ಪ್ರಧಾನ ಮಂತ್ರಿಯವರ ಕಛೇರಿ

ಜುಲೈ 22ರಂದು ಭಾರತದ ಕಲ್ಪನೆಯ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ

Posted On: 21 JUL 2020 11:35AM by PIB Bengaluru

ಜುಲೈ 22ರಂದು ಭಾರತದ ಕಲ್ಪನೆಯ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಕಲ್ಪನೆಗಳ ಶೃಂಗಸಭೆ (India Ideas Summit) ಉದ್ದೇಶಿಸಿ ಜುಲೈ 22ರಂದು ಪ್ರಧಾನ ಭಾಷಣ ಮಾಡಲಿದ್ದಾರೆ.

ಅಮೆರಿಕ ಭಾರತ ವಾಣಿಜ್ಯ ಮಂಡಳಿ ಶೃಂಗಸಭೆಯನ್ನು ಆಯೋಜಿಸಿದೆ. ವರ್ಷ ಮಂಡಳಿಯು ತನ್ನ 45ನೇ ಸಂಸ್ಥಾಪನೆ ವರ್ಷವನ್ನೂ ಆಚರಿಸುತ್ತಿದೆ. ವರ್ಷದ ಭಾರತದ ಕಲ್ಪನೆಯ ಶೃಂಗಸಭೆಯ ಧ್ಯೆಯವಾಕ್ಯಉತ್ತಮ ಭವಿಷ್ಯ ನಿರ್ಮಾಣಎಂಬುದಾಗಿದೆ.

ವರ್ಚುವಲ್ ಶೃಂಗಸಭೆಯಲ್ಲಿ ಭಾರತ ಮತ್ತು ಅಮೆರಿಕಾ ಸರ್ಕಾರಗಳ ನೀತಿ ನಿರೂಪಕರ, ರಾಜ್ಯಮಟ್ಟದ ಅಧಿಕಾರಿಗಳ ಮತ್ತು ಸಮಾಜ ಮತ್ತು ವಾಣಿಜ್ಯ ವಲಯದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಶೃಂಗಸಭೆಯ ಪ್ರಮುಖ ಭಾಷಣಕಾರರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಡಾ. ಎಸ್. ಜೈಶಂಕರ್, ಅಮೆರಿಕಾ ವಿದೇಶಾಂಗ ಸಚಿವ ಶ್ರೀ ಮೈಕ್ ಪಾಂಪಿಯೋ, ವರ್ಜೀನಿಯಾ ಸೆನೆಟರ್ ಮತ್ತು ಸೆನೆಟ್ ಇಂಡಿಯಾ ಕಾಕಸ್ ಸಹ-ಅಧ್ಯಕ್ಷರಾದ ಶ್ರೀ ಮಾರ್ಕ್ ವಾರ್ನರ್, ವಿಶ್ವಸಂಸ್ಥೆಯ ಮಾಜಿ ಅಮೆರಿಕ ರಾಯಭಾರಿ ಶ್ರೀಮತಿ ನಿಕ್ಕಿ ಹ್ಯಾಲೆ ಮತ್ತಿತರರು ಸೇರಿದ್ದಾರೆ. ಶೃಂಗಸಭೆಯಲ್ಲಿ ಭಾರತ ಅಮೆರಿಕ ಸಹಕಾರ ಮತ್ತು ಸಾಂಕ್ರಾಮಿಕೋತ್ತರ ವಿಶ್ವದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಭವಿಷ್ಯದ ಬಾಂಧವ್ಯ ಕುರಿತಂತೆ ಚರ್ಚೆ ನಡೆಯಲಿದೆ.

***



(Release ID: 1640221) Visitor Counter : 198