ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ : ಗರಿಷ್ಠ ಗುಣಮುಖದೊಂದಿಗೆ ವಿಶ್ವದ ಅಗ್ರ ಶ್ರೇಯಾಂಕ ಕಾಯ್ದುಕೊಂಡ ಭಾರತ
ವಿಶ್ವದಲ್ಲೇ ಅತಿ ಕಡಿಮೆ ಮರಣ ಪ್ರಮಾಣ ದರ ಇರುವ ರಾಷ್ಟ್ರಗಳಲ್ಲಿ ಒಂದಾದ ಭಾರತ
Posted On:
03 OCT 2020 11:33AM by PIB Bengaluru
ಗರಿಷ್ಠ ಚೇತರಿಕೆಯ ದರದೊಂದಿಗೆ ವಿಶ್ವದಲ್ಲಿ ಅಗ್ರ ಸ್ಥಾನವನ್ನು ನಿರಂತರವಾಗಿ ಭಾರತ ಕಾಯ್ದುಕೊಂಡಿದೆ. ಒಟ್ಟು ಗುಣಮುಖರಾದವರ ಸಂಖ್ಯೆ ಇಂದು 54 ಲಕ್ಷ ದಾಟಿದೆ (54,27,706). ವಿಶ್ವದ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ.18.6ರಷ್ಟು ಪ್ರಕರಣ ಹೊಂದಿರುವ ಭಾರತದಲ್ಲಿ ಒಟ್ಟು ಗುಣಮುಖ ಪ್ರಮಾಣದ ಶೇ.21 ಆಗಿದೆ.
ಇತರ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಜಾಗತಿಕವಾಗಿ ಅತ್ಯಂತ ಕಡಿಮೆ ಮರಣ ಪ್ರಮಾಣ ದರ (ಸಿ.ಎಫ್.ಆರ್.)ವನ್ನು ಕಾಪಾಡಿಕೊಂಡಿದೆ.
ಜಾಗತಿಕ ಸಿಎಫ್.ಆರ್. ದರ ಶೇ.2.97ಕ್ಕೆ ಹೋಲಿಸಿದರೆ, ಭಾರತದ ಮರಣ ಪ್ರಮಾಣ ದರ ಶೇ.1.56 ಆಗಿದೆ.
ಪ್ರತಿ 10 ಲಕ್ಷ ಜನಸಂಖ್ಯೆಯ ಮರಣ ಪ್ರಮಾಣ ದರವೂ ವಿಶ್ವ ದರಕ್ಕೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಇದೆ. ಜಾಗತಿಕ ಸರಾಸರಿ ಪ್ರತಿ 10 ಲಕ್ಷ ಜನಸಂಖ್ಯೆಗೆ 130 ಈಗಿದ್ದರೆ, ಭಾರತದಲ್ಲಿ ಪ್ರತಿ 10 ಲಕ್ಷಕ್ಕೆ ಮರಣವನ್ನಪ್ಪುತ್ತಿರುವವರ ಸಂಖ್ಯೆ 73 ಆಗಿದೆ.
ಭಾರತದಲ್ಲಿ ನಿತ್ಯ ಅತಿ ಹೆಚ್ಚು ಚೇತರಿಕೆಯ ಪ್ರವೃತ್ತಿ ಸ್ಥಿರವಾಗಿ ಮುಂದುವರಿಸಿದ್ದು, ಕಳೆದ 24 ಗಂಟೆಗಳಲ್ಲಿ 75,628 ರೋಗಿಗಳು ಗುಣಮುಖರಾಗಿದ್ದಾರೆ.
ಏಕ ದಿನದ ಅತಿ ಹೆಚ್ಚು ಚೇತರಿಕೆ ಸಂಖ್ಯೆಯಲ್ಲೂ ನಿರಂತರ ಏರಿಕೆ ಆಗುತ್ತಿದ್ದು, ರಾಷ್ಟ್ರೀಯ ಚೇತರಿಕೆ ದರ ಪ್ರಸ್ತುತ ಶೇ.83.84 ಆಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 10 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.74.36ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚಿನ ಚೇತರಿಕೆ ಆಗಿದೆ.
ಸುಮಾರು ಶೇ.77ರಷ್ಟು ಸಕ್ರಿಯ ಪ್ರಕರಣಗಳು 10 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿವೆ. ಮಹಾರಾಷ್ಟ್ರ 2.6 ಲಕ್ಷ ಸಕ್ರಿಯ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಈ ದಿನಾಂಕದವರೆಗೆ ದೇಶದಲ್ಲಿ ಒಟ್ಟು ಸೋಂಕು ದೃಢಪಟ್ಟ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.14.60 ಮಾತ್ರ.
ಸತತ 12ನೇ ದಿನವೂ ಭಾರತ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇರುವ ಪ್ರವೃತ್ತಿಯನ್ನು ಸುಸ್ಥಿರವಾಗಿ ಮುಂದುವರಿಸಿದೆ. ಇಂದು ಸಕ್ರಿಯ ಪ್ರಕರಣಗಳ 9,44,996 ಆಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 79,476 ಸೋಂಕಿನ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ.
ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.78.2ರಷ್ಟು ಹೊಸ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಸುಮಾರು 16 ಸಾವಿರ ಹೊಸ ಪ್ರಕರಣಗಳಿದ್ದು, ಇದು ಹಿಂದಿನ ದಿನಕ್ಕಿಂತ ಕಡಿಮೆಯಾಗಿದೆ. ಕೇರಳ 9,258 ಹೊಸ ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 8 ಸಾವಿರ ಹೊಸ ಪ್ರಕರಣ ವರದಿಯಾಗಿದೆ.
1069 ಸಾವಿನ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.84.1ರಷ್ಟು ಸಾವಿನ ಪ್ರಕರಣ ವರದಿಯಾಗಿದೆ.
ನಿನ್ನೆ ವರದಿಯಾಗಿರುವ ಸಾವಿನ ಪ್ರಕರಣಗಳಲ್ಲಿ ಶೇ.39.66ರಷ್ಟು ಮಹಾರಾಷ್ಟ್ರ (424), ಕರ್ನಾಟಕ (125) ದಲ್ಲಿ ವರದಿಯಾಗಿದೆ.
*****
(Release ID: 1661280)
Visitor Counter : 249
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam