PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 12 JUL 2020 6:30PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image005DFCL.jpg

https://static.pib.gov.in/WriteReadData/userfiles/image/image006EXH7.jpg

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ತಾಜಾ ಮಾಹಿತಿ: ಕೋವಿಡ್ ಸೋಂಕಿನಿಂದ 5.3 ಲಕ್ಷಕ್ಕೂ ಅಧಿಕ ಮಂದಿ ಗುಣಮುಖ; 2.9 ಲಕ್ಷ ಸಕ್ರಿಯ ಪ್ರಕರಣಗಳು; ಸಕ್ರಿಯ ಪ್ರಕರಣಗಳಿಗಿಂತ 2.4 ಲಕ್ಷಕ್ಕೂ ಅಧಿಕ ಗುಣಮುಖವಾಗಿರುವ ಪ್ರಕರಣಗಳು; ಕಳೆದ 24 ಗಂಟೆಗಳಿಂದೀಚೆಗೆ 19,000ಕ್ಕೂ ಅಧಿಕ ಮಂದಿ ಗುಣಮುಖ; ಪ್ರತಿ ಮಿಲಿಯನ್ ಗೆ ಪರೀಕ್ಷೆಗಳ ಸಂಖ್ಯೆ 8396.4

ಕಳೆದ 24 ಗಂಟೆಗಳಿಂದೀಚೆಗೆ ಕೋವಿಡ್-19 ಸೋಂಕಿನಿಂದ ಒಟ್ಟು 19,235 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಇಂದು 5,34,620ಕ್ಕೇ ಏರಿಕೆಯಾಗಿದೆ. ಪ್ರಸ್ತುತ ಗುಣಮುಖರಾದವರ ಪ್ರಮಾಣ ಚೇತರಿಕೆ ಕಂಡು ಶೇ.62.93ಕ್ಕೆ ಏರಿದೆ. ಹೆಚ್ಚಿನ ಜನ ಗುಣಮುಖರಾಗುತ್ತಿರುವುದರಿಂದ ಗುಣಮುಖರಾದವರ ಸಂಖ್ಯೆ ಸಕ್ರಿಯ ಪ್ರಕರಣಗಳಿಗಿಂತ 2,42,362ಕ್ಕೂ ಹೆಚ್ಚಿವೆ. 2,92,258 ಸಕ್ರಿಯ ಪ್ರಕರಣಗಳಲ್ಲಿ ವೈದ್ಯಕೀಯ ನಿಗಾವಹಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,80,151 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಟ್ಟು ಮಾದರಿಗಳನ್ನು ಪರೀಕ್ಷಿಸಿರುವ ಸಂಖ್ಯೆ 1,15,87,153ಕ್ಕೆ ಏರಿಕೆಯಾಗಿದೆ. ಇದರ ಪರಿಣಾಮ ಭಾರತದಲ್ಲಿ ಪ್ರಸ್ತುತ ಪ್ರತಿ ಮಿಲಿಯನ್ ಜನಸಂಖ್ಯೆಗೆ ಪರೀಕ್ಷೆ ಪ್ರಮಾಣ 8396.4 ಆಗಿದೆ. ದೇಶಾದ್ಯಂತ  ಡಯಾಗ್ನೋಸ್ಟಿಕ್ ಪ್ರಯೋಗಾಲಯಗಳ ಜಾಲ ಸರ್ಕಾರಿ ವಲಯದಲ್ಲಿ 850ಕ್ಕೆ ಮತ್ತು ಖಾಸಗಿ ವಲಯದ 344ಕ್ಕೆ ವಿಸ್ತರಣೆಗೊಂಡಿದೆ.(ಒಟ್ಟು 1194 ಪ್ರಯೋಗಾಲಯಗಳು).

ದೆಹಲಿಯ ಛಾತ್ರಪುರದಲ್ಲಿರುವ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ಇಂದು ನವದೆಹಲಿಯ ಛಾತ್ರಪುರದಲ್ಲಿರುವ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರ(ಎಸ್ ಪಿ ಸಿಸಿಸಿ)ಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಕೋವಿಡ್-19 ನಿರ್ವಹಣೆ ಸ್ಥಿತಿಗತಿಗಳ ಬಗ್ಗೆ ಪರಾಮರ್ಶೆ ನಡೆಸಿದರು. 10,200 ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ದೆಹಲಿಯ ಛಾತ್ರಪುರದಲ್ಲಿ ರಾಧಾ ಸ್ವಾಮಿ ಸತ್ಸಂಗ ಬಿಯಾಸ್ (ಆರ್ ಎಸ್ಎಸ್ ಬಿ) ಅಭಿವೃದ್ಧಿಪಡಿಸಿದ್ದು, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳು ಸಮನ್ವಯದಿಂದ ನಿಯಂತ್ರಣ ಕ್ರಮವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಎಸ್ ಪಿ ಸಿಸಿಸಿಯಲ್ಲಿ 10,200 ಹಾಸಿಗೆಗಳು ಸಿದ್ಧವಿದ್ದು, ಪ್ರಸ್ತುತ 2,000 ಹಾಸಿಗೆ ಬಳಕೆಯಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. 88 ಆವರಣಗಳಲ್ಲಿ ಪ್ರತಿಯೊಂದು 100 ರಿಂದ 116 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು, ಎರಡೂ ಆವರಣಗಳಿಗೆ ನಿಗಾವಹಿಸಲು ಒಂದು ನರ್ಸಿಂಗ್ ಕೇಂದ್ರವನ್ನು ತೆರೆಯಲಾಗಿದೆ. ಈವರೆಗೆ ಎಸ್ ಪಿ ಸಿಸಿಸಿಯಲ್ಲಿ 20 ಆವರಣಗಳು ಮತ್ತು 10 ನರ್ಸಿಂಗ್ ಕೇಂದ್ರಗಳು ಸಿದ್ಧವಾಗಿವೆ. ಶೇ.10ರಷ್ಟು ಹಾಸಿಗೆಗಳನ್ನು ನಿಗದಿತ ಕೋವಿಡ್ ಆರೋಗ್ಯ ಕೇಂದ್ರ (ಡಿಸಿಎಚ್ ಸಿ)ವನ್ನಾಗಿ ಮಾಡಲಾಗಿದ್ದು, ಅವುಗಳಿಗೆ ಆಕ್ಸಿಜನ್ ನೆರವು ನೀಡಲಾಗಿದೆ. ಈವರೆಗೆ 123 ರೋಗಿಗಳು ಪ್ರವೇಶ ಪಡೆದಿದ್ದು, ಅವರಲ್ಲಿ ಐವರು ನಾನಾ ರೋಗಗಳಿಂದ ಬಳಲುತ್ತಿದ್ದವರಾಗಿದ್ದು, ಅವರನ್ನು ತೃತೀಯ ಹಂತದ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮನಿರ್ಭರ ಭಾರತ ಪ್ಯಾಕೇಜ್ ಈವರೆಗಿನ ಪ್ರಗತಿ

ಪ್ರಧಾನಮಂತ್ರಿ ಅವರಿಂದ ಮೇ 12ರಂದು ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಪರಿಹಾರ ಕ್ರಮಗಳು ಪ್ರಕಟ-20 ಕೋಟಿ ರೂ.ಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್ ಭಾರತದ ಜಿಡಿಪಿಯ ಶೇ.10ಕ್ಕೆ ಸಮ; ಗೌರವಾನ್ವಿತ ಪ್ರಧಾನಮಂತ್ರಿ ಅವರ ಕರೆಯ ಮೇರೆಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, 2020 ಮೇ 13ರಿಂದ 17 ವರೆಗೆ ಪ್ರತಿ ದಿನ ಸುದ್ದಿಗೋಷ್ಠಿಯಲ್ಲಿ ಆತ್ಮನಿರ್ಭರ ಪ್ಯಾಕೇಜ್ ವಿವರಗಳನ್ನು ಪ್ರಕಟಿಸಿದರು. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತಕ್ಷಣವೇ ಆತ್ಮನಿರ್ಭರ ಭಾರತ ಅಭಿಯಾನದಡಿ ಘೋಷಿಸಲಾಗಿದ್ದ ಕ್ರಮಗಳ ಅನುಷ್ಠಾನ ಆರಂಭಿಸಿತು. ಆರ್ಥಿಕ ಪರಿಹಾರ ಕ್ರಮಗಳ ಜಾರಿ ಕುರಿತು ವಿತ್ತ ಸಚಿವರು ಖುದ್ದಾಗಿ, ನಿರಂತರವಾಗಿ ಅವಲೋಕನ ನಡೆಸುತ್ತಿದ್ದಾರೆ. ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ನಡೆಸಿದ ಇತ್ತೀಚಿನ ಪ್ರಗತಿ ಪರಿಶೀಲನಾ ಸಭೆಯ ವಿವರಗಳು ಹೀಗಿವೆ.

ಕೊರೊನಾ ಸಂಕಷ್ಟದ ಕಾಲದಲ್ಲಿ ಜೀವನದಲ್ಲಿ ಕಲಿತ ನೈಜ ಪಾಠಗಳ ಆತ್ಮಾವಲೋಕನ ಮಾಡಿಕೊಳ್ಳುವಂತೆ ಜನತೆಗೆ ಉಪರಾಷ್ಟ್ರಪತಿ ಕರೆ

ಕೋವಿಡ್-19 ಸಾಂಕ್ರಾಮಿಕದ ಪರಿಣಾಮಗಳು ಮತ್ತು ಕಾರಣಗಳೊಂದಿಗೆ ಜನರನ್ನು ಬೆರೆಯುವ ಕುರಿತು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು ಇಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲಿ ಜೀವನದ ಪಾಠಗಳುಸಂವಾದಾತ್ಮಕ ರೀತಿಯಲ್ಲಿ ಟಿಪ್ಪಣಿಯನ್ನು ಬರೆದಿರುವ ಅವರು ಹತ್ತು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವುಗಳಿಗೆ ನೀಡಿದ ಉತ್ತರಗಳಲ್ಲಿ ಕಲಿತ ಪಾಠಗಳ ಮೌಲ್ಯಮಾಪನ ಸಹಾಯಕವಾಗುತ್ತದೆ ಮತ್ತು ಕಳೆದ ನಾಲ್ಕು ತಿಂಗಳಿಂದೀಚೆಗೆ ಜೀವನದ ಬೇಡಿಕೆಗಳು ಸೀಮಿತಗೊಂಡಿವೆ ಎಂದು ಹೇಳಿದ್ದಾರೆ. ಹತ್ತು ಅಂಶಗಳನ್ನು ಪ್ರಸ್ತಾಪಿಸಿರುವ ಶ್ರೀ ನಾಯ್ಡು ಅವರು, ಭವಿಷ್ಯದಲ್ಲಿ ಇಂತಹ ಪ್ರತಿಕೂಲ ಸಂದರ್ಭಗಳು ಎದುರಾದಾಗ  ಜನರು ತಮ್ಮಷ್ಟಕ್ಕೇ ತಾವೇ ಸಿದ್ಧರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಅರಿಯಲು ಇವು ಸಹಾಯಕವಾಗುತ್ತವೆ ಎಂದು ಹೇಳಿದ್ದಾರೆ. ಸಾಂಕ್ರಾಮಿಕವನ್ನು ಕೇವಲ ವಿಪತ್ತು ಎಂಬ ದೃಷ್ಟಿಯಿಂದ ನೋಡಬಾರದು, ಅದನ್ನು ಭವಿಷ್ಯದಲ್ಲಿ ನಾವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಪರಿವರ್ತಕವನ್ನಾಗಿ ನೋಡಬೇಕು ಮತ್ತು ಜೀವನ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು. ನಾವು ನಮ್ಮ ಸುತ್ತಲಿನ ಮಾರ್ಗದರ್ಶಿ ಸೂತ್ರ ಮತ್ತು ಪುರಾಣಗಳಲ್ಲಿರುವಂತೆ ಸಂಸ್ಕೃತಿ ಮತ್ತು ಪ್ರಕೃತಿಯ ಜೊತೆಗೆ ಸೌಹಾರ್ದಯುತವಾಗಿ ಜೀವನ ನಡೆಸಬೇಕು ಎಂದು ಹೇಳಿದ್ದಾರೆ.

ಎಫ್ಐಸಿಸಿಐ ಫ್ರೇಮ್ಸ್ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀ ಪಿಯೂಷ್ ಗೋಯಲ್

ಭಾರತೀಯ ಚಲನಚಿತ್ರ ಮತ್ತು ಜಾಹೀರಾತು ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊಂದಿವೆ ಎಂದು ಕೇಂದ್ರ ಸಚಿವರು ಹೇಳಿದರು. ಅವರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬಲ್ಲರು, ಪ್ರಶಸ್ತಿಗಳನ್ನು ಗೆಲ್ಲಬಲ್ಲರು ಮತ್ತು ಉದ್ಯಮಕ್ಕೆ ಹೆಚ್ಚಿನ ಬಂಡವಾಳವನ್ನು ಆಕರ್ಷಿಸುವರು ಎಂದರು. ಉದ್ಯಮ ರಾಷ್ಟ್ರೀಯ ಎಲ್ಲೆಗಳನ್ನು ಮೀರಿ ಬೆಳೆಯಲಿದೆ ಎಂದು ಅವರು ಹೇಳಿದರು. ಶ್ರೀ ಗೋಯಲ್ ಅವರು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತೀಯ ಸಿನಿಮಾ ನೀಡಿರುವ ಕೊಡುಗೆ ಮತ್ತು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ನಾನಾ ಬಗೆಯ ಆರೋಗ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು. ಕೋವಿಡ್ ಹಿಂದಿನ ಹಲವು ಬಿಕ್ಕಟ್ಟುಗಳಂತೆ ಪ್ರಸ್ತುತ ನಮ್ಮೆದುರಿಗಿನ ಬಿಕ್ಕಟ್ಟು, ಅದನ್ನು ಕೂಡ ನಾವು ಹಾದು ಹೋಗುತ್ತೇವೆ ಎಂದು ಶ್ರೀ ಗೋಯಲ್ ಹೇಳಿದರು. ಕೋವಿಡ್ ನಂತರದ ಜಗತ್ತಿನಲ್ಲಿ ಅವಕಾಶಗಳ ಬಗ್ಗೆ ನಾವು ಸಜ್ಜಾಗೋಣ, ಅದರಲ್ಲಿ ಹೊಸ ಬಗೆಯ ಕಾರ್ಯಶೈಲಿ ಮತ್ತು ಬದುಕುವುದನ್ನು ಕಂಡುಕೊಳ್ಳಬೇಕಿದೆ ಎಂದರು. ಮುಂದಿರುವ ತಿರುವನ್ನು ದಾಟಲು ನಾವು ಚೌಕಟ್ಟಿನಿಂದಾಚೆ ಯೋಚಿಸುವ ಮತ್ತು ಆವಿಷ್ಕಾರಿ ಮನೋಭಾವವನ್ನು ರೂಢಿಸಿಕೊಳ್ಳಬೇಕಿದೆ ಎಂದರು. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಆದರೆ ಭಯ ಹೆಚ್ಚು ದಿನ ನಮ್ಮಲ್ಲಿ ಇರುವುದಿಲ್ಲ ಎಂದು ಹೇಳಿದರು.

ವಿಶ್ವ ಜನಸಂಖ್ಯಾ ದಿನದಂದು ಕುಟುಂಬ ನಿಯಂತ್ರಣ ಯೋಜನೆಯನ್ನು ಮಾನವ ಹಕ್ಕು ವಿಚಾರವೆಂದು ಒತ್ತು ನೀಡುವಂತೆ ಡಾ. ಹರ್ಷವರ್ಧನ್ ಕರೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು  ನಿನ್ನೆ ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ನಡೆದ ವರ್ಚುಯಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. “ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ಜನಸಂಖ್ಯಾ ಸ್ಥಿರತೆಗೆ ಅತ್ಯಂತ ಪ್ರಾಮುಖ್ಯತೆ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಜನತೆಗೆ ಮತ್ತು ಅವರ ಆರೋಗ್ಯದಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆಎಂದು ಡಾ. ಹರ್ಷವರ್ಧನ್ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಸವಾಲಿನಿಂದಾಗಿ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಕೂಡ ಇಂದು ಗಂಭೀರ ವಿಚಾರವಾಗಿದೆ ಎಂದರು.

ಜಗತ್ತಿನಾದ್ಯಂತ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಬನ್ನಿ, ಭಾರತದಲ್ಲಿ ಆವಿಷ್ಕಾರ ಮಾಡಿ ಎಂದು ಶ್ರೀ ಧರ್ಮೇಂದ್ರ ಪ್ರಧಾನ್ ಮನವಿ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಜಗತ್ತಿನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಸದ್ಯ ಹುಟ್ಟಿಕೊಳ್ಳುತ್ತಿರುವ ಹೊಸ ಅವಕಾಶಗಳನ್ನು ಬಳಸಿಕೊಂಡು, ಭಾರತಕ್ಕೆ ಬಂದು ಇಲ್ಲಿ ಆವಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ. ಅವರು ನಿನ್ನೆ ಸಾಗರೋತ್ತರ ಭಾರತೀಯ ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಗೆಳೆಯರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಪ್ರಸಕ್ತ ಸಾಂಕ್ರಾಮಿಕ ಕುರಿತಂತೆ ಶ್ರೀ ಪ್ರಧಾನ್ ಅವರು, ನಮ್ಮ ಜೀವನದ ಮೂಲಭೂತ ಅಸ್ಥಿತ್ವಕ್ಕೆ ಸವಾಲು ಒಡ್ಡಿರುವ ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ನಾವಿದ್ದೇವೆ, ಸದ್ಯ ತಕ್ಷಣದ ಆರ್ಥಿಕ ಪರಿಣಾಮದಿಂದಾಗಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ನಮಗೆ ಹಂತವನ್ನು ದಾಟಲು, ಮರು ಯೋಚನೆ ಮಾಡಲು ಮತ್ತು ಹೊಸ ರೂಪ ನೀಡಲು ನಮಗೆ ಅವಕಾಶ ದೊರೆತಿದೆ ಎಂದು ಹೇಳಿದರು.

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಪಂಜಾಬ್: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ/ಕಾಲೇಜುಗಳ ಪರೀಕ್ಷೆಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಜುಲೈ 3ರಂದು ಕೈಗೊಂಡಿರುವ ನಿರ್ಧಾರಕ್ಕೆ ಬದ್ಧವಾಗಿ ಅನುಮತಿ ನೀಡುವಂತೆ  ಪಂಜಾಬ್ ಮುಖ್ಯಮಂತ್ರಿ ಅವರು ಪ್ರಧಾನಮಂತ್ರಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ ಒಳಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕೆಂಬ ನಿರ್ಧಾರದ ಮರುಪರಿಶೀಲನೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಒಎಚ್ಆರ್ ಡಿ) ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ಗೆ ನಿರ್ದೇಶನ ನೀಡಬೇಕು ಎಂದು ಪ್ರಧಾನಿ ಅವರನ್ನು ಕೋರಿದ್ದಾರೆ.
  • ಹಿಮಾಚಲಪ್ರದೇಶ: ಹಿಮಾಚಲಪ್ರದೇಶಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ, ರಾಜ್ಯದಲ್ಲಿ ಪ್ರವಾಸೋದ್ಯಮ ಘಟಕಗಳ ಆರಂಭಕ್ಕೆ ನಿರ್ದಿಷ್ಟ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಹಿಮಾಚಲಪ್ರದೇಶಕ್ಕೆ ಭೇಟಿನೀಡಲಿಚ್ಛಿಸುವ ಪ್ರವಾಸಿಗರು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಅವರು ಹಿಮಾಚಲಪ್ರದೇಶಕ್ಕೆ ಪ್ರವಾಸಿ ವಿಭಾಗದಡಿ ಬರುವ 48 ಗಂಟೆಗೂ ಮುನ್ನ “Covid-19 e-pass.hp.gov.in” ವೆಬ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಪ್ರವಾಸಿಗರು ಐಸಿಎಂಆರ್ ನಿಂದ ಮಾನ್ಯತೆ ಪಡೆದ ಪ್ರಯೋಗಾಲಯದಿಂದ ಕೋವಿಡ್ ಪರೀಕ್ಷಾ ಪ್ರಮಾಣಪತ್ರ(ಆರ್ ಟಿಪಿಸಿಆರ್) ಹೊಂದಿರಬೇಕು ಮತ್ತು ನೆಗಿಟಿವ್ ವರದಿ ಇರಬೇಕು ಮತ್ತು ವರದಿ 78 ಗಂಟೆಗೂ ಹಳೆಯದಾಗಿರಬಾರದು, ಅಲ್ಲದೆ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡಿರಬೇಕು.
  • ಕೇರಳ: ಕೋವಿಡ್-19 ಇಡುಕ್ಕಿ ಮೂಲಕ ಮಹಿಳೆ ಇಂದು ಬೆಳಗ್ಗೆ ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆರೋಗ್ಯ ಇಲಾಖೆ, ಆಂಟಿಜನ್ ಟೆಸ್ಟ್ ವಿರುದ್ಧ ನಡೆಯುತ್ತಿರುವ ಸುಳ್ಳು ವದಂತಿಗಳನ್ನು ಜನ ನಂಬಬಾರದು ಎಂದು ಕರೆ ನೀಡಿದೆ. ನಿನ್ನೆ ರಾಜ್ಯದಲ್ಲಿ 488 ಹೊಸ ಕೋವಿಡ್-19 ಪ್ರಕರಣಗಳು ಖಚಿತಪಟ್ಟಿವೆ. 234 ಸಂಪರ್ಕದಿಂದ ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಸ್ತುತ 3,442 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 1.82 ಲಕ್ಷ ಅಂದರೆ 1,82,050 ಜನರು ನಾನಾ ಜಿಲ್ಲೆಗಳಲ್ಲಿ ನಿಗಾದಲ್ಲಿದ್ದಾರೆ.
  • ತಮಿಳುನಾಡು: ಪುದುಚೆರಿಯಲ್ಲಿ 81 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 1,418ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ 661 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಸರ್ಕಾರ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆಗೆ ಸಂಬಂಧಿಸಿದಂತೆ ಎಸ್ಒಪಿ ಬಿಡುಗಡೆ ಮಾಡಿದೆ. ಅಂತಿಮ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತಮ್ಮದೇ ಆದ ಮೌಲ್ಯಮಾಪನ ಪದ್ಧತಿ ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಧುರೈನಲ್ಲಿ ಲಾಕ್ ಡೌನ್ ಅನ್ನು ಜುಲೈ 14 ವರೆಗೆ ಎರಡು ದಿನ ವಿಸ್ತರಿಸಲಾಗಿದೆ. ಕಳೆದ ಜೂನ್ 24ರಿಂದ ಲಾಕ್ ಡೌನ್ ನಿಯಮಾವಳಿ ಜಾರಿಯಲ್ಲಿದ್ದು, ಜುಲೈ ಅಂತ್ಯದವರೆಗೆ ಅವು ಮುಂದುವರಿಯಲಿವೆ. ನಿನ್ನೆ  3965 ಹೊಸ ಪ್ರಕರಣಗಳು ಹಾಗೂ 69 ಸಾವು ವರದಿಯಾಗಿವೆ. ಒಟ್ಟು ಪ್ರಕರಣಗಳು: 1,34,226, ಸಕ್ರಿಯ ಪ್ರಕರಣಗಳು: 46,410,  ಸಾವು: 1898, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 17,989.
  • ಕರ್ನಾಟಕ: ರಾಜ್ಯಾದ್ಯಂತ ಇಂದು ಭಾನುವಾರದ ಲಾಕ್ ಡೌನ್ ಜಾರಿಯಲ್ಲಿತ್ತು. ರಾಜ್ಯ ಸರ್ಕಾರ ಜುಲೈ 14ರಿಂದ 22 ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಿದೆ. ಕುರಿತಂತೆ ನಾಳೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ರಾಜ್ಯ ಆರೋಗ್ಯ ಇಲಾಖೆ ಪಿಪಿಇ ಕಿಟ್, ಸ್ಯಾನಿಟೈಸರ್ ಮತ್ತು ಐವಿ ಫ್ಲೂಯಿಡ್ಸ್ ಅನ್ನು ಪ್ರಸಕ್ತ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನೀಡಿ ಖರೀದಿಸಿರುವುದನ್ನು ಸಮರ್ಥಿಸಿಕೊಂಡಿದೆ ಮತ್ತು ಪ್ರಸಕ್ತ ಸಂಕಷ್ಟದ ಸಮಯದಲ್ಲಿ ದರಗಳು ಕ್ರಿಯಾತ್ಮಕವಾಗಿತ್ತು ಎಂದು ಹೇಳಿದೆ. ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ನಿನ್ನೆ 2798 ಹೊಸ ಪ್ರಕರಣಗಳು ಮತ್ತು 70 ಸಾವು ಸಂಭವಿಸಿವೆ. ಬೆಂಗಳೂರು ನಗರ ಒಂದರಲ್ಲೇ 1533 ಪ್ರಕರಣಗಳು ದೃಢಪಟ್ಟಿವೆ ಒಟ್ಟು ಪ್ರಕರಣಗಳು - 36,216, ಸಕ್ರಿಯ ಪ್ರಕರಣಗಳು - 20,883, ಸಾವು - 613.
  • ಆಂಧ್ರಪ್ರದೇಶ: ತಿರುಮಲದಲ್ಲಿ 1,865 ಮತ್ತು ಆಲಿಪಿರಿಯಲ್ಲಿ 1704 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದ್ದು, ಪೈಕಿ 91 ಮಂದಿ ಟಿಟಿಡಿ ಸಿಬ್ಬಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 97 ಕೆಂಪು ವಲಯಗಳನ್ನು ಗುರುತಿಸಲಾಗಿದ್ದು, ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಪ್ರಕರಣಗಳಿವೆ. ಜುಲೈ 20ರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರ, ಅಧಿಕಾರಿಗಳಿಗೆ ಸೂಚಿಸಿದೆ. ರಾಜ್ಯದಲ್ಲಿ ಕಾಲೇಜುಗಳು ಆಗಸ್ಟ್ 3ರಿಂದ ಪುನರಾರಂಭವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ. 2020-21ನೇ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್ಇ ಪಠ್ಯಕ್ರಮ ಶೇ.30ರಷ್ಟು ಕಡಿತವಾಗಲಿದೆ. ಕಳೆದ 24 ಗಂಟೆಗಳಲ್ಲಿ 17,624 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 1933 ಹೊಸ ಪ್ರಕರಣಗಳು ದೃಢಪಟ್ಟಿವೆ, 846 ಮಂದಿ ಗುಣಮುಖರಾಗಿದ್ದಾರೆ ಮತ್ತು 19 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳು - 29,168,  ಸಕ್ರಿಯ ಪ್ರಕರಣಗಳು - 13,428, ಸಾವು -328, ಗುಣಮುಖರಾದವರು - 15,412. 
  • ತೆಲಂಗಾಣ: ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಭಾನುವಾರ ನಿಗದಿತ ಕೋವಿಡ್-19 ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಸ್ಥಿತಿ ಕುರಿತು ಖುದ್ದು ಅವಲೋಕನ ನಡೆಸಿದರು ಮತ್ತು ಸಾಂಕ್ರಾಮಿಕ ಎದುರಿಸಲು ವೈದ್ಯರಿಗೆ ಮತ್ತು ಇತರರಿಗೆ ಕೇಂದ್ರದಿಂದ ಎಲ್ಲ ರೀತಿಯ ಬೆಂಬಲ ಸಿಗಲಿದೆ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರ, ಹೋಮ್ ಐಸೋಲೇಷನ್ ಕಿಟ್ ಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಸೋಂಕು ತಗುಲಿರುವವರಿಗೆ ಗೃಹ ದಿಗ್ಭಂದನದಲ್ಲಿಟ್ಟು ಚಿಕಿತ್ಸೆ ನೀಡಲಾಗುವುದು. ನಿನ್ನೆಯವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳು 33,402; ಸಕ್ರಿಯ ಪ್ರಕರಣಗಳು: 12,135; ಸಾವು: 348; ಗುಣಮುಖರಾದವರು: 20,919.
  • ಅರುಣಾಚಲಪ್ರದೇಶ: ಅರುಚಾಲಪ್ರದೇಶದಲ್ಲಿ ರಾಜಧಾನಿ ಇಟಾನಗರದ ಲಾಕ್ ಡೌನ್ ಗೆ ಜುಲೈ 20 ವರೆಗೆ ವಿಸ್ತೃತ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಅತ್ಯವಶ್ಯಕ ವಸ್ತುಗಳಿಗೆ ನಿರ್ದಿಷ್ಟ ಸ್ಥಳಗಳನ್ನು ಹೊರತುಪಡಿಸಿ, ಯಾವುದೇ ವಾಣಿಜ್ಯ ಮಳಿಗೆಗಳು ತೆರೆಯುವಂತಿಲ್ಲ ಮತ್ತು ವಾಹನ ಸಂಚಾರ ಇರುವುದಿಲ್ಲ. ಎಲ್ಲ ಧಾರ್ಮಿಕ ಸಂಸ್ಥೆಗಳನ್ನು ಮುಚ್ಚಲಾಗುವುದು ಮತ್ತು ಜುಲೈ 20 ವರೆಗೆ ಇಟಾ ನಗರದ ರಾಜಧಾನಿ ಸಂಕೀರ್ಣದಲ್ಲಿ ಯಾವುದೇ ಧಾರ್ಮಿಕ ಸಮಾರಂಭಗಳಿಗೆ ಅನುಮತಿ ನೀಡಲಾಗುವುದಿಲ್ಲ.
  • ಅಸ್ಸಾಂ: ಜಿಎಂಸಿಎಚ್ ಕೋವಿಡ್ ಐಸಿಯುವಿನಲ್ಲಿ ದಾಖಲಾಗಿದ್ದ ಮೂವರು ಕೋವಿಡ್-19 ಸೋಂಕಿತರು ಇಂದು ಮೃತಪಟ್ಟಿದ್ದಾರೆ.
  • ಮಣಿಪುರ: ಮಣಿಪುರದ ತೌಬಲ್ ನಲ್ಲಿ 100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಕೇಂದ್ರ ಜಿಲ್ಲೆಯಲ್ಲಿ ತಕ್ಷಣದ ಕೋವಿಡ್ ಆರೈಕೆ ಅಗತ್ಯತೆಗಳನ್ನು ಪೂರೈಸಲಿದೆ.
  • ಮೇಘಾಲಯ: ಮೇಘಾಲಯದಲ್ಲಿ ಒಟ್ಟು ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 248ಕ್ಕೆ ಏರಿಕೆಯಾಗಿದೆ. ಅವರಲ್ಲಿ 178 ಮಂದಿ ಬಿಎಸ್ಎಫ್ ಯೋಧರು. ಈವರೆಗೆ 45 ಮಂದಿ ಗುಣಮುಖರಾಗಿದ್ದಾರೆ.
  • ಮಿಝೋರಾಂ: ರಾಜ್ಯಪಾಲರು 1,05,000/-(ಜೂನ್ 2020 ತಮ್ಮ ವೇತನದ ಶೇ.30ರಷ್ಟು) ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
  • ಮಹಾರಾಷ್ಟ್ರ: ಕಳೆದ 25 ದಿನಗಳಿಂದ ಮಹಾರಾಷ್ಟ್ರದಲ್ಲಿ ಕೋವಿಡ್-19ನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಪ್ರತಿ ಐದು ದಿನಗಳಿಗೊಮ್ಮೆ 1000ಕ್ಕೂ ಅಧಿಕವಾಗುತ್ತಿದೆ. ಸಾವಿನ ಪ್ರಮಾಣ ಸದ್ಯ 10,116 ಇದ್ದು, ಹಲವು ದೇಶಗಳಿಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 8,139 ಹೊಸ ಪ್ರಕರಣಗಳು ಪತ್ತೆಯಾಗಿ, ಒಟ್ಟು ಸೋಂಕಿತರ ಸಂಖ್ಯೆ 2,46,600ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 91,457. ಮಧ್ಯೆ, ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಧಾರಾವಿ ಸೋಂಕು ನಿಯಂತ್ರಣ ಕಾರ್ಯತಂತ್ರವನ್ನು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯೂಎಚ್ಒ ಪ್ರಶಂಸಿಸಿದೆ.
  • ಗುಜರಾತ್: ಶನಿವಾರ ಸಂಜೆಯವರೆಗೆ ರಾಜ್ಯದಲ್ಲಿ ಹೊಸದಾಗಿ 872 ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 10,308ಕ್ಕೆ ತಲುಪಿದೆ. ಒಟ್ಟು ಪ್ರಕರಣಗಳ ಸಂಖ್ಯೆ 41,027. ಗುಜರಾತ್ ನಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇ.25ರಷ್ಟು ಸಕ್ರಿಯವಾಗಿವೆ. ಅವರು ಆಸ್ಪತ್ರೆಗಳಲ್ಲಿ ಇಲ್ಲವೇ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದವರ ಪ್ರಮಾಣ ಮತ್ತು ಸಾವಿನ ಪ್ರಮಾಣ ಈಗ ಕ್ರಮವಾಗಿ ಶೇ.70 ಮತ್ತು ಶೇ.5ರಷ್ಟಿದೆ.
  • ರಾಜಸ್ಥಾನ: ರಾಜಸ್ಥಾನದಲ್ಲಿ ಇಂದು 153 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 23,901ಕ್ಕೆ ಏರಿಕೆಯಾಗಿದ್ದು, 5,492 ಸಕ್ರಿಯ ಪ್ರಕರಣಗಳು ಮತ್ತು 507 ಸಾವು ಸಂಭವಿಸಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಗರಿಷ್ಠ ಸಂಖ್ಯೆಯ ಹೊಸ ಪ್ರಕರಣಗಳು 42 ಆಗಿದ್ದು, ಅವು ಆಳ್ವಾರ ಜಿಲ್ಲೆಯಲ್ಲಿ ಕಂಡುಬಂದಿವೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಶನಿವಾರ ಒಂದೇ ದಿನ ಅತ್ಯಧಿಕ ಅಂದರೆ 544 ಹೊಸ ಪ್ರಕರಣ ವರದಿಯಾಗಿವೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಪ್ರಮಾಣ 17,000 ದಾಟಿದೆ. ಸದ್ಯ ಒಟ್ಟು ಪ್ರಕರಣಗಳ ಸಂಖ್ಯೆ 17,201. ಸಕ್ರಿಯ ಪ್ರಕರಣಗಳು 3878, ಈವರೆಗೆ ಗುಣಮುಖರಾದವರು 12,679. ಶನಿವಾರ ಗರಿಷ್ಠ ಸಂಖ್ಯೆ ಪ್ರಕರಣಗಳು ಮೊರೆನಾ(101) ವರದಿಯಾಗಿವೆ. ನಂತರ ಇಂದೋರ್(89 ಪ್ರಕರಣ), ಭೂಪಾಲ್(72 ಪ್ರಕರಣ) ಮತ್ತು ಗ್ವಾಲಿಯರ್ (58 ಪ್ರಕರಣ) ವರದಿಯಾಗಿವೆ.
  • ಛತ್ತೀಸ್ ಗಢ: ರಾಜ್ಯದಲ್ಲಿ ಹೊಸದಾಗಿ 65 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಕೋವಿಡ್-19 ಪ್ರಕರಣಗಳ ಸಂಖ್ಯೆ 3,897ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 810.
  • ಗೋವಾ: ರಾಜ್ಯದಲ್ಲಿ 117 ಕೋವಿಡ್-19 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,368ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 12 ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 928 ಆಗಿದೆ.

***



(Release ID: 1638285) Visitor Counter : 262