ರಕ್ಷಣಾ ಸಚಿವಾಲಯ
ಏರೋ ಇಂಡಿಯಾ 2021: ಮಾಧ್ಯಮ ನೋಂದಣಿ ಇಂದಿನಿಂದ ಆರಂಭ
Posted On:
02 NOV 2020 2:45PM by PIB Bengaluru
‘ಏರೋ ಇಂಡಿಯಾ 2021’ ರ 13ನೇ ಆವೃತ್ತಿ 2021ರ ಫೆಬ್ರವರಿ 03 ರಿಂದ 07 ರವರೆಗೆ ಬೆಂಗಳೂರಿನ, ಯಲಹಂಕದ ವಾಯುಪಡೆ ನೆಲೆಯಲ್ಲಿ ಜರುಗಲಿದೆ.
ಈ ವೈಮಾನಿಕ ಪ್ರದರ್ಶನಕ್ಕೆ ಮಾಧ್ಯಮ ಪ್ರತಿನಿಧಿಗಳ ನೋಂದಣಿ 2020ರ ನವೆಂಬರ್ 02ರಿಂದ ಆರಂಭವಾಗಿದೆ. ಈ ನೋಂದಣಿ 2020ರ ಡಿಸೆಂಬರ್ 06ರಂದು ಕೊನೆಗೊಳ್ಳಲಿದ್ದು, ಏರೋ ಇಂಡಿಯಾ 2021 ಅಂತರ್ಜಾಲ ತಾಣದ ಮೂಲಕ ಮಾಧ್ಯಮ ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದಾಗ್ಯೂ ಈ ಕಾರ್ಯಕ್ರಮದ ವರದಿ ಮಾಡಲು ಇಚ್ಛಿಸುವ ವಿದೇಶೀ ಪತ್ರಕರ್ತರು ಸಿಂಧುತ್ವವಿರುವ ಜೆ ವೀಸಾ ಹೊಂದಿರಬೇಕಾಗುತ್ತದೆ.
ಅಂತರ್ಜಾಲ ತಾಣ https://aeroindia.gov.in/media/mediaregcontent ನಲ್ಲಿ ಮಾಧ್ಯಮ ಪ್ರತಿನಿಧಿಗಳ ನೋಂದಣಿಗೆ ಸೂಕ್ತವಾದ ಬಟನ್ ಗಳಿದ್ದು, ಅವರ ಬಳಿ ಸಿಂಧುವಾದ ಸಂಖ್ಯೆಯ ಸಹಿತವಾದ ಮಾಧ್ಯಮ ಗುರುತಿನ ಕಾರ್ಡ್ ಇರಬೇಕು. ಪಿಐಬಿ/ ರಾಜ್ಯ ಮಾನ್ಯತೆಯ ಕಾರ್ಡ್ ನಂ (ಮಾನ್ಯತೆ ಪಡೆದಿದ್ದಲ್ಲಿ), ಸರ್ಕಾರ ನೀಡಿರುವ ಭಾವಚಿತ್ರ ಸಹಿತ ಗುರುತಿನ ಚೀಟಿ ಸಂಖ್ಯೆ ಮತ್ತು 512 ಕೆ.ಬಿ.ಗಿಂತ ಕಡಿಮೆಯಲ್ಲದ ಫೋಟೋಗ್ರಾಫ್ ಬೇಕಾಗುತ್ತದೆ.
ಐದು ದಿನಗಳ ಈ ಕಾರ್ಯಕ್ರಮದಲ್ಲಿ ವೈಮಾನಿಕ ಮತ್ತು ರಕ್ಷಣಾ ವಲಯದ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಮುಖ ವಾಣಿಜ್ಯ ವಸ್ತುಪ್ರದರ್ಶನವನ್ನು ಒಳಗೊಂಡಿರುತ್ತದೆ. ಜೊತೆಗೆ ವೈಮಾನಿಕ ಕೈಗಾರಿಕಾ ಕ್ಷೇತ್ರದ ಜಾಗತಿಕ ನಾಯಕರು ಮತ್ತು ದೊಡ್ಡ ಹೂಡಿಕೆದಾರರಷ್ಟೇ ಅಲ್ಲದೆ, ವಿಶ್ವದಾದ್ಯಂತದ ಚಿಂತಕರ ಚಾವಡಿಯ ಸದಸ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಏರೋ ಇಂಡಿಯಾ ಪ್ರದರ್ಶನವು ವೈಮಾನಿಕ ಕೈಗಾರಿಕೆಯ ಹೊಸ ಅಭಿವೃದ್ಧಿ ಮತ್ತು ಕಲ್ಪನೆಗಳ ಮಾಹಿತಿಯ ವಿನಿಮಯಕ್ಕೆ ಅನನ್ಯ ಅವಕಾಶ ನೀಡುತ್ತದೆ. ಇದರ ಜೊತೆಗೆ ದೇಶೀಯ ವೈಮಾನಿಕ ಕೈಗಾರಿಕೆಗಳಿಗೆ ಚೈತನ್ಯ ನೀಡುವುದರ ಜೊತೆಗೆ ಮೇಕ್ ಇನ್ ಇಂಡಿಯಾ ಉದ್ದೇಶವನ್ನೂ ಪೂರೈಸುತ್ತದೆ. ಏರೋ ಇಂಡಿಯಾದಲ್ಲಿ ಭಾರತ ಮತ್ತು ವಿದೇಶದ ಸುಮಾರು 500 ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
***
(Release ID: 1669457)
Visitor Counter : 229
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Odia
,
Tamil
,
Telugu
,
Malayalam