ಪ್ರಧಾನ ಮಂತ್ರಿಯವರ ಕಛೇರಿ
ಫ್ರಾನ್ಸ್‌ನ ನೈಸ್‌ನ ಚರ್ಚ್ ಭಯೋತ್ಪಾದಕ ದಾಳಿಗೆ ಪ್ರಧಾನಿ ತೀವ್ರ ಖಂಡನೆ
प्रविष्टि तिथि:
29 OCT 2020 7:55PM by PIB Bengaluru
ಫ್ರಾನ್ಸ್‌ನ ನೈಸ್ನಲ್ಲಿ ಚರ್ಚಿನೊಳಗೆ ನಡೆದ ಭೀಕರ ದಾಳಿ ಸೇರಿದಂತೆ ಆ ದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.
ಈಕುರಿತು ಟ್ವೀಟ್ ಮಾಡಿರುವ ಪ್ರಧಾನಿಯವರು, "ನೈಸ್ನಲ್ಲಿ ಚರ್ಚಿನೊಳಗೆ ನಡೆದ ಭೀಕರ ದಾಳಿ ಸೇರಿದಂತೆ ಫ್ರಾನ್ಸ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಸಂತ್ರಸ್ತರ ಕುಟುಂಬಗಳಿಗೆ ಮತ್ತು ಫ್ರಾನ್ಸ್ ಜನರಿಗೆ ನಮ್ಮ ಸಂತಾಪಗಳು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಫ್ರಾನ್ಸ್ ಜೊತೆಯಾಗಿರುತ್ತದೆ " ಎಂದು ತಿಳಿಸಿದ್ದಾರೆ.
***
(रिलीज़ आईडी: 1668842)
आगंतुक पटल : 230
इस विज्ञप्ति को इन भाषाओं में पढ़ें:
Telugu
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam