ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಿ
Posted On:
07 AUG 2020 12:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಆಗಸ್ಟ್ 8 ರಂದು ಸ್ವಚ್ಛ ಭಾರತ್ ಮಿಷನ್ ಅಡಿ ನಿರ್ಮಿಸಿರುವ ಸಂವಾದಾತ್ಮಕ ಅನುಭವ ಕೇಂದ್ರ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಈ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ(ಆರ್ ಎಸ್ ಕೆ) ಮಹಾತ್ಮ ಗಾಂಧಿ ಅವರಿಗೆ ಸಲ್ಲಿಸುತ್ತಿರುವ ಗೌರವವಾಗಿದ್ದು, 2017ರ ಏಪ್ರಿಲ್ 10ರಂದು ಪ್ರಧಾನಮಂತ್ರಿ ಅವರು ಗಾಂಧೀಜಿ ಚಂಪಾರಣ್ ಸತ್ಯಾಗ್ರಹ ನಡೆಸಿದ ಶತಮಾನೋತ್ಸವ ಆಚರಣೆ ವೇಳೆ ಈ ಕೇಂದ್ರದ ನಿರ್ಮಾಣವನ್ನು ಪ್ರಕಟಿಸಿದ್ದರು.
ಆರ್ ಎಸ್ ಕೆಯಲ್ಲಿ ಅಳವಡಿಸಲಾಗಿರುವ ಪ್ರತಿಮೆಗಳು, ವಿಶ್ವದ ಅತಿ ದೊಡ್ಡ ನಡವಳಿಕೆ ಬದಲಾವಣೆ ಅಭಿಯಾನ, ಸ್ವಚ್ಛ ಭಾರತ್ ನ ಯಶಸ್ವಿ ಪಯಣವನ್ನು ಭವಿಷ್ಯದ ತಲೆಮಾರಿಗೆ ಪರಿಚಯಿಸಲಿವೆ. ಆರ್ ಎಸ್ ಕೆಯಲ್ಲಿನ ಡಿಜಿಟಲ್ ಮತ್ತು ಹೊರಾಂಗಣ ಅಳವಡಿಕೆಗಳ ಮಿಶ್ರಣದಲ್ಲಿ, ಸ್ವಚ್ಛತೆ ಕುರಿತ ಶಿಕ್ಷಣ, ಮಾಹಿತಿ ಮತ್ತು ಜಾಗೃತಿಯನ್ನು ನೀಡಲಿದೆ. ಸಂಕೀರ್ಣದಲ್ಲಿ ಅಂತರ ಪರಸ್ಪರ ಅನೂನ್ಯ ಪ್ರಕ್ರಿಯೆ ಮತ್ತು ಚಟುವಟಿಕೆಗಳನ್ನು, ಸಂಯೋಜಕ ಕಲಿಕೆ, ಉತ್ತಮ ಪದ್ಧತಿಗಳು, ಜಾಗತಿಕ ಮಾನದಂಡ, ಯಶೋಗಾಥೆಗಳು ಮತ್ತು ವಿಷಯಾಧರಿತ ಸಂದೇಶ ಇರುವಂತಹ ಸಂವಾದಾತ್ಮಕ ರೂಪದಲ್ಲಿರುತ್ತವೆ.
ಒಂದನೇ ಸಭಾಂಗಣದಲ್ಲಿ ವೀಕ್ಷಕರಿಗೆ ವಿಭಿನ್ನ 360 ಡಿಗ್ರಿ ಆಡಿಯೋ-ವಿಶ್ಯುಯಲ್ ಪ್ರದರ್ಶನದ ಅನುಭವವಾಗಲಿದ್ದು, ಅದು ಭಾರತದ ಸ್ವಚ್ಛತಾ ಕತೆಯನ್ನು ವಿವರಿಸಲಿದೆ. ಇದು ಇತಿಹಾಸದಲ್ಲಿ ಅತಿ ದೊಡ್ಡ ಜನರ ನಡವಳಿಕೆ ಬದಲಾವಣೆಯ ಅಭಿಯಾನವಾಗಿದೆ. ಎರಡನೇ ಸಭಾಂಗಣದಲ್ಲಿ ಸರಣಿ ಸಂವಾದಾತ್ಮಕ ಎಲ್ಇಡಿ ಪ್ಯಾನಲ್ ಗಳು ಹಾಲೋಗ್ರಾಮ್ ಬಾಕ್ಸ್ ಗಳು, ಸಂವಾದಾತ್ಮಕ ಕ್ರೀಡೆ ಮತ್ತಿತರವು ಇದ್ದು, ಬಾಪೂ ಅವರ ಕನಸಿನ ಸ್ವಚ್ಛ ಭಾರತ ಸಾಧನೆಗೆ ಕೈಗೊಂಡಿರುವ ಕ್ರಮಗಳ ಕುರಿತ ಕತೆ ನೋಡಬಹುದಾಗಿದೆ. ಆರ್ ಎಸ್ ಕೆಗೆ ಹೊಂದಿಕೊಂಡಂತೆ ಇರುವ ಹುಲ್ಲು ಹಾಸಿನ ಮೇಲೆ ಉಪಖ್ಯಾನಗಳನ್ನು ನೀಡುವ ಮುಕ್ತ ಪ್ರದರ್ಶನಗಳು ಇರಲಿದ್ದು, ಅಲ್ಲಿ ಸತ್ಯಾಗ್ರಹದಿಂದ ಸ್ವಚ್ಛಾಗ್ರಹದ ವರೆಗೆ ಭಾರತದ ಪಯಣವನ್ನು ಪ್ರದರ್ಶಿಸಲಿವೆ. ಕೇಂದ್ರದ ಸುತ್ತಲಿನ ಕ್ರಿಯಾಶೀಲ ಗೋಡೆ ಬರಹ, ಭಿತ್ತಿಚಿತ್ರಗಳಲ್ಲಿ ಯೋಜನೆಯ ಯಶಸ್ಸಿನ ಪ್ರಮುಖಾಂಶಗಳನ್ನು ಚಿತ್ರಿಸಲಾಗಿದೆ.
ಆರ್ ಎಸ್ ಕೆ ಒಳಗೆ ಭೇಟಿ ನಂತರ ಪ್ರಧಾನಮಂತ್ರಿ ಅವರು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ದೆಹಲಿಯ 36 ಶಾಲಾ ವಿದ್ಯಾರ್ಥಿಗಳೊಂದಿಗೆ ಆರ್ ಎಸ್ ಕೆ ಆಂಪಿಥಿಯೇಟರ್ ನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಂವಾದವನ್ನು ನಡೆಸುವರು. ನಂತರ ಪ್ರಧಾನಮಂತ್ರಿ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವರು.
ಸ್ವಚ್ಛ ಭಾರತ ಮಿಷನ್ ಭಾರತದಲ್ಲಿ ಗ್ರಾಮೀಣ ನೈರ್ಮಲೀಕರಣವನ್ನು ಭಾರೀ ಪ್ರಮಾಣದಲ್ಲಿ ಸುಧಾರಿಸಿದೆ ಮತ್ತು ಸುಮಾರು 55 ಕೋಟಿ ಮಂದಿ ಬಯಲಿನಲ್ಲೇ ಬಹಿರ್ದೆಸೆ ಮಾಡುತ್ತಿದ್ದವರ ಮನೋಭಾವವನ್ನು ಬದಲಾಯಿಸಿದೆ. ಇದಕ್ಕಾಗಿ ಭಾರತ ಅಂತಾರಾಷ್ಟ್ರೀಯ ಸಮುದಾಯದಿಂದ ಅತಿ ಹೆಚ್ಚಿನ ಪ್ರಶಂಸೆಗಳಿಸಿದೆ ಮತ್ತು ನಾವು ಇಡೀ ವಿಶ್ವಕ್ಕೆ ಒಂದು ಮಾದರಿಯನ್ನು ನೀಡಿದಂತಾಗಿದೆ. ಯೋಜನೆಯ ಎರಡನೇ ಹಂತ ಇದೀಗ ಪ್ರಗತಿಯಲ್ಲಿದ್ದು, ಇದೀಗ ಭಾರತದ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ(ಒಡಿಎಫ್)ನಿಂದ ಒಡಿಎಫ್ ಪ್ಲಸ್ ಗೆ ಏರಿಸಲು ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡುವ ಮೂಲಕ ಸುಸ್ಥಿರ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
(Release ID: 1644769)
Visitor Counter : 245
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam