ಸಂಪುಟ
ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳಾದ ಓರಿಯಂಟಲ್ ಇನ್ಶುರೆನ್ಸ್, ನ್ಯಾಷನಲ್ ಇನ್ಶುರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಗಳ ಬಂಡವಾಳ ಪುನರ್ ಭರ್ತಿಗೆ ಸಂಪುಟದ ಅನುಮೋದನೆ
Posted On:
08 JUL 2020 4:25PM by PIB Bengaluru
ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳಾದ ಓರಿಯಂಟಲ್ ಇನ್ಶುರೆನ್ಸ್, ನ್ಯಾಷನಲ್ ಇನ್ಶುರೆನ್ಸ್ ಮತ್ತು
ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಗಳ ಬಂಡವಾಳ ಪುನರ್ ಭರ್ತಿಗೆ ಸಂಪುಟದ ಅನುಮೋದನೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಾರ್ವಜನಿಕ ವಿಮಾ ಸಂಸ್ಥೆಗಳಾದ ಓರಿಯೆಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (ಓಐಸಿಎಲ್), ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (ಎನ್ಐಸಿಎಲ್) ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (ಯುಐಐಸಿಎಲ್) ಗಳಿಗೆ ಒಟ್ಟು 12,450 ಕೋಟಿ ರೂ. ಮೌಲ್ಯದ ಬಂಡವಾಳ ಪುನರ್ಭರ್ತಿಗೆ ಅನುಮೋದನೆ ನೀಡಿದೆ. ( ಇದರಲ್ಲಿ 2019-20 ನೇ ಹಣಕಾಸು ವರ್ಷದ 2,500 ಕೋ.ರೂ. ಸೇರಿದೆ.) ಈ ಪೈಕಿ, 3,475 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು. ಉಳಿದ 6,475 ಕೋಟಿ ರೂ. ಗಳನ್ನು ನಂತರ ಪುನರ್ಭರ್ತಿ ಮಾಡಲಾಗುವುದು. ಬಂಡವಾಳ ಪುನರ್ಭರ್ತಿಯು ಪರಿಣಾಮಕಾರಿಯಾಗಲು ಎನ್ಐಸಿಎಲ್ನ ಅಧಿಕೃತ ಷೇರು ಬಂಡವಾಳವನ್ನು 7,500 ಕೋಟಿ ರೂ.ಗೆ ಮತ್ತು ಯುಐಐಸಿಎಲ್ ಮತ್ತು ಓಐಸಿಎಲ್ ಗಳ ಷೇರು ಬಂಡವಾಳವನ್ನು 5,000 ಕೋಟಿ ರೂ.ಗೆ ಹೆಚ್ಚಿಸಲೂ ಸಹ ಸಂಪುಟ ಅನುಮೋದನೆ ನೀಡಿದೆ. ಇದಲ್ಲದೆ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಲೀನ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, ಅವುಗಳ ಲಾಭದಾಯಕ ಬೆಳವಣಿಗೆಯತ್ತ ಗಮನ ಹರಿಸಲಾಗುತ್ತದೆ.
3,475 ಕೋಟಿ ರೂ.ಬಂಡವಾಳವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಮೊದಲ ಭಾಗವಾಗಿ ಮೂರು ಸಾರ್ವಜನಿಕ ವಿಮಾ ಸಂಸ್ಥೆಗಳಾದ ಓಐಸಿಎಲ್, ಎನ್ಐಸಿಎಲ್ ಮತ್ತು ಯುಐಐಸಿಎಲ್ ಗಳಿಗೆ ಹಂಚಲಾಗುತ್ತದೆ. ಬಾಕಿ ಮೊತ್ತವನ್ನು ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪುನರ್ಭರ್ತಿಗೆ ಪರಿಣಾಮ ಬೀರಲು, ಎನ್ಐಸಿಎಲ್ನ ಅಧಿಕೃತ ಬಂಡವಾಳವನ್ನು 7,500 ಕೋಟಿ ರೂ. ಮತ್ತು ಯುಐಐಸಿಎಲ್ ಮತ್ತು ಓಐಸಿಎಲ್ ಬಂಡವಾಳವನ್ನು 5,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು.
ಪರಿಣಾಮ
ಬಂಡವಾಳದ ಪುನರ್ಭರ್ತಿಯು ಮೂರು ಸಾರ್ವಜನಿಕ ವಿಮಾ ಸಂಸ್ಥೆಗಳಿಗೆ ತಮ್ಮ ಆರ್ಥಿಕ ಮತ್ತು ಋಣ ಪರಿಹಾರ ಸಾಮರ್ಥ್ಯವನ್ನು ಸುಧಾರಿಸಲು, ಆರ್ಥಿಕತೆಯ ವಿಮಾ ಅಗತ್ಯಗಳನ್ನು ಪೂರೈಸಲು, ಬದಲಾವಣೆಗಳನ್ನು ಅಳವಡಿಸಿಕೊಳ್ಳಲು, ಸಂಪನ್ಮೂಲ ಸಂಗ್ರಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅಪಾಯ ನಿರ್ವಹಣೆಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.
ಹಣಕಾಸಿನ ಪರಿಣಾಮಗಳು:
ಪ್ರಸಕ್ತ ಹಣಕಾಸು ವರ್ಷದಲ್ಲಿ, ಒಐಸಿಎಲ್, ಎನ್ಐಸಿಎಲ್ ಮತ್ತು ಯುಐಐಸಿಎಲ್ನಲ್ಲಿ ಬಂಡವಾಳ ಪುನರ್ಭರ್ತಿಯ ಮೊದಲ ಭಾಗವಾಗಿ ತಕ್ಷಣಕ್ಕೆ ಹಣಕಾಸಿನ ಪರಿಣಾಮವು 3,475 ಕೋಟಿ ರೂ. ಆಗಿದ್ದು, ನಂತರದ ಪರಿಣಾಮ 6,475 ಕೋಟಿ ರೂ.ಗಳಾಗಲಿದೆ.
ಮುನ್ನೋಟ:
ಒದಗಿಸಲಾಗುತ್ತಿರುವ ಬಂಡವಾಳದ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ವ್ಯವಹಾರ ದಕ್ಷತೆ ಮತ್ತು ಲಾಭದಾಯಕ ಬೆಳವಣಿಗೆಯನ್ನು ತರುವ ಉದ್ದೇಶದಿಂದ ಕೆಪಿಐಗಳ ರೂಪದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಏತನ್ಮಧ್ಯೆ, ಪ್ರಸ್ತುತ ಸನ್ನಿವೇಶದಲ್ಲಿ, ವಿಲೀನ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಮತ್ತು ಬಂಡವಾಳ ಪುನರ್ಭರ್ತಿಯ ನಂತರ ಅವುಗಳು ಋಣ ಪರಿಹಾರ ಸಾಮರ್ಥ್ಯ ಮತ್ತು ಲಾಭದಾಯಕ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸಬೇಕು.
***
(Release ID: 1637244)
Visitor Counter : 237
Read this release in:
Punjabi
,
Malayalam
,
English
,
Urdu
,
Hindi
,
Marathi
,
Assamese
,
Bengali
,
Manipuri
,
Gujarati
,
Odia
,
Tamil
,
Telugu