತು ಎಚ್ಚರಿಕೆಯ ಭಾರತ, ಸಮೃದ್ಧಿ ಭಾರತ ಕ್ಕಾಗಿ ಹೊಸ ಹಾದಿಗಳನ್ನು ಸಲಹೆ ಮಾಡಲಿದೆ ಎಂಬ ಬಗ್ಗೆ ನಾನು ವಿಶ್ವಾಸ ಹೊಂದಿದ್ದೇನೆ.

ಸ್ನೇಹಿತರೇ,

2016 ಜಾಗೃತಿ ಕಾರ್ಯಕ್ರಮದಲ್ಲಿ ನಾನು ಹೇಳಿದ್ದೆ, ಬಡತನದ ವಿರುದ್ದ ಹೋರಾಡುತ್ತಿರುವಂತಹ ನಮ್ಮ ದೇಶದಲ್ಲಿ ಭ್ರಷ್ಟಾಚಾರಕ್ಕೆ ಸ್ಥಳ ಇಲ್ಲ ಎಂದು. ದೇಶದ ಬಡವರು ಭ್ರಷ್ಟಾಚಾರದಿಂದಾಗಿ ಭಾರೀ ಪರಿಣಾಮವನ್ನು ಅನುಭವಿಸುತ್ತಾರೆ. ಭ್ರಷ್ಟಾಚಾರದಿಂದ ಪ್ರಾಮಾಣಿಕ ವ್ಯಕ್ತಿಗಳು ಬಹಳ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಲ್ಲಿ ದಶಕಗಳಿಂದ ನೆಲೆಗೊಂಡಿರುವ ಪರಿಸ್ಥಿತಿಗಳಿಂದಾಗಿ ಬಡವರು ಅವರ ಹಕ್ಕುಗಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ. ಮೊದಲು ಪರಿಸ್ಥಿತಿ ಭಿನ್ನವಾಗಿತ್ತು. ಆದರೆ ಈಗ ನೀವು ನೋಡಿ, ಡಿ.ಬಿ.ಟಿ. ಮೂಲಕ ಬಡವರಿಗೆ ನೇರವಾಗಿ ಪ್ರಯೋಜನಗಳು 100% ತಲುಪುತ್ತಿವೆ. ಹಣ ಅವರ ಬ್ಯಾಂಕ್ ಖಾತೆಗಳಿಗೆ ತಲುಪುತ್ತಿದೆ. ಡಿ.ಬಿ.ಟಿ. ಮೂಲಕವೇ 1 ಲಕ್ಷ 70 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತ ಅನರ್ಹ ಕೈಗಳನ್ನು ಸೇರುವುದಕ್ಕೆ ತಡೆ ಹಾಕಲಾಗಿದೆ. ಇಂದು ದೇಶವು ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳ ಶಕೆಯನ್ನು ಹಿಂದೆ ಹಾಕಿದೆ ಎಂಬುದನ್ನು ಹೆಮ್ಮೆಯಿಂದ ಹೇಳಬಹುದಾಗಿದೆ.ಇಂದು ದೇಶದ ಸಂಸ್ಥೆಗಳಲ್ಲಿ ಸಾಮಾನ್ಯ ಜನತೆಯ ನಂಬಿಕೆ ಮತ್ತೆ ವೃದ್ಧಿಯಾಗಿರುವುದಕ್ಕೆ ಮತ್ತು ಧನಾತ್ಮಕತೆ ಸೃಷ್ಟಿಯಾಗಿರುವುದಕ್ಕೆ ನಮಗೆ ತೃಪ್ತಿ ಇದೆ.

ಸ್ನೇಹಿತರೇ,

ಸರಕಾರ ಯಾವುದೇ ಒತ್ತಡಕ್ಕೆ ಒಳಗಾಗದಂತೆ ಮತ್ತು ಕರ್ತವ್ಯ ವಿಮುಖವಾಗದಂತೆ ಖಾತ್ರಿಪಡಿಸಲು ವ್ಯಾಪಕವಾದ ಒತ್ತನ್ನು ನೀಡಲಾಗುತ್ತಿದೆ. ಸರಕಾರ ಎಂಬುದು ಅದು ಅವಶ್ಯ ಇರುವಲ್ಲಿಯ ಬಿಂದುವಿನವರೆಗೆ ಮಾತ್ರ ಲಭ್ಯ ಇರಬೇಕು. ಜನತೆ ಸರಕಾರದಿಂದ ಯಾವುದೇ ಒತ್ತಡ ಅನುಭವಿಸಬಾರದು. ಮತ್ತು ಇದೇ ವೇಳೆ ಸರಕಾರ ಇಲ್ಲ ಎಂಬ ಕೊರತೆಯೂ ಬಾಧಿಸುವಂತಿರಬಾರದು. ಆದುದರಿಂದ ಸುಮಾರು 1,500 ಕ್ಕೂ ಅಧಿಕ ಕಾನೂನುಗಳನ್ನು ಹಿಂದಿನ ವರ್ಷಗಳಲ್ಲಿ ತೆಗೆದು ಹಾಕಲಾಗಿದೆ. ಮತ್ತು ವಿವಿಧ ನಿಯಮ ಹಾಗು ನಿಯಂತ್ರಣಗಳನ್ನು ಸರಳಗೊಳಿಸಲಾಗಿದೆ. ಅದು ನಿವೃತ್ತಿ ವೇತನ ಇರಲಿ, ವಿದ್ಯಾರ್ಥಿ ವೇತನವಾಗಿರಲಿ, ನೀರಿನ ಬಿಲ್, ವಿದ್ಯುತ್ ಬಿಲ್, ಬ್ಯಾಂಕ್ ಸಾಲ, ಪಾಸ್ ಪೋರ್ಟ್ ಪಡೆಯುವಿಕೆ ಅಥವಾ ಲೈಸೆನ್ಸ್ ಪಡೆಯುವಿಕೆ , ಯಾವುದಾದರೂ ಸರಕಾರಿ ಬೆಂಬಲ , ನವೋದ್ಯಮ ಸ್ಥಾಪಿಸುವಿಕೆ ಇತ್ಯಾದಿಗಳಿಗೆ ಯಾವುದೇ ವ್ಯಕ್ತಿಯು ಯಾವುದೇ ಅಧಿಕಾರಿಯ ಎದುರು ಭೌತಿಕವಾಗಿ ವ್ಯವಹರಿಸಬೇಕೆಂದಿಲ್ಲ. ಆತ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಇದನ್ನೆಲ್ಲ ಮಾಡಲು ಈಗ ಡಿಜಿಟಲ್ ಆಯ್ಕೆ ಅಲ್ಲಿ ಲಭ್ಯವಿದೆ.

ಸ್ನೇಹಿತರೇ,

'प्रक्षालनाद्धि पंकस्य दूरात् स्पर्शनम् वरम्'' ಎಂಬೊಂದು ಹೇಳಿಕೆ ಇದೆ. ಅಂದರೆ, ಕೊಳಕನ್ನು ಬಳಿಕ ಸ್ವಚ್ಚ ಮಾಡುವುದಕ್ಕೆ ಬದಲು , ಮೊದಲೇ ಕೊಳಕಾಗದಂತೆ ತಡೆಯುವುದು ಉತ್ತಮ ಎಂಬುದು. ಶಿಕ್ಷಾ ಜಾಗೃತಿಗೆ ಬದಲು ತಡೆ ಜಾಗೃತಿಯ ಬಗ್ಗೆ ಹೆಚ್ಚು ಗಮನ ಕೊಡುವುದು ಉತ್ತಮ. ಭ್ರಷ್ಟಾಚಾರ ಹುಲುಸಾಗಿ ಬೆಳೆಯಲು ಕಾರಣವಾಗುವ ಪರಿಸ್ಥಿತಿಗಳ ಮೇಲೆ ದಾಳಿ ಮಾಡುವುದು ಅವಶ್ಯ. ನಮಗೆಲ್ಲಾ ಗೊತ್ತಿದೆ, ಒಂದೊಮ್ಮೆ ವರ್ಗಾವಣೆಗಳ ಮತ್ತು ಹುದ್ದೆಗೆ ನೇಮಕಗಳ ಆಟ ಉನ್ನತ ಮಟ್ಟದಲ್ಲಿ ಆಡಲ್ಪಡುತ್ತಿತ್ತು ಎಂಬುದು. ಇದು ಒಟ್ಟಾರೆಯಾಗಿ ಒಂದು ವಿಭಿನ್ನ ಉದ್ಯಮವಾಗಿತ್ತು.

ಸ್ನೇಹಿತರೇ, ಕೌಟಿಲ್ಯ ಹೇಳಿದ್ದಾನೆ, “ भक्षयन्ति ये त्वर्थान् न्यायतो वर्धयन्ति नित्याधिकाराः कार्यास्ते राज्ञः प्रियहिते रताः " . ಇದರರ್ಥ ಸರಕಾರದ ಹಣವನ್ನು ಲೂಟಿ ಮಾಡದವರು, ಆದರೆ ಅದರ ಬೆಳವಣಿಗೆಗೆ ಸೂಕ್ತ ವಿಧಾನಗಳ ಮೂಲಕ ಸಹಾಯ ಮಾಡುವವರು ಮತ್ತು ರಾಜ್ಯದ ಹಿತಾಸಕ್ತಿಯಿಂದ ಕೆಲಸ ಮಾಡುವ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಬೇಕು ಎಂಬುದು. ಆದರೆ ಕೆಲವು ವರ್ಷಗಳ ಹಿಂದೆ ಇದನ್ನು ಮರೆತು ಬಿಡಲಾಗಿತ್ತು. ಇದರಿಂದಾಗಿ ದೇಶಕ್ಕೆ ಬಹಳ ದೊಡ್ಡ ಪ್ರಮಾಣದ ಹಾನಿಯಾದುದನ್ನೂ ದೇಶ ಕಾಣಬೇಕಾಯಿತು. ಸರಕಾರ ಪರಿಸ್ಥಿತಿಯನ್ನು ಬದಲಾಯಿಸುವ ಇಚ್ಚಾಶಕ್ತಿಯನ್ನು ತೋರಿಸಿತು. ಹಲವು ನೀತಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಈಗ ಉನ್ನತ ಹುದ್ದೆಗಳಿಗೆ ನೇಮಕಕ್ಕೆ ಶಿಫಾರಸುಗಳು ಮತ್ತು ಇತರ ರೀತಿಯ ಒತ್ತಡಗಳ ಕಾಲ ಮುಗಿಯಿತು. ಬಿ ಗುಂಪಿನ ಮತ್ತು ಸಿ ಗುಂಪಿನ ಸೇವೆಗಳಲ್ಲಿ, ಡಾ. ಜಿತೇಂದ್ರ ಸಿಂಗ್ ಅವರು ಈಗಷ್ಟೇ ಹೇಳಿದಂತೆ ನೌಕರಿಗಾಗಿ ಸಂದರ್ಶನದ ಪರಿಪಾಠವನ್ನು ತೆಗೆದು ಹಾಕಲಾಗಿದೆ. ಇದರಿಂದ ಯಾವುದೇ ರೀತಿಯಲ್ಲಿ ಕುತ್ಸಿತ ಆಟ ಆಡುವ ಸಾಧ್ಯತೆಯನ್ನು ಕೊನೆಗಾಣಿಸಲಾಗಿದೆ. ಬ್ಯಾಂಕ್ ಬೋರ್ಡ್ ಬ್ಯೂರೋ ರಚನೆಯಿಂದಾಗಿ ಬ್ಯಾಂಕುಗಳಲ್ಲಿ ಉನ್ನತ ಹುದ್ದೆಗಳಿಗೆ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಲಾಗಿದೆ.

ಸ್ನೇಹಿತರೇ,

ದೇಶದ ಜಾಗೃತಿ ವ್ಯವಸ್ಥೆಯನ್ನು ಬಲಪಡಿಸಲು ಹಲವಾರು ಕಾನೂನು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಹಲವು ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಪ್ಪು ಹಣ ನಿಯಂತ್ರಿಸಲು ಮತ್ತು ಬೇನಾಮಿ ಆಸ್ತಿಗಳನ್ನು ನಿರ್ಬಂಧಿಸಲು ದೇಶವು ಜಾರಿಗೆ ತಂದಿರುವ ಕಾನೂನುಗಳು , ಕೈಗೊಂಡ ಕ್ರಮಗಳು ವಿಶ್ವದ ಇತರ ದೇಶಗಳಿಗೆ ಉದಾಹರಣೆಗಳನ್ನು ಒದಗಿಸಿವೆ.ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ಮೂಲಕ ಭ್ರಷ್ಟಾಚಾರದ ವಿರುದ್ದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ಮುಖ ರಹಿತ ತೆರಿಗೆ ಮೌಲ್ಯಮಾಪನ ವ್ಯವಸ್ಥೆ ಜಾರಿಯಲ್ಲಿರುವ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಭಾರತ ಒಂದಾಗಿದೆ. ಭ್ರಷ್ಟಾಚಾರವನ್ನು ತಡೆಯಲು ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಬಳಸುತ್ತಿರುವ ರಾಷ್ಟ್ರಗಳಲ್ಲಿ ಇಂದು ಭಾರತವೂ ಸೇರಿದೆ. ಜಾಗೃತಿಗೆ ಸಂಬಂಧಿಸಿದ ಏಜೆನ್ಸಿಗಳಿಗೆ ಉತ್ತಮ ತಂತ್ರಜ್ಞಾನವನ್ನು ಒದಗಿಸುವುದು, ಸಾಮರ್ಥ್ಯ ವರ್ಧನೆ ಮಾಡುವುದು, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಲಕರಣೆಗಳು ಲಭ್ಯವಾಗುವಂತೆ ಮಾಡುವುದು ಮತ್ತು ಮೂಲಕ ಅವರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿ ಉತ್ತಮ ಫಲಿತಾಂಶ ನೀಡುವಂತೆ ಮಾಡುವುದು ಸರಕಾರದ ಆದ್ಯತೆಯಾಗಿದೆ.

ಸ್ನೇಹಿತರೇ,

ಪ್ರಯತ್ನಗಳ ನಡುವೆ , ನಾವು ನೆನಪಿಡಬೇಕಾದುದೆಂದರೆ , ಭ್ರಷ್ಟಾಚಾರದ ವಿರುದ್ದದ ಪ್ರಚಾರಾಂದೋಲನ ಏಕ ದಿನದ್ದಲ್ಲ, ಅಥವಾ ಒಂದು ವಾರದ ಯುದ್ದವಲ್ಲ ಎಂಬುದನ್ನು. ಹಿನ್ನೆಲೆಯಲ್ಲಿ , ಇಂದು ನಾನು ನಿಮ್ಮೆದುರು ಇರುವ ಇನ್ನೊಂದು ಪ್ರಮುಖ ಸವಾಲನ್ನು ಪ್ರಸ್ತಾಪಿಸುತ್ತೇನೆ. ಕಳೆದ ದಶಕಗಳಿಂದ ಸವಾಲು ಸತತವಾಗಿ ಬೆಳೆಯುತ್ತಿದೆ ಮತ್ತು ದೇಶದೆದುರು ಅದು ಬಲಿಷ್ಟ ರೀತಿಯಲ್ಲಿ ಕಾಣಿಸಿಕೊಂಡಿದೆ. ಸವಾಲೆಂದರೆ ಭ್ರಷ್ಟಾಚಾರದ ರಾಜವಂಶ, ಅಥವಾ ವಂಶಾಡಳಿತ. ಅಂದರೆ ಭ್ರಷ್ಟಾಚಾರ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾವಣೆಯಾಗುತ್ತಿರುವುದು.

ಸ್ನೇಹಿತರೇ,

ನಾವು ಹಿಂದಿನ ದಶಕಗಳಲ್ಲಿ ಭ್ರಷ್ಟಾಚಾರ ಮಾಡಿದ್ದಕ್ಕಾಗಿ ಒಂದು ತಲೆಮಾರು ಯಾವುದೇ ಸೂಕ್ತ ಶಿಕ್ಷೆಗೆ ಒಳಗಾಗದೇ ಇರುವುದನ್ನು, ಮತ್ತು ಇನ್ನೊಂದು ತಲೆಮಾರು ಇನ್ನಷ್ಟು ಬಲಯುತವಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡದ್ದನ್ನು ನೋಡಿದ್ದೇವೆ. ಕೋಟ್ಯಾಂತರ ರೂಪಾಯಿ ಕಪ್ಪು ಹಣ ಸಂಪಾದಿಸಿದ ವ್ಯಕ್ತಿಗೆ ಏನೂ ಆಗದೇ ಇರುವುದನ್ನು ಅಥವಾ ಸಣ್ಣ ಪ್ರಮಾಣದ ಶಿಕ್ಷೆಯಾಗಿರುವುದನ್ನು ಆತ ನೋಡಿರುತ್ತಾನೆ .ಮತ್ತು ಇದರಿಂದ ಆತ ಕೂಡಾ ಉತ್ತೇಜನ ಪಡೆಯುತ್ತಾನೆ. ಇದರ ಪರಿಣಾಮವಾಗಿ ಹಲವು ರಾಜ್ಯಗಳಲ್ಲಿ ಇದು ರಾಜಕೀಯ ಪರಂಪರೆಯ ಭಾಗವಾಗಿ ಹೋಗಿದೆ. ಭ್ರಷ್ಟಾಚಾರದ ವಂಶಾಡಳಿತ , ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹೋಗಿ ಗೆದ್ದಲಿನಂತೆ ದೇಶವನ್ನು ಟೊಳ್ಳು ಮಾಡಬಹುದು.

ಒಂದು ಪ್ರಕರಣದಲ್ಲಿ ಭ್ರಷ್ಟಾಚಾರದ ವಿರುದ್ದ ಶಿಥಿಲತೆ ಅಥವಾ ಸಡಿಲು ನೀತಿ ಪ್ರಕರಣಕ್ಕೆ ಮಾತ್ರ ಸೀಮಿತಗೊಳ್ಳದೆ ಅದು ಸರಪಳಿಯಂತೆ ಸಾಗುತ್ತದೆ ಮತ್ತು ಭವಿಷ್ಯದ ಭ್ರಷ್ಟಾಚಾರಕ್ಕೆ ಮತ್ತು ಹಗರಣಕ್ಕೆ ನೆಲೆಗಟ್ಟು ಒದಗಿಸುತ್ತದೆ. ಸೂಕ್ತ ಕ್ರಮವನ್ನು ತೆಗೆದುಕೊಳ್ಳದೇ ಹೋದಲ್ಲಿ ಮಾಧ್ಯಮ ಮತ್ತು ಸಮಾಜ ಅಪರಾಧವನ್ನು ಹಗುರವಾಗಿ ತೆಗೆದುಕೊಳ್ಳಲು ಆರಂಭಿಸುತ್ತದೆ. ಬಹು ದೊಡ್ಡ ಸಂಖ್ಯೆಯ ಜನತೆಗೆ ಮತ್ತು ಮಾಧ್ಯಮಗಳಿಗೆ ಒಬ್ಬ ವ್ಯಕ್ತಿಯು ತಪ್ಪು ಹಾದಿಗಳ ಮೂಲಕ ಕೋಟ್ಯಾಂತರ ರೂಪಾಯಿ ಸಂಪಾದಿಸಿರುವುದು ಗೊತ್ತಿದ್ದರೂ, ಆಗ ಅವರು ಅದನ್ನು ಹಗುರವಾಗಿ ತೆಗೆದುಕೊಳ್ಳಲಾರಂಭಿಸುತ್ತಾರೆ. ಪರಿಸ್ಥಿತಿಯು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಅಡೆ ತಡೆಗಳನ್ನು ತಂದಿಡುತ್ತದೆ. ಸಮೃದ್ಧ ಭಾರತ ಮತ್ತು ಸ್ವಾವಲಂಬಿ ಭಾರತದ ಎದುರು ಇರುವ ಅತ್ಯಂತ ದೊಡ್ಡ ತೊಡಕು ಇದಾಗಿದೆ.

ಸುಮ್ಮನೆ ಕಲ್ಪಿಸಿಕೊಳ್ಳಿ, ನಮ್ಮಲ್ಲಿ ಯಾರಾದರೊಬ್ಬರು ಪಿ.ಡಬ್ಲ್ಯು.ಡಿ. ಯಲ್ಲಿ ಕೆಲಸ ಮಾಡುತ್ತಿರುವರೆಂದಿಟ್ಟುಕೊಂಡರೆ ಮತ್ತು ಅವರಿಗೆ ಇಂಜಿನಿಯರಿಂಗ್ ಕೆಲಸದ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ವ್ಯಕ್ತಿ ಹಣಕ್ಕಾಗಿ ಎಲ್ಲಾದರೊಂದು ಕಡೆ ಸೇತುವೆ ನಿರ್ಮಿಸಲು ನಿರ್ಧರಿಸುತ್ತಾರೆ. ಆಗ ಅವರು ಕೆಲಸದ ಬಗ್ಗೆ ನಿರ್ಲಕ್ಷ್ಯ ಹೊಂದಿರುತ್ತಾರೆ. ಅವರು ಒಂದಷ್ಟು ಹಣ ತೆಗೆದುಕೊಂಡು ,ಅದನ್ನು ತಮ್ಮ ಸಹೋದ್ಯೋಗಿಗಳಲ್ಲಿ ಹಂಚುತ್ತಾರೆ ಮತ್ತು ಗುತ್ತಿಗೆದಾರರು ಕೂಡಾ ಇದು ಪರಸ್ಪರ ಎಲ್ಲರಿಗೂ ಲಾಭದಾಯಕ ಎಂದು ಭಾವಿಸುತ್ತಾರೆ. ಹೇಗಾದರೂ ಸೇತುವೆ ನಿರ್ಮಾಣವಾಗುತ್ತದೆ ಮತ್ತು ಅದು ಉದ್ಘಾಟನೆಗೆ ಉತ್ತಮವಾಗಿ ಕಾಣುವಂತೆ ಖಾತ್ರಿಪಡಿಸಲಾಗುತ್ತದೆ. ಹಣವನ್ನು ಮನೆಗೆ ಕೊಂಡೊಯ್ಯಲಾಗಿರುತ್ತದೆ; ಭ್ರಷ್ಟ ಅಧಿಕಾರಿಯು ಎಲ್ಲಿಯೂ ಸಿಕ್ಕಿ ಬೀಳದೆ ನಿವೃತ್ತರಾಗುತ್ತಾರೆ. ಆದರೆ ಕಲ್ಪಿಸಿಕೊಳ್ಳಿ ಒಂದು ದಿನ ಅಧಿಕಾರಿಯ ಯುವ ಪುತ್ರ, ಸೇತುವೆಯನ್ನು ದಾಟುತ್ತಿರುವಾಗ, ಅದು ಇದ್ದಕ್ಕಿದ್ದಂತೆ ಕುಸಿದು ಬೀಳುತ್ತದೆ. ಆಗ ಇದು ಬರೇ ಭ್ರಷ್ಟಾಚಾರದ ಕೆಲಸ ಎಂದು ಜನ ಕಂಡುಕೊಳ್ಳುತ್ತಾರೆ !. ಆದರೆ ಇದಕ್ಕಾಗಿ ಎಷ್ಟು ಜೀವಗಳು ಬಲಿಯಾಗಬೇಕಾದೀತು !. ಮತ್ತು ಅದರ ಮೇಲಿನಿಂದ ನಿಮ್ಮ ಪುತ್ರನೂ ಹಾಗೆ ಜೀವ ಕಳೆದುಕೊಂಡರೆ ?, ಸೇತುವೆಯನ್ನು ಪ್ರಾಮಾಣಿಕವಾಗಿ ನಿರ್ಮಾಣ ಮಾಡಿದ್ದರೆ, ಆತನ ಓರ್ವನೇ ಪುತ್ರ ಜೀವ ಕಳೆದುಕೊಳ್ಳಬೇಕಾದ ಸ್ಥಿತಿ ಬರುತ್ತಿರಲಿಲ್ಲ. ಭ್ರಷ್ಟಾಚಾರ ಗಂಭೀರ ಪರಿಸ್ಥಿತಿಗಳನ್ನುಂಟು ಮಾಡಬಲ್ಲುದು.

ಸ್ಥಿತಿಯನ್ನು ಬದಲು ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಮತ್ತು ನಿಮ್ಮ ಮೇಲೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. ವಿಷಯ ಕೂಡಾ ರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚಿಸಲ್ಪಡುತ್ತದೆ ಎಂಬ ಆಶಯ ನನ್ನದಾಗಿದೆ. ಮತ್ತು ನೀವು ಇನ್ನೊಂದು ವಿಷಯದ ಬಗ್ಗೆಯೂ ಗಮನ ಕೊಡಬೇಕು. ಭ್ರಷ್ಟಾಚಾರದ ಸುದ್ದಿಯು ಮಾಧ್ಯಮಗಳ ಮೂಲಕ ತಲುಪುತ್ತದೆ. ಆದರೆ ಭ್ರಷ್ಟಾಚಾರದ ವಿರುದ್ದ ಕಠಿಣ ಮತ್ತು ಸಕಾಲಿಕ ಕ್ರಮ ಕೈಗೊಂಡಾಗ ಅಂತಹ ಉದಾಹರಣೆಗಳನ್ನು ಕೂಡಾ ಸಮರ್ಪಕವಾಗಿ ಜನರ ಮುಂದಿಡಬೇಕು. ಇದರಿಂದ ವ್ಯವಸ್ಥೆಯಲ್ಲಿ ಸಮಾಜದ ನಂಬಿಕೆ ಮತ್ತು ವಿಶ್ವಾಸ ವರ್ಧಿಸುತ್ತದೆ. ಮತ್ತು ಅದರಿಂದ ಭ್ರಷ್ಟಾಚಾರಿಗಳಿಗೆ ಇದರಿಂದ ಪಾರಾಗುವುದು ಕಷ್ಟ ಎಂಬ ಸಂದೇಶ ರವಾನೆಯಾಗುತ್ತದೆ.

ಇಂದು, ಕಾರ್ಯಕ್ರಮದ ಮೂಲಕ ನಾನು ಎಲ್ಲಾ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ ಏನೆಂದರೆ ದೇಶವನ್ನು ಬಲಿಷ್ಟಗೊಳಿಸುವುದನ್ನು ಮುಂದುವರಿಸಿ ಭಾರತ ವರ್ಸೆಸ್ ಭ್ರಷ್ಟಾಚಾರಹೋರಾಟದ ಮೂಲಕ ಭ್ರಷ್ಟಾಚಾರವನ್ನು ಸೋಲಿಸುವುದನ್ನು ಮುಂದುವರಿಸಿ. ಹೀಗೆ ಮಾಡುವುದರಿಂದ ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಕಲ್ಪಿಸಿಕೊಂಡ ಆದರ್ಶ ಭಾರತವನ್ನು ಕಟ್ಟುವ ಕನಸನ್ನು ಈಡೇರಿಸಲು ಸಮರ್ಥರಾಗುತ್ತೇವೆ ಮತ್ತು ಸಮೃದ್ಧ ಹಾಗು ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡಲೂ ಸಮರ್ಥರಾಗುತ್ತೇವೆ ಎಂಬ ವಿಶ್ವಾಸ ನನ್ನದಾಗಿದೆ. ಬರಲಿರುವ ಹಬ್ಬಗಳಿಗಾಗಿ ನಿಮಗೆಲ್ಲರಿಗೂ ಶುಭಾಶಯಗಳು.

ಆರೋಗ್ಯದಿಂದಿರಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿರಿ !

***


(Release ID: 1669698) Visitor Counter : 310