PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 17 JUL 2020 6:24PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image005KVAA.jpg

https://static.pib.gov.in/WriteReadData/userfiles/image/image006WV5Z.jpg

ಕೋವಿಡ್ -19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ಡೇಟ್:

ದೇಶದಲ್ಲಿ ಕೋವಿಡ್ -19 ರೋಗಿಗಳ ವಾಸ್ತವದ ಹೊರೆ ಬರೇ 3.42 ಲಕ್ಷ ಮಾತ್ರ; ಗುಣಮುಖರಾದ ಪ್ರಕರಣಗಳ ಸಂಖ್ಯೆ 6.35 ಲಕ್ಷ ಮತ್ತು ಅದು ಹೆಚ್ಚುತ್ತಿದೆ

ದೇಶದಲ್ಲಿ ಇಂದಿನವರೆಗೆ ವಾಸ್ತವದ ಸಕ್ರಿಯ ಪ್ರಕರಣಗಳ ಹೊರೆ ಬರೇ 3,42,756 ಮಾತ್ರ. ಒಟ್ಟು ಪ್ರಕರಣಗಳಲ್ಲಿ 6.35 ಲಕ್ಷಕ್ಕೂ ಅಧಿಕ ( 63.33 % ) ಪ್ರಕರಣಗಳು ಗುಣಮುಖವಾದ ಪ್ರಕರಣಗಳಾಗಿವೆ. 1.35 ಬಿಲಿಯನ್ ಜನಸಂಖ್ಯೆಯೊಂದಿಗೆ  ಭಾರತವು ವಿಶ್ವದಲ್ಲಿಯೇ ಎರಡನೇ ಅತ್ಯಂತ ಜನಸಂಖ್ಯಾ ಬಾಹುಳ್ಯದ ದೇಶವಾಗಿದ್ದರೂ ಜಾಗತಿಕವಾಗಿ ಕೆಲವು ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಿಲಿಯನ್ ಜನಸಂಖ್ಯೆಗೆ ಪ್ರಕರಣಗಳ ಸಂಖ್ಯೆ 4 ರಿಂದ 8 ಪಟ್ಟು  ಕಡಿಮೆ.ದೇಶದಲ್ಲಿ ಪ್ರಕರಣಗಳಲ್ಲಿ ಮೃತಪಟ್ಟವರ ಸಂಖ್ಯೆ ಮಿಲಿಯನ್ ಜನಸಂಖ್ಯೆಗೆ ಹೋಲಿಸಿದಾಗ 18.6 ಇದ್ದು , ವಿಶ್ವದಲ್ಲಿಯೇ ಅತ್ಯಂತ ಕಡಿಮೆಯಾದುದಾಗಿದೆ. ಸಮರ್ಪಕ ಮತ್ತು ದಕ್ಷ ಕ್ಲಿನಿಕಲ್ ನಿರ್ವಹಣಾ ತಂತ್ರಗಳು ಧನಾತ್ಮಕ ಫಲ ನೀಡಲು ಆರಂಭಿಸಿವೆ. ಸುಮಾರು 80 % ನಷ್ಟು ರೋಗಲಕ್ಷಣ ಇಲ್ಲದ ಮತ್ತು ಸೌಮ್ಯ ಪ್ರಕರಣಗಳಲ್ಲಿವೈದ್ಯಕೀಯ ಮೇಲುಸ್ತುವಾರಿಯಲ್ಲಿ ಗೃಹ ಕ್ವಾರಂಟೈನ್ ಸಲಹೆ ಮಾಡಲಾಗುತ್ತಿದೆ. ಮಧ್ಯಮ ಮತ್ತು ಗಂಭೀರ ಪ್ರಕರಣಗಳನ್ನು ಒಂದೋ ಕೋವಿಡ್ ಗಾಗಿಯೇ ಇರುವ ಆಸ್ಪತ್ರೆಗಳಲ್ಲಿ ಅಥವಾ ಕೋವಿಡ್ ಗಾಗಿಯೇ ಇರುವ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲುವೈದ್ಯಕೀಯ ಮೂಲಸೌಕರ್ಯವನ್ನು ಸತತ ಒಗ್ಗೂಡಿಸಲಾಗುತ್ತಿದೆ. ಇಂತಹ ಪ್ರಯತ್ನಗಳಿಂದಾಗಿಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಕೋವಿಡ್ ಗಾಗಿಯೇ ಇರುವ ಆಸ್ಪತ್ರೆಗಳ ಮೂಲಸೌಕರ್ಯ ಇಂದು ಬಲಿಷ್ಟವಾಗಿದೆ. ದೇಶದಲ್ಲಿ ಈಗ,  1383 ಕೋವಿಡ್ ಆಸ್ಪತ್ರೆಗಳು, 3107 ಕೋವಿಡ್ ಆರೋಗ್ಯ ರಕ್ಷಣಾ ಕೇಂದ್ರಗಳು ಮತ್ತು 10,382 ಕೋವಿಡ್ ಶುಶ್ರೂಷಾ ಕೇಂದ್ರಗಳು ಇವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಬಾರಿಯ ಖಾರೀಫ್ ಬೆಳೆಗಳ ಬಿತ್ತನೆ ಪ್ರದೇಶ ವ್ಯಾಪ್ತಿ 21.2 % ಹೆಚ್ಚಾಗಿದೆ

ದಿನಾಂಕ 17.07.2020 ರವರೆಗೆ ಒಟ್ಟು ಖಾರಿಫ್ ಬೆಳೆಗಳ ಬಿತ್ತನೆ ಪ್ರದೇಶ 691.86 ಲಕ್ಷ ಹೆಕ್ಟೇರ್ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 570.86 ಲಕ್ಷ ಹೆಕ್ಟೇರ್ ನಷ್ಟಿತ್ತು. ಇದರಿಂದಾಗಿ ದೇಶದಲ್ಲಿ ಬಿತ್ತನೆ ಪ್ರದೇಶದಲ್ಲಿ  ಕಳೆದ ವರ್ಷಕ್ಕೆ ಹೋಲಿಸಿದರೆ 21.20% ಹೆಚ್ಚಳವಾಗಿದೆ.ಇಲ್ಲಿ ಖಾರಿಫ್ ಬೆಳೆಗಳ ಪ್ರದೇಶ ವ್ಯಾಪ್ತಿಯ ಬೆಳವಣಿಗೆಯ ಮೇಲೆ ಕೋವಿಡ್ -19 ಯಾವುದೇ ರೀತಿಯ ಪರಿಣಾಮ ಬೀರಿಲ್ಲ.

ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆ, ಉತ್ಪಾದನೆ, ಪೂರೈಕೆ ಮತು ದಾಸ್ತಾನು ಸೌಲಭ್ಯ ಸಾಕಷ್ಟು ಪ್ರಮಾಣದಲ್ಲಿದೆ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಇಂದು ವೈದ್ಯಕೀಯ ಆಮ್ಲಜನಕ ಪೂರೈಕೆ ಮತ್ತು ದೇಶದಲ್ಲಿ ದಾಸ್ತಾನು ಸಾಮರ್ಥ್ಯ ಹೆಚ್ಚಳ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದರು. ಇದುವರೆಗೆ ವೈದ್ಯಕೀಯ ಆಮ್ಲಜನಕ ಉತ್ಪಾದನೆ, ದಾಸ್ತಾನು, ಸಾರಿಗೆ, ಮತ್ತು ಪೂರೈಕೆಯಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳು ವರದಿಯಾಗಿಲ್ಲ. 2020 ಏಪ್ರಿಲ್ ತಿಂಗಳಲ್ಲಿ ವೈದ್ಯಕೀಯ ಆಮ್ಲಜನಕದ ಬಳಕೆ ದಿನವೊಂದಕ್ಕೆ 902 ಎಂ.ಟಿ. ಯಷ್ಟಿತ್ತು. ಜುಲೈ 15 ವೇಳೆಗೆ ಅದು ದಿನವೊಂದಕ್ಕೆ 1512 ಎಂ.ಟಿ. ಯಷ್ಟಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಸಾಕಷ್ಟು   ಅಂದರೆ 15 ಸಾವಿರ ಎಂ.ಟಿ. ಗೂ ಅಧಿಕ ಪ್ರಮಾಣದಲ್ಲಿ ದಾಸ್ತಾನು ಇದೆ. ವೈದ್ಯಕೀಯ ಆಮ್ಲಜನಕದ ಈಗಿನ ಉತ್ಪಾದನೆಯ ಒಟ್ಟಾರೆ ಪರಿಸ್ಥಿತಿ ಮತ್ತು ಪೂರೈಕೆ  ಪರಿಸ್ಥಿತಿ ತಿಂಗಳಾಂತ್ಯದಲ್ಲಿ ಒದಗಿ ಬರಬಹುದಾದ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಸಾಕಾಗಬಹುದು ಮತ್ತು ಎಲ್ಲಾ ರಾಜ್ಯಗಳೂ ನಿಟ್ಟಿನಲ್ಲಿ ಕೊಂಚ ನಿರಾಳ ಸ್ಥಿತಿಯಲ್ಲಿವೆ ಎಂಬುದನ್ನೂ ಗಮನಿಸಲಾಯಿತು. ಸಕ್ರಿಯ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ, ಮಹಾನಗರಗಳಲ್ಲಿ, ಮತ್ತು ಜಿಲ್ಲೆಗಳಲ್ಲಿ ಪೂರೈಕೆ ಮತ್ತು ದಾಸ್ತಾನು ಸಾಕಷ್ಟಿದೆ. ಅದೇ ರೀತಿ ವೈದ್ಯಕೀಯ ಆಮ್ಲಜನಕ ದೂರದ ಪ್ರದೇಶಗಳಿಗೂ ಲಭ್ಯವಾಗುವಂತೆ ಮಾಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ.

ಕೋವಿಡ್ -19 ವಿರುದ್ದ ಹೋರಾಟದಲ್ಲಿ ಬ್ಯಾಗೇಜ್ ಸ್ಕ್ಯಾನ್ ಕ್ರಿಮಿನಾಶಕಗೊಳಿಸುವುದಕ್ಕಾಗಿ  .ಆರ್.ಸಿ. ಮತ್ತು ವೆಹಾಂಟ್ ಟೆಕ್ನಾಲಜೀಸ್ ಗಳಿಂದ ಜಂಟಿಯಾಗಿ ಯು.ವಿ. ವ್ಯವಸ್ಥೆಯ ಅಭಿವೃದ್ದಿ

ದೇಶೀಯ ಮತ್ತು ಅಂತಾರಾಷ್ತ್ರೀಯ ಪ್ರಯಾಣ ಕೋವಿಡ್ -19 ಸೋಂಕು ಹರಡುವಿಕೆಗೆ ಪ್ರಮುಖ ಕಾರಣವಾಗಿದೆ. ಬ್ಯಾಗೇಜುಗಳ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿ.ಎಸ್.ಟಿ.)  ಸ್ವಾಯತ್ತ ಸಂಶೋಧನಾ ಮತ್ತು ಅಭಿವೃದ್ದಿ  ಕೇಂದ್ರವಾಗಿರುವ ಹೈದರಾಬಾದಿನಲ್ಲಿರುವ ಪೌಡರ್ ಲೋಹವಿಜ್ಞಾನ  ಮತ್ತು ಹೊಸ ಲೋಹಗಳಿಗಾಗಿರುವ ಅಂತಾರಾಷ್ಟ್ರೀಯ ಆಧುನಿಕ ಸಂಶೋಧನಾ ಕೇಂದ್ರ (.ಆರ್.ಸಿ..) ಮತ್ತು ನೊಯ್ಡಾದಲ್ಲಿರುವ ವೆಹಾಂಟ್ ಟೆಕ್ನಾಲಜೀಸ್ ಗಳು ಜಂಟಿಯಾಗಿ ಕ್ರಿಟಿಸ್ಕ್ಯಾನ್ ಅಲ್ಟಾವೊಯ್ಲೆಟ್ ಬ್ಯಾಗೇಜ್ ಕ್ರಿಮಿನಾಶಕ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿವೆ. ಅಭಿವೃದ್ದಿಪಡಿಸಲಾದ ಸಮಗ್ರ ಯು.ವಿ.ಸಿ. ಕನ್ವೇಯರ್ ವ್ಯವಸ್ಥೆ ಕನ್ವೇಯರ್ ಮೂಲಕ ಹಾದು ಹೋಗುವ ಬ್ಯಾಗೇಜ್ ಗಳನ್ನು ಕೆಲವೇ ಸೆಕೆಂಡುಗಳಲ್ಲಿ ಸಮರ್ಪಕವಾಗಿ ಕ್ರಿಮಿನಾಶಕಗೊಳಿಸುತ್ತದೆ. ಮತ್ತು ಇದು ವಿಮಾನ ನಿಲ್ದಾಣಗಳು , ರೈಲ್ವೇಗಳು  ಮತ್ತು ಬಸ್ ನಿಲ್ದಾಣಗಳು, ಹೊಟೇಲುಗಳು, ವಾಣಿಜ್ಯಿಕ ಮತ್ತು ಖಾಸಗಿ ವ್ಯವಸ್ಥೆಗಳಲ್ಲಿ ಬ್ಯಾಗೇಜುಗಳನ್ನು  ತ್ವರಿತವಾಗಿ  ಕ್ರಿಮಿನಾಶಕಯುಕ್ತವನ್ನಾಗಿಸುವುದಕ್ಕೆ ಸೂಕ್ತವಾದ ವ್ಯವಸ್ಥೆಯಾಗಬಲ್ಲದು. ಯು.ವಿ.ಸಿ. ಆಧಾರಿತ ಕ್ರಿಮಿನಾಶಕ ವ್ಯವಸ್ಥೆಗಳು ತ್ವರಿತವಾಗಿ ಕ್ರಿಮಿನಾಶ ಮಾಡುವ ಸಾಮರ್ಥ್ಯಕ್ಕೆ ಹೆಸರಾಗಿವೆ ಮತ್ತು ಇದು ರಾಸಾಯನಿಕ ಮುಕ್ತ ಹಾಗು ಒಣ ಕ್ರಿಮಿನಾಶಕ ಪ್ರಕ್ರಿಯೆಯಾಗಿದೆ.

ಬಿಹಾರ ವಿಧಾನ ಸಭಾ ಚುನಾವಣೆಗಳಲ್ಲಿ ಮತ್ತು ಸದ್ಯೋಭವಿಷ್ಯದಲ್ಲಿ ನಡೆಯುವ ಉಪಚುನಾವಣೆಗಳಲ್ಲಿ ಸಾಗಾಣಿಕೆ, ಮಾನವ ಸಂಪನ್ಮೂಲ ಮತ್ತು ಕೋವಿಡ್ -19 ಸುರಕ್ಷಾ ಶಿಷ್ಟಾಚಾರಗಳ ನಿರ್ಬಂಧಗಳು ಮತ್ತು ಮಿತಿಗಳ ಹಿನ್ನೆಲೆಯಲ್ಲಿ 65 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯ ಮತದಾರರಿಗೆ ಅಂಚೆ ಮತಪತ್ರಗಳ ಸೌಲಭ್ಯವನ್ನು ಒದಗಿಸದಿರಲು .ಸಿ.. ನಿರ್ಧಾರ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಮಾರ್ಗದರ್ಶಿಗಳ ಕಾರಣಕ್ಕೆ ಚುನಾವಣಾ ಆಯೋಗವು 65 ವರ್ಷಕ್ಕಿಂತ ಮೇಲಿನ ಮತದಾರರಿಗೆ ಅಂಚೆ ಮತ ಸೌಲಭ್ಯಗಳ ಆಯ್ಕೆಯನ್ನು ವಿಸ್ತರಿಸುವಂತೆ ಶಿಫಾರಸು ಮಾಡಿತ್ತು. ಮತಗಟ್ಟೆಗಳಲ್ಲಿ ಅವರು ಸಂಭಾವ್ಯ ಅಪಾಯಕ್ಕೀಡಾಗುವುದನ್ನು ತಪ್ಪಿಸಲು ಮತ್ತು ಕೋವಿಡ್ ಪಾಸಿಟಿವ್ ಮತದಾರರಿಗೆ ಹಾಗು ಕ್ವಾರಂಟೈನ್ ನಲ್ಲಿರುವ ಮತದಾರರಿಗೆ ಅವರ ಮತದಾನದ ಹಕ್ಕನ್ನು ನಿರಾಕರಿಸಿದಂತೆ ಆಗದೇ ಇರುವುದಕ್ಕಾಗಿ ಅವರಿಗೂ ಅಂಚೆ ಮತದಾನ ಸೌಲಭ್ಯವನ್ನು ಒದಗಿಸಲು ಅದು ಶಿಫಾರಸು ಮಾಡಿತ್ತು. ಆಯೋಗವು ಈಗಿರುವ ಅಭೂತಪೂರ್ವ ಸ್ಥಿತಿಯಲ್ಲಿ ಬರಲಿರುವ ಉಪ ಚುನಾವಣೆಗಳ ಮತ್ತು ಬಿಹಾರದ ವಿಧಾನ ಸಭಾ ಚುನಾವಣೆಗಳ ಸಿದ್ದತೆಗಳನ್ನು ನಿಕಟವಾಗಿ ಮೇಲುಸ್ತುವಾರಿ ಮಾಡುತ್ತಿದೆ. ಆಯೋಗವು ಈಗಾಗಲೇ ಹಿರಿಯರು ಮತ್ತು ಅಪಾಯಕ್ಕೀಡಾಗುವ ಸಂಭಾವ್ಯತೆ ಇರುವವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ  ಪ್ರತೀ ಮತಗಟ್ಟೆಗೂ ಮತದಾರರ ಸಂಖ್ಯೆಯನ್ನು 1000 ಕ್ಕೆ ಸೀಮಿತಗೊಳಿಸಿದೆ. ಹಿನ್ನೆಲೆಯಲ್ಲಿ ರಾಜ್ಯವು 34,000 ಹೆಚ್ಚುವರಿ (ಅಂದಾಜು) ಮತಗಟ್ಟೆಗಳನ್ನು (45 % ಅಧಿಕ ) ಸ್ಥಾಪಿಸುತ್ತಿದೆ. ಇದರಿಂದ ಒಟ್ಟು ಮತಗಟ್ಟೆಗಳ ಸಂಖ್ಯೆ 1,06,000 ಕ್ಕೇರಲಿದೆ. ಇದು 1.8 ಲಕ್ಷ ಅಧಿಕ ಸಿಬ್ಬಂದಿಯನ್ನು ಒಗ್ಗೂಡಿಸುವುದೂ ಸೇರಿದಂತೆ ಇನ್ನಷ್ಟು ವಾಹನಗಳು ಸಹಿತ ಇತರ ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಢೀಕರಿಸುವಂತಹ ಸವಾಲುಗಳನ್ನು ಉಂಟು ಮಾಡಲಿದೆ. ಇದೇ ರೀತಿಯ ಸವಾಲುಗಳು ಬರಲಿರುವ ಉಪಚುನಾವಣೆಗಳಲ್ಲಿಯೂ ಎದುರಾಗಲಿವೆ. ಎಲ್ಲಾ ವಿಷಯಗಳನ್ನು, ಸವಾಲುಗಳನ್ನು ಮತ್ತು ಅಡ್ಡಿ ಆತಂಕಗಳನ್ನು , ಮಿತಿಗಳನ್ನು  ಪರಿಗಣನೆಗೆ ತೆಗೆದುಕೊಂಡು , ಪ್ರತೀ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು 1000 ಕ್ಕೆ ಮಿತಿಗೊಳಿಸಿರುವುದರ ಕಾರಣದಿಂದ , ಆಯೋಗವು 65 ವರ್ಷಕ್ಕಿಂತ ಹಿರಿಯ ಮತದಾರರಿಗೆ ಬರಲಿರುವ ಬಿಹಾರ ವಿಧಾನ ಸಭಾ ಚುನಾವಣೆಗಳಲ್ಲಿ ಮತ್ತು ಸದ್ಯೋಭವಿಷ್ಯದಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಅಂಚೆ ಮತದಾನ ಸೌಲಭ್ಯ ವಿಸ್ತರಿಸುವ ಅಧಿಸೂಚನೆ ಹೊರಡಿಸದಿರಲು  ನಿರ್ಧರಿಸಿದೆ.  

ಜಾಗತಿಕ ಸಾಂಕ್ರಾಮಿಕ ವಿರುದ್ದ ಹೋರಾಡಲು ರಾಷ್ಟ್ರಕ್ಕೆ ಸರಕಾರ ಸಹಾಯ ಮಾಡುತ್ತಿದೆ; ಪ್ಲಾಸ್ಟಿಕ್ ಕೈಗಾರಿಕೆಯನ್ನು ರಕ್ಷಿಸಲು ಏನೆಲ್ಲಾ ಸಾಧ್ಯವೋ ಅದನ್ನು ಮಾಡಲಾಗುತ್ತದೆ: ಮಾಂಡವೀಯ

ಸರಕಾರವು ಕಾನೂನಿನ ಮಿತಿಯೊಳಗೆ ಪ್ಲಾಸ್ಟಿಕ್ ಕೈಗಾರಿಕೆಯನ್ನು ಕೋವಿಡ್ -19 ಪರಿಣಾಮದಿಂದ ರಕ್ಷಿಸಲು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತದೆ ಎಂದು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆಯ ಸಹಾಯಕ ಸಚಿವರಾದ ಶ್ರೀ ಮನ್ ಸುಖ್ ಮಾಂಡವೀಯ ಹೇಳಿದ್ದಾರೆ. ಅವರು ನಿನ್ನೆ ವೆಬಿನಾರ್ ಉದ್ದೇಶಿಸಿ ಮಾತನಾಡುತ್ತಿದ್ದರು. ಭಾರತೀಯ ಪ್ಲಾಸ್ಟಿಕ್ ಕೈಗಾರಿಕೆ ಪರಿಸರ ಸುಸ್ಥಿರವಾಗಲು, ಅನ್ವೇಷಣಾಯುಕ್ತವಾಗಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಲು ನಾವು ಮುಂದಿರುವ ಸವಾಲುಗಳನ್ನು ವ್ಯಾಖ್ಯಾನಿಸಿಕೊಂಡು ಅವುಗಳನ್ನು ಪರಿಗಣಿಸಬೇಕು . ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯು.ಎಚ್..) ಕೋವಿಡ್ ಪ್ರತಿಕ್ರಿಯೆಗಾಗಿ ಪ್ರತೀ ತಿಂಗಳೂ ಜಾಗತಿಕ ಸಾಂಕ್ರಾಮಿಕ ಕೊನೆಗೊಳ್ಳುವವರೆಗೆ 89 ಮಿಲಿಯನ್ ವೈದ್ಯಕೀಯ ಮುಖಗವಸುಗಳು, 76 ಮಿಲಿಯನ್ ಪರೀಕ್ಷಾ ಗ್ಲೋವ್ ಗಳು ಮತ್ತು 1.6 ಮಿಲಿಯನ್ ಗಾಗ್ಲ್ ಗಳು ಬೇಕಾಗುತ್ತವೆ ಎಂದು ಅಂದಾಜಿಸಿದೆ. ಇದು ಭಾರತವನ್ನು ಕೊರೊನಾವೈರಸ್ ಮುಕ್ತಗೊಳಿಸಲು ಕೈಗಾರಿಕೆಯು ಸವಾಲುಗಳನ್ನು ಎದುರಿಸಿ ಎದ್ದು ನಿಲ್ಲಬೇಕಾದ ಅವಶ್ಯಕತೆಯನ್ನು ಸೂಚಿಸುತ್ತದೆ ಎಂದೂ ಶ್ರೀ ಮಾಂಡವೀಯ ಹೇಳಿದರು. ನಾವು ಆಂತರಿಕ ಮಾರುಕಟ್ಟೆಯನ್ನು ಅಡೆ ತಡೆಗಳನ್ನು ಹಾಕುವ ಮೂಲಕ ವಿಭಜಿಸಲು ಇಚ್ಚಿಸುವುದಿಲ್ಲ ಅಥವಾ ಸ್ಪರ್ಧಾತ್ಮಕ ಅಸಮತೋಲನ ಉಂಟು ಮಾಡುವುದನ್ನೂ ಇಚ್ಚಿಸುವುದಿಲ್ಲ, ಆದರೆ ಒಂದು  ದೇಶ ಮತ್ತು ಶಕ್ತಿಯಾಗಿ ಒಗ್ಗೂಡುವುದನ್ನು ಆಶಿಸುತ್ತೇವೆ ಎಂದವರು ಹೇಳಿದರು.

ಕೋವಿಡ್ -19 ಲಸಿಕೆ , ಚಿಕಿತ್ಸಾ ವಿಧಾನ ಮತ್ತು ರೋಗಪತ್ತೆ ವಿಧಾನಗಳ ಅಭಿವೃದ್ದಿ ನಿಟ್ಟಿನ ಪ್ರಯತ್ನಗಳ ವೇಗ ಹೆಚ್ಚಿಸಿದ  ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಅದರ ಸಂಶೋಧನಾ ಸಂಸ್ಥೆಗಳು

ಜೈವಿಕತಂತ್ರಜ್ಞಾನ ಇಲಾಖೆ ಮತ್ತು ಅದರ 16 ಸಂಶೋಧನಾ ಸಂಸ್ಥೆಗಳು ಕೋವಿಡ್ -19 ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಅವಿರತವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು  ಸಮರ್ಥ ಕೋವಿಡ್ -19 ಪರಿಹಾರಗಳನ್ನು ಒದಗಿಸಲು ಬಹುಆಯಾಮದಲ್ಲಿ ಕಾರ್ಯನಿರತವಾಗಿವೆಡಿ.ಬಿ.ಟಿ. .. ಗಳು (ಸ್ವಾಯತ್ತ ಸಂಸ್ಥೆಗಳು) ಸ್ವಾವಲಂಬನೆ ಸಾಧಿಸಲು ದೇಶೀಯ ರೋಗ ಪತ್ತೆ ಪರೀಕ್ಷೆಗಳ ಅಭಿವೃದ್ದಿಗೆ ತೊಡಗಿವೆ. ಕಡಿಮೆ ವೆಚ್ಚದ ಕ್ಲೋರಿಮೆಟ್ರಿಕ್ ಪಿ.ಸಿ.ಆರ್. ಆಧಾರಿತ ತಂತ್ರಜ್ಞಾನ ಮತ್ತು ಸಾರ್ಸ್-ಕೋವ್ -2 ಆಂಟಿಜೆನ್ ಪತ್ತೆ ತಂತ್ರಜ್ಞಾನಗಳನ್ನು ಡಿ.ಬಿ.ಟಿ-ಟಿ.ಎಚ್.ಎಸ್.ಟಿ.. ಗಳು ಅಭಿವೃದ್ದಿಪಡಿಸಿ ಜೆನೈ ಮತ್ತು ಮೋಲ್ಬಯೋ ಡಯಾಗ್ನಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಗಳಿಗೆ ವರ್ಗಾಯಿಸಿವೆ. .ಜಿ.ಜಿ.-ಎಲಿಸಾ ತಂತ್ರಜ್ಞಾನವನ್ನು ಕೂಡಾ ಡಿ.ಬಿ.ಟಿ-ಟಿ.ಎಚ್.ಎಸ್.ಟಿ.. ಗಳಿಂದ ಎಕ್ಸ್ ಸೈಟಾನ್ ಡಯಾಗ್ನಾಸ್ಟಿಕ್ ಲಿಮಿಟೆಡ್ ಗೆ ವರ್ಗಾಯಿಸಲಾಗಿದೆ. ಡಿ.ಬಿ.ಟಿ-ಆರ್.ಜಿ.ಸಿ.ಬಿ. ಯು ಹೊಸದಿಲ್ಲಿಯ ಪಿ..ಸಿ.ಟಿ. ಸರ್ವಿಸಸ್ ಜೊತೆಗೆ ಕಡಿಮೆ ವೆಚ್ಚದ ವೈರಲ್ ವರ್ಗಾವಣೆ ಮಾಧ್ಯಮವನ್ನು ಮತ್ತು ಆರ್.ಎನ್.. ಹೀರುವ ಕಿಟ್ ಅಭಿವೃದ್ದಿ ಮಾಡಿದ್ದು, ಅದು ವಾಣಿಜ್ಯಿಕ ಬಳಕೆಗೆ ಸಿದ್ದವಾಗಿದೆ. ಜೈವಿಕಸ್ಪೆಸಿಮನ್ ಗಳ ಹಂಚಿಕೊಳ್ಳುವಿಕೆಯಿಂದಾಗಿ ಕಿಟ್ ಗಳ ಅಭಿವೃದ್ದಿ, ಚಿಕಿತ್ಸಾ ವಿಧಾನ ಮತ್ತು ಲಸಿಕೆಗಳ ಅಭಿವೃದ್ದಿಗಳಿಗೆ ಅನ್ವಯಿಸಿ ಕೋವಿಡ್ -19 ಸಂಬಂಧಿತ ಸಂಶೋಧನೆಗೆ ವೇಗ ದೊರೆತಿದೆ. ಡಿ.ಬಿ.ಟಿ-ಟಿ.ಎಚ್.ಎಸ್.ಟಿ.. ಯು ಕೈಗಾರಿಕೆಗಳು, ನವೋದ್ಯಮಗಳು ಮತ್ತು ಶೈಕ್ಷಣಿಕ ವಲಯಕ್ಕೆ 2500 ಕ್ಕೂ ಅಧಿಕ ಸ್ಯಾಂಪಲ್ ಗಳನ್ನು ವಿತರಿಸಿದೆ.

ಹಣಕಾಸು ಸಚಿವಾಲಯದಿಂದ 28 ರಾಜ್ಯಗಳ 2.63 ಲಕ್ಷ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ 15187.50 ಕೋ.ರೂ. ಅನುದಾನ, 2020 ಜುಲೈ 15 ರಂದು ಬಿಡುಗಡೆ

ಪಂಚಾಯತ್ ರಾಜ್ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ  ಇಲಾಖೆ ಮತ್ತು ಜಲ ಶಕ್ತಿ ಸಚಿವಾಲಯಗಳ ಶಿಫಾರಸುಗಳ ಮೇರೆಗೆ ದೇಶದ 28 ರಾಜ್ಯಗಳಲ್ಲಿ ಹರಡಿರುವ 2.63 ಲಕ್ಷ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ 15187.50 ಕೋ.ರೂ. ಅನುದಾನವನ್ನು ಹಣಕಾಸು ಸಚಿವಾಲಯವು 2020 ಜುಲೈ 15 ರಂದು ಬಿಡುಗಡೆ ಮಾಡಿದೆ. ಅನುದಾನವು ಹದಿನೈದನೇ ಹಣಕಾಸು ಆಯೋಗವು ಹಣಕಾಸು ವರ್ಷ 2020-21 ಅವಧಿಗೆ ಶಿಫಾರಸು ಮಾಡಿದ ಅನುದಾನದ ಭಾಗವಾಗಿದೆ ಮತ್ತು ಇದನ್ನು ಆರ್.ಎಲ್.ಬಿ. ಗಳು ರಾಷ್ಟ್ರೀಯ ಆದ್ಯತೆಗಳಾಗಿರುವ ಕುಡಿಯುವ ನೀರು, ಮಳೆ ನೀರು ಕೊಯಿಲು, ನೀರು ಮರು ಬಳಕೆ, ನೈರ್ಮಲ್ಯೀಕರಣ ಮತ್ತು .ಡಿ.ಎಫ್. ಸ್ಥಾನ ಮಾನಗಳನ್ನು ನಿರ್ವಹಿಸುವುದೂ ಸಹಿತ ಸಂಬಂಧಿತ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಬಳಸಬಹುದು ಮಾಹಿತಿಗಳನ್ನು ಒದಗಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ , ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಆರ್.ಎಲ್.ಬಿ.ಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸವಾಲುಗಳನ್ನು ಎದುರಿಸಲು ಹೋರಾಡುತ್ತಿರುವ ಸೂಕ್ತ ಸಮಯದಲ್ಲಿ  ಹಣಕಾಸು ನಿಧಿಯ ಬಿಡುಗಡೆ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಆರ್.ಎಲ್.ಬಿಗಳಿಗೆ ಹಣಕಾಸು ಲಭ್ಯತೆಯು ಗ್ರಾಮೀಣರಿಗೆ ಮೂಲ ಸೇವೆಗಳನ್ನು ಒದಗಿಸುವಲ್ಲಿ ಅವುಗಳ ದಕ್ಷತೆಗೆ ಉತ್ತೇಜನ ನೀಡಲಿವೆ ಮತ್ತು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ತಮ್ಮ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಆದಾಯ ತರುವ ಉದ್ಯೋಗಗಳನ್ನು ಒದಗಿಸಲು ಶಕ್ತರನ್ನಾಗಿಸಲಿವೆ ಜೊತೆಗೆ ಗ್ರಾಮೀಣ ಮೂಲಸೌಕರ್ಯವನ್ನು ರಚನಾತ್ಮಕ ಮಾದರಿಯಲ್ಲಿ ಒಗ್ಗೂಡಿಸಲು ನೆರವಾಗಲಿದೆ ಎಂದೂ ಅವರು ಹೇಳಿದರು.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ 92 ನೇ ಸ್ಥಾಪನಾ ದಿನ ಆಚರಣೆ

ಭಾರತೀಯ ಕೃಷಿ ಸಂಶೋಧನಾ ಮಂಡಳಿ (.ಸಿ..ಆರ್.) ನಿನ್ನೆ ತನ್ನ 92 ನೇ ಸ್ಥಾಪನಾ ದಿನವನ್ನು  ಆಚರಿಸಿತು. ಸಂದರ್ಭದಲ್ಲಿ ಮಾತನಾಡಿದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್  ಕಳೆದ 9 ದಶಕಗಳಿಂದ ದೇಶವು ಸಾಧಿಸಿರುವ ಕೃಷಿ ಪ್ರಗತಿಗೆ ಕೃಷಿ ವಿಜ್ಞಾನಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು. ಇಂದು ಭಾರತವು ವಿಜ್ಞಾನಿಗಳ ಸಂಶೋಧನಾ ಕೊಡುಗೆಯ ಪರಿಣಾಮವಾಗಿ ಮತ್ತು ರೈತರ ಕಠಿಣ ದುಡಿಮೆಯ ಫಲವಾಗಿ ಆಹಾರ ಧಾನ್ಯಗಳ ಹೆಚ್ಚುವರಿ ಉತ್ಪಾದನೆಯನ್ನು ಮಾಡುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿದ ಸಚಿವರು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣಕ್ಕಾಗಿ ಜಾರಿ ಮಾಡಲಾದ ಲಾಕ್ ಡೌನ್ ಅವಧಿಯಲ್ಲಿಯೂ ಕೂಡಾ ದೇಶವು ದಾಖಲೆ ಪ್ರಮಾಣದ ಬೆಳೆ ಉತ್ಪಾದನೆ ಮಾಡಲು ಶಕ್ತವಾಗಿರುವುದಕ್ಕಾಗಿ ರೈತ ಸಮುದಾಯವನ್ನು ಅಭಿನಂದಿಸಿದರು

ಕೋವಿಡ್ -19 ಕ್ಕಾಗಿರುವ ಪೂರ್ವ ರೈಲ್ವೇಯ (.ಆರ್.) ಪಾರ್ಸೆಲ್ ಎಕ್ಸ್ ಪ್ರೆಸ್ ರೈಲುಗಳ ಗಾಲಿಗಳು ವರ್ಷದ ಡಿಸೆಂಬರ್ 14 ರವರೆಗೆ ಚಲಿಸುತ್ತಿರುತ್ತವೆ

ಪೂರ್ವ ರೈಲ್ವೇಯ (.ಆರ್.) ವೇಳಾಪಟ್ಟಿ ನಿಗದಿ ಮಾಡಲಾದ ಪಾರ್ಸೆಲ್ ಎಕ್ಸ್ ಪ್ರೆಸ್ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ , ವಿವಿಧ ಹಂತಗಳಲ್ಲಿ ಬಳಕೆದಾರ ಸಾಮಗ್ರಿಗಳು, ಶೀಘ್ರವೇ ಹಾಳಾಗುವ ಸಾಮಗ್ರಿಗಳು , ವೈದ್ಯಕೀಯ ಸಲಕರಣೆಗಳು, ಔಷಧಿಗಳು ಇತ್ಯಾದಿ ಅವಶ್ಯ ಸಾಮಗ್ರಿಗಳನ್ನು ಸಾಗಾಟ ಮಾಡಲು ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ದೇಶದ ವಿವಿಧ ಮೂಲೆಗಳಿಗೆ ತ್ವರಿತ ಸಾಗಾಟವನ್ನು ಖಾತ್ರಿಪಡಿಸುವುದಕ್ಕಾಗಿ ಓಡಿಸುತ್ತಿದೆ. ಪ್ರಸ್ತುತ ಪೂರ್ವ ರೈಲ್ವೇಯಿಂದ ಆರಂಭಗೊಳ್ಳುವ ಪಾರ್ಸೆಲ್ ಎಕ್ಸ್ ಪ್ರೆಸ್ ರೈಲುಗಳಾದ ಹೌರಾ ಮತ್ತು ಗುವಾಹಟಿ, ಸೀಲ್ದಾ ಮತ್ತು ಗುವಾಹಟಿ ಮತ್ತು ಹೌರಾ-ಗುವಾಹಟಿ-ಹೌರಾ, ಸೀಲ್ದಾ-ಗುವಾಹಟಿ-ಸೀಲ್ದಾ ಮತ್ತು ಹೌರಾ-ಅಮೃತಸರ-ಹೌರಾ ಪಾರ್ಸೆಲ್ ಎಕ್ಸ್ ಪ್ರೆಸ್ ರೈಲುಗಳ ಓಡಾಟವನ್ನು  2020 ಡಿಸೆಂಬರ್ 14 ರವರೆಗೆ ವಿಸ್ತರಿಸಿ ಅವುಗಳಿಗೆ ನಿಗದಿ ಮಾಡಲಾದ ದಿನದಂದು ಓಡಿಸಲು ನಿರ್ಧರಿಸಿದೆ. ಅವಶ್ಯಕ ಸಾಮಗ್ರಿಗಳನ್ನು ತ್ವರಿತವಾಗಿ ಸಾಗಾಟ ಮಾಡಲು ಅನುಕೂಲ ಒದಗಿಸುವುದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ 

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಈಗಿನ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಲಾಭ ಬಡುಕತನ ತಡೆಯಲು ಪಂಜಾಬ್ ಸರಕಾರ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸಾ ದರಗಳನ್ನು ನಿಗದಿ ಮಾಡಿದೆ. ಡಾ. ಕೆ.ಕೆ. ತಲ್ವಾರ್ ಸಮಿತಿಯು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ನಿಗದಿ ಮಾಡಿರುವ ದರಗಳಲ್ಲಿ ಐಸೋಲೇಶನ್ ಹಾಸಿಗೆಗಳು, .ಸಿ.ಯು. ಚಿಕಿತ್ಸೆ, ಮತ್ತು ದಿನವೊಂದಕ್ಕೆ ಆಸ್ಪತ್ರೆ ದರಗಳು ಒಳಗೊಂಡಿವೆ. ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಭಾರೀ ದರ ವಿಧಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ.
  • ಹರ್ಯಾಣ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಯಲು ಮತ್ತು ದಿವ್ಯಾಂಗರ ಸುರಕ್ಷೆ ಮತ್ತು ರಕ್ಷಣೆಗೆ ಸಂಬಂಧಿಸಿ ಹರ್ಯಾಣ ಸರಕಾರ ಮಾರ್ಗದರ್ಶಿಗಳನ್ನು ಹೊರಡಿಸಿದೆ. ಖಾಯಂ ಆಧಾರದಲ್ಲಿ/ಗುತ್ತಿಗೆ ಆಧಾರದಲ್ಲಿ /ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ರಾಜ್ಯ ಸರಕಾರದ ಸಿಬ್ಬಂದಿಗಳು 50 % ಮತ್ತು ಅದಕ್ಕಿಂತ ಹೆಚ್ಚು ಪ್ರಮಾಣದ ಅಂಗವೈಕಲ್ಯ ಹೊಂದಿದ್ದರೆ ಮತ್ತು ಎರಡೂ ಕಣ್ಣುಗಳು ಕುರುಡಾಗಿದ್ದವರಿಗೆ ಅವರು ಮನೆಯಿಂದಲೇ ಕೆಲಸ ನಿರ್ವಹಿಸಬಹುದು ಎಂದು ತೀರ್ಮಾನಿಸಲಾಗಿದೆ
  • ಮಹಾರಾಷ್ಟ್ರ: ಗುರುವಾರದಂದು ಒಂದೇ ದಿನದಲ್ಲಿ 8641 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದು ಮಹಾರಾಷ್ಟ್ರದಲ್ಲಿ ಇದುವರೆಗೆ ಒಂದು ದಿನದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿಯೇ ಗರಿಷ್ಟತಮವಾದುದಾಗಿದೆ. ರಾಜದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 2,84,281 ಕ್ಕೇರಿದೆ. ಗುರುವಾರದಂದು ರಾಜ್ಯದಲ್ಲಿ 5527 ಮಂದಿ ಗುಣಮುಖರಾಗಿದ್ದಾರೆ ಮತ್ತು 266 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 1,14,648 ಸಕ್ರಿಯ ಪ್ರಕರಣಗಳ ಹೊರೆ ಇದೆ. ಇದುವರೆಗೆ ಒಟ್ಟು ಗುಣಮುಖರಾದವರು 1,58,140 ಮತ್ತು ಒಟ್ಟು ಸಾವಿನ ಸಂಖ್ಯೆ 11,194. ಬೃಹನ್ಮುಂಬಯಿ ವಲಯವು 1498 ಹೊಸ ಪ್ರಕರಣಗಳನ್ನು , 707 ಗುಣಮುಖ ಪ್ರಕರಣಗಳನ್ನು ಮತ್ತು 56 ಸಾವುಗಳನ್ನು ದಾಖಲಿಸಿದೆ. ಮುಂಬಯಿಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ 97,751. ಎಂ.ಎಂ.ಆರ್. ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 23,694. ಒಟ್ಟು ಗುಣಮುಖರಾದವರ ಸಂಖ್ಯೆ 68,537. ಮುಂಬಯಿಯಲ್ಲಿ ಮೃತರ ಸಂಖ್ಯೆ ಇದುವರೆಗೆ ಒಟ್ಟು 5520. ರಾಜ್ಯದ  ಒಟ್ಟು ಗುಣಮುಖ ದರ 55.63 % , ಮುಂಬಯಿ ಜಿಲ್ಲೆಯಲ್ಲಿ ಗುಣಮುಖದರ 70 %  
  • ಗುಜರಾತ್: ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 45,481. ಪ್ರಸ್ತುತ 11,289 ಸಕ್ರಿಯ ಪ್ರಕರಣಗಳಿವೆ. ಇಂದಿನವರೆಗೆ 32103 ರೋಗಿಗಳು ಗುಣಮುಖರಾಗಿದ್ದಾರೆ. ಗುರುವಾರದಂದು 10 ಮಂದಿ ಮೃತಪಡುವುದರೊಂದಿಗೆ , ಮೃತರ ಒಟ್ಟು ಸಂಖ್ಯೆ 2089 ಕ್ಕೇರಿದೆ. ರಾಜ್ಯದ ಹೊಸ ಹಾಟ್ ಸ್ಪಾಟ್ ಆಗಿ ಮೂಡಿಬರುತ್ತಿರುವ ಸೂರತ್ ನಗರಕ್ಕೆ  ಇಂದು ನಾಲ್ಕು ಸದಸ್ಯರ ಕೇಂದ್ರೀಯ ತಂಡವು ಭೇಟಿ ನೀಡಿತು. ಹೊಸದಿಲ್ಲಿ ...ಎಂ.ಎಸ್. ನಿರ್ದೇಶಕ ಡಾ. ರಣದೀಪ್ ಗುಲೇರಿಯಾ, ನೀತಿ ಆಯೋಗ ಸದಸ್ಯ ವಿನೋದ್ ಪೌಲ್ , .ಸಿ.ಎಂ.ಆರ್. ಮಹಾನಿರ್ದೇಶಕ ಡಾ. ಬಲರಾಂ ಭಾರ್ಗವ ಮತ್ತು ಕೇಂದ್ರ ಆರೋಗ್ಯ ಮತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್ತಿ ಅಹುಜಾ ತಂಡದಲ್ಲಿದ್ದರು. ಗುರುವಾರದಂದು ರಾತ್ರಿ ತಂಡವು ಸ್ಥಳೀಯ ಅಧಿಕಾರಿಗಳ  ಜೊತೆ ಸಭೆ ನಡೆಸಿತು.ಇಂದು ತಂಡದ ಸದಸ್ಯರು ವೈದ್ಯರು, ದಾದಿಯರು, ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಜೊತೆ ಸಿವಿಲ್ ಆಸ್ಪತ್ರೆಯಲ್ಲಿ ಸಭೆ ನಡೆಸಿತು. ಇದು ಚಿಕಿತ್ಸೆಗೆ ಸಂಬಂಧಿಸಿದಂತೆ ಆರೋಗ್ಯ ತಂಡಗಳಿಗೆ ಅವಶ್ಯ ಮಾರ್ಗದರ್ಶನ ಮಾಡಿತು. ನಗರದಲ್ಲಿ ಹೊಸ ಕೋವಿಡ್ ಹಾಟ್ ಸ್ಪಾಟ್ ಗಳಾಗಿ ಮೂಡಿ ಬಂದಿರುವ ಕತಾರ್ಗಾಂ ಮತ್ತು ವರಚಾಚ ಪ್ರದೇಶಗಳಿಗೆ ತಂಡವು ಭೇಟಿ ನೀಡಿತು. ಪರೀಕ್ಷೆ, ಸಂಪರ್ಕ ಪತ್ತೆ, ಮತ್ತು ಸೂಕ್ತ ಚಿಕಿತ್ಸೆಯು ನಗರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ತಡೆಗೆ ಸಹಾಯ ಮಾಡಬಲ್ಲದು ಎಂದು ಡಾ. ಗುಲೇರಿಯಾ ಹೇಳಿದರು
  • ರಾಜಸ್ಥಾನ: ಇಂದು ಬೆಳಿಗ್ಗೆ 159 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 27,333 ಕ್ಕೇರಿದೆ. ಗುರುವಾರದಂದು ರಾತ್ರಿಯವರೆಗೆ 737 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 20,000 ಗಡಿ ದಾಟಿದೆಯಾದರೂ (20,028 ) ರಾಜ್ಯದಲ್ಲಿ 6,666 ಸಕ್ರಿಯ ಪ್ರಕರಣಗಳು ಇವೆ. ಇಂದು ಗರಿಷ್ಟ ಪ್ರಕರಣಗಳು ವರದಿಯಾದ ಪ್ರದೇಶಗಳೆಂದರೆ ಬಿಕಾನೇರ್ (32 ಪ್ರಕರಣಗಳು) ಬಳಿಕ ನಾಗೌರ್ (26 ಪ್ರಕರಣಗಳು) ಮತ್ತು ನಂತರ ಜೈಪುರ ( 22 ಪ್ರಕರಣಗಳು)
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಗುರುವಾರ 735 ಹೊಸ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಹೋಲಿಸಿದಾಗ ಒಂದೇ ದಿನದಲ್ಲಿ ವರದಿಯಾದ ಗರಿಷ್ಟ ಸಂಖ್ಯೆಯ ಪ್ರಕರಣಗಳಿವು. ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 20,000 ಗಡಿ ದಾಟಿದೆ. ಇತ್ತೀಚಿನ ವರದಿಗಳ ಪ್ರಕಾರ ಅದೀಗ 20,378 ಆಗಿದೆ. ಆದಾಗ್ಯೂ ರಾಜ್ಯದ ಸಕ್ರಿಯ ಪ್ರಕರಣಗಳ ಹೊರೆ 5562, ಒಟ್ಟು ಗುಣಮುಖರಾದವರ ಸಂಖ್ಯೆ 14,127 ಕ್ಕೇರಿದೆ. ಗುರುವಾರದಂದು 219 ಮಂದಿ ಗುಣಮುಖರಾಗಿದ್ದಾರೆ. ಗುರುವಾರ 7 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿಗೀಡಾದವರ ಸಂಖ್ಯೆ 689 ಆಗಿದೆ
  • ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ ಗುರುವಾರ ಒಂದೇ ದಿನದಲ್ಲಿ 197 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲೀಗ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 4,754. ಸಕ್ರಿಯ ಪ್ರಕರಣಗಳ ಹೊರೆ 1,282. ರಾಜ್ಯದ ವಿವಿಧ ಆಸ್ಪತ್ರೆಗಳಿಂದ 127 ರೋಗಿಗಳು ಬಿಡುಗಡೆಯಾದ ಬಳಿಕ ಗುಣಮುಖರಾದವರ ಒಟ್ಟು ಸಂಖ್ಯೆ 3,451 ಕ್ಕೇರಿದೆ.
  • ಗೋವಾ: ಗುರುವಾರದಂದು 157 ಸ್ಯಾಂಪಲ್ ಗಳು ಪರೀಕ್ಷೆಯಲ್ಲಿ ಕೋವಿಡ್ -19 ಪಾಸಿಟಿವ್ ಆಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 3,108 ಕ್ಕೇರಿದೆ. ವಾರದಲ್ಲಿ ರಾಜ್ಯದ ಸಕ್ರಿಯ ಪ್ರಕರಣಗಳ ಹೊರೆ 127.
  • ಅಸ್ಸಾಂ: ಕೋವಿಡ್ -19 ಚಿಕಿತ್ಸಾ ಅನುಷ್ಟಾನ ನಡೆಯುತ್ತಿರುವ ನಾಗಾನ್ ಸರಕಾರಿ ಆಸ್ಪತ್ರೆಗೆ ಅಸ್ಸಾಂ ಮುಖ್ಯಮಂತ್ರಿ ಭೇಟಿ ನೀಡಿ ವೈದ್ಯರು ಮತ್ತು ದಾದಿಯರ ಜೊತೆ ಸಂವಾದ ನಡೆಸಿದರು. ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಇತರ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಚರ್ಚೆ ನಡೆಸಿದರು.
  • ಮಣಿಪುರ: ಪ್ರಧಾನ್ ಮತ್ತು ನಾಲ್ಕು ಮಂದಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆದ ಬಳಿಕ ಮಣಿಪುರದ ಥೌಬಾಲ್ ಜಿಲ್ಲೆ ಮೊಯಿಜಿಂಗ್ ಅವಾಂಗ್ ಲೇಖಿಯಲ್ಲಿ ತ್ವರಿತ ಆಂಟಿಜೆನ್ ಪರೀಕ್ಷೆಗಳನ್ನು ಮನೆ ಮನೆಗಳಿಗೆ ತೆರಳಿ ನಡೆಸಲಾಗುತ್ತಿದೆ.
  • ಮಿಜೋರಾಂ: ಮಿಜೋರಾಂನಲ್ಲಿ ಒಟ್ಟು 194 ಚರ್ಚ್ ಸಭಾಂಗಣಗಳನ್ನು ಕ್ವಾರಂಟೈನ್ ಸೌಲಭ್ಯಗಳನ್ನಾಗಿ ಬಳಸಲಾಗುತ್ತಿದೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡಿನಲ್ಲಿಯ ಮೋನ್ ಜಿಲ್ಲಾ ಕಾರ್ಯ ಪಡೆಯು ಮೋನ್ ಜಿಲ್ಲೆಯ ಆರ್ಥಿಕತೆಗೆ ಪುನಶ್ಚೆತನ ನೀಡಲು ಮತ್ತು ಮರಳಿ ಬಂದವರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸಮಿತಿಯೊಂದನ್ನು ರಚಿಸಿದೆ. ನಾಗಾಲ್ಯಾಂಡಿನಲ್ಲಿ ಪೆರೆನ್ ಜಿಲ್ಲೆಯಲ್ಲಿ  ಕೋವಿಡ್ -19 ಕಾರ್ಯಕ್ಕಾಗಿರುವ  ಜಿಲ್ಲಾ ಕಾರ್ಯಪಡೆಯು ಸಿ.ಎಂ.. ಕಚೇರಿ ಕಟ್ಟಡ , ಆರ್.ಸೆಟಿ ಕಟ್ಟಡ ಮತ್ತು ಪ್ರವಾಸಿ ತಂಗುವ ಮನೆಗಳನ್ನು ಕೋವಿಡ್ ಶುಶ್ರೂಷಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಗುರುತು ಮಾಡಿದೆ, ಸಂತ ಕ್ಸೇವಿಯರ್ ಕಾಲೇಜು ಸಭಾಂಗಣ ಮತ್ತು ವೆಟ್ ಕಾಲೇಜು ಹಾಸ್ಟೆಲ್ ನ್ನು ಐಸೋಲೇಶನ್ ಕೇಂದ್ರಗಳನ್ನಾಗಿ ಮಾಡಲಾಗಿದೆ.
  • ಕೇರಳ: ಸ್ಥಳೀಯ ಸ್ವಯಂ ಆಡಳಿತಗಳ ಅಡಿಯಲ್ಲಿ ಕೋವಿಡ್ ಮೊದಲ ಸಾಲಿನ ಚಿಕಿತ್ಸಾ ಕೇಂದ್ರಗಳ (ಎಫ್.ಎಲ್.ಟಿ.ಸಿ.) ಕಾರ್ಯಾಚರಣೆಗೆ ಸಂಬಂಧಿಸಿದ ಆದೇಶವನ್ನು ಸರಕಾರ ಹೊರಡಿಸಿದೆ. ಆರೋಗ್ಯ ಇಲಾಖೆ ಶಿಫಾರಸು ಮಾಡಿದಂತೆ ಪ್ರತೀ ವಲಯಗಳಲ್ಲಿ ಚಿಕಿತ್ಸಾ ಕೇಂದ್ರಗಳು ಸ್ಥಾಪನೆಯಾಗಲಿವೆ. ನಡುವೆ ರಾಜ್ಯದಲ್ಲಿ ಮತ್ತೆರಡು ಕೋವಿಡ್ -19 ಸಾವುಗಳು ಸಂಭವಿಸಿವೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 39 ಕ್ಕೇರಿದೆ. ಎರಡು ಪ್ರಕರಣಗಳಲ್ಲಿ ಪರೀಕ್ಷಾ ವರದಿ ಮೃತ್ಯು ಸಂಭವಿಸಿದ ಬಳಿಕ ಬಂದಿದೆ. ಇಬ್ಬರು ಪೊಲೀಸರು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆದ ಬಳಿಕ ಅಪರಾಧ ವಿಭಾಗದ ಕೇಂದ್ರ ಕಚೇರಿಯ ಕಾರ್ಯನಿರ್ವಹಣೆಯನ್ನು ಅಮಾನತಿನಲ್ಲಿಡಲಾಗಿದೆ. ಇದೇ ವೇಳೆ ರಾಜಧಾನಿ ನಗರದಲ್ಲಿ ವೈರಸ್ ಹರಡುವಿಕೆ ತೀವ್ರವಾಗಿ ಏರುತ್ತಿದೆ. ಮತ್ತೆ ಐದು ಕಂಟೈನ್ ಮೆಂಟ್ ವಲಯಗಳನ್ನು ಘೋಷಿಸಲಾಗಿದೆ. ಸ್ಥಳೀಯ ಪ್ರಸರಣ ತಡೆಗಾಗಿ ಜಿಲ್ಲೆಯ ಎಲ್ಲಾ ಕರಾವಳಿ ರಸ್ತೆಗಳನ್ನು ಮುಚ್ಚಲಾಗಿದೆ. ನಿನ್ನೆ ರಾಜ್ಯದಲ್ಲಿ 722 ಹೊಸ ಪ್ರಕರಣಗಳು ಪತ್ತೆಯಾಗಿವೆ. 5,372 ಜನರು ಚಿಕಿತ್ಸೆಯಲ್ಲಿದ್ದಾರೆ. 1.83 ಲಕ್ಷ ಜನರು ವಿವಿಧ ಜಿಲ್ಲೆಗಳಲ್ಲಿ ನಿಗಾದಲ್ಲಿದ್ದಾರೆ
  • ತಮಿಳುನಾಡು: ಕಳೆದ 24 ಗಂಟೆಗಳಲ್ಲಿ ಮತ್ತೆ ಮೂವರು ಮೃತಪಡುವುದರೊಂದಿಗೆ ಪುದುಚೇರಿಯಲ್ಲಿ ಕೋವಿಡ್ -19 ಸಂಬಂಧಿತ ಸಾವಿನ ಸಂಖ್ಯೆ 25 ಕ್ಕೇರಿದೆ. ಒಟ್ಟು ಪ್ರಕರಣಗಳ ಸಂಖ್ಯೆ: 1,832 ಕ್ಕೇರಿದೆ. ಪ್ರಸ್ತುತ 793 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರಲ್ಲಿ 684 ಮಂದಿ ಪುದುಚೇರಿಯವರು, 74 ಮಂದಿ ಕರೈಕಲ್ ನವರು ಮತ್ತು 35 ಮಂದಿ ಯಾನಂನವರು. ..ಟಿ.-ಎಂ.ನಲ್ಲಿ ರೂಪುಗೊಂಡ ನವೋದ್ಯಮವೊಂದು 15 ಹಾಸಿಗೆಗಳ ಫ್ಯಾಬ್ರಿಕೇಟ್ ಮಾಡಲಾದ ಮೆಡಿಕ್ಯಾಬ್ ಘಟಕವನ್ನು ಅಭಿವೃದ್ದಿಪಡಿಸಿದೆ. ಇದು ವೈದ್ಯರಿಗೆ ಪ್ರತ್ಯೇಕ ಕೊಠಡಿ, ಐಸೋಲೇಶನ್ ಮತ್ತು ವೈದ್ಯಕೀಯ ತಪಾಸಣೆಗಾಗಿ ಪ್ರತ್ಯೇಕ ವ್ಯವಸ್ಥೆ, ಜೊತೆಗೆ ತುರ್ತು ನಿಗಾ ಘಟಕಗಳನ್ನು ಒಳಗೊಂಡಿದೆ. ಗುರುವಾರದಂದು ವರದಿಯಾದ 4,549 ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಇತರ ಆರು ಉತ್ತರ ಜಿಲ್ಲೆಗಳೊಂದಿಗೆ ಚೆನ್ನೈಯು ಅರ್ಧಾಂಶಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು : 1,56,369; ಸಕ್ರಿಯ ಪ್ರಕರಣಗಳು: 46,714; ಮರಣ: 2236, ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು 15,038
  • ಕರ್ನಾಟಕ: ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿ ಮಾಡಲು ಮತ್ತು ಕೋವಿಡ್ ಚಿಕಿತ್ಸೆಯನ್ನು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳಲು ಹೈಕೋರ್ಟು ರಾಜ್ಯಕ್ಕೆ ನಿರ್ದೇಶನ ನೀಡಿದೆ. ನಿನ್ನೆ 4169 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕರ್ನಾಟಕವು 50 ಸಾವಿರ ಕೋವಿಡ್ -19 ಪ್ರಕರಣಗಳ ಸಂಖ್ಯೆಯ ಗಡಿಯನ್ನು ದಾಟಿದೆ. ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 51,422. ಬೆಂಗಳೂರು ನಗರದಲ್ಲಿಯೇ 2344 ಪ್ರಕರಣಗಳು ವರದಿಯಾಗಿವೆ. ಒಟ್ಟು  ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿನ್ನೆಯವರೆಗೆ 51,422; ಸಕ್ರಿಯ ಪ್ರಕರಣಗಳು : 30,655, ಸಾವುಗಳು: 1032.
  • ಆಂಧ್ರ ಪ್ರದೇಶ: ಸಾರ್ವಜನಿಕ ಸ್ಥಳಗಳಲ್ಲಿ, ಕಾರ್ಯ ನಿರ್ವಹಿಸುವ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಮುಖಗವಸು ಧರಿಸುವುದನ್ನು ಕಡ್ದಾಯ ಮಾಡಲು ಸರಕಾರ ನಿರ್ಧರಿಸಿದೆ. ನಿಟ್ಟಿನಲ್ಲಿ ಇಂದು ಆದೇಶಗಳು ಹೊರಡಲಿವೆ. ತಿರುಪತಿ ಮುನ್ಸಿಪಲ್ ಕಮಿಶನರ್ ಅವರು ವಿವಿಧ ವಿಶ್ವವಿದ್ಯಾಲಯಗಳ ಸಿಬ್ಬಂದಿಗಳಿಗೆ ಮುಂದಿನ ಆದೇಶದವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಜಿ.ವಿ.ಎಂ.ಸಿ. ( ಬೃಹತ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೋರೇಶನ್ ) ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವ 15 ಮಂದಿ ಇದುವರೆಗೆ ಸೋಂಕು ಪೀಡಿತರಾಗಿದ್ದು, ಕೆಲವು ವಿಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆಎಲ್ಲಾ ಸಿಬ್ಬಂದಿಗಳಿಗೆ  ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಗುಂಟೂರು ಜಿಲ್ಲಾ ಕಲೆಕ್ಟರ್ ಅವರು ನಾಳೆಯಿಂದ ಜಾರಿಗೆ ಬರುವಂತೆ ಒಂದು ವಾರ ಕಾಲ ಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ. ಕೋವಿಡ್ -19 ಪ್ರಕರಣಗಳಲ್ಲಿ ಏಕಾಏಕಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಳೆದ 24 ಗಂಟೆಗಳಲ್ಲಿ 2602 ಹೊಸ ಪ್ರಕರಣಗಳು, 837 ಬಿಡುಗಡೆಗಳು, ಮತ್ತು 42 ಸಾವುಗಳು ವರದಿಯಾಗಿವೆ. ಒಟ್ಟು  ಪ್ರಕರಣಗಳು: 40,646; ಸಕ್ರಿಯ ಪ್ರಕರಣಗಳು: 19,814; ಸಾವುಗಳು: 534.
  • ತೆಲಂಗಾಣ: ತಜ್ಞರ ಪ್ರಕಾರ ಮುಂದಿನ ಹದಿನೈದು ದಿನಗಳಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ತೆಲಂಗಾಣದಲ್ಲಿ ಕಳೆದ ಒಂದು ವಾರದಿಂದ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿ ಪಾಸಿಟಿವ್ ದರ 20 % ಇದ್ದದ್ದು ಕೆಲವು ದಿನಗಳಿಂದ 10 % ಗೆ ಇಳಿಕೆಯಾಗಿದೆ. ದಿನವೊಂದಕ್ಕೆ 10,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ಆಂಟಿಜೆನ್ ಪರೀಕ್ಷೆಗಳನ್ನು ಕೂಡಾ ನಡೆಸಲಾಗುತ್ತಿದೆ ಆದಾಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ದಾಖಲಾಗುತ್ತಿದೆ. ನಿನ್ನೆ 1676 ಹೊಸ ಪ್ರಕರಣಗಳು ಮತ್ತು 10 ಸಾವುಗಳು ವರದಿಯಾಗಿವೆ. ಇದುವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 41,018. ಸಕ್ರಿಯ ಪ್ರಕರಣಗಳ ಸಂಖ್ಯೆ ;13,328; ಸಾವುಗಳ ಸಂಖ್ಯೆ: 396; ಬಿಡುಗಡೆಗಳು : 27,295 .


https://static.pib.gov.in/WriteReadData/userfiles/image/image0072MTI.jpg

***



(Release ID: 1639607) Visitor Counter : 247