ಪ್ರಧಾನ ಮಂತ್ರಿಯವರ ಕಛೇರಿ

ಕೇಂದ್ರ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಪ್ರಧಾನಿ ಶೋಕ

Posted On: 08 OCT 2020 9:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಶೋಕ ವ್ಯವಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ "ನನ್ನ ದುಃಖ ವ್ಯಕ್ತಪಡಿಸಲು ಪದೆಗಳೇ ಇಲ್ಲ. ನಮ್ಮ ರಾಷ್ಟ್ರದಲ್ಲಿ ಬಹುಶಃ ಎಂದಿಗೂ ಭರ್ತಿಯಾಗದಂತಹ ಕಂದಕ ನಿರ್ಮಾಣವಾಗಿದೆ. ಶ್ರೀ ರಾಮ್ ವಿಲಾಸ್ ಪಾಸ್ವಾನ್ ಜಿ ಅವರ ನಿಧನವು ವೈಯಕ್ತಿಕವಾಗಿಯೂ ನಷ್ಟ. ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ, ಮೌಲ್ಯಯುತ ಸಹೋದ್ಯೋಗಿ ಮತ್ತು ಪ್ರತಿಯೊಬ್ಬ ಬಡ ವ್ಯಕ್ತಿಯೂ ಗೌರವದ ಜೀವನ ನಡೆಸಬೇಕೆಂಬುದನ್ನು ಖಾತ್ರಿಪಡಿಸಿಕೊಳ್ಳುವ ಉತ್ಸಾಹ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ.

ಶ್ರೀ ರಾಮ್ ವಿಲಾಸ್ ಪಾಸ್ವಾನ್ ಜೀ ಕಠಿಣ ಪರಿಶ್ರಮ ಮತ್ತು ದೃಢ ನಿಶ್ಚಯದಿಂದ ರಾಜಕೀಯದಲ್ಲಿ ಹೊರಹೊಮ್ಮಿದರು. ಯುವ ನಾಯಕರಾಗಿ, ಅವರು ತುರ್ತುಪರಿಸ್ಥಿತಿ ಸಮಯದಲ್ಲಿ ದಬ್ಬಾಳಿಕೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣವನ್ನು ವಿರೋಧಿಸಿದರು. ಅವರು ಅತ್ಯುತ್ತಮ ಸಂಸದೀಯ ಪಟುವಾಗಿ ಮತ್ತು ಸಚಿವರಾಗಿ, ಹಲವಾರು ನೀತಿ ಕ್ಷೇತ್ರಗಳಲ್ಲಿ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ.

ಪಾಸ್ವಾನ್ ಜೀ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಒಗ್ಗೂಡಿ ದುಡಿದದ್ದು ಒಂದು ಅದ್ಭುತ ಅನುಭವ. ಸಚಿವ ಸಂಪುಟದ ಸಭೆಯ ವೇಳೆ ಅವರ ಮಧ್ಯಪ್ರವೇಶ ಒಳನೋಟ ಬೀರುತ್ತಿತ್ತು. ರಾಜಕೀಯ ಬುದ್ಧಿವಂತಿಕೆ, ಮುತ್ಸದ್ಧಿತನದಿಂದ ಆಡಳಿತದ ವಿಚಾರಗಳವರೆಗೆ ಅವರು ಮೇದಾವಿಯಾಗಿದ್ದರು. ಅವರ ಕುಟುಂಬದವರಿಗೆ ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ. ಓಂ. ಶಾಂತಿ.." 

***


(Release ID: 1663044) Visitor Counter : 129