ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಳೆದ ಮಾರ್ಚ್ 22ರ ನಂತರ, ಭಾರತದಲ್ಲಿ ಕೊರೊನ ಸೋಂಕಿನ ಮರಣ ಪ್ರಮಾಣ ಇಳಿಕೆ


ಕಳೆದ 24 ಗಂಟೆಗಳಲ್ಲಿ 500ಕ್ಕಿಂತ ಕಡಿಮೆ ಸೋಂಕಿತರ ಸಾವು

14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆ

Posted On: 26 OCT 2020 12:01PM by PIB Bengaluru

ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ನಿರಂತರ ಪ್ರಯತ್ನಗಳು ಹಾಗೂ ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯಿಂದಾಗಿ ಭಾರತದಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇಅ.1.5ಕ್ಕೆ ಇಳಿಕೆಯಾಗಿದೆ. ಪರಿಣಾಮಕಾರಿ ನಿಯಂತ್ರಣ ಕಾರ್ಯತಂತ್ರ, ಆಕ್ರಮಣಕಾರಿ ಪರೀಕ್ಷೆಗಳು ಮತ್ತು ನಿರ್ದಿಷ್ಟ ಕ್ಲಿನಿಕಲ್ ನಿರ್ವಹಣೆ ಶಿಷ್ಟಾಚಾರಗಳನ್ನು ಆಧರಿಸಿ ಸಮಗ್ರ ನಿರ್ದಿಷ್ಟ ಆರೈಕೆ ಮಾರ್ಗಸೂಚಿಯನ್ನು ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸಿರುವುದರಿಂದ ಸೋಂಕಿನಿಂದಾಗಿ ಹೊಸದಾಗಿ ಸಾವನ್ನಪ್ಪುತ್ತಿರುವವರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

  • 24 ಗಂಟೆಗಳಿಂದೀಚೆಗೆ ದೇಶದಲ್ಲಿ 500ಕ್ಕೂ ಕಡಿಮೆ(480) ಸೋಂಕಿತರು ಸಾವನ್ನಪ್ಪಿದ್ದಾರೆ.

WhatsApp Image 2020-10-26 at 10.15.45 AM.jpeg

ಭಾರತದಲ್ಲಿ ವಿಶ್ವದಲ್ಲಿ ಅತಿ ಕಡಿಮೆ ಸಾವಿನ ಪ್ರಮಾಣವಿದೆ. ಮಾರ್ಚ್ 22ರಲ್ಲಿ ಇದ್ದುದಕ್ಕಿಂತ ಸೋಂಕಿತರ ಸಾವಿನ ಪ್ರಮಾಣ ಇದೀಗ ಕಡಿಮೆಯಾಗಿದೆ.

WhatsApp Image 2020-10-26 at 10.20.50 AM.jpeg

ಕೋವಿಡ್ ನಿರ್ವಹಣೆ ಮತ್ತು ಪ್ರತಿಕ್ರಿಯೆ ನೀತಿಯ ಅಂಗವಾಗಿ ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣ ಮಾತ್ರವಲ್ಲದೆ, ಗುಣಮಟ್ಟದ ಗಂಭೀರ ಹಾಗೂ ಭಾರೀ ಪ್ರಮಾಣದಲ್ಲಿ ಸೋಂಕಿಗೊಳಗಾದವರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡುವ ಮೂಲಕ ಅವರ ಜೀವಗಳನ್ನು ಉಳಿಸಲು ಹಾಗೂ ಸಾವುಗಳನ್ನು ತಗ್ಗಿಸಲು ನಿರಂತರ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಸಮನ್ವಯದ ಪ್ರಯತ್ನಗಳಿಂದಾಗಿ ದೇಶಾದ್ಯಂತ ಆರೋಗ್ಯ ಸೌಕರ್ಯಗಳ ಬಲವರ್ಧನೆಯಾಗಿದೆ. 2218 ಕೋವಿಡ್ ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲಾಗುತ್ತಿದೆ.

ನವದೆಹಲಿಯ ಏಮ್ಸ್ ನಲ್ಲಿ ಇ-ಐಸಿಯು ಸೌಕರ್ಯವನ್ನು ಆರಂಭಿಸಲಾಗಿದ್ದು, ಸಾವಿನ ಪ್ರಮಾಣ ತಗ್ಗಿಸಲು ಗಂಭೀರ ರೋಗಿಗಳಿಗೆ ಐಸಿಯು ವೈದ್ಯರ ಮೂಲಕ ಕ್ಲಿನಿಕಲ್ ನಿರ್ವಹಣೆ ಸಾಮರ್ಥ್ಯವೃದ್ಧಿಗೆ ವಿನೂತನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾರಕ್ಕೆ ಎರಡು ಬಾರಿ ಮಂಗಳವಾರ ಮತ್ತು ಶುಕ್ರವಾರಗಳಂದು ಟೆಲಿ/ವಿಡಿಯೋ ಸಮಾಲೋಚನೆಗಳ ಮೂಲಕ ರಾಜ್ಯ ಆಸ್ಪತ್ರೆಗಳಲ್ಲಿನ ಐಸಿಯು ನಿಗಾವಹಿಸುತ್ತಿರುವ ವೈದ್ಯರಿಗೆ ಆಯಾ ಕ್ಷೇತ್ರದ ತಜ್ಞರು ತಮ್ಮ ಜ್ಞಾನ ಹಾಗೂ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸಮಾಲೋಚನೆಗಳು 2020ರ ಜುಲೈ 8ರಿಂದ ಆರಂಭವಾಗಿವೆ.

ಈವರೆಗೆ ಟೆಲಿ ಸೆಷನ್ ಗಳು ನಡೆದಿದ್ದು, 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 393 ಸಂಸ್ಥೆಗಳು ಅವುಗಳಲ್ಲಿ ಭಾಗಿಯಾಗಿವೆ.

ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡಲು ಐಸಿಯು/ವೈದ್ಯರ ಕ್ಲಿನಿಕಲ್ ಸಾಮರ್ಥ್ಯವೃದ್ಧಿಗೆ ನವದೆಹಲಿಯ ಏಮ್ಸ್ ಸಹಭಾಗಿತ್ವದಲ್ಲಿ ಆರೋಗ್ಯ ಇಲಾಖೆ ಪ್ರಶ್ನೋತ್ತರಗಳನ್ನು(ಎಫ್ಎಕ್ಯೂ) ಸಿದ್ಧಪಡಿಸಿದೆ. ಇವುಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. https://www.mohfw.gov.in/pdf/AIIMSeICUsFAQs01SEP.pdf

ಹಲವು ರಾಜ್ಯಗಳು ಸೂಕ್ಷ್ಮ ಜನಸಂಖ್ಯೆಯನ್ನು ಅಂದರೆ ವೃದ್ಧರು, ಗರ್ಭಿಣಿಯರು ಮತ್ತು ಇತರೆ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಗುರುತಿಸಲು ಸಮೀಕ್ಷೆಗಳನ್ನು ನಡೆಸಿವೆ. ಇವುಗಳಿಂದಾಗಿ ಮೊಬೈಲ್ ಆಪ್ ನಿಂದ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಹೆಚ್ಚಿನ ಅಪಾಯವಿರುವ ಜನಸಂಖ್ಯೆಯ ಮೇಲೆ ನಿರಂತರ ನಿಗಾವಹಿಸಲು ಆ ಮೂಲಕ ತ್ವರಿತವಾಗಿ ಸೋಂಕು ಪತ್ತೆಹಚ್ಚಲು ಸಕಾಲದಲ್ಲಿ ಕ್ಲಿನಿಕಲ್ ನಿರ್ವಹಣೆ ಕೈಗೊಳ್ಳಲು ಮತ್ತು ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗಿದೆ. ತಳಮಟ್ಟದಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಾದ ಆಶಾ ಕಾರ್ಯಕರ್ತರು ಮತ್ತು ಎಎನ್ಎಂಗಳು ಶ್ಲಾಘನಾರ್ಹ ಕೆಲಸ ಮಾಡುತ್ತಿದ್ದು, ಅವರು ವಲಸೆ ಕಾರ್ಮಿಕರ ನಿರ್ವಹಣೆ ಜೊತೆಗೆ ಸಮುದಾಯ ಮಟ್ಟದಲ್ಲಿ ಜಾಗೃತಿ ಹೆಚ್ಚಳಕ್ಕೆ ಶ್ರಮಿಸುತ್ತಿದ್ದಾರೆ.

ಅದರ ಪರಿಣಾಮವಾಗಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಎಫ್ಆರ್ ಪ್ರಮಾಣ ಶೇ.1 ಕ್ಕಿಂತಲೂ ಕಡಿಮೆಯಿದೆ.

WhatsApp Image 2020-10-26 at 10.10.25 AM.jpeg

ಕಳೆದ 24 ಗಂಟೆಗಳಿಂದೀಚೆಗೆ ಹೊಸದಾಗಿ 59,105 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜೊತೆಗೆ ಹೊಸದಾಗಿ 45,148 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ(71,37,228)ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ಹೆಚ್ಚಿನ ಸಂಖ್ಯೆಯ ಸೋಂಕಿತರು ಗುಣಮುಖರಾಗುತ್ತಿರುವುದರಿಂದ ರಾಷ್ಟ್ರೀಯ ಚೇತರಿಕೆ ಪ್ರಮಾಣ ಏರಿಕೆಯಾಗಿ ಸದ್ಯ ಅದು ಶೇ.90.23 ಇದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿರುವುದು ನಿರಂತರವಾಗಿ ಮುಂದುವರಿದಿದೆ. ಪ್ರಸ್ತುತ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಶೇ. 8.26ರಷ್ಟು ಅಂದರೆ 6,53,717 ಪ್ರಕರಣಗಳು ಸಕ್ರಿಯವಾಗಿದೆ. ಇದು ಕಳೆದ ಆಗಸ್ಟ್ 13ರಿಂದೀಚೆಗೆ ಅತಿ ಕಡಿಮೆ ಅಂದರೆ 6,53,622 ಆಗಿದೆ.

ಶೇ.78ರಷ್ಟು ಹೊಸ ಪ್ರಕರಣಗಳು ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ 10,000ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ ಮತ್ತು ಕೇರಳದಲ್ಲಿ 7,000ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.

WhatsApp Image 2020-10-26 at 10.10.23 AM.jpeg

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 45,148 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಜುಲೈ 22ರ ನಂತರ 37,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಸೇರ್ಪಡೆಯಾಗುತ್ತಿದ್ದು, ಅದಕ್ಕೆ ಹೋಲಿಸಿದರೆ ಇದು ಅತಿ ಕಡಿಮೆಯಾಗಿದೆ.

ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.82ರಷ್ಟು ಹೊಸ ಪ್ರಕರಣಗಳು ದೃಢಪಟ್ಟಿವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ ಹೊಸ ಪ್ರಕರಣಗಳು ದಿನಕ್ಕೆ 6,000ಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿದ್ದು, ಆನಂತರ ಕರ್ನಾಟಕ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ 4,000ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ.

WhatsApp Image 2020-10-26 at 10.10.22 AM.jpeg

 

ಕಳೆದ 24 ಗಂಟೆಗಳಲ್ಲಿ 480 ಸೋಂಕಿತರು ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಶೇ.80ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಹೊಸದಾಗಿ ಸಾವನ್ನಪ್ಪಿರುವ ಶೇ.23ಕ್ಕೂ ಅಧಿಕ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ.(112 ಸಾವು)

WhatsApp Image 2020-10-26 at 10.10.23 AM (1).jpeg

 

****



(Release ID: 1667606) Visitor Counter : 221