ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಚಲನಚಿತ್ರ ನಿರ್ಮಾಣ ಪುನಾರಂಭಕ್ಕೆ ಸರ್ಕಾರದಿಂದ ಸದ್ಯವೇ ಮಾರ್ಗಸೂಚಿ ಬಿಡುಗಡೆ - ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

Posted On: 07 JUL 2020 6:05PM by PIB Bengaluru

ಚಲನಚಿತ್ರ ನಿರ್ಮಾಣ ಪುನಾರಂಭಕ್ಕೆ ಸರ್ಕಾರದಿಂದ ಸದ್ಯವೇ ಮಾರ್ಗಸೂಚಿ ಬಿಡುಗಡೆ - ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

 

 

ಕೋವಿಡ್-19 ಲಾಕ್ ಡೌನ್ ಸಡಿಲಿಕೆಯ ನಂತರ ಅನ್ ಲಾಕ್ ಹಂತದಲ್ಲಿ ಚಲನಚಿತ್ರ ನಿರ್ಮಾಣ ಚಟುವಟಿಕೆಗಳ ಪುನಾರಂಭಕ್ಕೆ ಸರ್ಕಾರ ಸದ್ಯದಲ್ಲೇ ನಿರ್ದಿಷ್ಠ ಕಾರ್ಯಾಚರಣೆ ವಿಧಾನದ (ಎಸ್ ಒಪಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವ್ಡೇಕರ್  ತಿಳಿಸಿದ್ದಾರೆ.

ಕೋವಿಡ್-19 ನಿಂದಾಗಿ ಚಲನಚಿತ್ರ ನಿರ್ಮಾಣ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆಚಟುವಟಿಕೆಗಳ ಪುನಾರಂಭಕ್ಕೆ ಟಿ.ವಿ, ಧಾರಾವಾಹಿ, ಚಿತ್ರ ನಿರ್ಮಾಣ, ಸಹ ನಿರ್ಮಾಣ, ಅನಿಮೇಷನ್ ಮತ್ತು ಗೇಮಿಂಗ್ ಗಳಿಗೆ ಸ್ವಲ್ಪ ಮಟ್ಟಿನ ಪ್ರೋತ್ಸಾಹಧನ ನೀಡುವಂತಹ ಕ್ರಮಗಳನ್ನು ಸದ್ಯದಲ್ಲೇ ಪ್ರಕಟಿಸಲಿದ್ದೇವೆ ‘’ಎಂದು ಸಚಿವ ಶ್ರೀ ಪ್ರಕಾಶ್ ಜಾವ್ಡೇಕರ್ ಎಫ್ ಐಸಿಸಿಐನ 21ನೇ ಫ್ರೇಮ್ಸ್ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮುಂಬೈನ ಪೊವೈ ಕೆರೆಯ ಬಳಿ ನಡೆಯುತ್ತಿದ್ದ ಮಾಧ್ಯಮ ಮತ್ತು ಮನರಂಜನಾ ಉದ್ಯಮದ 2020 ವಾರ್ಷಿಕ ಕಾರ್ಯಕ್ರಮ ಬಾರಿ ವರ್ಚ್ಯುಯಲ್ ರೂಪದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು

ಕೋವಿಡ್ -19 ಸಾಂಕ್ರಾಮಿಕ ಜನರಲ್ಲಿ ಸಂವಹನದ ಹೊಸ ವಿಧಾನಗಳ ಬಗ್ಗೆ ಚಿಂತನೆ ನಡೆಸಲು ಪ್ರೇರೇಪಿಸಿದೆವರ್ಚ್ಯುಯಲ್ ರೂಪದಲ್ಲಿ ಒಂದೆಡೆ ಸೇರುವುದು ಈಗ ಮಾಮೂಲಿಯಾಗಿದೆ, ಆದರೆ ಪಾಲುದಾರಿಕೆ ಏರ್ಪಡುತ್ತಿರುವುದು ಸ್ವಾಭಾವಿಕವಾಗಿದೆ. “ವಿಷಯ ಸೃಷ್ಠಿಯ ವಿಚಾರದಲ್ಲಿ ಭಾರತಕ್ಕೆ ಹೆಚ್ಚಿನ ವೆಚ್ಚದ ಪ್ರಯೋಜನವಿದೆ ಮತ್ತು ಭಾರತೀಯ ವಿಷಯಗಳನ್ನು ಜಗತ್ತಿನಾದ್ಯಂತ 150 ರಾಷ್ಟ್ರಗಳು ನೋಡುತ್ತಿವೆ’’ ಎಂದು ಸಚಿವರು ಹೇಳಿದರು. ಭಾರತದ ಸಾಫ್ಟ್ ಶಕ್ತಿ-ಮಾಧ್ಯಮ ಮತ್ತು ಮನರಂಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿ ಸಾಧಿಸಲು ಸಂಬಂಧಿಸಿದ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಕರೆ ನೀಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಭಾರತವನ್ನು ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ಸೃಜನಶೀಲ ಉದ್ಯಮದ ಮಹತ್ವದ ಪಾತ್ರವಿದೆ. ಗಾತ್ರದಿಂದ ನಾವು ಮೌಲ್ಯ ಸೃಷ್ಟಿಯತ್ತ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ ಅವರು ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿ, ಚಲನಚಿತ್ರ ನಿರ್ಮಾಣಕ್ಕೆ ಸರ್ಕಾರಗಳ ಪಾತ್ರ, ಅದಕ್ಕೆ ಅಗತ್ಯ  ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು. “ನಿಯಂತ್ರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆಎಂದರು. ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಮೂಲಸೌಕರ್ಯ ಸ್ಥಾನಮಾನ ನೀಡಲು ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲು ಬದ್ಧವಿದೆ ಮತ್ತು ಕೆಲವೊಂದು ವ್ಯಾಖ್ಯಾನಗಳಿಗೆ ಹೊಸ ರೂಪ ನೀಡಬೇಕಿದೆ ಎಂದರು.   

ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ತಮ್ಮ ಭಾಷಣದಲ್ಲಿ ಪ್ರತಿಯೊಂದು ಬಿಕ್ಕಟ್ಟನ್ನು ನಾವು ಅವಕಾಶವನ್ನಾಗಿ ಮಾಡಿಕೊಳ್ಳಬೇಕು ಮತ್ತು ಭಾರತ 12 ರಿಂದ 13 ಪ್ರಗತಿ ಹೊಂದಲು ಸಾಧ್ಯವಿರುವ ವಲಯಗಳನ್ನು ಗುರುತಿಸಬೇಕು. ವಲಯಗಳಲ್ಲಿ ಸುಸ್ಥಿರ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಸಾಧನೆಯ ಮೂಲಕ ಜಾಗತಿಕ ಚಾಂಪಿಯನ್ ಗಳಾಗಿ ಹೊರಹೊಮ್ಮಬೇಕು. ಅಂತಹ ವಲಯಗಳಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮವೂ ಸಹ ಒಂದಾಗಿದೆ ಎಂದು ಅವರು ತಿಳಿಸಿದರು.

    

ಸ್ಟಾರ್ ಮತ್ತು ಡಿಸ್ನಿ ಇಂಡಿಯಾದ ಅಧ್ಯಕ್ಷ ಹಾಗೂ ಉದ್ಯಮದ ಪ್ರಮುಖ ಧ್ವನಿಯಾದ ಉದಯಶಂಕರ್ ಅವರು, “ಮಾಧ್ಯಮ ಮತ್ತು ಮನರಂಜನಾ ಉದ್ಯಮ, ಸೃಜನಶೀಲ ಆರ್ಥಿಕತೆಯ ಅತ್ಯಂತ ಪ್ರಮುಖ ಭಾಗವಾಗಿದೆ’’ಎಂದು ಅಭಿಪ್ರಾಯವ್ಯಕ್ತಪಡಿಸಿದರು.  ಉದ್ಯೋಗ ಮತ್ತು ವ್ಯಾಪಾರ ಸೃಷ್ಟಿಸುವ ಜೊತೆಗೆ ಭಾರತ ಜಾಗತಿಕ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಲಿದೆಎಂದರು. ಆದರೆ ಅವರು ಭಾರತೀಯ ಮಾಧ್ಯಮ ಉದ್ಯಮವು ವಿಶೇಷವಾಗಿ ಮುದ್ರಣ ಮತ್ತು ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮಗಳು ಹೆಚ್ಚಿಗೆ ಜಾಹೀರಾತು ಆದಾಯವನ್ನೇ ಅವಲಂಬಿಸಿವೆ ಮತ್ತು ಕೋವಿಡ್-19 ಸಾಂಕ್ರಾಮಿಕ ಅಂತಹ ವ್ಯವಸ್ಥೆ ಅತ್ಯಂತ ಪ್ರಮುಖ ಹಿನ್ನಡೆಗೆ ಕಾರಣ ಎಂಬುದನ್ನು ಸಾಬೀತುಪಡಿಸಿದೆ ಎಂದರು. “ಉದ್ಯಮ ಬೆಳೆಯಬೇಕಾದರೆ ಅದು ಜಾಹಿರಾತು ಮೇಲಿನ ತನ್ನ ಅವಲಂಬನೆಯಿಂದ ಹೊರಬರುವ ಅಗತ್ಯವಿದೆ ಎಂದು ಹೇಳಿದರು.

ಗೂಗಲ್ ಸಂಜಯ್ ಗುಪ್ತಾ, ಕೋವಿಡ್ ನಿಂದಾಗಿ ದೇಶದಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಸಂಪೂರ್ಣವಾಗಿ ಸ್ಥಬ್ಧಗೊಂಡಿದೆ. ವಲಯ 2020-21ರಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 15 ಬಿಲಿಯನ್ ಅಮೆರಿಕನ್ ಡಾಲರ್ ಗೆ ಕುಸಿಯಲಿದೆ. ಆದರೆ ಸೃಜನಶೀಲ ಶಕ್ತಿ ಕೇಂದ್ರಗಳ ಮೂಲಕ ಅದು ಗರಿಗೆದರಿ ಮತ್ತೆ ಸಾಮರ್ಥ್ಯವನ್ನು ಸಾಬೀತುಪಡಿಸುವ ಬಲಹೊಂದಿದೆ ಎಂದರು. ತೆರಿಗೆ ನೀತಿಗಳನ್ನು ಸರಳೀಕರಣಗೊಳಿಸಬೇಕು ಮತ್ತು ಉದ್ಯಮ ತನ್ನ ಸಾಮರ್ಥ್ಯವನ್ನು ಬಳಸಿಕೊಂಡು ಸಂಪೂರ್ಣವಾಗಿ ಬೆಳೆಯಲು ಅಗತ್ಯ ನಿಯಂತ್ರಣಗಳಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು.

ಎಫ್ಐಸಿಸಿಐ ಫ್ರೇಮ್ಸ್ ವರ್ಚುಯಲ್ ಸಭೆ ಜುಲೈ 11 ವರೆಗೆ ಮುಂದುವರಿಯಲಿದೆ. ಉದ್ಯಮದ ನುರಿತ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವರು ಮತ್ತು ಮಾಧ್ಯಮ ಹಾಗೂ ಮನರಂಜನಾ ವಲಯದ ನಾನಾ ಆಯಾಮಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳುವರು. 2020 ಎಫ್ಐಸಿಸಿಐ ಫ್ರೇಮ್ಸ್ ಗೆ ಇಟಲಿ ಆದ್ಯತಾ ರಾಷ್ಟ್ರ (ಫೋಕಸ್ ಸ್ಟೇಟ್ ) ಆಗಿದೆ.

***



(Release ID: 1637057) Visitor Counter : 186