ಪ್ರಧಾನ ಮಂತ್ರಿಯವರ ಕಛೇರಿ

ಕೊರೊನಾ ವಿರುದ್ಧ ಹೋರಾಟದ ಸಾರ್ವಜನಿಕ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ: ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸುವಂತೆ ಮನವಿ

Posted On: 08 OCT 2020 9:28AM by PIB Bengaluru

ಕೊರೊನಾ ವಿರುದ್ಧ ಹೋರಾಟದ ಸಾರ್ವಜನಿಕ ಆಂದೋಲನಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಂದಾಗಬೇಕೆಂದು ಅವರು ದೇಶದ ಜನತೆಗೆ ಮನವಿ ಮಾಡಿದರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಜೈ ಜೋಡಿಸಬೇಕು ಎಂದು ಪ್ರಧಾನಿ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ. "ಮುಖಗವಸು ಧರಿಸಿ, ಕೈ ತೊಳೆಯಿರಿ, ಸಾಮಾಜಿಕ ಅಂತರವನ್ನು ಪಾಲಿಸಿ ಮತ್ತು ಎರಡು ಗಜ ದೂರವನ್ನು ಅಭ್ಯಾಸ ಮಾಡಿಕೊಳ್ಳಿ" ಎಂಬ ಸಂದೇಶವನ್ನು ಪುನರುಚ್ಚರಿಸಿರುವ ಪ್ರಧಾನಿಯವರು, ನಾವು ಒಟ್ಟಾದಾಗ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗುತ್ತೇವೆ ಮತ್ತು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅಭಿಯಾನದಡಿಯಲ್ಲಿ, ಎಲ್ಲರೂ ಕೋವಿಡ್-19 ರ ವಿರುದ್ಧ ಪ್ರತಿಜ್ಞೆಯನ್ನು ಮಾಡುತ್ತಾರೆ. ಈ ಕೆಳಗಿನ ಅಂಶಗಳೊಂದಿಗೆ ಕೇಂದ್ರ ಸರ್ಕಾರದ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಸಂಯೋಜಿತ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗುವುದು:

·         ಹೆಚ್ಚು ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳಲ್ಲಿ ಪ್ರದೇಶವಾರು ನಿರ್ದಿಷ್ಟ ಸಂವಹನ ಕಾರ್ಯಕ್ರಮಗಳು.

·         ಪ್ರತಿಯೊಬ್ಬ ನಾಗರಿಕನನ್ನು ತಲುಪಲು ಸರಳ ಮತ್ತು ಸುಲಭವಾಗಿ ಅರ್ಥವಾಗುವ ಸಂದೇಶಗಳು

·         ಎಲ್ಲಾ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ದೇಶಾದ್ಯಂತ ಪ್ರಸಾರ

·         ಸಾರ್ವಜನಿಕ ಸ್ಥಳಗಳಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಒಳಗೊಂಡಿರುವ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳು

·         ಸರ್ಕಾರಿ ಆವರಣಗಳಲ್ಲಿ ಹೋರ್ಡಿಂಗ್ಸ್ / ವಾಲ್ ಪೇಂಟಿಂಗ್ಸ್ / ಎಲೆಕ್ಟ್ರಾನಿಕ್ ಡಿಸ್ಪ್ಲೇ ಬೋರ್ಡ್‌ಗಳು

·         ಸಂದೇಶಗಳನ್ನು ತಲುಪಿಸಲು ಸ್ಥಳೀಯ ಮತ್ತು ರಾಷ್ಟ್ರೀಯ ನಾಯಕರ ಪಾಲ್ಗೊಳ್ಳುವಿಕೆ

·         ಜಾಗೃತಿ ಮೂಡಿಸಲು ಮೊಬೈಲ್ ವ್ಯಾನ್‌ಗಳನ್ನು ಓಡಿಸುವುದು

·         ಆಡಿಯೋ ಸಂದೇಶಗಳು; ಜಾಗೃತಿ ಮೂಡಿಸುವ ಕರಪತ್ರಗಳು

·         ಸಂದೇಶಗಳನ್ನು ಪ್ರಸಾರ ಮಾಡಲು ಸ್ಥಳೀಯ ಕೇಬಲ್ ಆಪರೇಟರ್‌ಗಳ ಬೆಂಬಲವನ್ನು ಪಡೆಯುವುದು

·         ಪರಿಣಾಮಕಾರಿ ಪ್ರಚಾರಕ್ಕಾಗಿ ಹಲವು ಪ್ಲಾಟ್‌ಫಾರ್ಮ್‌ಗಳ ಸಮನ್ವಯದೊಂದಿಗೆ ಮಾಧ್ಯಮ ಪ್ರಚಾರ  

***



(Release ID: 1663059) Visitor Counter : 200