ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ದೇಶೀಯ 'ಕ್ಯಾಲ್ಸಿಯಂ ನೈಟ್ರೇಟ್' ಮತ್ತು 'ಬೊರೊನೇಟೆಡ್ ಕ್ಯಾಲ್ಸಿಯಂ ನೈಟ್ರೇಟ್' ಬಿಡುಗಡೆ


"ಆತ್ಮನಿರ್ಭರ ಭಾರತ ಮತ್ತು ಆತ್ಮನಿರ್ಭರ  ಕೃಷಿ" ಯಲ್ಲಿ ಮಹತ್ವದ ಹೆಜ್ಜೆ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ

Posted On: 09 OCT 2020 11:16AM by PIB Bengaluru

ಗುಜರಾತ್ ರಾಜ್ಯ ರಸಗೊಬ್ಬರ ಮತ್ತು ರಾಸಾಯನಿಕ ಇಂಡಿಯಾ ಲಿಮಿಟೆಡ್ ಸಂಸ್ಥೆ (ಜಿಎಸ್ಎಫ್ಸಿ) ತಯಾರಿಸಿರುವ ದೇಶೀಯ ವೈವಿಧ್ಯಮಯಕ್ಯಾಲ್ಸಿಯಂ ನೈಟ್ರೇಟ್ಮತ್ತು 'ಬೊರೊನೇಟೆಡ್ ಕ್ಯಾಲ್ಸಿಯಂ ನೈಟ್ರೇಟ್' ಅನ್ನು  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು.

ಕ್ಯಾಲ್ಸಿಯಂ ನೈಟ್ರೇಟ್ಮತ್ತು 'ಬೊರೊನೇಟೆಡ್ ಕ್ಯಾಲ್ಸಿಯಂ ನೈಟ್ರೇಟ್ಭಾರತದಲ್ಲಿ ಮೊದಲ ಬಾರಿಗೆ ತಯಾರಾಗುತ್ತಿದೆ. ಇದುವರೆಗೆ, ಇದನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಾಂಡವೀಯ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸ್ಪಷ್ಟ ಕರೆಗೆ ಸ್ಪಂದಿಸಿದ ಸಂಸ್ಥೆಯುಆತ್ಮನಿರ್ಭರ ಭಾರತ ಮತ್ತು ಆತ್ಮನಿರ್ಭರ ಕೃಷಿ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ ಎಂದರು.

ಜಿಎಸ್ಎಫ್ಸಿ ಎರಡು ಉತ್ಪನ್ನಗಳನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಹಿಮಾಚಲ ಪ್ರದೇಶದ ಸೋಲನ್ ಮತ್ತು ಗುಜರಾತ್ ಭಾವನಗರದಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತುತ ಎರಡು ಉತ್ಪನ್ನಗಳ ಜಿಎಸ್ಎಫ್ಸಿಯ ಒಟ್ಟು ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ 10,000 ಮೆಟ್ರಿಕ್ ಟನ್ ಆಗಿದೆ. ಮೂರು ತಿಂಗಳಲ್ಲಿ, ಉತ್ಪಾದನೆಯು ವರ್ಷಕ್ಕೆ 15000 ಮೆ.ಟನ್.ಗೆ ಹೆಚ್ಚಾಗುವ ನಿರೀಕ್ಷೆಯಿದೆ. ಜಿಎಸ್ಎಫ್ಸಿ ಇದನ್ನು 9 ರಿಂದ 12 ತಿಂಗಳಲ್ಲಿ 30,000 ಮೆಟ್ರಿಕ್ ಟನ್ಗೆ ಹೆಚ್ಚಿಸಲು ಯೋಜಿಸಿದೆ ಎಂದು ಸಚಿವರಿಗೆ ಮಾಹಿತಿ ನೀಡಲಾಯಿತು.

ದೇಶಾದ್ಯಂತ ಜಿಎಸ್ಎಫ್ಸಿಯ ಪ್ರಾದೇಶಿಕ ಕಚೇರಿಗಳು ಡಿಜಿಟಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ದೇಶೀಯ ವೈವಿಧ್ಯಮಯ ಕ್ಯಾಲ್ಸಿಯಂ ನೈಟ್ರೇಟ್ ಮತ್ತು ಬೊರೊನೇಟೆಡ್ ಕ್ಯಾಲ್ಸಿಯಂ ನೈಟ್ರೇಟ್ ದೇಶದ ರೈತ ಸಮುದಾಯಕ್ಕೆ ಆಮದು ದರಕ್ಕಿಂತ ಅಗ್ಗವಾಗಿ ದೊರೆಯುತ್ತದೆ ಎಂದು ಶ್ರೀ ಮಾಂಡವೀಯ ಹೇಳಿದರು. ಬಿಡುಗಡೆಯಾದ ಎರಡು ಉತ್ಪನ್ನಗಳು ಎಫ್ಸಿಒ ದರ್ಜೆಯದ್ದಾಗಿದ್ದು, ಭಾರತ ಸರ್ಕಾರದ ರಸಗೊಬ್ಬರ ಇಲಾಖೆಯ ಪ್ರಯೋಗಾಲಯದಿಂದ ಪ್ರಮಾಣೀಕರಿಸಲ್ಪಟ್ಟಿವೆ ಎಂದು ಅವರು ಹೇಳಿದರು. ಇದುವರೆಗೆ ಉತ್ಪನ್ನವನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು ಮತ್ತು ಮೊದಲ ಬಾರಿಗೆ ಜಿಎಸ್ಎಫ್ಸಿ ಇದನ್ನು ದೇಶೀಯವಾಗಿ ತಯಾರಿಸುತ್ತಿದೆ ಎಂದು ಅವರು ಹೇಳಿದರು. " ಉತ್ಪನ್ನಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಯಶಸ್ಸನ್ನು ಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಅವರು ಹೇಳಿದರು.

ಕಳೆದ ವರ್ಷ ದೇಶದಲ್ಲಿ ಸುಮಾರು 1.25 ಲಕ್ಷ ಮೆಟ್ರಿಕ್ ಟನ್ (1,23,000 ಟನ್) ಕ್ಯಾಲ್ಸಿಯಂ ನೈಟ್ರೇಟ್ ಆಮದು ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಶೇ.76 ಚೀನಾದಿಂದ ಮತ್ತು ಉಳಿದದ್ದನ್ನು ನಾರ್ವೆ ಮತ್ತು ಇಸ್ರೇಲ್ನಂತಹ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. 1.25 ಲಕ್ಷ ಟನ್ಗಳ ಒಟ್ಟು ಆಮದು ಮೌಲ್ಯ 225 ಕೋಟಿ ರೂ. ಕಳೆದ ವರ್ಷ ಜಿಎಸ್ಎಫ್ಸಿಯೇ ಸ್ವತಃ 4600 ಮೆ.ಟನ್ ಆಮದು ಮಾಡಿಕೊಂಡು ಮಾರಾಟ ಮಾಡಿದೆ.

ಕ್ಯಾಲ್ಸಿಯಂ ನೈಟ್ರೇಟ್ ಅನ್ನು ನೀರಿನಲ್ಲಿ ಕರಗುವ ಗೊಬ್ಬರವಾಗಿ ಕೃಷಿಯಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಉತ್ಪನ್ನವನ್ನು ತ್ಯಾಜ್ಯನೀರಿನ ಸಂಸ್ಕರಣೆಯಲ್ಲಿ ಮತ್ತು ಸಿಮೆಂಟ್ ಕಾಂಕ್ರೀಟ್ ಶಕ್ತಿಯನ್ನು ವೃದ್ಧಿಸಲು ಸಹ ಬಳಸಲಾಗುತ್ತದೆ.

***(Release ID: 1663148) Visitor Counter : 199