ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಪೇಟೆಂಟ್ (ತಿದ್ದುಪಡಿ) ನಿಯಮ 2020 ನಮೂನೆ-27ರ ಸಲ್ಲಿಕೆಗೆ ಸಂಬಂಧಿಸಿದ ಅಗತ್ಯತೆಗಳ ಸರಳೀಕರಣ ಮತ್ತು ಆದ್ಯತಾ ದಾಖಲೆಗಳ ಆಂಗ್ಲ ಅನುವಾದ ಪ್ರಮಾಣೀಕೃತ ಸಲ್ಲಿಕೆ ಸುಗಮ
ಅರ್ಜಿ ನಮೂನೆ-27 ಸಲ್ಲಿಕೆಗೆ ಪೇಟೆಂಟ್ ದಾರರಿಗೆ ಹಾಲಿ ಇದ್ದ ಮೂರು ತಿಂಗಳ ಅವಧಿ ಆರು ತಿಂಗಳಿಗೆ ವಿಸ್ತರಣೆ
ಆದ್ಯತಾ ದಾಖಲೆಗಳ ಆಂಗ್ಲ ಅನುವಾದದ ಪ್ರಮಾಣೀಕೃತ ಪತ್ರ ಸಲ್ಲಿಕೆ ಅಗತ್ಯತೆ ಸರಳೀಕರಣ
Posted On:
28 OCT 2020 1:41PM by PIB Bengaluru
ದೆಹಲಿ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ ಡಬ್ಲ್ಯೂಪಿಸಿ-5590/2015ರಲ್ಲಿ 23-04-2018ರಂದು ಶಾಮ್ನದ್ ಬಷೀರ್ ವರ್ಸಸ್ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸಂಬಂಧಿಸಿದ ವಿಚಾರದಲ್ಲಿ ನೀಡಿದ ಆದೇಶದಂತೆ ಭಾರತದಲ್ಲಿ ವಾಣಿಜ್ಯ ಮಟ್ಟದಲ್ಲಿ ಪೇಟೆಂಟ್ ಪಡೆದ ಆವಿಷ್ಕಾರಕ್ಕೆ ಸಂಬಂಧಿಸಿದಂತೆ(ಅರ್ಜಿ ಸಂಖ್ಯೆ 27) ಸಲ್ಲಿಸುವ ವಿಚಾರವನ್ನು ಸರಳೀಕರಣಗೊಳಿಸುವ ಕುರಿತು ಸಂಬಂಧಿಸಿದವರೊಡನೆ ಸಮಾಲೋಚನೆ ನಡೆಸಲಾಗಿದೆ.
ಪೇಟೆಂಟ್(ತಿದ್ದುಪಡಿ) ನಿಯಮ 2020 ಇವು 2020ರ ಅಕ್ಟೋಬರ್ 19ರಿಂದ ಜಾರಿಗೆ ಬಂದಿವೆ. ಅದರಲ್ಲಿ ಅರ್ಜಿ ನಮೂನೆ-27 ಸಲ್ಲಿಕೆಗೆ ಸಂಬಂಧಿಸಿದ ಅಗತ್ಯತೆಗಳನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದೆ ಮತ್ತು ಆಂಗ್ಲಭಾಷೆಯಲ್ಲಿ ಇಲ್ಲದಂತಹ ಆದ್ಯತಾ ದಾಖಲೆಗಳನ್ನು ಆಂಗ್ಲಭಾಷೆಗೆ ಅನುವಾದಿಸಿ ಪ್ರಮಾಣೀಕೃತ ಪ್ರತಿಗಳನ್ನು ಸಲ್ಲಿಸುವುದಕ್ಕೆ ಸಂಬಂಧಿಸಿದಂತೆಯೂ ನಿಯಮ ಸರಳೀಕರಣಗೊಳಿಸಲಾಗಿದೆ.
ಅರ್ಜಿ ನಮೂನೆ-27 ಮತ್ತು ನಿಯಮ 131(2)ಕ್ಕೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳು ಈ ಕೆಳಗಿನಂತಿವೆ:
1. ಪೇಟೆಂಟ್ ದಾರರಿಗೆ ಒಂದು ಅಥವಾ ಹಲವು ಪೇಟೆಂಟ್ ಗಳಿಗೆ ಸಂಬಂಧಿಸಿದಂತೆ ಒಂದೇ ಒಂದು ಅರ್ಜಿ ನಮೂನೆ-27 ಸಲ್ಲಿಕೆಗೆ ನಿಯಮ ಸರಳೀಕರಣ.
2. ಒಂದು ವೇಳೆ ಪೇಟೆಂಟ್ ಇಬ್ಬರೂ ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳಿಗೆ ಅನುಮೋದಿಸಲ್ಪಟ್ಟಿದ್ದರೆ ಅಂತಹ ಸಂದರ್ಭದಲ್ಲಿ ಆ ಎಲ್ಲ ವ್ಯಕ್ತಿಗಳೂ ಜಂಟಿಯಾಗಿ ಅರ್ಜಿ ನಮೂನೆ-27 ಸಲ್ಲಿಸಲು ಅವಕಾಶ.
3. ಪೇಟೆಂಟ್ ದಾರರು ‘ಅಂದಾಜು ಆದಾಯ/ಕ್ರೂಢೀಕರಿಸಿದ ಮೌಲ್ಯ’ದ ವಿವರಗಳನ್ನು ಸಲ್ಲಿಸುವುದು ಅಗತ್ಯ.
4. ಪೇಟೆಂಟ್ ದಾರರ ಪರವಾಗಿ ಅಧಿಕೃತ ಏಜೆಂಟ್ ಗಳು ಅರ್ಜಿ ನಮೂನೆ-27 ಸಲ್ಲಿಸಲು ಅವಕಾಶ.
5. ಈವರೆಗೆ ಹಣಕಾಸು ವರ್ಷ ಪೂರ್ಣಗೊಂಡ ನಂತರ ಮೂರು ತಿಂಗಳ ವರೆಗೆ ಅರ್ಜಿ ನಮೂನೆ-27 ಸಲ್ಲಿಕೆಗೆ ಅವಕಾಶವಿತ್ತು. ಇದೀಗ ಆ ಅವಧಿ ಆರು ತಿಂಗಳಿಗೆ ವಿಸ್ತರಣೆ.
6. ಹಣಕಾಸು ವರ್ಷದ ಒಂದು ಭಾಗ ಅಥವಾ ಒಂದು ಅವಧಿಗೆ ಸಂಬಂಧಿಸಿದಂತೆ ಅರ್ಜಿ ನಮೂನೆ-27 ಅನ್ನು ಪೇಟೆಂಟ್ ದಾರರು ಸಲ್ಲಿಸುವ ಅಗತ್ಯವಿಲ್ಲ.
7. ಒಂದೆಡೆ ಪೇಟೆಂಟ್ ದಾರರು ಅರ್ಜಿ ನಮೂನೆ-27ಕ್ಕೆ ಸಂಬಂಧಿಸಿದಂತೆ ನಿಯಮವನ್ನು ಸರಳೀಕರಣಗೊಳಿಸಿ, ಸುಗಮಗೊಳಿಸಲಾಗಿದೆ. ಇದೇ ವೇಳೆ ಪೇಟೆಂಟ್ ಕಾಯ್ದೆ 1970ರ ಸೆಕ್ಷನ್ 146(1)ಅನ್ನು ಉಲ್ಲೇಖಿಸಿರುವಂತೆ ನಿಯಂತ್ರಕರು ಪೇಟೆಂಟ್ ಹೊಂದಿದವರಿಂದ ಸೂಕ್ತ ದಾಖಲೆಗಳನ್ನು ಪಡೆಯುವ ಅಧಿಕಾರ ಹೊಂದಿರುತ್ತಾರೆ.
ನಿಯಮ 21ಕ್ಕೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳು ಈ ಕೆಳಗಿನಂತಿವೆ:
1. ಆದ್ಯತಾ ದಾಖಲೆಗಳು ವೈಪೋದ ಡಿಜಿಟಲ್ ಗ್ರಂಥಾಲಯದಲ್ಲಿ ಲಭ್ಯವಿದ್ದರೆ ಅಂತಹ ಸಂದರ್ಭದಲ್ಲಿ ಅರ್ಜಿದಾರರು ಮತ್ತೆ ಭಾರತೀಯ ಪೇಟೆಂಟ್ ಕಚೇರಿಯಲ್ಲಿ ಅದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.
2. ಅರ್ಜಿದಾರರು ಆದ್ಯತಾ ದಾಖಲೆಯ ಆಂಗ್ಲ ಅನುವಾದದ ಪ್ರಮಾಣೀಕೃತ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಏಕೆಂದರೆ ಸಂಬಂಧಿಸಿದ ಸಂಶೋಧನೆ ಪೇಟೆಂಟ್ ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ದಾಖಲೆಗಳ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಈ ಎಲ್ಲ ಬದಲಾವಣೆಗಳಿಂದಾಗಿ ಭಾರತದಲ್ಲಿ(ಅರ್ಜಿ ನಮೂನೆ-27)ಅನ್ನು ವಾಣಿಜ್ಯ ವಿಚಾರದಲ್ಲಿ ಆವಿಷ್ಕಾರಗಳಿಗೆ ಪೇಟೆಂಟ್ ನೀಡುವ ಕಾರ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ ಮತ್ತು ಆದ್ಯತಾ ದಾಖಲೆಗಳನ್ನು ಆಂಗ್ಲಭಾಷೆಗೆ ಅನುವಾದಿಸಿ ಸಲ್ಲಿಸಬೇಕಾಗಿರುವುದನ್ನೂ ಸಹ ಸಗುಮಗೊಳಿಸಲಾಗಿದೆ.
***
(Release ID: 1668153)
Visitor Counter : 252