ಪ್ರಧಾನ ಮಂತ್ರಿಯವರ ಕಛೇರಿ
ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ದೂರವಾಣಿ ಸಮಾಲೋಚನೆ
प्रविष्टि तिथि:
07 OCT 2020 2:57PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಪ್ರಧಾನಮಂತ್ರಿ ಅವರು ತಮ್ಮ ಆತ್ಮೀಯ ಶುಭಾಕಾಂಕ್ಷೆಗಳನ್ನು ಕೋರಿದರು ಮತ್ತು ಹುಟುಹಬ್ಬ ಆಚರಿಸಿಕೊಳ್ಳುತ್ತಿರುವ ರಷ್ಯಾದ ಅಧ್ಯಕ್ಷರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಗೌರವಾನ್ವಿತ ಪುಟಿನ್ ಅವರೊಂದಿಗಿನ ಸುದೀರ್ಘ ಸಹಭಾಗಿತ್ವ ಮತ್ತು ಗೆಳೆತನವನ್ನು ಪ್ರಧಾನಮಂತ್ರಿಗಳು ನೆನಪುಮಾಡಿಕೊಂಡರು ಮತ್ತು ಎರಡೂ ರಾಷ್ಟ್ರಗಳ ನಡುವೆ ವಿಶೇಷ ಮತ್ತು ಪರಸ್ಪರ ಕಾರ್ಯತಂತ್ರ ಪಾಲುದಾರಿಕೆಯನ್ನು ಪೋಷಿಸುವಲ್ಲಿ ಅವರು ವೈಯಕ್ತಿಕವಾಗಿ ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಭಯ ನಾಯಕರು ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಸವಾಲುಗಳ ನಂತರವೂ ಮುಂದಿನ ದಿನಗಳಲ್ಲಿ ಪರಸ್ಪರ ಸಂಪರ್ಕದಲ್ಲಿರಲು ಒಪ್ಪಿದರು. ಪ್ರಧಾನಮಂತ್ರಿಗಳು ಅಧ್ಯಕ್ಷ ಪುಟಿನ್ ಅವರನ್ನು ಸಾರ್ವಜನಿಕ ಆರೋಗ್ಯ ಸ್ಥಿತಿಗತಿ ಸುಧಾರಿಸಿ, ಸಹಜ ಸ್ಥಿತಿಗೆ ಮರಳಿದ ಕೂಡಲೇ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
***
(रिलीज़ आईडी: 1662585)
आगंतुक पटल : 231
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam