ಪ್ರಧಾನ ಮಂತ್ರಿಯವರ ಕಛೇರಿ

ಡಾ. ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಅತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಪ್ರಕಟಣಾ ದಿನಾಂಕ: 13 OCT 2020 2:33PM by PIB Bengaluru

ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಉದ್ಭವ್ ಠಾಕ್ರೆ ಜೀ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಜೀ, ಶ್ರೀ ಚಂದ್ರಕಾಂತ್ ಪಾಟೀಲ್ ಜೀ, ಶ್ರೀ ರಾಧಾಕೃಷ್ಣ ಪಾಟೀಲ್ ಜೀ, ಸುಜಯ್ ವಿಖೆ ಪಾಟೀಲ್ ಜೀ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಇತರ ಜನಪ್ರತಿನಿಧಿಗಳೇ, ನನ್ನೆಲ್ಲಾ ರೈತ ಸ್ನೇಹಿತರೇ, ಮಹಿಳೆಯರೇ ಮತ್ತು ಮಹನೀಯರೇ !. ನಾನು ಛತ್ರಪತಿ ಶಿವಾಜಿ ಮಹಾರಾಜರಿಗೆ ನನ್ನ ಗೌರವ ಸಲ್ಲಿಸುತ್ತೇನೆಧೈರ್ಯಶಾಲೀ ಪುತ್ರರು ಮತ್ತು ಪುತ್ರಿಯರ ನೆಲವಾದ ಮಹಾರಾಷ್ಟ್ರಕ್ಕೆ ವಂದಿಸುತ್ತೇನೆ !!!

ಧರ್ಮಶ್ರದ್ಧೆಯ  ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ರಾಧಾಕೃಷ್ಣ ವಿಖೆ ಪಾಟೀಲ್ ಜೀ ಮತ್ತು ಅವರ ಕುಟುಂಬಕ್ಕೆ  ಮತ್ತು ಅಹ್ಮದ್ ನಗರದ ನನ್ನ ಎಲ್ಲಾ ಸ್ನೇಹಿತರಿಗೆ ನಾನು ಬಹಳ ಅಭಾರಿಯಾಗಿದ್ದೇನೆ. ಮೊದಲು ನಾನಿಲ್ಲಿ ನಿಮ್ಮೊಂದಿಗೆ ಹಾಜರಿರಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ನಾವಿಂದು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸುತ್ತಿದ್ದೇವೆ.

ಸ್ನೇಹಿತರೇ,

ಡಾ. ಬಾಳಾಸಾಹೇಬ್ ವಿಖೆ ಪಾಟೀಲ್ ಜೀ ಅವರ ಆತ್ಮ ಚರಿತ್ರೆ ಇಂದು ಬಿಡುಗಡೆಯಾಗುತ್ತಿರುವುದಾದರೂ, ಅವರ ಬದುಕಿನ ಕಥೆಗಳು ಮಹಾರಾಷ್ಟ್ರದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತವೆ. ನಾನು ಬಹಳ ನಿಕಟವಾಗಿ ಬಾಳಾಸಾಹೇಬ್ ವಿಖೆ ಪಾಟೀಲ್  ಅವರು ಡಾ. ವಿಟ್ಟಲ್ ರಾವ್ ವಿಖೆ ಪಾಟೀಲ್ ಜೀ ಅವರ ಹೆಜ್ಜೆಗಳಲ್ಲಿ ತಮ್ಮ ಬದುಕನ್ನು ಮಹಾರಾಷ್ಟ್ರದ ಅಭಿವೃದ್ಧಿಗಾಗಿ ತಮ ಬದುಕನ್ನು ಮುಡಿಪಾಗಿಟ್ಟರು ಎಂಬುದನ್ನು ಗಮನಿಸಿದ್ದೇನೆ. ಗ್ರಾಮಗಳ ಜನತೆಯ, ಬಡವರ, ಸಮಸ್ಯೆಗಳನ್ನು ನಿವಾರಿಸುತ್ತಾ, ರೈತರ ಬದುಕನ್ನು ಸುಲಭಗೊಳಿಸುತ್ತಾ ಇರುವುದು ವಿಖೆ ಪಾಟೀಲ್ ಅವರ ಜೀವನ ಗಾಥೆಯ ಪ್ರಮುಖಾಂಶವಾಗಿತ್ತು. ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ:

मीस्वत: सत्तेपासून वा राजकारणा पासून अलिप्त राहिलो नाही, मात्रसमाजा-साठीच राजकारण आणि सत्ताहे पथ्य मी कायम सांभाललं। राजकारण करताना माझा सतत समाजाचे प्रश्न सोडवण्यावर भर राहिला / ಅವರು ಸದಾ ಅಧಿಕಾರ ಮತ್ತು ರಾಜಕಾರಣದ ಮೂಲಕ ಸಮಾಜದ ಸುಧಾರಣೆಗಾಗಿ ಕೆಲಸ ಮಾಡಿದರು.

ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ತರಲು ರಾಜಕೀಯವನ್ನು ಹೇಗೆ ಮಾಧ್ಯಮವಾಗಿ ಬಳಸಬೇಕು , ಅದರಿಂದ ಗ್ರಾಮಸ್ಥರ ಮತ್ತು ಬಡವರ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂಬುದಕ್ಕೆ ಸದಾ ಒತ್ತು ಕೊಟ್ಟವರು ಅವರು. ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರ ಚಿಂತನೆಯು ಅವರನ್ನು ಇತರರಿಗಿಂತ ಭಿನ್ನವಾಗಿಸಿತು. ಕಾರಣದಿಂದಾಗಿ ಇಂದು ಕೂಡಾ , ಅವರು ಎಲ್ಲಾ ಪಕ್ಷದಲ್ಲಿಯೂ ಬಹಳ ಗೌರವವನ್ನು ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಗ್ರಾಮೀಣ ಬಡವರ ಏಳಿಗೆ, ಶಿಕ್ಷಣ ಮತ್ತು ಸಹಕಾರ ಚಳವಳಿಯ ಯಶೋಗಾಥೆ ಬರಲಿರುವ ತಲೆಮಾರುಗಳಿಗೆ ಪ್ರೇರಣೆ ನೀಡಲಿದೆ. ಆದುದರಿಂದ ಬಾಳಾಸಾಹೇಬ್ ವಿಖೆ ಪಾಟೀಲ್ ಅವರನ್ನು ಕುರಿತ ಪುಸ್ತಕ ನಮ್ಮೆಲ್ಲರಿಗೂ ಬಹಳ ಮಹತ್ವದ್ದು.

ಸ್ನೇಹಿತರೇ,

ಡಾ. ಬಾಳಾಸಾಹೇಬ್ ವಿಖೆ ಪಾಟೀಲ್ ಅವರು ಗ್ರಾಮಗಳ, ಬಡವರ ಮತ್ತು ರೈತರ ನೋವನ್ನು ನಿಕಟವಾಗಿ ನೋಡಿದವರು, ತಿಳಿದವರು ಮತ್ತು ಅನುಭವಿಸಿದವರು. ಆದುದರಿಂದಾಗಿ ಅವರು ರೈತರನ್ನು ಒಗ್ಗೂಡಿಸಿದರು, ಸಹಕಾರ ಚಳವಳಿಯ ಮೂಲಕ ಪರಸ್ಪರ ಸಂಪರ್ಕಿಸಿದರು. ಅವರ ಪ್ರಯತ್ನದಿಂದಾಗಿ ಬಹಳ ದಯನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ಒಂದು ಕ್ಷೇತ್ರವು ಇಂದು ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ. ಸಹಕಾರ ಚಳವಳಿಯ ಮಹತ್ವವನ್ನು ಮನಗಂಡ ಅವರು ಬರೆದಿದ್ದಾರೆ

सहकारी चलवल ही खरी निधर्मी चलवल आहे।ती कुठल्या जातीची किंवा धर्माची बटीक नाही। आतापर्यंत सगल्या समाजाला, जातीं नाही प्रतिनिधित्व दिले आहे। ಅಂದರೆ , ಸಹಕಾರ ಆಂದೋಲನ  ಸಂಪೂರ್ಣವಾಗಿ ಪಕ್ಷಾತೀತವಾದುದು. ಯಾವುದೇ ಜಾತಿ ಅಥವಾ ಜನಾಂಗವನ್ನು ಅದು ಅವಲಂಬಿಸಿಲ್ಲ. ಅದು ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುತ್ತದೆ. ರೀತಿಯಲ್ಲಿ ಅವರಿಗೆ ಸಹಕಾರ ಎನ್ನುವುದು ಎಲ್ಲರ ಕಲ್ಯಾಣದ ಮಾರ್ಗವಾಗಿತ್ತು. ಅಟಲ್ ಜೀ ಅವರ ಸರಕಾರದಲ್ಲಿ ಸಚಿವರಾಗಿ ಅವರು ಸಹಕಾರ ಚಳವಳಿಯನ್ನು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲಿಯೂ ಹರಡಲು ಪ್ರಚೋದನೆ ನೀಡಿದರು. ಇಂತಹ ಪರಿಸ್ಥಿತಿಯಲ್ಲಿದೇಹ ವೆಚಾವ್ ಕರಾನಿಎಂಬ ಶೀರ್ಷಿಕೆ ಅವರಆತ್ಮಚರಿತ್ರೆಗೆಅತ್ಯಂತ ಸೂಕ್ತವಾದುದು. ಸಂತ ತುಕಾರಾಂಜಿ ಮಹಾರಾಜ ಅವರ ಸಾಲುಗಳು ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಜೀವನದ ಧ್ಯೇಯವಾಗಿದ್ದವು.

ಸ್ನೇಹಿತರೇ,

ದೇಶದಲ್ಲಿ ಗ್ರಾಮೀಣ ಶಿಕ್ಷಣದ ಬಗ್ಗೆ ಯಾರೊಬ್ಬರೂ ಮಾತನಾಡದೇ ಇರುವಾಗ , ಕಾಲದಲ್ಲಿಯೇ ಇವರು ಗ್ರಾಮೀಣ ಯುವಕರನ್ನು ಉತ್ತೇಜಿಸಲು ಹಳ್ಳಿಗಳಲ್ಲಿ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಯನ್ನು ತೆರೆದು ಅದರ ಮೂಲಕ ಪ್ರೇರಣೆ ನೀಡಿದರು. ಅವರು ಅವರ ಸೊಸೈಟಿಯ ಮೂಲಕ ಮಾಡಿದ ಕೆಲಸಗಳು, ಗ್ರಾಮಗಳಲ್ಲಿ ಮೂಡಿಸಿದ ಜಾಗೃತಿ ಮತ್ತು ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ಮಾಡಿದ ಕೆಲಸಗಳು  ನಮಗೆಲ್ಲಾ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಳಾಸಾಹೇಬ್ ಅವರ ಹೆಸರನ್ನು ಪ್ರವರ ಗ್ರಾಮೀಣ ಶಿಕ್ಷಣ ಸಂಸ್ಥೆಯ ಜೊತೆ ಸಂಯೋಜಿಸುವುದು ಬಹಳ ಸೂಕ್ತ. ಅವರು ಕೃಷಿ ಕ್ಷೇತ್ರದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಆವಶ್ಯಕತೆಯನ್ನು ಮನಗಂಡಿದ್ದರು. ಅವರು ತಮ್ಮ ಆತ್ಮ ಅರಿತ್ರೆಯಲ್ಲಿ ಬರೆದಿದ್ದಾರೆ; शेतीच कौशल्य असल्याशिवाय सुशिक्षित माणूसही सहज शेती करू शकत नाही। खरं तर शेतीला इंटरप्राइज का म्हणत नाहीत। ಅಂದರೆ , ಯಾವುದೇ ವ್ಯಕ್ತಿಯು ಎಷ್ಟೇ ವಿದ್ಯಾವಂತನಾಗಿದ್ದರೂ , ಆತನಿಗೆ ಕೃಷಿ ಕ್ಷೇತ್ರದ ಕೌಶಲ್ಯ ಇಲ್ಲದಿದ್ದರೆ, ಆತ ಕೃಷಿಯನ್ನು ಮಾಡಲಾರ, ಪರಿಸ್ಥಿತಿ ಹೀಗಿರುವಾಗ , ನಾವೇಕೆ ಕೃಷಿ ಕ್ಷೇತ್ರವನ್ನು ಉದ್ಯಮ ಎಂದು ಕರೆಯಬಾರದು ?

ಸ್ನೇಹಿತರೇ,

ಪ್ರಶ್ನೆ ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಮನಸ್ಸಿನಲ್ಲಿ ಪ್ರಶ್ನೆಯಾಗಿಯಷ್ಟೇ ಉದಿಸಲಿಲ್ಲ. ಅವರು ಮಾತುಗಳನ್ನು ತಳಮಟ್ಟದಲ್ಲಿದಶಕಗಳ ಕಾಲ ಹೊಂದಿದ್ದ ಅನುಭವದ ಆಧಾರದ ಮೇಲೆ ಹೇಳಿದ್ದಾರೆ. ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಪ್ರಶ್ನೆಗೆ ಉತ್ತರ ಇಂದಿನ ಚಾರಿತ್ರಿಕ ಕೃಷಿ ಸುಧಾರಣೆಗಳಲ್ಲಿದೆ. ಇಂದು ರೈತರ ಪಾತ್ರವನ್ನು ರೈತ ಎನ್ನುವಲ್ಲಿಂದ ಉದ್ಯಮಿ ಎನ್ನುವವರೆಗೆಮತ್ತು ಉದ್ಯಮಶೀಲತ್ವದ ವರೆಗೆ ಆತನನ್ನು ಕೊಂಡೊಯ್ಯಲು ಅವಕಾಶಗಳನ್ನು ರೂಪಿಸಲಾಗುತ್ತಿದೆ. ಮಹಾರಾಷ್ಟ್ರವನ್ನು ಸಕ್ಕರೆ ಕ್ರಾಂತಿಕಾರಕ ರೀತಿಯಲ್ಲಿ ಬದಲಾವಣೆ ಮಾಡಿದೆ. ಹಾಲು ಗುಜರಾತಿನಲ್ಲಿ ಕ್ರಾಂತಿಯನ್ನುಂಟುಮಾಡಿದೆ. ಪಂಜಾಬಿನಲ್ಲಿ ಗೋಧಿಯು  ಕ್ರಾಂತಿ ಮತ್ತು ಪರಿವರ್ತನೆಯನ್ನು ತಂದಿದೆ. ಸ್ಥಳೀಯ ಆರ್ಥಿಕತೆಯ ಮಾದರಿ ಮತ್ತು ಸ್ಥಳೀಯ ಉದ್ಯಮದ ಮಾದರಿ ದೇಶವನ್ನು ಮುನ್ನಡೆಸಲಿದೆ.

ಸ್ನೇಹಿತರೇ,

ಸ್ವಾತಂತ್ರ್ಯಾನಂತರ ಸಾಕಷ್ಟು ಆಹಾರ ಇಲ್ಲದ ಅವಧಿಯನ್ನು ದೇಶವು ಎದುರಿಸಿದೆ. ಇಂತಹ ಸ್ಥಿತಿಯಲ್ಲಿ ಸರಕಾರದ ಆದ್ಯತೆಯು ಬೆಳೆಯ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸುವುದು ಎಂಬುದಾಗಿತ್ತು. ಆದುದರಿಂದ ಆಗ ಎಲ್ಲಾ ಗಮನವನ್ನೂ ರೈತರು ಯಾವ ಬೆಳೆ ಬೆಳೆಯಬೇಕು ಮತ್ತು ಅವರು  ಎಷ್ಟನ್ನು ಉತ್ಪಾದನೆ ಮಾಡಬೇಕು ಎಂಬುದರ ಮೇಲಿತ್ತು! ನಮ್ಮ ರೈತರು ಕೂಡಾ ಶ್ರಮ ಪಟ್ಟು ಹೆಚ್ಚು ಹೆಚ್ಚು ಬೆಳೆಯನ್ನು ಉತ್ಪಾದನೆ ಮಾಡುವ ಮೂಲಕ ದೇಶದ ಆವಶ್ಯಕತೆಯನ್ನು ಈಡೇರಿಸಿದರು. ಆದರೆ ಉತ್ಪಾದಕತೆಗೆ ಸಂಬಂಧಿಸಿದ ಕಳವಳ, ಸರಕಾರದ ನೀತಿಗಳ ಆದ್ಯತೆ ರೈತರನ್ನು ಉದ್ದೇಶಿಸಿದುದಾಗಿರಲಿಲ್ಲ ಅಥವಾ ರೈತರ ಲಾಭದ ಬಗ್ಗೆಯೂ ಇದರಲ್ಲಿ ಕಾಳಜಿ ಇರಲಿಲ್ಲ. ರೈತರ ಆದಾಯದ ಬಗ್ಗೆ ಜನರು ಮರೆತಿದ್ದರು. ಆದರೆ ಇದೇ ಮೊದಲ ಬಾರಿಗೆ ಚಿಂತನೆ ಬದಲಾಗಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ರೈತರ ಆದಾಯದ ಬಗ್ಗೆ ದೇಶ ಕಳವಳ ಹೊಂದಿದೆ ಮತ್ತು ಅವರ ಆದಾಯವನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. ಎಂ.ಎಸ್.ಪಿ. ಅನುಷ್ಟಾನ ಕುರಿತ ನಿರ್ಧಾರವಾಗಿರಲಿ, ಎಂ.ಎಸ್.ಪಿ. ಹೆಚ್ಚಳ ಕುರಿತ ನಿರ್ಧಾರವಾಗಿರಲಿ, ಯೂರಿಯಾಕ್ಕೆ ಬೇವಿನ ಲೇಪನದ ನಿರ್ಧಾರ ಅಥವಾ ಉತ್ತಮ ಬೆಳೆ ವಿಮೆ ನಿರ್ಧಾರ ಇರಲಿಸರಕಾರವು ರೈತರು ಎದುರಿಸುವ ಸಣ್ಣ ಸಣ್ಣ ಸಮಸ್ಯೆಗಳನ್ನೂ ಪರಿಹರಿಸಲು ಕ್ರಮಕೈಗೊಂಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನಾವು ಸಣ್ಣ ಸಣ್ಣ ಖರ್ಚುಗಳಿಗೂ ರೈತರು ಇತರರೆಡೆಗೆ ಹೋಗಬೇಕಾದ ಅನಿವಾರ್ಯತೆಯನ್ನು ನಿವಾರಿಸಿದೆ. ಯೋಜನೆ ಅಡಿಯಲ್ಲಿ , ಒಂದು ಲಕ್ಷ ಕೋಟಿ ರೂಯಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದಲ್ಲದೆ ಶೀತಲ ಸರಪಳಿ ನಿರ್ಮಾಣ, ಮೆಗಾ ಆಹಾರ ಪಾರ್ಕ್ ಗಳ ನಿರ್ಮಾಣ ಮತ್ತು ಕೃಷಿ ಸಂಸ್ಕರಣ ಮೂಲಸೌಕರ್ಯ ನಿರ್ಮಾಣ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೆಲಸಗಳನ್ನು ಮಾಡಲಾಗಿದೆ. ಗ್ರಾಮ ಹಾತ್ ಗಳು ಮತ್ತು ಪ್ರಮುಖ ಮಂಡಿಗಳ ಆಧುನೀಕರಣದಿಂದ ರೈತರಿಗೆ ಪ್ರಯೋಜನಗಳು ಲಭಿಸತೊಡಗಿವೆ.

ಸ್ನೇಹಿತರೇ,

ಬಾಳಾಸಾಹೇಬ್ ವಿಖೆ ಪಾಟೀಲ್ ಹೇಳುತ್ತಿದ್ದರು-

"शेती निसर्गाधारित केली जात होती।हे ज्ञान आज सांभालून ठेवलं पाहिजे। तसेच नव्या आणि जुन्याचा मेल तरी घातला पाहिजे।" ಅಂದರೆ ಮೊದಲು ಕೃಷಿಯನ್ನು ನೈಸರ್ಗಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿತ್ತು. ನಾವು ಅರಿವನ್ನು, ಜ್ಞಾನವನ್ನು ಕಾಪಾಡಿಕೊಳ್ಳಬೇಕು. ಕೃಷಿಯಲ್ಲಿ ಹೊಸತು ಮತ್ತು ಹಳೆಯದನ್ನು ಜೋಡಿಸಿಕೊಂಡು ಹೋಗುವುದು ಮುಖ್ಯ. ಕಬ್ಬು ಬೆಳೆ ಹೊಸ ಮತ್ತು ಹಳೆಯ ಮಾದರಿಯನ್ನು ಜೋಡಿಸಿಕೊಂಡಿರುವುದಕ್ಕೆ ಒಂದು ಉತ್ತಮ ಉದಾಹರಣೆ, ಇದು ಅಹ್ಮದ್ ನಗರ , ಪುಣೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹಳ ಮುಖ್ಯ. ಈಗ ಕಬ್ಬಿನಿಂದ ಸಕ್ಕರೆ ಮತ್ತು ಎಥೆನಾಲ್ ಪಡೆಯಲು ಅನುಕೂಲವಾಗುವಂತಹ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲೀಗ ಇಂತಹ 100 ಕೈಗಾರಿಕೆಗಳಿವೆ ಮತ್ತು ಡಜನ್ನಿನಷ್ಟು ಹೊಸ ಕೈಗಾರಿಕೆಗಳಿಗೆ ಅವಶ್ಯಕ ಧನಸಹಾಯಕ್ಕಾಗಿ ಮಂಜೂರಾತಿ ನೀಡಲಾಗಿದೆ. ಪೆಟ್ರೋಲಿನಲ್ಲಿ ಎಥೆನಾಲ್ ಸೇರ್ಪಡೆ ಸಾಮರ್ಥ್ಯ ವರ್ಧಿಸುತ್ತಿದ್ದಂತೆ ತೈಲದ ಮೇಲೆ ಖರ್ಚು ಮಾಡಲಾಗುತ್ತಿದ್ದ ಹಣ ರೈತರ ಜೇಬಿಗೆ ಮರಳಿ ಬರುತ್ತದೆ.

ಸ್ನೇಹಿತರೇ,

ಡಾ. ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರು ಮಹಾರಾಷ್ಟ್ರದ ಗ್ರಾಮಗಳಲ್ಲಿಯ ಇನ್ನೊಂದು ಸಮಸ್ಯೆಯ ಬಗೆಗೂ ಕಳವಳ ಹೊಂದಿದ್ದರು. ಸಮಸ್ಯೆ ಕುಡಿಯುವ ನೀರು ಮತ್ತು ನೀರಾವರಿಗೆ ನೀರಿನ ಸಮಸ್ಯೆಗೆ ಸಂಬಂಧಿಸಿದುದಾಗಿತ್ತು. ಮಹಾರಾಷ್ಟ್ರದಲ್ಲಿ ಜಲ ಮಂಡಳಿಗಳ ಮೂಲಕ , ಅವರು ನಿಟ್ಟಿನಲ್ಲಿ ಜನಾಂದೋಲನ ರೂಪಿಸಲು ಪ್ರಯತ್ನಿಸಿದರು. ಇಂದು ನಾವು ಬಹಳ ತೃಪ್ತಿಯಿಂದ ಹೇಳಬಹುದು, 2014 ಬಳಿಕ ಇಂತಹ ಪ್ರಯತ್ನಗಳಿಗೆ ಅಭೂತಪೂರ್ವ ಉತ್ತೇಜನ ಮತ್ತು ಗುರುತಿಸುವಿಕೆಯನ್ನು ನೀಡಿ ದೇವೇಂದ್ರ ಜೀ ಸರಕಾರ ಪ್ರತೀ ಗ್ರಾಮದಲ್ಲಿಯೂ ಜಲ ಸಂಬಂಧಿ ಯೋಜನೆಗಳನ್ನು ಅನುಷ್ಟಾನಿಸಿತು. ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನಾ  ಮೂಲಕ ಮಹಾರಾಷ್ಟ್ರದಲ್ಲಿ ಹಲವಾರು ವರ್ಷಗಳಿಂದ ಬಾಕಿಯಾಗಿದ್ದ 26 ಯೋಜನೆಗಳ ಕಾಮಗಾರಿಯನ್ನು ತ್ವರಿತಗೊಳಿಸಲು ಸಾಧ್ಯವಾಯಿತು. ಇದುವರೆಗೆ ಇಂತಹ 9 ಯೋಜನೆಗಳ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಗಳು ಪೂರ್ಣಗೊಂಡುದರಿಂದ 5 ಲಕ್ಷ ಹೆಕ್ಟೇರಿನಷ್ಟು ಭೂಮಿ ನೀರಾವರಿ ಸೌಲಭ್ಯ ಪಡೆಯುತ್ತದೆ. ಅದೇ ರೀತಿ 2018 ಜುಲೈಯಲ್ಲಿ  ಮಹಾರಾಷ್ಟ್ರದಲ್ಲಿ ಇನ್ನೂ 90 ಪ್ರಮುಖ ಮತ್ತು ಸಣ್ಣ ನೀರಾವರಿ ಯೋಜನೆಗಳ ಕಾಮಗಾರಿಯನ್ನು ಆರಂಭಿಸಲಾಗಿದೆ. ಯೋಜನೆಗಳ ಕಾಮಗಾರಿ ಪೂರ್ಣಗೊಂಡರೆ , ಮುಂದಿನ 2-3 ವರ್ಷಗಳಲ್ಲಿ ಸುಮಾರು 4 ಲಕ್ಷ ಹೆಕ್ಟೇರಿನಷ್ಟು ಭೂಮಿ ನೀರಾವರಿ ಸೌಲಭ್ಯದಡಿ ಬರಲಿದೆ. ಅಂತರ್ಜಲ ಮಟ್ಟ ಅತ್ಯಂತ ಕಡಿಮೆ ಇರುವ 13 ಜಿಲ್ಲೆಗಳು ರಾಜ್ಯದಲ್ಲಿವೆ. ಅಟಲ್ ಭೂಜಲ ಯೋಜನೆಯನ್ನು ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತಿದೆ.

ಸೇಹಿತರೇ,

ನೀರಾವರಿಯಲ್ಲದೆ , ಪ್ರತೀ ಹಳ್ಳಿಯಪ್ರತೀ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಕಾಮಗಾರಿ ಮಹಾರಾಷ್ಟ್ರದಲ್ಲಿ ಬಿರುಸಿನಿಂದ ಸಾಗುತ್ತಿದೆ. ಜಲ ಜೀವನ ಆಂದೋಲನ ಅಡಿಯಲ್ಲಿ ಮಹಾರಾಷ್ಟ್ರದ 19 ಲಕ್ಷ ಕುಟುಂಬಗಳಿಗೆ ಕಳೆದ ವರ್ಷ  ಕುಡಿಯುವ ನೀರಿನ ಸೌಲಭ್ಯವನ್ನು  ಒದಗಿಸಲಾಗಿದೆ. ಇದರಲ್ಲಿ 13 ಲಕ್ಷಕ್ಕೂ ಅಧಿಕ ಬಡ ಕುಟುಂಬಗಳಿಗೆ ಕೊರೊನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವವನ್ನು ಕಾಪಾಡಲು ಪ್ರತೀ ಮನೆಗಳಲ್ಲೂ ಶೌಚಾಲಯವನ್ನು ನಿರ್ಮಾಣ ಮಾಡಲು ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಅದೇ ರೀತಿ ನೀರಿನ ಸವಲತ್ತು ಒದಗಿಸುವ ಮೂಲಕ ಅವರ ಸಮಯ ಮತ್ತು ಶ್ರಮವನ್ನು ಉಳಿಸಲಾಗಿದೆ. ಮತ್ತು ಕೊಳವೆ ಮೂಲಕ ನೀರು ಆರೋಗ್ಯಕ್ಕೂ ಒಳ್ಳೆಯದು.

ಸ್ನೇಹಿತರೇ,

ಕಿರು ಹಣಕಾಸು ಹಳ್ಳಿಗಳ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ವಿಶೇಷ ಪಾತ್ರವನ್ನು ಹೊಂದಿರುತ್ತದೆ. ಮುದ್ರಾದಂತಹ ಯೋಜನೆಗಳು ಗ್ರಾಮಗಳಲ್ಲಿ ಸ್ವಯಂ ಉದ್ಯೋಗದ ಸಾಧ್ಯತೆಗಳನ್ನು ಹೆಚ್ಚಿಸಿವೆ. ಜೊತೆಗೆ ದೇಶದಲ್ಲಿ ಸ್ವ ಸಹಾಯ ಗುಂಪುಗಳಿಗೆ ಸೇರಿದ ಸುಮಾರು 7 ಕೋಟಿ ಸಹೋದರಿಯರಿಯರಿಗೆ 3 ಲಕ್ಷ ಕೋ.ರೂ. ಗಳಿಗೂ ಅಧಿಕ ಸಾಲವನ್ನು ನೀಡಲಾಗಿದೆ. ರೈತರಿಗೆ, ಪಶುಪಾಲಕರಿಗೆ ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಬ್ಯಾಂಕ್ ಗಳಿಂದ ಸುಲಭದಲ್ಲಿ ಸಾಲ ಪಡೆಯುವುದಕ್ಕಾಗಿ ನೀಡಲಾಗಿದೆ. ಮೊದಲು ಕಿಸಾನ್ ಕ್ರೆಡಿಟ್ ಕಾರ್ಡ್ ಇಲ್ಲದ  ಸುಮಾರು 2.5 ಕೋಟಿ ಸಣ್ಣ ರೈತರ ಕುಟುಂಬಗಳು ಆಂದೋಲನದ ಮೂಲಕ ಸೌಲಭ್ಯವನ್ನು ಪಡೆದಿವೆ

ಸ್ನೇಹಿತರೇ,

ಗ್ರಾಮಗಳಲ್ಲಿ, ಗ್ರಾಮಸ್ಥರಲ್ಲಿ ಮತ್ತು ಬಡವರಲ್ಲಿ  ಆತ್ಮವಿಶ್ವಾಸ ಮೂಡಿಸಲ್ಪಟ್ಟರೆ , ಆಗ ಅವರಲ್ಲಿ ಸ್ವಯಂ   ನಿರ್ಣಯ ಕೈಗೊಳ್ಳುವ ಮನೋಸ್ಥಿತಿ ಬಲಿಷ್ಟಗೊಳ್ಳುತ್ತದೆಬಾಳಾಸಾಹೇಬ್ ವಿಖೆ ಪಾಟೀಲ್ ಸ್ವಾವಲಂಬನೆಯ ನಂಬಿಕೆಯನ್ನು ಗ್ರಾಮಸ್ಥರಲ್ಲಿ ಮೂಡಿಸಲು ಪ್ರಯತ್ನಿಸಿದರು ಮತ್ತು ಅವರು ತಮ್ಮ ಜೀವಮಾನವಿಡೀ ಇಂತಹ ಭರವಸೆಯನ್ನು ಮೂಡಿಸುವಲ್ಲಿ ನಿರತರಾದರು. ಆತ್ಮಚರಿತ್ರೆಯನ್ನು ಯಾರೇ ಓದಲಿ, ಅವರು ಹೊಸ ಪ್ರಜ್ಞೆಯನ್ನು ಮೂಡಿಸಿಕೊಳ್ಳುತ್ತಾರೆ. ಮತ್ತೊಮ್ಮೆ , ಬಾಳಾಸಾಹೇಬ್ ವಿಖೆ ಪಾಟೀಲ್ ಅವರಿಗೆ ಶಿರಬಾಗಿ ನಮಸ್ಕರಿಸುತ್ತಾ, ನಾನು ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ !.

ಆದರೆ ,ನಾನು ಭಾಷಣ ಮುಗಿಸುವುದಕ್ಕೆ ಮೊದಲು , ನಾನು ಮಹಾರಾಷ್ಟ್ರದ ಜನತೆಗೆ ಬಹಳ ಒತ್ತು ನೀಡಿ ಒಂದು ಮಾತನ್ನು ಹೇಳಲು ಬಯಸುತ್ತೇನೆ. ನಾವಿನ್ನೂ ಕೊರೊನಾ ಭಯದಲ್ಲಿ ಇದ್ದೇವೆ. ಮಹಾರಾಷ್ಟ್ರದಲ್ಲಿ , ಇದು ಬಹಳ ಚಿಂತೆಗೆ ಎಡೆ ಮಾಡಿಕೊಡುವ ಸಂಗತಿಯಾಗಿದೆ, ಮತ್ತು ಅದರಿಂದಾಗಿ ಮಹಾರಾಷ್ಟ್ರದ ಎಲ್ಲಾ ನಾಗರಿಕರಿಗೆ ನನ್ನ ಮನವಿ ಏನೆಂದರೆ ಮುಖಗವಸು ತೊಡುವ , ಆಗಾಗ ಕೈ ತೊಳೆಯುವ ಮತ್ತು ದೈಹಿಕ ಅಂತರ ಕಾಪಾಡುವ ನಿಯಮಗಳನ್ನು ನಿರ್ಲಕ್ಷಿಸಬೇಡಿ ಎಂಬುದಾಗಿದೆ. ನಾವು ಸದಾ ನೆನಪಿಡಬೇಕು , जब तक दवाई नहीं, तब तक ढिलाई नहीं। ( ಔಷಧಿ ದೊರೆಯುವವರೆಗೆ ಅಜಾಗ್ರತೆ ಸಲ್ಲದು ) . ಖಂಡಿತವಾಗಿಯೂ ನಾವೀ ಯುದ್ದದಲ್ಲಿ ಗೆಲ್ಲುತ್ತೇವೆ; ನಾವು ಗೆಲ್ಲಲೇ ಬೇಕು; ನಾವು ಗೆದ್ದೇ ಗೆಲ್ಲುತ್ತೇವೆ.

ಮತ್ತೊಮ್ಮೆನಾನು ಬಾಳಾಸಾಹೇಬ್ ಜೀ ಅವರ ಇಡೀ ಕುಟುಂಬಕ್ಕೆ , ಅವರ ಕುಟುಂಬದ ನಾಲ್ಕು ತಲೆಮಾರುಗಳು ಸಮಾಜ ಸೇವೆಯಲ್ಲಿ ತೊಡಗಿಕೊಂಡಿವೆಯಾದ್ದರಿಂದ ನನ್ನ ಗೌರವಗಳನ್ನು ಸಲ್ಲಿಸುತೇನೆ. ಇದು ಸಣ್ನ ಸಂಗತಿಯಲ್ಲ ಮತ್ತು ಬಹಳ ಸಂತೋಷದ ಸಂಗತಿ ಎಂದರೆ ಪ್ರತೀ ತಲೆಮಾರು ಕೂಡಾ ಇನ್ನಷ್ಟು ಹೆಚ್ಚಿನದಾದುದನ್ನು ಮಾಡಿಕೊಂಡು ಬಂದಿದೆ. ಮತ್ತು ಇನ್ನಷ್ಟು ಉತ್ತಮವಾದುದನ್ನು ಮಾಡಿಕೊಂಡು ಬಂದಿದೆ. ನಮಗೆ ಗೊತ್ತಿರುವಂತೆ , ಸಾಮಾನ್ಯವಾಗಿ ಭವಿಷ್ಯದ ತಲೆಮಾರುಗಳು ದುರ್ಬಲವಾಗಿರುತ್ತವೆ; ಮತ್ತು ಎರಡನೆ ತಲೆಮಾರು ಸ್ವಲ್ಪ ಕಡಿಮೆ ಶಕ್ತಿಶಾಲಿಯಾಗಿರುತ್ತದೆ ಮತ್ತು ಮೂರನೇಯದು ಇನ್ನಷ್ಟು ದುರ್ಬಲವಾಗಿರುತ್ತದೆ, ಅಲ್ಲಿ ಸತತ ಹದಗೆಡುವಿಕೆಯಂತಹ ಪರಿಸ್ಥಿತಿ ಇರುತ್ತದೆ. ಬಾಳಾಸಾಹೇಬ್ ಜೀ ಅವರ ಮೌಲ್ಯಗಳು ಎಂತಹವೆಂದರೆ ಅವರ ಮುಂದಿನ ಎಲ್ಲಾ ತಲೆಮಾರುಗಳು ಇನ್ನಷ್ಟು ಹೆಚ್ಚುಹೆಚ್ಚು ಕೆಲಸಗಳನ್ನು ಮಾಡಿಕೊಂಡು ಬರುತ್ತಿವೆ. ಅವರು ಇನ್ನಷ್ಟು ದೃಢವಾದ ಮೌಲ್ಯಗಳ ಮೂಲಕ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಮತ್ತು ಇವತ್ತಿನ ದಿನ ಇಂತಹ ಕುಟುಬಗಳಿಗೆ ಗೌರವ ಸಲ್ಲಿಸುವ , ನಮಸ್ಕರಿಸುವ ಅವಕಾಶದ ದಿನ

ನಿಮ್ಮೆಲ್ಲರಿಗೂ ಧನ್ಯವಾದಗಳು !

ವಂದನೆಗಳು

***


(ಪ್ರಕಟಣೆ ಐ.ಡಿ.: 1665752) ವಿಸಿಟರ್ ಕೌಂಟರ್ : 194