ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಹೆಚ್ಚುತ್ತಿರುವ ಚೇತರಿಕೆಯ ಪ್ರಮಾಣ
ಚೇತರಿಕೆಯ ಪ್ರಮಾಣವು ಸತತ 5ನೇ ದಿನವೂ ಹೊಸ ಪ್ರಕರಣಗಳನ್ನು ಮೀರಿವೆ
ಚೇತರಿಕೆಯ ಪ್ರಮಾಣ 81% ದಾಟಿದೆ
Posted On:
23 SEP 2020 11:00AM by PIB Bengaluru
ಕೇಂದ್ರೀಕೃತ ಕಾರ್ಯತಂತ್ರಗಳು ಮತ್ತು ಪರಿಣಾಮಕಾರಿ, ಸಂಘಟಿತ ಮತ್ತು ಪೂರ್ವಭಾವಿ ಕ್ರಮಗಳೊಂದಿಗೆ, ಭಾರತದಲ್ಲಿ ಚೇತರಿಕೆಯ ಪ್ರಕರಣದಲ್ಲಿ ಹೆಚ್ಚಿದ ಪ್ರಮಾಣಗಳು ವರದಿಯಾಗುತ್ತಿವೆ. ಭಾರತದಲ್ಲಿ ಹೊಸ ಚೇತರಿಕೆಯ ಪ್ರಕರಣಗಳ ಪ್ರಮಾಣವು ಸತತ ಐದನೆಯ ದಿನವೂ ಹೊಸ ಪ್ರಕರಣಗಳನ್ನು ಮೀರಿವೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 89,746 ಚೇತರಿಕೆಯ ಪ್ರಕರಣಗಳು ದಾಖಲಾಗಿದ್ದರೆ, ಹೊಸ ದೃಢಪಡಿಸಿದ ಪ್ರಕರಣಗಳ ಸಂಖ್ಯೆ 83,347 ಆಗಿದೆ. ಇದರೊಂದಿಗೆ, ಒಟ್ಟು ಚೇತರಿಕೆಯ ಪ್ರಕರಣಗಳ ಸಂಖ್ಯೆ 45,87,613 ಆಗಿದ್ದು ಚೇತರಿಕೆಯ ಪ್ರಮಾಣ 81.25% ಆಗಿದೆ.
ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಚೇತರಿಸಿಕೊಂಡ ಪ್ರಕರಣಗಳಿವೆ. ಇದು ಜಾಗತಿಕ ಚೇತರಿಕೆಯ ಪ್ರಕರಣಗಳ 19.5%ರಷ್ಟು ಭಾಗವಾಗಿದೆ.
ಹೊಸ ಪ್ರಕರಣಗಳಿಗಿಂತ ಭಾರತವು ಹೆಚ್ಚಿನ ಚೇತರಿಕೆಯ ಪ್ರಕರಣಗಳ ದಾಖಲಿಸುತ್ತಿರುವಂತೆ, ಅನೇಕ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಇದನ್ನು ಅನುಸರಿಸುತ್ತವೆ.
17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಹೊಸ ಪ್ರಕರಣಗಳಿಗಿಂತ ಹೆಚ್ಚು ಹೊಸ ಚೇತರಿಕೆಯ ಪ್ರಕರಣಗಳನ್ನು ಹೊಂದಿವೆ.
ಹೊಸದಾಗಿ ಚೇತರಿಸಿಕೊಂಡ ಪ್ರಕರಣಗಳಲ್ಲಿ 75% ಹತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ. ಅವುಗಳಾವುವೆಂದರೆ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಒಡಿಶಾ, ದೆಹಲಿ, ಕೇರಳ, ಪಶ್ಚಿಮ ಬಂಗಾಳ ಮತ್ತು ಹರಿಯಾಣ.
***
(Release ID: 1658140)
Visitor Counter : 214