ಗೃಹ ವ್ಯವಹಾರಗಳ ಸಚಿವಾಲಯ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯ ಕೋರಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ


" ಬಡವರ ಕಲ್ಯಾಣ ಮತ್ತು ರಾಷ್ಟ್ರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ದೇಶದ ಅತ್ಯಂತ ಜನಪ್ರಿಯ ನಾಯಕ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು "
" ಸಾರ್ವಜನಿಕ ಕಲ್ಯಾಣ ನೀತಿಗಳ ಮೂಲಕ ವಂಚಿತ ವರ್ಗಗಳನ್ನು ಮುಖ್ಯವಾಹಿನಿಗೆ ತಂದ ಮತ್ತು ಸದೃಢ ಭಾರತಕ್ಕೆ ಅಡಿಪಾಯ ಹಾಕಿದ ನಾಯಕನನ್ನು ಪ್ರಧಾನಿ ಮೋದಿಯವರ ರೂಪದಲ್ಲಿ ರಾಷ್ಟ್ರವು ಪಡೆದಿದೆ"
" ದಶಕಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದ ಬಡವರಿಗೆ ವಸತಿ, ವಿದ್ಯುತ್, ಬ್ಯಾಂಕ್ ಖಾತೆಗಳು ಅಥವಾ ಶೌಚಾಲಯಗಳನ್ನು ಒದಗಿಸುವುದಿರಲಿ ಅಥವಾ ಬಡ ತಾಯಂದಿರಿಗೆ ಉಜ್ಜಲಾ ಯೋಜನೆಯಡಿ ಅಡುಗೆ ಅನಿಲವನ್ನು ಒದಗಿಸಿ ಅವರ ಘನತೆಯ ಜೀವನವನ್ನು ಖಾತ್ರಿಪಡಿಸುವುದಿರಲಿ, ಇವೆಲ್ಲವೂ ಪ್ರಧಾನಿ ಮೋದಿಯವರ ಸಮರ್ಪಣಾ ಮನೋಭಾವ ಮತ್ತು ಅಚಲವಾದ ಸಂಕಲ್ಪದಿಂದಾಗಿ ಮಾತ್ರ ಸಾಧ್ಯವಾಗಿದೆ ”
"ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತ ಮಾತೆಗೆ ಸೇವೆ ಸಲ್ಲಿಸುವುದು ನಿಜಕ್ಕೂ ಒಂದು ದೊಡ್ಡ ಭಾಗ್ಯವಾಗಿದೆ, ಅವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಸದೃಢ, ಸುರಕ್ಷಿತ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಮುಡಿಪಾಗಿಟ್ಟಿದ್ದಾರೆ"

" ಕೋಟ್ಯಂತರ ದೇಶವಾಸಿಗಳೊಂದಿಗೆ ನಾನು, ಪ್ರಧಾನಿ ಮೋದಿಯವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ"

Posted On: 17 SEP 2020 1:36PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನದಂದು ಶುಭಾಶಯ ಕೋರಿದ್ದಾರೆ. ಕುರಿತು ಶ್ರೀ ಅಮಿತ್ ಶಾ ಸರಣಿ ಟ್ವೀಟ್ ಮಾಡಿದ್ದಾರೆ.

ಬಡವರ ಕಲ್ಯಾಣ ಮತ್ತು ರಾಷ್ಟ್ರ ಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟಿರುವ ದೇಶದ ಅತ್ಯಂತ ಜನಪ್ರಿಯ ನಾಯಕ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಸಾರ್ವಜನಿಕ ಕಲ್ಯಾಣ ನೀತಿಗಳ ಮೂಲಕ ವಂಚಿತ ವರ್ಗಗಳನ್ನು ಮುಖ್ಯವಾಹಿನಿಗೆ ತಂದ ಮತ್ತು ಸದೃಢ ಭಾರತಕ್ಕೆ ಅಡಿಪಾಯ ಹಾಕಿದ ನಾಯಕನನ್ನು ಪ್ರಧಾನಿ ಮೋದಿಯವರ ರೂಪದಲ್ಲಿ ರಾಷ್ಟ್ರವು ಪಡೆದಿದೆ" ಎಂದು ಅವರು ಹೇಳಿದ್ದಾರೆ.

" ದಶಕಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದ ಬಡವರಿಗೆ ವಸತಿ, ವಿದ್ಯುತ್, ಬ್ಯಾಂಕ್ ಖಾತೆಗಳು ಅಥವಾ ಶೌಚಾಲಯಗಳನ್ನು ಒದಗಿಸುವುದಿರಲಿ ಅಥವಾ ಬಡ ತಾಯಂದಿರಿಗೆ ಉಜ್ಜಲಾ ಯೋಜನೆಯಡಿ ಅಡುಗೆ ಅನಿಲವನ್ನು ಒದಗಿಸಿ ಅವರ ಘನತೆಯ ಜೀವನವನ್ನು ಖಾತ್ರಿಪಡಿಸುವುದಿರಲಿ, ಇವೆಲ್ಲವೂ ಪ್ರಧಾನಿ ಮೋದಿಯವರ ಸಮರ್ಪಣಾ ಮನೋಭಾವ ಮತ್ತು ಅಚಲವಾದ ಸಂಕಲ್ಪದಿಂದಾಗಿ ಮಾತ್ರ ಸಾಧ್ಯವಾಗಿದೆಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

"ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತ ಮಾತೆಗೆ ಸೇವೆ ಸಲ್ಲಿಸುವುದು ನಿಜಕ್ಕೂ ಒಂದು ಅದೃಷ್ಟವಾಗಿದೆ, ಅವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಸದೃಢ, ಸುರಕ್ಷಿತ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ದೇಶದ ಕೋಟ್ಯಂತರ ಜನರೊಂದಿಗೆ ನಾನು, ಪ್ರಧಾನಿ ಮೋದಿಯವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ" ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ.

 

 

***

 


(Release ID: 1655565) Visitor Counter : 188