ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ಜಾಗತಿಕ ಸಪ್ತಾಹ 2020 ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ
Posted On:
08 JUL 2020 5:40PM by PIB Bengaluru
ಭಾರತೀಯ ಜಾಗತಿಕ ಸಪ್ತಾಹ 2020 ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ
30 ರಾಷ್ಟ್ರಗಳ ಸುಮಾರು 5000 ಪ್ರತಿನಿಧಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಜಾಗತಿಕ ಸಪ್ತಾಹ 2020 ಮೊದಲ ದಿನವಾದ ನಾಳೆ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೂರು ದಿನಗಳ ಈ ವರ್ಚುಯಲ್ ಸಮಾವೇಶ ಘೋಷವಾಕ್ಯ “ಪುನಶ್ಚೇತನಗೊಳ್ಳೋಣ; ಭಾರತ ಮತ್ತು ಹೊಸ ಉತ್ತಮ ಜಗತ್ತು” ಎಂಬುದಾಗಿದೆ. ಭಾರತೀಯ ಜಾಗತಿಕ ಸಪ್ತಾಹ 2020ಯಲ್ಲಿ 30 ರಾಷ್ಟ್ರಗಳ ಸುಮಾರು 5000 ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು, ಅವರನ್ನುದ್ದೇಶಿಸಿ 75 ಗೋಷ್ಠಿಗಳಲ್ಲಿ 250 ಜಾಗತಿಕ ಭಾಷಣಕಾರರು ಮಾತನಾಡಲಿದ್ದಾರೆ.
ಇತರೆ ಪ್ರಮುಖ ಭಾಷಣಕಾರರಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿ.ಸಿ. ಮುರ್ಮು, ಇಶಾ ಫೌಂಡೇಶನ್ ನ ಸಂಸ್ಥಾಪಕ ಸದ್ಗುರು, ಧಾರ್ಮಿಕ ನಾಯಕ ಶ್ರೀ ಶ್ರೀ ರವಿಶಂಕರ್ ಅವರು ಸೇರಿದ್ದಾರೆ. ಅವರಲ್ಲದೆ, ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಮತ್ತು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ ಜುಸ್ಟರ್ ಮತ್ತಿತರರು ಭಾಷಣ ಮಾಡುವರು.
ಅಲ್ಲದೆ ಮಧು ನಟರಾಜ್ ಅವರಿಂದ “ಆತ್ಮ ನಿರ್ಭರ ಭಾರತ” ಪ್ರದರ್ಶನ ನಡೆಯಲಿದೆ ಮತ್ತು ಖ್ಯಾತ ಸಿತಾರ್ ವಾದಕ ರವಿಶಂಕರ್ ಅವರ ನೂರನೇ ಜನ್ಮ ದಿನಾಚರಣೆ ಅಂಗವಾಗಿ ಗೌರವ ಸಲ್ಲಿಸಲು ಅವರ ಮೂವರು ಹೆಸರಾಂತ ವಿದ್ಯಾರ್ಥಿಗಳು ವಿಶೇಷ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
***
(Release ID: 1637361)
Visitor Counter : 191
Read this release in:
Manipuri
,
Telugu
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Malayalam