ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                
                    
                    
                        ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶೂಭಾಯ್ ಪಟೇಲ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 
                    
                    
                        
                    
                
                
                    Posted On:
                29 OCT 2020 2:26PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಮಾಜಿ ಮುಖ್ಯಮಂತ್ರಿ ಕೇಶೂಭಾಯ್ ಪಟೇಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
"ನಮ್ಮ ಪ್ರೀತಿಯ ಮತ್ತು ಗೌರವಾನ್ವಿತ ಕೇಶೂಭಾಯ್ ಪಟೇಲ್ ಅವರ ನಿಧನ... ತೀವ್ರ ನೋವುದಾಯಕ ಮತ್ತು ದುಃಖಕರ. ಅವರು ಸಮಾಜದ ಎಲ್ಲ ವರ್ಗಗಳ ಕಾಳಜಿ ಹೊಂದಿದ್ದ ಮೇರು ನಾಯಕರಾಗಿದ್ದರು. ತಮ್ಮ ಬದುಕನ್ನು ಗುಜರಾತ್ ನ ಪ್ರಗತಿಗೆ ಮತ್ತು ಪ್ರತಿಯೊಬ್ಬ ಗುಜರಾತಿಯರ ಸಬಲೀಕರಣಕ್ಕೆ ಮುಡಿಪಾಗಿಟ್ಟಿದ್ದರು.
ಕೇಶೂಭಾಯ್ ಗುಜರಾತ್ ನ ಉದ್ದಗಲ ಸಂಚರಿಸಿ ಜನಸಂಘ ಮತ್ತು ಬಿಜೆಪಿಯನ್ನು ಬಲಪಡಿಸಿದ್ದರು. ತುರ್ತುಪರಿಸ್ಥಿತಿಯ ಹಲ್ಲು ಮತ್ತು ಉಗುರುಗಳನ್ನು ಅವರು ಖಂಡಿಸಿದ್ದರು. ರೈತರ ಕಲ್ಯಾಣ ಕುರಿತ ವಿಚಾರ ಸದಾ ಹೃದಯ ಸ್ಪರ್ಶಿಯಾಗಿರುತ್ತಿತ್ತು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಅಥವಾ ಮುಖ್ಯಮಂತ್ರಿಯಾಗಿ ಅವರು ಹಲವು ರೈತ ಸ್ನೇಹಿ ಕ್ರಮಗಳು ಅನುಮೋದನೆಯಾಗುವಂತೆ ನೋಡಿಕೊಂಡಿದ್ದರು.
ಕೇಶುಭಾಯ್ ಅವರು ನಾನೂ ಸೇರಿದಂತೆ ಅನೇಕ ಕಿರಿಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿ, ಬೆಳೆಸಿದ್ದರು. ಪ್ರತಿಯೊಬ್ಬರೂ ಅವನ ಸ್ನೇಹಪರ ಸ್ವಭಾವವನ್ನು ಇಷ್ಟಪಡುತ್ತಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ನಾವೆಲ್ಲರೂ ಇಂದು ಶೋಕದಲ್ಲಿ ಮುಳುಗಿದ್ದೇವೆ. ನನ್ನ ಸಂವೇದನೆಗಳು ಅವರ ಕುಟುಂಬ ಮತ್ತು ಹಿತೈಷಿಗಳ ಜೊತೆಗಿದೆ. ಅವರ ಪುತ್ರ ಭಾರತ್ ಅವರೊಂದಿಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದ್ದೆನೇ.. ಓಂ ಶಾಂತಿ." ಎಂದು ಪ್ರಧಾನಮಂತ್ರಿಯವರು ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
***
                
                
                
                
                
                (Release ID: 1668408)
                Visitor Counter : 144
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Assamese 
                    
                        ,
                    
                        
                        
                            Manipuri 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam