PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 06 JUL 2020 6:18PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

 

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತ ಇತ್ತೀಚಿನ ವರದಿ: 1100ದಾಟಿದ ಕೋವಿಡ್ ಪ್ರಯೋಗಾಲಯಗಳ ಸಂಖ್ಯೆ; ಚೇತರಿಕೆಯ ಪ್ರಕರಣಗಳ ಸಂಖ್ಯೆ 4.24 ಲಕ್ಷಕ್ಕೂ ಅಧಿಕ, ಸಕ್ರಿಯ ಪ್ರಕರಣಗಳಿಗಿಂತಲೂ ಒಂದು ಲಕ್ಷ ಅಧಿಕ; ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.60.86ಕ್ಕೆ ಸುಧಾರಣೆ

ದೇಶದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ 10 ದಶಲಕ್ಷ (1ಕೋಟಿ) ದಾಟಿದ್ದು ಮೈಲಿಗಲ್ಲಿನ ಸಾಧನೆ ಮಾಡಿದೆ. ಇದು ವ್ಯಾಪಕ ಪರೀಕ್ಷೆಯ ಮಹತ್ವವನ್ನು ಸಂಕೇತಿಸಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಹಲವು ಕ್ರಮಗಳೊಂದಿಗೆ  ಪರೀಕ್ಷೆ, ಪತ್ತೆ, ಚಿಕಿತ್ಸೆಯ ಕಾರ್ಯತಂತ್ರಕ್ಕೆ ಗಮನಹಸಿರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 3,46,459 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರೊಂದಿಗೆ ಈಗ ಒಟ್ಟು ಪರೀಕ್ಷಿಸಲಾದ ಮಾದರಿಗಳ ಸಂಖ್ಯೆ 1,01,35,525 ಆಗಿದೆ. 1105 ಪ್ರಯೋಗಾಲಯಗಳು ಜನರು ಕೋವಿಡ್ ಪರೀಕ್ಷೆಗೆ ಒಳಪಡಲು ನೆರವಾಗಿದೆ.

ಕೇಂದ್ರ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಗಮನಾರ್ಹ ಪ್ರಯತ್ನದ ಫಲವಾಗಿ ಕೋವಿಡ್ -19ರ ನಿಗ್ರಹ ಮತ್ತು ನಿರ್ವಹಣೆಯಿಂದ ಕೋವಿಡ್ -19ರಿಂದ ಗುಣಮುಖರಾದ ರೋಗಿಗಳ ಸಂಖ್ಯೆ ಇಂದು  4,24,432ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 15,350 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಕೋವಿಡ್ -19 ಸಕ್ರಿಯ ಪ್ರಕರಣಗಳಿಗಿಂತಲೂ 1,71,145ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ಚೇತರಿಕೆ ದರ ಶೇ. 60.86 ಆಗಿದೆ. ಒಟ್ಟ 2,53,287 ಸಕ್ರಿಯ ಪ್ರಕರಣಗಳಿದ್ದು, ಸೂಕ್ತ ವೈದ್ಯಕೀಯ ನಿಗಾದಲ್ಲಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1636823

ರಾಷ್ಟ್ರೀಯ ಕೋವಿಡ್ ದೃಢಪಟ್ಟ ದರ ಶೇ.6.73 ಆಗಿದೆ. ಹೆಲವು ರಾಜ್ಯಗಳಲ್ಲಿ ಪಾಸಿಟಿವ್ ದರ ಇಳಿಕೆಯಾಗಿದೆ; ದೆಹಲಿಯಲ್ಲಿ ಕೇಂದ್ರ ಸರ್ಕಾರದ ಪ್ರಯತ್ನದ ಫಲವಾಗಿ ಪರೀಕ್ಷೆಯಲ್ಲಿ ಗಣನೀಯ ಏರಿಕೆಯಾಗಿದೆ ಮತ್ತು ಸೋಂಕಿನ ದರ ಇಳಿಕೆಯಾಗಿದೆ

ಸಂಘಟಿತ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ, ಕೋವಿಡ್  ಪರೀಕ್ಷೆಯನ್ನು ಹೆಚ್ಚಿಸಿದ್ದು, ಪ್ರಾಮಾಣಿಕ ಸಂಪರ್ಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸಾಲಯ ನಿರ್ವಹಣೆ ಮಾಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಗಣನೀಯವಾಗಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ನೆರವಾಗಿದೆ. ಇದು ದೇಶದ ಸೋಂಕು ದೃಢತೆ ದರವನ್ನು ತಗ್ಗಿಸಿದ್ದು, ಪ್ರಸ್ತುತ ಈ ದರ ಶೇ. 6.73 ಆಗಿದೆ. ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ, ಪರೀಕ್ಷೆಯಲ್ಲಿ ಹೆಚ್ಚಳವನ್ನು ಖಚಿತಪಡಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳಿಗೆ ಕೇಂದ್ರ ಸರ್ಕಾರವು ಗಮನಾರ್ಹವಾಗಿ ಉತ್ತೇಜನ ನೀಡಿದೆ. ಭಾರತ ಸರ್ಕಾರದ ಸಂಘಟಿತ ಮತ್ತು ಕೇಂದ್ರೀಕೃತ ಪ್ರಯತ್ನಗಳ ಪರಿಣಾಮವಾಗಿ, ದಿನಕ್ಕೆ ಸರಾಸರಿ 5481 (1 ರಿಂದ 5 ಜೂನ್ 2020) ಮಾತ್ರ ಪರೀಕ್ಷಿಸಲಾಗುತ್ತಿದ್ದ ಮಾದರಿಗಳ ಸಂಖ್ಯೆ 1 ರಿಂದ 5 ಜುಲೈ 2020 ರವರೆಗಿನ ಅವಧಿಯಲ್ಲಿ ದಿನಕ್ಕೆ ಸರಾಸರಿ 18,766 ಮಾದರಿಗಳನ್ನು ತಲುಪಿದ್ದು ಭಾರಿ ಏರಿಕೆ ಕಂಡಿದೆ. ದೆಹಲಿಯಲ್ಲಿ ಗಣನೀಯವಾಗಿ ಏರುತ್ತಿರುವ ಪರೀಕ್ಷೆಯ ಫಲವಾಗಿ, ಧನಾತ್ಮಕತೆಯ ಪ್ರಮಾಣ ಕಳೆದ ಮೂರು ವಾರಗಳಲ್ಲಿ ಶೇ.30ರಿಂದ ಶೇ.10ಕ್ಕೆ ಇಳಿದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1636768

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ರಸಗೊಬ್ಬರದ ಕೊರತೆ ಇಲ್ಲ: ಶ್ರೀ ಗೌಡ

ದೇಶಾದ್ಯಂತ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರದ  ಕೊರತೆ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿ, ಅಗತ್ಯ ಪ್ರಮಾಣದ ರಸಗೊಬ್ಬರವನ್ನು ಈಗಾಗಲೇ ಪೂರೈಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿರೀಕ್ಷೆಗಿಂತಲೂ ಉತ್ತಮ ಮುಂಗಾರಿನ ಹಿನ್ನೆಲೆಯಲ್ಲಿ ರಸಗೊಬ್ಬರಗಳ ಡಿಬಿಟಿ ಮಾರಾಟ ಈ ಮುಂಗಾರಿನ ಮೇ ಮತ್ತು ಜೂನ್ ಅವಧಿಯಲ್ಲಿ ದೇಶದಾದ್ಯಂತ ಗಣನೀಯ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1636792

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ತುರ್ತು ಸ್ಪಂದನಾ ಕಾರ್ಯಕ್ರಮಕ್ಕಾಗಿ  ವಿಶ್ವಬ್ಯಾಂಕ್ ಮತ್ತು ಭಾರತ ಸರ್ಕಾರದ ನಡುವೆ $750ದಶಲಕ್ಷ ಒಪ್ಪಂದಕ್ಕೆ ಅಂಕಿತ

ಕೋವಿಡ್ 19 ಬಿಕ್ಕಟ್ಟಿನಿಂದ ತೀವ್ರ ಬಾಧಿತವಾಗಿರುವ ಸೂಕ್ಷ್ಮ, ಸಣ್ಣ, ಮತ್ತು ಮಧ್ಯಮ ಉದ್ದಿಮೆಗಳ (ಎಂ.ಎಸ್.ಎಂ.ಇ.)ಲ್ಲಿ ಹೆಚ್ಚಿನ ಹಣ ಹರಿವಿನ ಬೆಂಬಲಕ್ಕಾಗಿ ವಿಶ್ವ ಬ್ಯಾಂಕ್ ನೊಂದಿಗೆ ಭಾರತ ಸರ್ಕಾರ ಇಂದು 750 ದಶಲಕ್ಷ ಡಾಲರ್ ಗಳ ಎಂ.ಎಸ್.ಎಂ.ಇ. ತುರ್ತು ಸ್ಪಂದನಾ ಕಾರ್ಯಕ್ರಮಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಿದೆ. ವಿಶ್ವಬ್ಯಾಂಕ್ ನ ಎಂ.ಎಸ್.ಎಂ.ಇ. ತುರ್ತು ಸ್ಪಂದನಾ ಕಾರ್ಯಕ್ರಮವು 1.5 ದಶಲಕ್ಷ ಎಂ.ಎಸ್.ಎಂ.ಇ.ಗಳ ಸದ್ಯದ ಹಣ ಹರಿವು ಮತ್ತು ಸಾಲದ ಅಗತ್ಯವನ್ನು ಪೂರೈಸಲಿದ್ದು, ಪ್ರಸಕ್ತ ಶಾಕ್ ನ ಪರಿಣಾಮದಿಂದ ಪುಟಿದೇಳಲು ನೆರವಾಗಲಿದೆ ಮತ್ತು ಲಕ್ಷಾಂತರ ಉದ್ಯೋಗವನ್ನು ಉಳಿಸಲಿದೆ. ಕಾಲಾನಂತರದಲ್ಲಿ ಎಂಎಸ್‌ಎಂಇ ವಲಯವನ್ನು ಮುನ್ನಡೆಸಲು ಅಗತ್ಯವಿರುವ ವಿಶಾಲವಾದ ಸುಧಾರಣೆಗಳ ನಡುವೆ ಇದು ಮೊದಲ ಹೆಜ್ಜೆಯಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1636790

ಕೋವಿಡ್ 19 ಡ್ಯಾಷ್ ಬೋರ್ಡ್ ನ 4ನೇ ನವೀಕೃತ ಆವೃತ್ತಿ ಪ್ರಕಟಿಸಿದ ಎನ್.ಎ.ಟಿ.ಎಂ.ಓ.

ರಾಷ್ಟ್ರೀಯ ಅಟ್ಲಾಸ್ ಮತ್ತು ವಿಷಯಾಧಾರಿತ ನಕಾಶೆ ಸಂಸ್ಥೆ (ಎನ್.ಎ.ಟಿ.ಎಂ.ಓ.) ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನ ಸಂಸ್ಥೆಯಾಗಿದ್ದು, ಕೋವಿಡ್ -19 ಡ್ಯಾಷ್ ಬೋರ್ಡ್ ನ 4ನೇ ನವೀಕೃತ ಆವೃತ್ತಿಯನ್ನು ತನ್ನ ಅಧಿಕೃತ ಪೋರ್ಟಲ್  http://geoportal.natmo.gov.in/Covid19/ ನಲ್ಲಿ ದಿನಾಂಕ 2020ರ ಜೂನ್ 19ರಂದು ಪ್ರಕಟಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1636782

ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: ರಾಜಧಾನಿ ತಿರುವನಂತಪುರಂ ನಗರದಲ್ಲಿ ತ್ರಿವಳಿ ಲಾಕ್‌ ಡೌನ್ ಬೆಳಗ್ಗೆ 6 ಗಂಟೆಯಿಂದ ಪ್ರಾರಂಭವಾಗಿದ್ದು, 100 ವಾರ್ಡ್‌ಗಳಾದ್ಯಂತ ರಾಜ್ಯ ರಾಜಧಾನಿ ಸಂಪರ್ಕಿಸುವ ನೇರ ಮತ್ತು ಪರೋಕ್ಷ ರಸ್ತೆಗಳ ಎಲ್ಲಾ ಗಡಿ ಬಿಂದುಗಳನ್ನು ಪೊಲೀಸರು ಬಂದ್ ಮಾಡಿದ್ದು, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹು ಹಂತದ ಭದ್ರತೆಯಡಿ ಬಂದಿವೆ. ಪಾರ್ಸೆಲ್‌ ಗಳಲ್ಲಿ ಆಹಾರ ಪೊಟ್ಟಣಗಳನ್ನು ಒದಗಿಸಲು ಶೀಘ್ರದಲ್ಲೇ ಹತ್ತು ಬಜೆಟ್ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮನೆ ವಿತರಣಾ ವ್ಯವಸ್ಥೆಯೂ ಇರುತ್ತದೆ. ಎರ್ನಾಕುಲಂ ಜಿಲ್ಲೆಯಲ್ಲಿ ಈಗಿನಂತೆ ತ್ರಿವಳಿ ಲಾಕ್ ಡೌನ್ ವಿಧಿಸುವ ಪರಿಸ್ಥಿತಿ ಇಲ್ಲ ಎಂದು ಸಚಿವ ವಿ.ಎಸ್.ಸುನೀಲ್ ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಆರು ಹೊಸ ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿದೆ. ಕೋವಿಡ್ -19ರ 225 ಹೊಸ ಸೋಂಕಿನ ಪ್ರಕರಣಗಳು ನಿನ್ನೆ ರಾಜ್ಯದಲ್ಲಿ ದೃಢ ಪಟ್ಟಿವೆ. 2,228 ರೋಗಿಗಳು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ ಮತ್ತು 1,77,995 ವಿವಿಧ ಜಿಲ್ಲೆಗಳಲ್ಲಿ ನಿಗಾದಲ್ಲಿದ್ದಾರೆ.
  • ಕರ್ನಾಟಕ: ರಾಜ್ಯದ ಖಾಸಗಿ ಆಸ್ಪತ್ರೆಗಳು ಕೋವಿಡ್ -19 ರೋಗಿಗಳಿಗೆ ಮನೆ ಪ್ರತ್ಯೇಕೀಕರಣ ಪ್ಯಾಕೇಜ್‌ಗಳನ್ನು ನೀಡಿವೆ; 7 ದಿನಗಳ ಪ್ಯಾಕೇಜ್ ಗೆ 2,450 ರೂ.; ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಅಡಿಯಲ್ಲಿ ವಿಮೆ ನೀಡಲಾಗುವುದು. ಭಾನುವಾರ ದಾಖಲಾದ 1,925 ಕೋವಿಡ್- ಸೋಂಕಿನ ಪ್ರಕರಣಗಳಲ್ಲಿ ಶೇ.69.8 (1,345 ಪ್ರಕರಣಗಳು)ಕ್ಕೆ ಕರ್ನಾಟಕದಲ್ಲಿ ಯಾವುದೇ ಸಂಪರ್ಕಗಳು ಅಥವಾ ಪ್ರಯಾಣದ ಇತಿಹಾಸವಿಲ್ಲ. ನಿನ್ನೆ ತನಕ ಒಟ್ಟು ಸೋಂಕಿನ ಪ್ರಕರಣಗಳು: 23,474 ಸಕ್ರಿಯ ಪ್ರಕರಣಗಳು: 13,251 ಸಾವುಗಳು: 372.
  • ಆಂಧ್ರಪ್ರದೇಶ: ಪರೀಕ್ಷೆ ನಡೆಸುವುದು ಮತ್ತು ಫಲಿತಾಂಶ ನೀಡುವುದರ ನಡುವೆ ಅಂತರವಿದೆ ಎಂಬುದನ್ನು ಗಮನಿಸಿದ ವಿಶೇಷ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಕೆ.ಎಸ್.ಜವಾಹರ್ ರೆಡ್ಡಿ ಅವರು ತುರ್ತು ಮತ್ತು ಪ್ರಕರಣಗಳ ಆಧಾರದ ಮೇಲೆ ಪರೀಕ್ಷಾ ಪ್ರಕ್ರಿಯೆಗೆ ಆದ್ಯತೆ ನೀಡಲು ಪರೀಕ್ಷೆಗೆ ತೆಗೆದುಕೊಂಡ ಮಾದರಿಗಳನ್ನು ಬಣ್ಣ-ಕೋಡ್ ಮಾಡುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ. ಜುಲೈ 13 ರಿಂದ ಶಾಲೆಗಳನ್ನು ಮತ್ತೆ ತೆರೆಯಲು ರಾಜ್ಯ ನಿರ್ಧರಿಸಿದೆ. ರಾಜ್ಯದಲ್ಲಿ ಪ್ರಾಥಮಿಕ ಶಾಲೆ ವಾರಕ್ಕೆ ಒಂದು ಬಾರಿ ಮತ್ತು ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಿಗೆ ವಾರದಲ್ಲಿ ಎರಡು ಬಾರಿ ತರಗತಿಗಳನ್ನು ನಡೆಸಲಾಗುತ್ತದೆ. 16,712 ಮಾದರಿಗಳ ಪರೀಕ್ಷೆಯ ನಂತರ ಕಳೆದ 24 ಗಂಟೆಗಳಲ್ಲಿ 1322 ಹೊಸ ಪ್ರಕರಣಗಳು, 424 ಬಿಡುಗಡೆ ಮತ್ತು ಏಳು ಸಾವುಗಳು ವರದಿಯಾಗಿದೆ. ಒಟ್ಟು ಪ್ರಕರಣಗಳು: 20,019, ಸಕ್ರಿಯ ಪ್ರಕರಣಗಳು: 10,860, ಬಿಡುಗಡೆ: 8920, ಸಾವು: 239.
  • ತೆಲಂಗಾಣ: ಕಾಲೋನಿ ಮತ್ತು ಕೊಳೆಗೇರಿಗಳಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ವಿಸ್ತರಿಸಲು ಮತ್ತು ಬಸ್ತಿ ದವಾಖಾನರ ಸೇವೆಗಳನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಲು, ಬೃಹತ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಶೀಘ್ರದಲ್ಲೇ ನಗರದ ವಿವಿಧ ಭಾಗಗಳಲ್ಲಿ ಇಂತಹ 33 ಚಿಕಿತ್ಸಾಲಯಗಳನ್ನು ಪ್ರಾರಂಭಿಸುತ್ತಿದೆ. ನಿನ್ನೆ ತನಕ ವರದಿಯಾದ ಒಟ್ಟು ಪ್ರಕರಣಗಳು: 23,902, ಸಕ್ರಿಯ ಪ್ರಕರಣಗಳು: 10904, ಸಾವು: 295, ಬಿಡುಗಡೆ: 12703.
  • ಮಹಾರಾಷ್ಟ್ರ: ರಾಜ್ಯದಲ್ಲಿ ಪ್ರಸ್ತುತ ಕೋವಿಡ್ -19 ರೋಗಿಗಳ ಸಂಖ್ಯೆ 2,06,619. ಕಳೆದ 24 ಗಂಟೆಗಳಲ್ಲಿ 6,555 ಹೊಸ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ 1.11 ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ಗುಣಪಡಿಸಿ ರಾಜ್ಯದ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 86,040 ಕ್ಕೆ ತಲುಪಿದೆ. ಇನ್ನೂ 151 ರೋಗಿಗಳ ಸಾವಿನೊಂದಿಗೆ, ರಾಜ್ಯದಲ್ಲಿ ಇದುವರೆಗೆ ಒಟ್ಟು ಸಾವುಗಳು 8,822 ತಲುಪಿದೆ. ನಗರದಲ್ಲಿ ಸಾರ್ವತ್ರಿಕ ಪರೀಕ್ಷೆಯನ್ನು ಪ್ರಾರಂಭಿಸಲು ಬಿಎಂಸಿ ಒಂದು ಲಕ್ಷ ಐಸಿಎಂಆರ್ ಅನುಮೋದಿತ ತ್ವರಿತ ಆಂಟಿಜೆನ್ ಪರೀಕ್ಷಾ ಕಿಟ್‌ಗಳನ್ನು ಖರೀದಿಸಿದೆ. ಎಲ್ಲಾ ರೋಗಲಕ್ಷಣದ ಕೋವಿಡ್-19 ಶಂಕಿತರಿಗೆ ಮತ್ತು ಸಹ-ಅಸ್ವಸ್ಥತೆಯೊಂದಿಗೆ ರೋಗ ಲಕ್ಷಣ ರಹಿತ ಹೆಚ್ಚಿನ ಅಪಾಯದ ಸಂಪರ್ಕಗಳಿಗೆ ಈ ಪರೀಕ್ಷೆಯನ್ನು ಶಿಫಾರಸು ಮಾಡಲಾಗಿದೆ.
  • ಗುಜರಾತ್: ಗುಜರಾತ್‌ ನಲ್ಲಿ, ಕೋವಿಡ್ -19 ಪ್ರಕರಣಗಳ ಸಂಖ್ಯೆ 36,123 ಕ್ಕೆ ತಲುಪಿದ್ದು, 24 ಗಂಟೆಗಳ ಅವಧಿಯಲ್ಲಿ 725 ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಗರಿಷ್ಠ 218 ಪ್ರಕರಣಗಳು ಸೂರತ್‌ ನಿಂದ ವರದಿಯಾಗಿದ್ದರೆ, ಅಹಮದಾಬಾದ್‌ ನಲ್ಲಿ 162 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡ ನಂತರ 486 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ, ಕೋವಿಡ್ -19 ನಿಂದ ಚೇತರಿಸಿಕೊಂಡ ಒಟ್ಟು ರೋಗಿಗಳು 25,900ಕ್ಕೆ ಏರಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8,278 ಕ್ಕೆ ಇಳಿದಿದೆ.
  • ರಾಜಸ್ಥಾನ: 632 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ, ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ 20,164ಕ್ಕೆ ಏರಿದೆ. ಪ್ರತಾಪಗಢ ಜಿಲ್ಲೆ -65, ಜೋಧ್‌ಪುರ ಮತ್ತು ಬಿಕಾನೇರ್ ತಲಾ 57 ಪ್ರಕರಣಗಳನ್ನು ದಾಖಲಾಗಿವೆ. ರಾಜಸ್ಥಾನವು ದೇಶದ ಅತಿ ಹೆಚ್ಚು ಚೇತರಿಕೆ ಪ್ರಮಾಣ ಶೇ.79 ರ ರಾಜ್ಯವಾಗಿದೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಭಾನುವಾರ 326 ಹೊಸ ಪ್ರಕರಣಗಳು ಮತ್ತು 10 ಸಾವುಗಳು ವರದಿಯಾಗಿವೆ, ಇದು ರಾಜ್ಯದ ಕೋವಿಡ್-19 ರ ಸಂಖ್ಯೆಯನ್ನು 14,930 ಕ್ಕೆ ಹೆಚ್ಚಳ ಮಾಡಿದೆ. ರಾಜ್ಯದಲ್ಲಿ 2,911 ಸಕ್ರಿಯ ಪ್ರಕರಣಗಳಿದ್ದು, 11,411 ಚೇತರಿಕೆ ಮತ್ತು 608 ಸಾವುಗಳು ಇಲ್ಲಿಯವರೆಗೆ ನಡೆದಿವೆ. ಭಾನುವಾರ ವರದಿಯಾದ 326 ಪ್ರಕರಣಗಳಲ್ಲಿ 64 ಪ್ರಕರಣಗಳು ಗ್ವಾಲಿಯರ್‌ ನಿಂದ ವರದಿಯಾಗಿದ್ದು, ಭೋಪಾಲ್ 61 ಪ್ರಕರಣಗಳು ಮತ್ತು ಮೊರೆನಾ 36 ಪ್ರಕರಣಗಳನ್ನು ದಾಖಲಿಸಿವೆ. ಭಾರತದ ದೊಡ್ಡ ರಾಜ್ಯಗಳಲ್ಲಿ ಮಧ್ಯಪ್ರದೇಶವು ಎರಡನೇ ಅತ್ಯುತ್ತಮ ಚೇತರಿಕೆ ಪ್ರಮಾಣವನ್ನು ಹೊಂದಿದೆ.
  • ಛತ್ತೀಸಗಢ: ಛತ್ತೀಸಗಢದಲ್ಲಿ 46 ಹೊಸ ರೋಗಿಗಳನ್ನು ಗುರುತಿಸಲಾಗಿದ್ದು, ರಾಜ್ಯದ ಒಟ್ಟು ಕೋವಿಡ್-19 ಸಂಖ್ಯೆ 3,207ಕ್ಕೆ ಏರಿದೆ. ಇತ್ತೀಚಿನ ವರದಿ ಪ್ರಕಾರ ರಾಜ್ಯದಲ್ಲಿ 615 ಸಕ್ರಿಯ ರೋಗಿಗಳಿದ್ದಾರೆ.
  • ಗೋವಾ: 77 ಹೊಸ ಕೋವಿಡ್-19 ಸೋಂಕಿತ ರೋಗಿಗಳನ್ನು ಭಾನುವಾರ ಗುರುತಿಸಲಾಗಿದೆ, ಇದು ಸೋಂಕಿತ ರೋಗಿಗಳ ಸಂಖ್ಯೆಯನ್ನು 1,761 ಕ್ಕೆ ಹೆಚ್ಚಿಸಿದೆ. ಈ ಪೈಕಿ 936 ರೋಗಿಗಳು ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 818 ರಷ್ಟಿದೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಇಟಾನಗರ್ ರಾಜಧಾನಿ ಆಡಳಿತವು ಇಂದು ಸಂಜೆ 5 ಗಂಟೆಗೆ ಪ್ರಾರಂಭವಾಗುವ ಲಾಕ್‌ ಡೌನ್ ಸಮಯದಲ್ಲಿ ಜನರು ಸಹಕರಿಸಲು ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲು ಮನವಿ ಮಾಡಿದೆ. ಕೋವಿಡ್- 19ಕ್ಕಾಗಿ ಇತರ ರಾಜ್ಯಗಳಿಂದ ಹಿಂದಿರುಗಿದ ಎಲ್ಲರನ್ನು ಪರೀಕ್ಷಿಸಲಾಗುತ್ತಿದೆ ಎಂದು ಅರುಣಾಚಲ ಪ್ರದೇಶ ಆರೋಗ್ಯ ಇಲಾಖೆ ಹೇಳಿದೆ. ಒಟ್ಟು 26,808 ಮಾದರಿಗಳನ್ನು ಸಂಗ್ರಹಿಸಲಾಗಿದ್ದು 12,925 ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗಿದೆ.
  • ಅಸ್ಸಾಂ: 2020ರ ಜುಲೈ 7 ರಿಂದ ಕೋವಿಡ್- 19 ಸಾಮೂಹಿಕ ಪರೀಕ್ಷೆಗೆ ಸಂಬಂಧಿಸಿದ ಮೊದಲ ಉಪಕ್ರಮವಾಗಿ, ರಾಜ್ಯ ಆರೋಗ್ಯ ಇಲಾಖೆ ಗುವಾಹಟಿ ಪುರಸಭೆಯ ಪಾಂಡು ಪ್ರದೇಶದ ವಾರ್ಡ್ ನಂ .2ರಲ್ಲಿ ಮನೆಗಳಲ್ಲಿ ಮನೆ-ಮನೆಗೆ ತೆರಳಿ ಕೋವಿಡ್ -19 ಪರೀಕ್ಷೆಯನ್ನು ನಡೆಸಲಿದೆ.
  • ಮೇಘಾಲಯ: ಅಸ್ಸಾಂನಿಂದ ಬಂದ ಮತ್ತೊಬ್ಬ ವ್ಯಕ್ತಿಯಲ್ಲಿ ತುರಾದಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಟ್ಟು ಸಕ್ರಿಯ ಪ್ರಕರಣಗಳು 29 ಮತ್ತು ಚೇತರಿಸಿಕೊಂಡವರು 43.
  • ಮಣಿಪುರ: ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಣಿಪುರದ ಮನಶ್ಶಾಸ್ತ್ರಜ್ಞರ ತಂಡವು ಈ ಕೆಳಗಿನ ದೂರವಾಣಿ ಸಂಖ್ಯೆ: 8787457035, 9402751364 ಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಯಾರಿಗಾದರೂ ದೂರವಾಣಿ ಮೂಲಕ ಹಗಲಿರುಳು ಸಹಾಯ ಮಾಡಲು ಲಭ್ಯವಿರುತ್ತದೆ ಎಂದು ಘೋಷಿಸಿದೆ.
  • ಮಿಜೋರಾಂ: ಮಿಜೋರಾಂನಲ್ಲಿ ಇನ್ನೂ 5 ಕೋವಿಡ್ -19 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 191ಕ್ಕೆ, ಸಕ್ರಿಯ ಪ್ರಕರಣಗಳು 58ಕ್ಕೆ ಏರಿದ್ದು 133 ರೋಗಿಗಳು ಚೇತರಿಸಿಕೊಂಡಿದ್ದಾರೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್‌ನಲ್ಲಿ 32 ಹೆಚ್ಚು ಕೋವಿಡ್ -19 ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 622ಕ್ಕೆ ಏರಿದೆ. 391 ಸಕ್ರಿಯ ಪ್ರಕರಣಗಳಿದ್ದು 231 ರೋಗಿಗಳು ಗುಣವಾಗಿದ್ದಾರೆ.

***



(Release ID: 1636918) Visitor Counter : 252