ಪ್ರಧಾನ ಮಂತ್ರಿಯವರ ಕಛೇರಿ

ಐಬಿಎಂ ಸಿಇಓ ಅರವಿಂದ್ ಕೃಷ್ಣ ಅವರೊಂದಿಗೆ ಪ್ರಧಾನಿ ಸಂವಾದ

Posted On: 20 JUL 2020 5:42PM by PIB Bengaluru

ಐಬಿಎಂ ಸಿಇಓ ಅರವಿಂದ್ ಕೃಷ್ಣ ಅವರೊಂದಿಗೆ ಪ್ರಧಾನಿ ಸಂವಾದ

ಸ್ವಾವಲಂಬಿ ಭಾರತದ ದೃಷ್ಟಿಕೋನದಲ್ಲಿ ಮುನ್ನಡೆ,

ಜಾಗತಿಕವಾಗಿ ಸಮರ್ಥ ಮತ್ತು ಅಡ್ಡಿ ಆತಂಕಗಳನ್ನು ಮೆಟ್ಟಿ ನಿಲ್ಲುವ ಸ್ಥಳೀಯ ಪೂರೈಕೆ ಸರಪಳಿಯ ಅಭಿವೃದ್ಧಿ: ಪ್ರಧಾನಮಂತ್ರಿ

ಭಾರತದಲ್ಲಿ ಹೂಡಿಕೆಗೆ ಶ್ರೇಷ್ಠ ಸಮಯ: ಪ್ರಧಾನಮಂತ್ರಿ

ಮನೆಯಿಂದಲೇ ಕರ್ತವ್ಯ ನಿರ್ವಹಿಸುವಿಕೆಯೆಡೆಗೆ ತಂತ್ರಜ್ಙ ಪರಿವರ್ತನೆಯ ಖಾತ್ರಿ ಪಡಿಸಲು ಸರ್ಕಾರ ಬದ್ಧವಾಗಿದೆ: ಪ್ರಧಾನಮಂತ್ರಿ

ಕೈಗೆಟಕುವ ಮತ್ತು ಅಡ್ಡಿ ರಹಿತವಾದ ಸಮಗ್ರ ತಂತ್ರಜ್ಙ ಮತ್ತು ದತ್ತಾಂಶ ಚಾಲಿತ ಆರೋಗ್ಯ ಸೇವೆ ವ್ಯವಸ್ಥೆಯ ಅಭಿವೃದ್ಧಿಯತ್ತ ಭಾರತ ಸಾಗುತ್ತಿದೆ: ಪ್ರಧಾನಮಂತ್ರಿ

ಆತ್ಮ ನಿರ್ಭರ ಭಾರತ ದೃಷ್ಟಿಕೋನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಐಬಿಎಂ ಸಿಇಓ: ಐಬಿಎಂನಿಂದ ಭಾರತದಲ್ಲಿ ಬೃಹತ್ ಹೂಡಿಕೆಯ ಕುರಿತಂತೆ ಪ್ರಧಾನಮಂತ್ರಿಯವರಿಗೆ ವಿವರಣೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐಬಿಎಂ ಸಿಇಓ ಶ್ರೀ ಅರವಿಂದ್ ಕೃಷ್ಣ ಅವರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ವರ್ಷದ ಆರಂಭದಲ್ಲಿ ಐಬಿಎಂನ ಜಾಗತಿಕ ಮುಖ್ಯಸ್ಥರಾಗಿ ನೇಮಕಗೊಂಡ ಶ್ರೀ ಅರವಿಂದ ಕೃಷ್ಣ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ಭಾರತದೊಂದಿಗೆ ಐಬಿಎಂನ ನಿಕಟ ಸಂಪರ್ಕ ಮತ್ತು 20 ನಗರಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಕರ್ತವ್ಯ ನಿರ್ವಹಿಸುತ್ತಿರುವ ಕಂಪನಿಯ ಬೃಹತ್ ಅಸ್ತಿತ್ವವನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.

ವಾಣಿಜ್ಯ ಸಂಸ್ಕೃತಿಯ ಮೇಲೆ ಕೋವಿಡ್ ಪ್ರಭಾವದ ಕುರಿತು ಮಾತನಾಡಿದ ಪ್ರಧಾನಿ, ‘ಮನೆಯಿಂದ ಕರ್ತವ್ಯ ನಿರ್ವಹಿಸುವಿಕೆಯನ್ನು ದೊಡ್ಡ ರೀತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಮತ್ತು ಸರ್ಕಾರವು ಪರಿವರ್ತನೆ ಸುಗಮವಾಗಿ ಸಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೂಲಸೌಕರ್ಯ, ಸಂಪರ್ಕ ಮತ್ತು ನಿಯಂತ್ರಕ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಐಬಿಎಂ ತನ್ನ ಶೇ.75ರಷ್ಟು ಉದ್ಯೋಗಿಗಳನ್ನು ಮನೆಯಿಂದ ಕರ್ತವ್ಯ ನಿರ್ವಹಿಸುವಂತೆ ಮಾಡಲು ಕೈಗೊಂಡ ಇತ್ತೀಚಿನ ನಿರ್ಧಾರಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳು ಮತ್ತು ಸವಾಲುಗಳ ಬಗ್ಗೆಯೂ ಅವರು ಚರ್ಚಿಸಿದರು.

ಸಿಬಿಎಸ್ಇಯೊಂದಿಗಿನ ಸಹಯೋಗದೊಂದಿಗೆ ಎಐ ಪಠ್ಯಕ್ರಮವನ್ನು ಭಾರತದ 200 ಶಾಲೆಗಳಲ್ಲಿ ಆರಂಭಿಸಿರುವ ನಿಟ್ಟಿನಲ್ಲಿ ಐಬಿಎಂನ ಪಾತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ದೇಶದಲ್ಲಿ ತಾಂತ್ರಿಕ ಪ್ರವೃತ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿಯೇ .. ಕಲಿಕೆ ವ್ಯವಸ್ಥೆಯನ್ನು ಮತ್ತು ವಿಷಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು. ಐಬಿಎಂ ಸಿಇಓ ತಂತ್ರಜ್ಞಾನ ಮತ್ತು ದತ್ತಾಂಶಗಳ ಕುರಿತ ಬೋಧನೆ ಮೂಲಭೂತ ಕೌಶಲ್ಯಗಳಾದ ಬೀಜಗಣಿತದಂಥ ಪ್ರವರ್ಗದಲ್ಲಿರುತ್ತದೆ, ಅದನ್ನು ಉತ್ಸಾಹದೊಂದಿಗೆ ಮತ್ತು ಆರಂಭದಲ್ಲೇ ಪರಿಚಯಿಸಿ ಕಲಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ಭಾರತದಲ್ಲಿ ಹೂಡಿಕೆ ಮಾಡಲು ಇದು ಶ್ರೇಷ್ಠ ಸಮಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ತಾಂತ್ರಿಕ ಕ್ಷೇತ್ರದಲ್ಲಿ ಆಗುತ್ತಿರುವ ಹೂಡಿಕೆಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಮತ್ತು ಸ್ವಾಗತಿಸುತ್ತಿದೆ ಎಂದು ತಿಳಿಸಿದರು. ವಿಶ್ವ ಇಂದು ಆರ್ಥಿಕ ಹಿಂಜರಿತಕ್ಕೆ ಸಾಕ್ಷಿಯಾಗಿರುವಾಗ, ಭಾರತಕ್ಕೆ ಎಫ್.ಡಿ.. ಒಳಹರಿವು ಹೆಚ್ಚುತ್ತಿದೆ ಎಂಬುದನ್ನು ಉಲ್ಲೇಖಿಸಿದರು. ಭಾರತ ಸ್ವಾವಲಂಬಿ ಭಾರತದ ನಿಟ್ಟಿನಲ್ಲಿ ಸಾಗಿದೆ, ಹೀಗಾಗಿ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಮತ್ತು ಅಡೆತಡೆಗಳನ್ನು ತಾಳಿಕೊಳ್ಳುವಂಥ ಪೂರೈಕೆ ಸರಪಣಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು. ಐಬಿಎಂ ಸಿಇಓ, ಭಾರತದಲ್ಲಿ ಐಬಿಎಂನ ಬೃಹತ್ ಹೂಡಿಕೆಯ ಯೋಜನೆಯ ಬಗ್ಗೆ ವಿವರಿಸಿದರು. ಅವರು ಆತ್ಮ ನಿರ್ಭರ ಭಾರತ ದೃಷ್ಟಿಕೋನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಜನರಿಗೆ ಕೈಗೆಟಕುವಂತೆ ಉತ್ತಮ ಗುಣಮಟ್ಟದ ಆರೋಗ್ಯ ಆರೈಕೆಯನ್ನು ಖಾತ್ರಿಪಡಿಸಲು ಮತ್ತು ಕ್ಷೇಮವನ್ನು ಉತ್ತೇಜಿಸಲು ಕಳೆದ ಆರು ವರ್ಷಗಳಲ್ಲಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ರೋಗ ಮುನ್ಸೂಚನೆ ಮತ್ತು ವಿಶ್ಲೇಷಣೆಗಾಗಿ ಭಾರತ ನಿರ್ದಿಷ್ಟವಾದ .. ಆಧಾರಿತ ಸಾಧನಗಳನ್ನು ಆರೋಗ್ಯ ವಲಯದಲ್ಲಿ ರೂಪಿಸುವ ಮತ್ತು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಪರಿಶೋಧಿಸುವಂತೆ ಅವರು ತಿಳಿಸಿದರು. ಜನರಿಗೆ ಕೈಗೆಟಕುವಂಥ ಮತ್ತು ಅಡ್ಡಿ ಆತಂಕ ರಹಿತವಾದ ದೇಶವು ಸಮಗ್ರ, ತಾಂತ್ರಿಕ ಮತ್ತು ದತ್ತಾಂಶ ಚಾಲಿತ ಆರೋಗ್ಯ ಆರೈಕೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾಗಿದೆ ಎಂದು ಅವರು ಒತ್ತಿ ಹೇಳಿದರು. ಐಬಿಎಂ ಆರೋಗ್ಯ ಆರೈಕೆ ದೃಷ್ಟಿಕೋನವನ್ನು ಮುಂದೆವರಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ಐಬಿಎಂ ಸಿಇಓ ಪ್ರಧಾನಮಂತ್ರಿಯವರ ಆಯುಷ್ಮಾನ್ ಭಾರತ್ ದೃಷ್ಟಿಕೋನವನ್ನು ಪ್ರಶಂಸಿಸಿ, ರೋಗಗಳ ಆರಂಭಿಕ ಪತ್ತೆಗೆ ತಂತ್ರಜ್ಞಾನದ ಬಳಕೆಯ ಕುರಿತಂತೆ ಮಾತನಾಡಿದರು.

ದತ್ತಾಂಶ ಸುರಕ್ಷತೆ, ಸೈಬರ್ ದಾಳಿ, ಖಾಸಗಿತನದ ಕಾಳಜಿ ಮತ್ತು ಯೋಗದಿಂದ ಆರೋಗ್ಯದ ಮೇಲಿನ ಪ್ರಯೋಜನಗಳ ಚರ್ಚಿತವಾದ ಇತರ ಕ್ಷೇತ್ರಗಳ ವಿಷಯಗಳಾಗಿದ್ದವು.

***



(Release ID: 1640218) Visitor Counter : 252