ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಪ್ರಸಕ್ತ ಸಾಲಿನ ಮೊದಲ ಎರಡು ತ್ರೈಮಾಸಿಕಗಳಲ್ಲಿ, ಎಚ್ ಐ ಎಲ್ ಸಂಸ್ಥೆ ರಫ್ತು ವಹಿವಾಟು ಶೇ. 65ರಷ್ಟು ಏರಿಕೆ: ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅಭಿನಂದನೆ

Posted On: 30 OCT 2020 11:27AM by PIB Bengaluru

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಸರ್ಕಾರಿ ಒಡೆತನದ ಸಾರ್ವಜನಿಕ ವಲಯದ ಉದ್ದಿಮೆ ಎಚ್ ಎಲ್ (ಇಂಡಿಯಾ) ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಶೇ.65ರಷ್ಟು ರಫ್ತು ಸಾಧನೆ ಮಾಡಿರುವುದಕ್ಕೆ ಕೇಂದ್ರ ಸಚಿವ ಶ್ರೀ.ಡಿ.ವಿ.ಸದಾನಂದ ಗೌಡ ಶ್ಲಾಘಿಸಿದ್ದಾರೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ, 2020-21ನೇ ಸಾಲಿನ ಏಪ್ರಿಲ್ ನಿಂದ ಸೆಪ್ಟಂಬರ್ ನಡುವಿನ ಅವಧಿಯಲ್ಲಿ ಮಾರಾಟ ಮತ್ತು ರಫ್ತಿನಲ್ಲಿ ಶೇ.65ರಷ್ಟು ಪ್ರಗತಿ ಸಾಧಿಸಿದೆ ಎಂದು ಕಂಪನಿ ಹೇಳಿದೆ.

ಅವಧಿಯಲ್ಲಿ ಕಂಪನಿ, ಲ್ಯಾಟಿನ್ ಅಮೆರಿಕಾ, ಇರಾನ್ ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರಗಳಿಗೆ ಡಿಕ್ಲೋರೋ ಡಿಫೈನೆಲ್ ಟ್ರೈಕ್ಲೋರೋಇಥೇನ್ (ಡಿಡಿಟಿ) ಮತ್ತು ಕೃಷಿ ರಾಸಾಯನಿಕವನ್ನು ಬಹುದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಿದೆ.

ಎಚ್ ಐಎಲ್ (ಇಂಡಿಯಾ) ಲಿಮಿಟೆಡ್ ಸಾಧನೆಯನ್ನು ಶ್ಲಾಘಿಸಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡಹಿಂದೂಸ್ತಾನ್ ಕೀಟನಾಶಕಗಳ ಸಂಸ್ಥೆ (ಎಚ್ ಎಲ್ ) ಆಡಳಿತ ಮಂಡಳಿ ಮತ್ತು ಅದರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ನೇ ಹಣಕಾಸು ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಶೇ.65ರಷ್ಟು ಪ್ರಗತಿ ಸಾಧಿಸಿರುವುದು ಅತ್ಯುತ್ತಮವಾದ ಬೆಳವಣಿಗೆಯಾಗಿದೆ. ಹಾಗಾಗಿ ಯಶಸ್ಸಿಗಾಗಿ ಎಚ್ ಐಎಲ್ ಅನ್ನು ಅಭಿನಂದಿಸುತ್ತೇನೆ ಮತ್ತು ಮುಂದೆ ಇನ್ನೂ ಒಳ್ಳೆಯ ಸಾಧನೆ ಮಾಡಲಿ’’ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಎಚ್ ಐಎಲ್, ಕಳೆದ ವರ್ಷದ ಮೊದಲ ಎರಡು ತ್ರೈಮಾಸಿಕದಲ್ಲಿ 375.5 ಎಂ.ಟಿ. ಮಲಾಥಿಯಾನ್ ರಾಸಾಯನಿಕವನ್ನು ಉತ್ಪಾದನೆ ಮಾಡಿತ್ತು, ವರ್ಷದ 530.10 ಎಂ.ಟಿ.ಯನ್ನು ಉತ್ಪಾದನೆ ಮಾಡಿದೆ.

Image

ಕಂಪನಿ ಮೊದಲ ಎರಡು ತ್ರೈಮಾಸಿಕದಲ್ಲಿ ಅತ್ಯಧಿಕ ಪ್ರಮಾಣದ ಮಾರಾಟ ಮಾಡಿ ದಾಖಲೆಯನ್ನು ನಿರ್ಮಿಸಿದೆ ಮತ್ತು ಸಚಿವಾಲಯದ ಕೃಷಿ ಮಿಡತೆ ನಿಯಂತ್ರಣ ಕಾರ್ಯಕ್ರಮ ಹಾಗೂ ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಿಗೆ ವೆಕ್ಟರ್ ನಿಯಂತ್ರಣ ಕಾರ್ಯಕ್ರಮಗಳಿಗೆ ಪೂರ್ಣಪ್ರಮಾಣದ ಕೀಟನಾಶಕವನ್ನು ಪೂರೈಕೆ ಮಾಡಿದೆ.

***



(Release ID: 1668861) Visitor Counter : 185