ಗೃಹ ವ್ಯವಹಾರಗಳ ಸಚಿವಾಲಯ

ಕ್ಷಿಪ್ರ ಕಾರ್ಯಪಡೆಯ (RAF) 28ನೆ ವಾರ್ಷಿಕ ಆಚರಣೆ


ಸಿಬ್ಬಂದಿ ಹಾಗೂ ಕುಟುಂಬದವರಿಗೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್‌ ಶಾ ಶುಭಾಶಯ

ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಆರ್‌ಎಎಫ್‌ ಸಮರ್ಥ ಸೇವೆ

Posted On: 07 OCT 2020 11:16AM by PIB Bengaluru

ಕ್ಷಿಪ್ರ ಕಾರ್ಯಪಡೆಯ 28ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್‌ ಶಾ ಅವರು ಕಾರ್ಯಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಟ್ವಿಟರ್‌ ನಲ್ಲಿ ಶುಭಕೋರಿದ್ದಾರೆ.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಇರುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿ ಮಹತ್ವದ ಪಾತ್ರವನ್ನು ವಹಿಸಿದೆ. ಮಾನವೀಯ ಮೌಲ್ಯಗಳ ಕಾರ್ಯಗಳಲ್ಲಿ ಸಹಾಯ ಹಸ್ತ ನೀಡಿ, ವಿಶ್ವಸಂಸ್ಥೆಯ ಶಾಂತಿ ಪರಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತ ಹೆಮ್ಮೆ ಪಡುವಂತೆ ಮಾಡಿದೆ.

ಕ್ಷಿಪ್ರ ಕಾರ್ಯಪಡೆಯು ವಿಶೇಷ ಪಡೆಯಾಗಿದ್ದು 1992 ಅಕ್ಟೋಬರ್‌ ತಿಂಗಳಿನಲ್ಲಿ ಹತ್ತು ಬಟಾಲಿಯನ್‌ಗಳೊಡನೆ ಆರಂಭಗೊಂಡು, 2018 .1ರಂದು ಮತ್ತೆ ಐದು ಬಟಾಲಿಯನ್‌ಗಳನ್ನು ಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಆರ್‌ಎಎಫ್‌ ಕಾರ್ಯ ಪಡೆ, ದಂಗೆ, ಗಲಭೆ ಹಾಗು ಪ್ರಕ್ಷುಬ್ದ ಸನ್ನಿವೇಶಗಳಲ್ಲಿ ಕಾರ್ಯಾಚರಣೆಗಳನ್ನು ನೆಡೆಸಿ, ಶಾಂತಿ ಕಾಪಾಡುವ ಆಂತರಿಕ ಭದ್ರತೆಯ ಕೆಲಸವನ್ನು ನಿರ್ವಹಿಸುತ್ತಿದೆ.

***


(Release ID: 1662291) Visitor Counter : 157