ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೋರಿಯಾ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಮೂನ್ ಜೆ ಇನ್ ಅವರ ನಡುವೆ ದೂರವಾಣಿ ಸಂಭಾಷಣೆ  

Posted On: 21 OCT 2020 4:05PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೋರಿಯಾ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಮೂನ್ ಜೆ ಇನ್  ಅವರು ಇಂದು ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿದರು.  

ಕೋವಿಡ್ – 19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿಯ ಪ್ರಗತಿಯೂ ಸೇರಿದಂತೆ ಮುಂದುವರಿಯುತ್ತಿರುವ ಅಂತಾರಾಷ್ಟ್ರೀಯ ಮೌಲ್ಯಯುತ ಸರಪಳಿಯ ವೈವಿಧ್ಯೀಕರಣ, ಪಾರದರ್ಶಕ, ಅಭಿವೃದ್ಧಿಶೀಲ ಮತ್ತು ನೀತಿಯಾಧಾರಿತ ಜಾಗತಿಕ ವ್ಯಾಪಾರ ಕ್ರಮವನ್ನು ಕಾಪಾಡುವುದರ ಅವಶ್ಯಕತೆ ಹಾಗೂ ವಿಶ್ವ ವ್ಯಾಪಾರ ಸಂಸ್ಥೆಯ ಮಹತ್ವಪೂರ್ಣ ಜಾಗತಿಕ ಅಭಿವೃದ್ಧಿಗಳ ಕುರಿತು ಉಭಯ ನಾಯಕರು ಚರ್ಚಿಸಿದರು. 

ಮೇಲಿನ ವಿಷಯಗಳ ಕುರಿತು ಸದಾ ಸಂಪರ್ಕದಲ್ಲಿರುವಂತೆ ಮತ್ತು  ಮುಂಬರುವ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ವೃದ್ಧಿಗೆ ಉಭಯ ನಾಯಕರು ಒಪ್ಪಿಕೊಂಡರು.

***


(Release ID: 1666450) Visitor Counter : 299