ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್-19: ಸಿಪೆಟ್ ಗೆ ಪಿಪಿಇ ಕಿಟ್ ಪರೀಕ್ಷೆ , ಪ್ರಮಾಣೀಕರಣಕ್ಕೆ ಎನ್ಎಬಿಎಲ್ ನಿಂದ ಮಾನ್ಯತೆ

Posted On: 19 JUL 2020 3:10PM by PIB Bengaluru

ಕೋವಿಡ್-19: ಸಿಪೆಟ್ ಗೆ ಪಿಪಿಇ ಕಿಟ್ ಪರೀಕ್ಷೆ , ಪ್ರಮಾಣೀಕರಣಕ್ಕೆ ಎನ್ಎಬಿಎಲ್ ನಿಂದ ಮಾನ್ಯತೆ

ಸಿಪೆಟ್ ಸಾಧನೆಗೆ ಆತ್ಮನಿರ್ಭರ ಭಾರತದ ಮಹತ್ವದ ಹೆಜ್ಜೆ: ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಪ್ರಸಂಶೆ

 

ಕೇಂದ್ರ ರಾಸಾಯನಿಕ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ಗೆ ಪಿಪಿಇ ಕಿಟ್ ಮತ್ತು ಪ್ರಮಾಣೀಕರಣಕ್ಕೆ ರಾಷ್ಟ್ರೀಯ ಪರೀಕ್ಷಾ ಮತ್ತು ಪ್ರಮಾಣೀಕರಣ ಮಂಡಳಿ(ಎನ್ಎಬಿಎಲ್)ನಿಂದ ಮಾನ್ಯತೆ ದೊರೆತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ ನಿರ್ಮಾಣದ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಸಾಧನೆಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಪ್ರಶಂಸಿದ್ದಾರೆ.

ಪಿಪಿಇ ಕಿಟ್ ನಲ್ಲಿ ಗ್ಲೌಸ್, ಸಂಪೂರ್ಣ ದೇಹ ರಕ್ಷಾಕವಚ, ಮುಖ ರಕ್ಷಾಕವಚ ಮತ್ತು ಕನ್ನಡಕ ಹಾಗೂ ಮೂರು ಪದರದ ಮಾಸ್ಕ್ ಮತ್ತಿತರ ಸಾಧನಗಳು ಸೇರಿದ್ದು, ಇವುಗಳನ್ನು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಿಪೆಟ್ ಮತ್ತೊಂದು ಸಾಧನೆಯಾಗಿದೆ ಹಾಗೂ ಆತ್ಮನಿರ್ಭರ ಭಾರತನಿರ್ಮಾಣ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಿಪೆಟ್ ಭುವನೇಶ್ವರದ ಐಪಿಟಿ ಕೇಂದ್ರ, ಪಿಪಿಇ ಕಿಟ್ ಪರೀಕ್ಷಾ ಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದು, ಅದು ಎನ್ಎಬಿಎಲ್ ಗೆ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿತ್ತು. ಎನ್ಎಬಿಎಲ್ ಆನ್ ಲೈನ್ ಮೂಲಕ ಪರೀಕ್ಷಾ ಸೌಕರ್ಯದ ಆಡಿಟ್ ಮಾಡಿ, ಮಾನ್ಯತೆಯನ್ನು ಅನುಮೋದಿಸಿದೆ. ಇನ್ನೂ ಕೆಲವು ಸಿಪೆಟ್ ಘಟಕಗಳು ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಸಚಿವ ಸದಾನಂದ ಗೌಡರು ಹೇಳಿದರು.

ಭುವನೇಶ್ವರದ ಸಿಪೆಟ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ, ಸಾಧನೆಯಿಂದಾಗಿ ದೇಶದ ಎಲ್ಲ ಜನರಿಗೂ ಅನುಕೂಲವಾಗಲಿದೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಂಎಸ್ಎಂಇಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಹಾಯಕವಾಗಲಿದೆ ಎಂದರು.

ಸಿಪೆಟ್, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಎಸ್ಒ ಮಾರ್ಗಸೂಚಿಯಂತೆ ಆರೋಗ್ಯ ರಕ್ಷಣಾ ವಲಯದಲ್ಲಿ ಹಲವು ಸಂಶೋಧನಾ ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅಲ್ಲದೆ ಸಿಪೆಟ್ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಆಹಾರ ಧಾನ್ಯ ಮತ್ತು ರಸಗೊಬ್ಬರ ಪ್ಯಾಕೇಜಿಂಗ್ ಹಾಗೂ ಇತರೆ ಅಗತ್ಯ ಸೇವೆಗಳಿಗೂ ಸಹ ವಿಸ್ತರಿಸಿ ಬೆಂಬಲ ನೀಡಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

***


(Release ID: 1639805) Visitor Counter : 262