PIB Headquarters
ಕೋವಿಡ್-19 ಪಿ ಐ ಬಿ ದೈನಿಕ ವರದಿ
Posted On:
04 JUL 2020 6:27PM by PIB Bengaluru
ಕೋವಿಡ್-19 ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು
ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತು ಪರಿಷ್ಕೃತ ಮಾಹತಿ: ಕೋವಿಡ್ -19 ಸಕ್ರಿಯ ಪ್ರಕರಣಗಳಿಗಿಂತ ಸುಮಾರು 1.6 ಲಕ್ಷ ಹೆಚ್ಚು ಚೇತರಿಸಿಕೊಂಡ ಪ್ರಕರಣಗಳು; ಚೇತರಿಕೆ ದರ 60.81%; 95 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ
ಚೇತರಿಸಿಕೊಂಡ ಕೋವಿಡ್ -19 ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಲೇ ಇದೆ. ಸಕ್ರಿಯ ಕೋವಿಡ್ -19 ಪ್ರಕರಣಗಳಿಗಿಂತ 1,58,793 ಹೆಚ್ಚು ಚೇತರಿಸಿಕೊಂಡ ಪ್ರಕರಣಗಳಿವೆ. ಇದರ ಪರಿಣಾಮವಾಗಿ, ಚೇತರಿಕೆಯ ಪ್ರಮಾಣವು ಮತ್ತಷ್ಟು ಏರಿಕೆ ಕಂಡು 60.81% ಹಂತ ತಲುಪಿದೆ .ಕಳೆದ 24 ಗಂಟೆಗಳ ಅವಧಿಯಲ್ಲಿ, ಒಟ್ಟು 14,335 ಕೋವಿಡ್ -19 ರೋಗಿಗಳನ್ನು ಗುಣಪಡಿಸಲಾಗಿದೆ, ಒಟ್ಟು ಸಂಚಿತ ಸಂಖ್ಯೆ 3,94,226 ಕ್ಕೆ ಏರಿದೆ. ಪ್ರಸ್ತುತ, 2,35,433 ಸಕ್ರಿಯ ಪ್ರಕರಣಗಳು ಈಗ ಎಲ್ಲವೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ. ದೇಶದಲ್ಲಿ ಪರೀಕ್ಷಾ ಪ್ರಯೋಗಾಲಯಗಳ ಜಾಲವನ್ನು ವಿಸ್ತರಿಸುವ ಪ್ರಯತ್ನಗಳು ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲು ಕಾರಣವಾಗಿದೆ. ಸರ್ಕಾರಿ ವಲಯದ 780 ಲ್ಯಾಬ್ಗಳು ಮತ್ತು 307 ಖಾಸಗಿ ಲ್ಯಾಬ್ಗಳು ಸೇರಿದಂತೆ ದೇಶದಲ್ಲಿ 1087 ಲ್ಯಾಬ್ಗಳಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,42,383 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಒಟ್ಟು ಪರೀಕ್ಷೆಗಳ ಸಂಖ್ಯೆಯನ್ನು 95,40,132 ಕ್ಕೆ ಏರಿದೆ.
ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಮಾನವ ಜೀವನ ಮತ್ತು ಆರ್ಥಿಕತೆಯನ್ನು ಹಾಳುಮಾಡುತ್ತಿರುವ ಈ ಸಂದರ್ಭದಲ್ಲಿ ಬುದ್ಧನ ಸಂದೇಶವು ನಮಗೆ ದಾರಿದೀಪದಂತೆ ಕಾರ್ಯನಿರ್ವಹಿಸುತ್ತದೆ ಎಂದು ರಾಷ್ಟ್ರಪತಿಯವರು ಸಂದೇಶ ನೀಡಿದ್ದಾರೆ
ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಮಾನವ ಜೀವನ ಮತ್ತು ಆರ್ಥಿಕತೆಯನ್ನು ಧ್ವಂಸಗೊಳಿಸುತ್ತಿದ್ದಂತೆ, ಬುದ್ಧನ ಸಂದೇಶವು ನಮಗೆ ದಾರಿದೀಪದಂತೆ ಕಾರ್ಯನಿರ್ವಹಿಸುತ್ತದೆ ಎಂದು ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ. ಸಂತೋಷವನ್ನು ಕಂಡುಕೊಳ್ಳಲು ದುರಾಶೆ, ದ್ವೇಷ, ಹಿಂಸೆ, ಅಸೂಯೆ ಮತ್ತು ಇತರ ಅನೇಕ ದುರ್ಗುಣಗಳನ್ನು ದೂರವಿಡುವಂತೆ ಭಗವಾನ್ ಬುದ್ಧ ಜನರಿಗೆ ಸಲಹೆ ನೀಡಿದ್ದರು. ಈ ಸಂದೇಶವನ್ನು ವ್ಯತಿರಿಕ್ತಗೊಳಿಸಿ, ಪಶ್ಚಾತ್ತಾಪಪಡದ ಮಾನವಕುಲವು ಅದೇ ಹಳೆಯ ಹಿಂಸಾಚಾರ ಮತ್ತು ಪ್ರಕೃತಿಯ ಅವನತಿಗೆ ಒಳಗಾಗುತ್ತದೆ. ಕೊರೊನವೈರಸ್ ನ್ನು ವೈರಾಣು ನಿಧಾನವಾಗುತ್ತಿರುವ ಕ್ಷಣ, ನಮ್ಮ ಮುಂದೆ ಹವಾಮಾನ ಬದಲಾವಣೆಯ ಗಂಭೀರ ಸವಾಲನ್ನು ನಾವು ಹೊಂದಿದ್ದೇವೆ ಎಂಬ ವಿಷಯ ನಮಗೆಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಇಂದು ಧರ್ಮ ಚಕ್ರ ದಿವಾಸ್ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ ಆಯೋಜಿಸಿದ್ದ ವಾಸ್ತವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಮಾತನಾಡುತ್ತಿದ್ದರು
ಧರ್ಮ ಚಕ್ರ ದಿನದಂದು ಪ್ರಧಾನಮಂತ್ರಿ ಭಾಷಣ
ಭಗವಾನ್ ಬುದ್ಧನ ಬೋಧನೆಯ ಬಗ್ಗೆ ಮತ್ತು ಅನೇಕ ಸಮಾಜಗಳು ಮತ್ತು ರಾಷ್ಟ್ರಗಳ ಯೋಗಕ್ಷೇಮದ ಹಾದಿಯನ್ನು ತೋರಿಸುವ “ಎಂಟು ಪಟ್ಟು ಮಾರ್ಗ”ದ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು. ಬೌದ್ಧಧರ್ಮವು ಜನರು, ಮಹಿಳೆಯರು, ಬಡವರು, ಶಾಂತಿ ಮತ್ತು ಅಹಿಂಸೆಗಾಗಿ ಗೌರವವನ್ನು ಕಲಿಸಿಕೊಡುತ್ತದೆ ಮತ್ತು ಈ ಬೋಧನೆಗಳು ಸುಸ್ಥಿರ ಗ್ರಹದ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಭಗವಾನ್ ಬುದ್ಧನು ಭರವಸೆ ಮತ್ತು ಉದ್ದೇಶದ ಬಗ್ಗೆ ಮಾತನಾಡಿದ್ದಾರೆ ಮತ್ತು ಎರಡರ ನಡುವೆ ಬಲವಾದ ಸಂಬಂಧವನ್ನು ಕಂಡಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಭರವಸೆ ಯುವಜನರಿಂದ ಸೃಷ್ಠಿಯಾಗುತ್ತದೆ ಮತ್ತು ಅವರು 21 ನೇ ಶತಮಾನದ ಬಗ್ಗೆ ಹೇಗೆ ಭರವಸೆ ಹೊಂದಿದ್ದಾರೆ ಎಂಬುದರ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು ಮತ್ತು ಜಾಗತಿಕ ಸಮಸ್ಯೆಗಳಿಗೆ ಪ್ರಕಾಶಮಾನವಾದ ಯುವ ಮನಸ್ಸುಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಭಾರತ ಹೊಂದಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇಂದು ವಿಶ್ವವು ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದೆ, ಅದಕ್ಕೆ ಶಾಶ್ವತ ಪರಿಹಾರಗಳು ಭಗವಾನ್ ಬುದ್ಧನ ಆದರ್ಶಗಳಿಂದ ಬರಬಹುದು ಎಂದು ಪ್ರಧಾನಮಂತ್ರಿ ಈ ಸಂದರ್ಭದಲ್ಲಿ ಹೇಳಿದರು.
ಧನ್ವಂತ್ರಿರಾಥ್: ಅಹಮದಾಬಾದ್ನಲ್ಲಿ ಕೋವಿಡ್ ಅಲ್ಲದ ಇತರೆ ಆರೋಗ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲಪಿಸುವುದು
ನಗರದ ಜನರ ಮನೆ ಬಾಗಿಲಿಗೆ ಕೋವಿಡ್ ಅಲ್ಲದ ಇತರ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ಮೊಬೈಲ್ ವ್ಯಾನ್ ಧನ್ವಂತ್ರಿ ರಾಥ್ ಮೂಲಕ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎ.ಎಂ.ಸಿ) ಒಂದು ವಿಶಿಷ್ಟ ಮತ್ತು ನವೀನ ಆರೋಗ್ಯ ಸೇವಾ ಉದಾಹರಣೆಯನ್ನು ನೀಡಿದೆ. ನಗರದ ಅನೇಕ ದೊಡ್ಡ ಆಸ್ಪತ್ರೆಗಳನ್ನು ಕೋವಿಡ್ -19 ಚಿಕಿತ್ಸೆಗಾಗಿ ಮೀಸಲಿಡಲಾಗಿದೆ, ಆದ್ದರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ ಇತ್ಯಾದಿಗಳಿಗೆ ಸಂಬಂಧಿಸಿದ ಕೋವಿಡ್ ಅಲ್ಲದ ಅಗತ್ಯ ಸೇವೆಗಳನ್ನು ಸಹ ಜನರಿಗೆ ಒದಗಿಸುವ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಗಳಿಗೆ ಭೇಟಿ ನೀಡಿದರೆ, ಅವುಗಳಲ್ಲಿ ಹಲವರು ಒಪಿಡಿಗಳನ್ನು ನಿರ್ವಹಿಸುತ್ತಿಲ್ಲ, ಹಾಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ‘ಧನ್ವಂತ್ರಿ ರಾಥ್’ ನಲ್ಲಿ ಆಯುಷ್ ವೈದ್ಯರು, ಅರೆವೈದ್ಯಕೀಯ ಮತ್ತು ಶುಶ್ರೂಷಾ ಸಿಬ್ಬಂದಿ ಮತ್ತು ಎಎಂಸಿಯ ನಗರ ಆರೋಗ್ಯ ಕೇಂದ್ರದ ಸ್ಥಳೀಯ ವೈದ್ಯಕೀಯ ಅಧಿಕಾರಿ ಇದ್ದಾರೆ. ಈ ವ್ಯಾನ್ಗಳು ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿವೆ ಮತ್ತು ಕೋವಿಡ್ ಅಲ್ಲದ ಇತರೆ ಅಗತ್ಯ ಸೇವೆಗಳಿಗೆ ಒಪಿಡಿ ಸೇವೆಗಳನ್ನು ಒದಗಿಸುತ್ತಿವೆ ಮತ್ತು ಅಹಮದಾಬಾದ್ ನಗರದಾದ್ಯಂತದ ಜನರಿಗೆ ತಮ್ಮ ಮನೆ ಬಾಗಿಲಲ್ಲಿ ಕ್ಷೇತ್ರ ವೈದ್ಯಕೀಯ ಸಮಾಲೋಚನೆಗಳನ್ನು ಒದಗಿಸುತ್ತಿವೆ. ಮೊಬೈಲ್ ಮೆಡಿಕಲ್ ವ್ಯಾನ್ಗಳು ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳು, ವಿಟಮಿನ್ ಪೂರಕಗಳು, ನಾಡಿ ಆಕ್ಸಿಮೀಟರ್ ಜೊತೆಗೆ ಮೂಲ ಪರೀಕ್ಷಾ ಉಪಕರಣಗಳು ಸೇರಿದಂತೆ ಎಲ್ಲಾ ಅಗತ್ಯ ಔಷಧಿಗಳನ್ನು ಒಯ್ಯುತ್ತವೆ. ವಿವಿಧ ಕಾರಣಗಳಿಗಾಗಿ ಆಸ್ಪತ್ರೆಯ ಒಪಿಡಿ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗದ ಜನರನ್ನು ನೇರವಾಗಿ ಮನೆಬಾಗಿಲ್ಲಿ ತಲುಪುವ ಆರೋಗ್ಯ ಸೇವೆಗಳ ಜೊತೆಗೆ, ಹೆಚ್ಚಿನ ಕ್ಲಿನಿಕಲ್ ಚಿಕಿತ್ಸೆ ಅಥವಾ ಐಪಿಡಿ ಪ್ರವೇಶ ಅಗತ್ಯವಿರುವವರನ್ನು ಗುರುತಿಸಲು ಧನವಂತ್ರಿರಾಥ್ ಸಹಾಯ ಮಾಡುತ್ತಿದೆ. ಮತ್ತು ಅಗತ್ಯವಿದ್ದಾಗ ಅವರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪುವಂತೆ ನೋಡಿಕೊಂಡಿದ್ದಾರೆ. ನಗರದಾದ್ಯಂತ 120 ಧನ್ವಂತ್ರಿ ರಾಥ್ಸ್ ಗಳಿದ್ದು, ಇಲ್ಲಿಯವರೆಗೆ ಒಟ್ಟು 4.27 ಲಕ್ಷ ಒಪಿಡಿಗಳ ಸಮಾಲೋಚನೆಗಳನ್ನು ಯಶಸ್ವಿಯಾಗಿ ನಡೆಸಿದೆ.
ಮೇಘಾಲಯದ 6700 ಆಶಾಕಾರ್ಯಕರ್ತೆಯರ ಕಣ್ಗಾವಲು ಮತ್ತು ಜಾಗೃತಿ ಕಾರ್ಯಯೋಜನೆಯನ್ನು ಇನ್ನೂ ಬಲಪಡಿಸಿದ್ದಾರೆ
ಮೇಘಾಲಯದಲ್ಲಿ ಸೂಚ್ಯಂಕ ಪ್ರಕರಣ ವರದಿಯಾದ ತಕ್ಷಣ, ಗುರುತಿಸಲ್ಪಟ್ಟ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಸಕ್ರಿಯ ಕೇಸ್ ಸರ್ಚ್ ತಂಡದ ಅವಿಭಾಜ್ಯ ಅಂಗವಾಗಲು ಆಶಾಕಾರ್ಯಕರ್ತೆಯರು ಮತ್ತು ಆಶಾ ವ್ಯವಸ್ಥೆ ಪೂರೈಕೆಯವರುಗಳಿಗೆ ತರಬೇತಿ ನೀಡಲಾಯಿತು. ಮೇಘಾಲಯದ ಮುಂಚೂಣಿ ಕಾರ್ಮಿಕರು ಈ ರೋಗದ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೋವಿಡ್ -19 ವಿರುದ್ಧದ ರಾಜ್ಯದ ಹೋರಾಟವು ಸಮುದಾಯಗಳಲ್ಲಿನ ಆಶಾಕಾರ್ಯಕರ್ತೆಯರು ಬಲವಾದ ಒಕ್ಕೂಟ ಪ್ರದರ್ಶಿಸಿದ್ದಾರೆ. ಎಲ್ಲಾ ಹಂತಗಳಲ್ಲಿ, ಸುಮಾರು 6700 ಆಶಾಕಾರ್ಯಕರ್ತೆಯರುಗಳನ್ನು ಗ್ರಾಮ ಆರೋಗ್ಯ ಜಾಗೃತಿ ಮತ್ತು ಕಂಟೈನ್ಮೆಂಟ್ ಪ್ರದೇಶಗಳಲ್ಲಿನ ಸಕ್ರಿಯ ಕೋವಿಡ್ ಪ್ರಕರಣ ಹುಡುಕಾಟ ತಂಡಗಳಾಗಿ ವಿಭಾಗವಾಗಿಸಲಾಗಿದೆ. ಕೈ ತೊಳೆಯುವುದು, ಮುಖಗವಸು/ ಮುಖವಾಡಗಳು /ಮುಖದಕವರ್ ಧರಿಸುವುದು, ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು ಮುಂತಾದ ಕೋವಿಡ್ -19 ವಿರುದ್ಧ ತಡೆಗಟ್ಟುವ ಕ್ರಮಗಳ ಬಗ್ಗೆ ತಂಡಗಳು ಸಮುದಾಯದ ಜಾಗೃತಿ ಮೂಡಿಸಿದವು. ಸಕ್ರಿಯ ಪ್ರಕರಣದ ಹುಡುಕಾಟದ ಮೂಲಕ ಅವರು ಪರೀಕ್ಷೆ ಮತ್ತು ಚಿಕಿತ್ಸೆಗೆ ಸಮಯೋಚಿತ ಪ್ರವೇಶವನ್ನು ಸಹ ಒದಗಿಸಿದ್ದಾರೆ.
ಪ್ರಧಾನಮಂತ್ರಿ ‘ಅತ್ಮ ನಿರ್ಭಾರ ಭಾರತ್ ಇನ್ನೋವೇಶನ್ ಚಾಲೆಂಜ್’ ಪ್ರಾರಂಭಿಸಿದ್ದಾರೆ
ಈಗಾಗಲೇ ನಾಗರಿಕರು ಬಳಸುತ್ತಿರುವ ಅತ್ಯುತ್ತಮ ಭಾರತೀಯ ಅಪ್ಲಿಕೇಶನ್ಗಳನ್ನು ಗುರುತಿಸಲು ಮತ್ತು ಆಯಾ ವಿಭಾಗಗಳಲ್ಲಿ ಸ್ಕೇಲ್ ಮಾಡಲು ಮತ್ತು ವಿಶ್ವ ದರ್ಜೆಯ ಅಪ್ಲಿಕೇಶನ್ಗಳಾಗುವ ಸಾಮರ್ಥ್ಯವನ್ನು ಹೊಂದಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅತ್ಮ ನಿರ್ಭಾರ ಭಾರತ್ ನಾವಿನ್ಯತೆಯ ಸವಾಲು (ಇನ್ನೋವೇಶನ್ ಚಾಲೆಂಜ್) ಅನ್ನು ಪ್ರಾರಂಭಿಸಿದ್ದಾರೆ. “ಇಂದು ಅವರಲ್ಲಿ ಅಪಾರ ಉತ್ಸಾಹವಿದೆ ವಿಶ್ವ ದರ್ಜೆಯ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ಗಳನ್ನು ರಚಿಸಲು ಟೆಕ್ ಮತ್ತು ಸ್ಟಾರ್ಟ್ ಅಪ್ ಸಮುದಾಯ ನಮ್ಮಲ್ಲಿದೆ. ಅವರ ಆಲೋಚನೆಗಳು ಮತ್ತು ಉತ್ಪನ್ನಗಳನ್ನು ಸುಗಮಗೊಳಿಸಲು @GoI_MeitY ಮತ್ತು @AIMtoInnovate ಅವರು ಅತ್ಮ ನಿರ್ಭಾರ ಭಾರತ್ ನಾವಿನ್ಯತೆಯ ಸವಾಲು (ಇನ್ನೋವೇಶನ್ ಚಾಲೆಂಜ್) ಅನ್ನು ಪ್ರಾರಂಭಿಸುತ್ತಿದ್ದಾರೆ. ಅಂತಹ ಕೆಲಸ ಮಾಡುವ ಉತ್ಪನ್ನವನ್ನು ನೀವು ಹೊಂದಿದ್ದರೆ ಅಥವಾ ಅಂತಹ ಉತ್ಪನ್ನಗಳನ್ನು ರಚಿಸಲು ನಿಮಗೆ ದೂರದೃಷ್ಟಿ ಮತ್ತು ಕಾರ್ಯಪರಿಣತಿ ಇದೆ ಎಂದು ನೀವು ಭಾವಿಸಿದ್ದೀರಿ ಎಂದಾದರೆ ಈ ಸವಾಲು ನಿಮಗಾಗಿ ಇದೆ. ಟೆಕ್ ಸಮುದಾಯದ ನನ್ನ ಎಲ್ಲ ಸ್ನೇಹಿತರು ಭಾಗವಹಿಸಬೇಕೆಂದು ನಾನು ಕೋರುತ್ತೇನೆ ”ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ಹೇಳಿದರು.
ಅತ್ಮ ನಿರ್ಭಾರ ಭಾರತ್ ನಾವಿನ್ಯತೆಯ ಸವಾಲು (ಇನ್ನೋವೇಶನ್ ಚಾಲೆಂಜ್) ನಲ್ಲಿ ಭಾಗವಹಿಸಲು ಟೆಕ್ ಸಮುದಾಯವನ್ನು ಪ್ರಧಾನಮಂತ್ರಿ ಕೋರಿದ್ದಾರೆ
ಅತ್ಮ ನಿರ್ಭಾರ ಭಾರತ್ ನಾವಿನ್ಯತೆಯ ಸವಾಲು (ಇನ್ನೋವೇಶನ್ ಚಾಲೆಂಜ್)ನಲ್ಲಿ ಭಾಗವಹಿಸಬೇಕೆಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೆಕ್ ಸಮುದಾಯವನ್ನು ಕೋರಿದ್ದಾರೆ. ಲಿಂಕ್ಡ್ ಇನ್ ನಲ್ಲಿ ಪ್ರಕಟವಾದ ಸಂದೇಶದಲ್ಲಿ ಪ್ರಧಾನಮಂತ್ರಿ ಭಾರತದಲ್ಲಿ ರೋಮಾಂಚಕ ತಂತ್ರಜ್ಞಾನ ಮತ್ತು ಪರಿಸರ ವ್ಯವಸ್ಥೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಯುವಕರು ತಂತ್ರಜ್ಞಾನ ಕ್ಷೇತ್ರಗಳ ಪರಿಹಾರಗಳನ್ನು ಒದಗಿಸುವಲ್ಲಿ ಹೇಗೆ ಶ್ರೇಷ್ಠರಾಗಿದ್ದಾರೆ, ಮತ್ತು ಸ್ವದೇಶಿ ಅಪ್ಲಿಕೇಶನ್ಗಳನ್ನು ನವೀಕರಿಸಲು, ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಸ್ಟಾರ್ಟ್ ಅಪ್ ಮತ್ತು ಟೆಕ್ ಪರಿಸರ ವ್ಯವಸ್ಥೆಯಲ್ಲಿ ಸಾಕಷ್ಟು ಉತ್ಸಾಹ ತೋರುತ್ತಿದ್ದಾರೆ, ರಾಷ್ಟ್ರವು ಅತ್ಮ ನಿರ್ಭಾರ ಭಾರತ ರಚಿಸುವತ್ತ ಕೆಲಸ ಮಾಡುತ್ತಿರುವಾಗ, ಇದಕ್ಕೆ ಸರಿಯಾದ ನಿರ್ದೇಶನ ಮತ್ತು ತೀವ್ರವೇಗವನ್ನು ನೀಡಲು ಇದು ಉತ್ತಮ ಅವಕಾಶವಾಗಿದೆ ನಮ್ಮ ಮಾರುಕಟ್ಟೆಯನ್ನು ತೃಪ್ತಿಪಡಿಸುವ ಮತ್ತು ಪ್ರಪಂಚದೊಂದಿಗೆ ಸ್ಪರ್ಧಿಸುವಂತಹ ಅತ್ಯುತ್ತಮ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಿ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಪ್ರಧಾನಮಂತ್ರಿ ಅವರ ಮೈಟಿ-ಎನ್ಐಟಿಐ ಡಿಜಿಟಲ್ ಇಂಡಿಯಾ - ಆತ್ಮ ನಿರ್ಭರ್ ಭಾರತ್ ದೃಷ್ಟಿಕೋನವನ್ನು ಸಾಕಾರಗೊಳಿಸಲು ಡಿಜಿಟಲ್ ಇಂಡಿಯಾ ಅತ್ಮ ನಿರ್ಭಾರ ಭಾರತ್ ಇನ್ನೋವೇಶನ್ ಚಾಲೆಂಜ್ ಪ್ರಾರಂಭಿಸಿದೆ
ಭಾರತೀಯ ಅಪ್ಲಿಕೇಶನ್ ಗಳಿಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ನಿರ್ಮಿಸುವ ಉದ್ದೇಶದಿಂದ, ಮೀಟೈ ಅಟಲ್ ಇನ್ನೋವೇಶನ್ ಮಿಷನ್ನ ಸಹಭಾಗಿತ್ವದಲ್ಲಿ – ನಿತಿ ಆಯೋಗ್ ವು ವಿಶೇಷವಾಗಿ ಭಾರತೀಯ ವ್ಯವಹಾರಿಕೋದ್ಯಮಿಗಳು ಮತ್ತು ಸ್ಟಾರ್ಟ್ ಅಪ್ಗಳಿಗಾಗಿ ಡಿಜಿಟಲ್ ಇಂಡಿಯಾ ಆತ್ಮಾ ನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ. ಡಿಜಿಟಲ್ ಭಾರತವನ್ನು ನಿರ್ಮಿಸಲು ಮತ್ತು ಆತ್ಮ ನಿರ್ಭರ್ ಭಾರತ್ ನಿರ್ಮಿಸಲು ಡಿಜಿಟಲ್ ಟೆಕ್ನಾಲಜೀಸ್ ಅನ್ನು ಬಳಸುವ ಪ್ರಧಾನಮಂತ್ರಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಇದು ಸಹಾಯ ಮಾಡುತ್ತದೆ. ಇದು 2 ಟ್ರ್ಯಾಕ್ ಗಳಲ್ಲಿ ಚಲಿಸುತ್ತದೆ: ಈಗಾಗಲೇ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್ಗಳ ಪ್ರಚಾರ ಮತ್ತು ಹೊಸ ಅಪ್ಲಿಕೇಶನ್ಗಳ ಅಭಿವೃದ್ಧಿ.
ನೀಟ್ ಮತ್ತು ಜೆಇಇ ಮುಖ್ಯ ಮತ್ತು ಮುಂಗಡ(ಎಡ್ವಾನ್ಸ್)ಗಳ ಹೊಸ ಪರೀಕ್ಷಾ ದಿನಾಂಕಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಪ್ರಕಟಿಸಿದ್ದಾರೆ
ಆನ್ಲೈನ್ ಮಾಧ್ಯಮಗಳ ಮೂಲಕ ನೀಟ್ ಮತ್ತು ಜೆಇಇ ಮೇನ್ಸ್ & ಅಡ್ವಾನ್ಸ್ನ ಹೊಸ ಪರೀಕ್ಷೆಯ ದಿನಾಂಕಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಅವರು ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾನವ ಸಂಪನ್ಮೂಲ ಸಚಿವಾಲಯದ ಸಲಹೆಯ ಮೇರೆಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು. ಜೆಇಇ ಮುಖ್ಯ ಪರೀಕ್ಷೆ ಈಗ ಸೆಪ್ಟೆಂಬರ್ 1 ರಿಂದ 6,2020 ರವರೆಗೆ ನಡೆಯಲಿದೆ ಮತ್ತು ಜೆಇಇ ಅಡ್ವಾನ್ಸ್ ಪರೀಕ್ಷೆಯು ಸೆಪ್ಟೆಂಬರ್ 27,2020 ರಂದು ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು. ನೀಟ್ ಪರೀಕ್ಷೆಯನ್ನು ಸೆಪ್ಟೆಂಬರ್ 13,2020 ರಂದು ನಡೆಸಲಾಗುವುದು ಎಂದು ಸಚಿವರು ಹೇಳಿದರು.
ರಫ್ತುಗಳಲ್ಲಿ ದೇಶವು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ದೇಶದ ರಫ್ತುದಾರರ ಪ್ರಯತ್ನವನ್ನು ಶ್ರೀ ಪಿಯೂಷ್ ಗೋಯಲ್ ಶ್ಲಾಘಿಸಿದ್ದಾರೆ
ನಿನ್ನೆ ಇಪಿಸಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿಚ ಶ್ರೀ ಗೋಯಲ್, “ಕೋವಿಡ್ -19 ರ ಕಾರಣದಿಂದಾಗಿ ಈ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಹಿನ್ನಡೆ ಉಂಟಾದ ನಂತರ ಪುನಃ ಈಗ ರಫ್ತು ವೇಗವಾಗಿ ಚೇತರಿಸಿಕೊಳ್ಳುತ್ತಿದೆ, ಏಕೆಂದರೆ ಆರ್ಥಿಕ ಚಟುವಟಿಕೆಯು ಪುನರುಜ್ಜೀವನಗೊಳ್ಳುತ್ತದೆ ಮತ್ತು ಅನ್ಲಾಕ್ ಪ್ರಕ್ರಿಯೆಯು ಈಗ ಲಾಭ ಗಳಿಸುವತ್ತ ಸಾಗುತ್ತಿದೆ. ಜೂನ್, 2020ರ ದತ್ತಾಂಶವು ಲಾಭಗಳನ್ನು ಪ್ರತಿಬಿಂಬಿಸುತ್ತದೆ. ಸರಕುಗಳ ರಫ್ತು ಅಂಕಿಅಂಶಗಳು ಕಳೆದ ವರ್ಷದ ಇದೇ ಅವಧಿಯ ಸುಮಾರು 88% ನಷ್ಟು ಮುಟ್ಟಿದೆ” ಎಂದು ಹೇಳಿದರು ಹಾಗೂ ಇಷ್ಟು ಕಡಿಮೆ ಸಮಯದಲ್ಲಿ ಈ ಸಾಧನೆ ಮಾಡಿದ ರಫ್ತುದಾರರ ಪಾತ್ರವನ್ನು ಅವರು ಶ್ಲಾಘಿಸಿದರು. “ಅವರ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ದೃಡ ನಿಶ್ಚಯವು ನಿಜವಾಗಿಯೂ ಫಲ ನೀಡಿದೆ ಎಂದು ಸಚಿವರು ಹೇಳಿದರು. ದೇಶದ ಅನೇಕ ಪ್ರದೇಶಗಳು ಇನ್ನೂ ನಿಯಂತ್ರಣ ವಲಯಗಳ ಅಡಿಯಲ್ಲಿವೆ ಮತ್ತು ನಿರ್ಬಂಧಗಳನ್ನು ಹೊಂದಿರುವುದರಿಂದ ಸಾಧನೆ ಹೆಚ್ಚು ಶ್ಲಾಘನೀಯ. ವಿದೇಶದಲ್ಲಿ ಹೆಚ್ಚಿನ ಮಾರುಕಟ್ಟೆಗಳು ಅಂತಹ ಗಮನಾರ್ಹ ಪುನರಾಗಮನವನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಚಿವರು ಹೇಳಿದರು. ಅನ್ಲಾಕ್ 2.0 ಹೆಚ್ಚಿನ ಸರಳತೆಯ ಅನುಮತಿಗಳೊಂದಿಗೆ ಬಂದಿರುವುದರಿಂದ, ಭವಿಷ್ಯದಲ್ಲಿ ಇನ್ನಷ್ಟು ಸುಧಾರಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ” ಎಂದು ” ಎಂದು ಸಚಿವ ಶ್ರೀ ಪಿಯೂಷ್ ಗೋಯಲ್ ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೃಷಿಕ್ಷೇತ್ರ ಮಟ್ಟದಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕ್ಷೇತ್ರ ಮಟ್ಟದಲ್ಲಿ ಅನುಕೂಲವಾಗುವಂತೆ ಹಲವಾರು ಕ್ರಮಗಳನ್ನು ಕೇಂದ್ರ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ತೆಗೆದುಕೊಂಡಿದೆ
ಕೋವಿಡ್- 19 ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕ್ಷೇತ್ರ ಮಟ್ಟದಲ್ಲಿ ಅನುಕೂಲವಾಗುವಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಖಾರಿಫ್ ಬೆಳೆಗಳ ಅಡಿಯಲ್ಲಿ ಕೃಷಿ ಪ್ರದೇಶದ ವ್ಯಾಪ್ತಿಯಲ್ಲಿ ಬಿತ್ತನೆ ಮಾಡುವಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಕಳೆದ ವರ್ಷದ ಅನುಗುಣವಾದ ಅವಧಿಯಲ್ಲಿ ಬೇಸಿಗೆ ಭತ್ತದ ಅಡಿಯಲ್ಲಿ ಕೃಷಿ ವ್ಯಾಪ್ತಿಯು 49.23 ಲಕ್ಷ ಹೆಕ್ಟೇರ್ಗೆ ಹೋಲಿಸಿದರೆ, ಸುಮಾರು 68.08 ಲಕ್ಷ ಹೆಕ್ಟೇರ್ ಪ್ರದೇಶ ವಿಸ್ತಾರವಾಗಿದೆ
ಕೋವಿಡ್ ನಂತರದ ದಿನಗಳಲ್ಲಿ ಭಾರತವು ಆರ್ಥಿಕ ಶಕ್ತಿಯಾಗಿ ವಿಶ್ವದಲ್ಲಿ ಹೊರಹೊಮ್ಮಲು ಈಶಾನ್ಯ ಭಾರತದ ಪ್ರದೇಶವು ಸಿದ್ಧವಾಗಿದೆ: ಡಾ.ಜಿತೇಂದ್ರ ಸಿಂಗ್
ಕೋವಿಡ್ ನಂತರದ ದಿನಗಳಲ್ಲಿ ಭಾರತವು ತನ್ನ ಬೃಹತ್ ನೈಸರ್ಗಿಕ ಮತ್ತು ಮಾನವ ಕೌಶಲ್ಯ ಸಂಪನ್ಮೂಲಗಳ ಬೆಂಬಲದೊಂದಿಗೆ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಭಾರತದ ಈಶಾನ್ಯ ಪ್ರದೇಶವು ಸಿದ್ಧವಾಗಲಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಕೊರೊನ ಸಾಂಕ್ರಾಮಿಕ ರೋಗದ ಯಶಸ್ವಿ ನಿರ್ವಹಣೆಯಿಂದಾಗಿ ಈಶಾನ್ಯ ಭಾರತದ ಪ್ರದೇಶಗಳ ಮಹಿಳಾ ಶಕ್ತಿ (ಮಾತೃಶಕ್ತಿ) ಆರ್ಥಿಕ ಚಟುವಟಿಕೆಯ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ ಎಂದು ಸಚಿವರು ಹೇಳಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ ಮತ್ತು ಈಶಾನ್ಯ ಪ್ರದೇಶವು ಕೊರೊನ ನಿರ್ವಹಣೆಯ ಮಾದರಿಯಾಗಿ ಹೊರಹೊಮ್ಮಲು ಸಹಾಯ ಮಾಡಿದೆ ಎಂದು ಸಚಿವರು ಹೇಳಿದರು. ವೆಬ್ನಾರ್ ಮೂಲಕ ಈಶಾನ್ಯ ಪ್ರದೇಶದ ಸಮುದಾಯ ಸಂಪನ್ಮೂಲ ಮತ್ತು ನಿರ್ವಹಣಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವಿಧ ಸ್ವಸಹಾಯ ಗುಂಪುಗಳೊಂದಿಗೆ ಸಂವಹನ ಸಚಿವರು ನಡೆಸಿದರು
ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ಮಾಹಿತಿ
- ಮಹಾರಾಷ್ಟ್ರ: ಭಾರತದ ಕೋವಿಡ್ 19 ದೃಢೀಕರಣ ಮೊದಲ ಬಾರಿಗೆ 20,000 ಕ್ಕಿಂತ ಹೆಚ್ಚಾಗಿದೆ, ಮಹಾರಾಷ್ಟ್ರದಲ್ಲಿ 6,364 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಕೋವಿಡ್ ಸಂಖ್ಯೆ 1,92,990 ಕ್ಕೆ ತಲುಪಿದೆ. 1.04 ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ಈಗಾಗಲೇ ಗುಣಪಡಿಸಲಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 79,911 ಆಗಿದೆ. ಮುಂಬೈ ನಗರದಲ್ಲಿ 1,392 ಪ್ರಕರಣಗಳು ವರದಿಯಾಗಿವೆ. ಮುಂಬೈನಲ್ಲಿ ಕೊರೊನ ವೈರಸ್ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದ್ದರೂ ಸಹ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಉಪನಗರಗಳಾದ ಥಾಣೆ, ಕಲ್ಯಾಣ್-ಡೊಂಬಿವಿಲಿ ಮತ್ತು ಮೀರಾ-ಭಾಯಂದರ್ ಹೊಸ ಕೋವಿಡ್ ಹಾಟ್ ಸ್ಪಾಟ್ಗಳಾಗಿ ಮಾರ್ಪಟ್ಟಿವೆ.
- ಗುಜರಾತ್: ಗುಜರಾತ್ ಕಳೆದ 24 ಗಂಟೆಗಳಲ್ಲಿ 687 ಹೊಸ ಕೊರೋನ ವೈರಸ್ ಸಕಾರಾತ್ಮಕ ಪ್ರಕರಣಗಳನ್ನು ದಾಖಲಿಸಿದ್ದು, ಈಗ ಒಟ್ಟಾರೆ ಮೊತ್ತ 34,686 ಕ್ಕೆ ತಲುಪಿದೆ. ಅಲ್ಲದೆ, ರಾಜ್ಯದ ಒಟ್ಟು ಕೋವಿಡ್ -19 ಸಾವಿನ ಸಂಖ್ಯೆ 1,906 ಕ್ಕೆ ಏರಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಎಎಂಸಿ ಹೊಸ 26 ಪ್ರಕರಣಗಳನ್ನು ಪತ್ತೆಹಚ್ಚಿದ ನಂತರ ನಗರದ 26 ಹೊಸ ಪ್ರದೇಶಗಳನ್ನು ಮೈಕ್ರೋ ಕಂಟೇನ್ಮೆಂಟ್ ವಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಎಎಮ್ಸಿಯ ಆರೋಗ್ಯ ಇಲಾಖೆ ಈ ಪ್ರದೇಶಗಳಲ್ಲಿ ಮನೆ ಬಾಗಿಲಿನ ಕಣ್ಗಾವಲು ಮತ್ತು ಸಾಮೂಹಿಕ ತಪಾಸಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
- ರಾಜಸ್ಥಾನ: ಇಂದು ಕೋವಿಡ್ -19 ರ 204 ಹೊಸ ಪ್ರಕರಣಗಳು ಮತ್ತು ಈ ಸಂಬಂದ 3 ಸಾವುಗಳು ವರದಿಯಾಗಿವೆ, ಈ ಮೂಲಕ ಕೊರೋನ ವೈರಸ್ ಸಕಾರಾತ್ಮಕ ರೋಗಿಗಳ ಒಟ್ಟು ಸಂಖ್ಯೆಯನ್ನು 19,256 ಕ್ಕೆ ಏರಿಸಿದೆ.
- ಪ್ರಸ್ತುತ ರಾಜ್ಯದಲ್ಲಿ 3,461 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ಕೋವಿಡ್ -19 ಮೂಲದ ಸಾವಿನ ಸಂಖ್ಯೆ 443 ಆಗಿದೆ. ರಾಜ್ಯವು ಈವರೆಗೆ ಒಟ್ಟು 8.70 ಲಕ್ಷ ಪರೀಕ್ಷೆಗಳನ್ನು ನಡೆಸಿದೆ.
- ಮಧ್ಯಪ್ರದೇಶ: 191 ಹೊಸ ಕೋವಿಡ್ -19 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದು ರಾಜ್ಯದ ಕೊರೊನಾ ವೈರಸ್ ಸಕಾರಾತ್ಮಕ ಪ್ರಕರಣಗಳ ಒಟ್ಟು ಸಂಖ್ಯೆಯನ್ನು 14,297 ಕ್ಕೆ ತಲುಪಿಸಿದೆ. ಪ್ರಸ್ತುತ ರಾಜ್ಯದಲ್ಲಿ 2655 ಸಕ್ರಿಯ ಪ್ರಕರಣಗಳಿದ್ದು, 11049 ಜನರು ಈವರೆಗೆ ಚೇತರಿಸಿಕೊಂಡಿದ್ದಾರೆ.
- ಛತ್ತೀಸ್ ಗಡ: ರಾಜ್ಯದಲ್ಲಿ 40 ಹೊಸ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದ ಒಟ್ಟು ಮೊತ್ತ 3,065 ಕ್ಕೆ ತಲುಪಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 637.
- ಗೋವಾ: 95 ಸಕಾರಾತ್ಮಕ ಪ್ರಕರಣಗಳನ್ನು ಶುಕ್ರವಾರ ಗುರುತಿಸಲಾಗಿದ್ದು, ಇದು ರಾಜ್ಯದ ಕೋವಿಡ್ -19 ರ ಸಂಖ್ಯೆಯನ್ನು 1,482 ಕ್ಕೆ ಏರಿಸಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳು 734.
- ಚಂಡೀಗಡ: ಕೋವಿಡ್ -19 ರ ಕಾರಣದಿಂದಾಗಿ ಪ್ರಸ್ತುತ ಪರಿಸ್ಥಿತಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳ ಪೋಷಕರ ಆರ್ಥಿಕ ಹಿನ್ನೆಲೆಯ ದೃಷ್ಟಿಯಿಂದ, ಕೇಂದ್ರಾಡಳಿತ ಪ್ರದೇಶ ಚಂಡೀಗಡದ ಶಿಕ್ಷಣ ಇಲಾಖೆಯು ಚಂಡೀಗಡ ಆಡಳಿತವು ಸರ್ಕಾರ ಶಾಲೆಗಳಲ್ಲಿ ಕಲಿಯುತ್ತಿರುವ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಮತ್ತು ಮಾಸಿಕ ಶುಲ್ಕ , 2020-21ರ ಶೈಕ್ಷಣಿಕ ವರ್ಷದ ಮೊದಲ ಆರು ತಿಂಗಳಲ್ಲಿ, ಅಂದರೆ ಏಪ್ರಿಲ್ -2020 ರಿಂದ ಸೆಪ್ಟೆಂಬರ್ -2020 ರವರೆಗೆ ಹಣವನ್ನು ಮನ್ನಾ ಮಾಡಲು ನಿರ್ಧರಿಸಿದೆ. 9 ಮತ್ತು 10 ನೇ ತರಗತಿಯಲ್ಲಿ ಕಲಿಯುವ ಒಟ್ಟು ಸುಮಾರು 24500 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದು , ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿವೆ.
- ಪಂಜಾಬ್: ಮುಂಬರುವ ವಾರದಿಂದ ಕೋವಿಡ್ -19 ಕ್ಷಿಪ್ರ ಆಂಟಿಜೆನ್ ಪರೀಕ್ಷೆಗೆ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಮುಖ್ಯಮಂತ್ರಿ ತಿಳಿಸಿದ್ದಾರೆ. ಕನಿಷ್ಠ 1000 ಪರೀಕ್ಷೆಗಳನ್ನು ಒಳಗೊಳ್ಳುವ ಪೈಲಟ್ ಕ್ಷಿಪ್ರ ಆಂಟಿಜೆನ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಕೈಗಾರಿಕೆಗಳನ್ನು ಪುನಃ ತೆರೆಯುವ ಹಿನ್ನೆಲೆಯಲ್ಲಿ ಮತ್ತು ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮರಳಿ ಬರುವ ವಲಸಿಗರ ಮೇಲೆ ಇಂತಹ ಪರೀಕ್ಷೆಗಳನ್ನು ಮಾಡಲಾಗುತ್ತದೆ.
- ಹರಿಯಾಣ: ರಾಷ್ಟ್ರವ್ಯಾಪಿ ಅನ್ಲಾಕ್ -2 ರ ಸಮಯದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಸಾಗುತ್ತಿವೆ ಮತ್ತು ರಸ್ತೆಗಳ ಬಲವರ್ಧನೆ, ಮೆಟ್ರೋ ವಿಸ್ತರಣೆ ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ಕಾರಿಡಾರ್ ವ್ಯವಸ್ಥೆ ಅಭಿವೃದ್ಧಿ ಯೋಜನೆಗಳನ್ನು ಹಂತಹಂತವಾಗಿ ರಾಜ್ಯದಲ್ಲಿ ವೇಗವಾಗಿ ಸಾಗಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು.
- ಹಿಮಾಚಲ ಪ್ರದೇಶ: ಪಾಲಂಪೂರ್ನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಹಿಮಾಲಯನ್ ಜೈವಿಕ ಸಂಪನ್ಮೂಲ ತಂತ್ರಜ್ಞಾನ ಸಂಸ್ಥೆಯ, 38 ನೇ ಸ್ಥಾಪಕರ ವಾರಕಾರ್ಯಕ್ರಮ ಕುರಿತು ವಿಡಿಯೋ ಸಮಾವೇಶ ಮೂಲಕ ಮುಖ್ಯಮಂತ್ರಿ ಅವರು ಮಾತನಾಡಿದರು. ಕೋವಿಡ್ -19 ಪರೀಕ್ಷೆಗಳು, ರಾಜ್ಯದ ತಾಂಡಾ, ಚಂಬಾ ಮತ್ತು ಹಮೀರ್ಪುರ ವೈದ್ಯಕೀಯ ಕಾಲೇಜುಗಳಿಗೆ ಕೋವಿಡ್ -19 ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಉಪಕರಣಗಳು ಮತ್ತು ಲಾಜಿಸ್ಟಿಕ್ ಬೆಂಬಲವನ್ನು ಒದಗಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು. ಗ್ರಾಹಕರಿಗೆ ಆಲ್ಕೋಹಾಲ್ ಮುಕ್ತ ಹ್ಯಾಂಡ್ ಸ್ಯಾನಿಟೈಜರ್ ಮತ್ತು ಗಿಡಮೂಲಿಕೆಗಳ ಸೋಪ್ ತಯಾರಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
- ಕೇರಳ: ರಾಜಧಾನಿ ತಿರುವನಂತಪುರಂನಲ್ಲಿ ಹೈ ಅಲರ್ಟ್ ಮಾಡಲಾಗಿದ್ದು, ಕೋವಿಡ್ -19 ರ ಮತ್ತಷ್ಟು ಹರಡುವಿಕೆಯನ್ನು ಸೀಮಿತಗೊಳಿಸಲು ಹೆಚ್ಚಿನ ಪ್ರದೇಶಗಳನ್ನು ಕೋವಿಡ್ -19 ರ ಧಾರಕ ವಲಯಗಳಾಗಿ ಘೋಷಿಸಲಾಗಿದೆ. ಸರ್ಕಾರಿ ಸಚಿವಾಲಯದ ಹೊರಗೆ ಕರ್ತವ್ಯದಲ್ಲಿದ್ದಾಗ ಅವರಲ್ಲಿ ಒಬ್ಬರು ಸಕಾರಾತ್ಮಕ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಸಶಸ್ತ್ರ ಮೀಸಲು ಶಿಬಿರದ 22 ಪೊಲೀಸರನ್ನು ಬಂಧನದಲ್ಲಿಡಲಾಗಿದೆ. ಎರಡು ದಿನಗಳ ಹಿಂದೆ ಚಿಕಿತ್ಸೆ ಪಡೆದ ವ್ಯಕ್ತಿಯೊಬ್ಬ ಪರೀಕ್ಷೆ ನಡೆಸಿದ ನಂತರ ಧನಾತ್ಮಕ ಫಲಿತಾಂಶ ತೋರಿದ ನಂತರ ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯಲ್ಲಿ 15 ಸಿಬ್ಬಂದಿಯನ್ನು ಸಂಪರ್ಕತಡೆಯಲ್ಲಿ ಇರಿಸಲಾಗಿದೆ. ಇಂದು ನವದೆಹಲಿಯಲ್ಲಿ ಕೋವಿಡ್ನಿಂದ ಮತ್ತೊಬ್ಬ ಕೇರಳೀಯರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಕೋವಿಡ್ ನಿಂದಾಗಿ, ಮಲಯಾಳಿಗಳ ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಕೇರಳದಲ್ಲಿ ನಿನ್ನೆ 211 ಹೊಸ ಕೋವಿಡ್ -19 ಪ್ರಕರಣಗಳು ದೃಢ ಪಟ್ಟಿದ್ದು, ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ . 2,098 ರೋಗಿಗಳು ಇನ್ನೂ ಸೋಂಕಿನ ಚಿಕಿತ್ಸೆಯಲ್ಲಿದ್ದಾರೆ ಮತ್ತು ಒಟ್ಟು 1,77,001 ಜನರನ್ನು ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ವೀಕ್ಷಣೆಗೆ ಒಳಪಡಿಸಲಾಗಿದೆ.
- ತಮಿಳುನಾಡು: ಪುದುಚೇರಿಯಲ್ಲಿ, ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ವಿರೋಧಿಸಿವೆ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ಈ ಸಮಸ್ಯೆಯನ್ನು ಪರಿಹರಿಸಲು ಲೆಫ್ಟಿನೆಂಟ್ ಗವರ್ನರ್ ಶ್ತೀಮತಿ ಕಿರಣ್ಬೇಡಿ ಮತ್ತು ಮುಖ್ಯಮಂತ್ರಿ ಶ್ರೀ ವಿ ನಾರಾಯಣಸಾಮಿ ಅವರ ಸಹಾಯವನ್ನು ಕೋರಿದರು. ಪುದುಚೇರಿಯಲ್ಲಿ ಒಂದು ಸಾವು ಮತ್ತು 80 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 904 ಕ್ಕೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸಾವಿನ ಸಂಖ್ಯೆ 14 ಕ್ಕೆ ತಲುಪಿದೆ. ಜಿಪ್ಮರ್ ಕ್ಯಾಂಪಸ್ನಲ್ಲಿ ಒಬ್ಬ ಆರೋಗ್ಯ ಅಧಿಕಾರಿಗಳು ಸೇರಿದಂತೆ ಕೋವಿಡ್ -19 ರ 20 ಸಕಾರಾತ್ಮಕ ಪ್ರಕರಣಗಳು ವರದಿಯಾದ ನಂತರ, ವಿವರವಾದ ವಿಚಾರಣೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ತಮಿಳುನಾಡು ಭಾರತದ ಎರಡನೇ ಅತಿ ಹೆಚ್ಚು ಪೀಡಿತ ರಾಜ್ಯವಾಗಿದೆ, ಒಟ್ಟು ಕೋವಿಡ್ ಪ್ರಕರಣಗಳು 1ಲಕ್ಷದ ಗಡಿ ದಾಟಿ ನಿನ್ನೆ 102721 ಕ್ಕೆ ತಲುಪಿದೆ. 4329 ಹೊಸ ಪ್ರಕರಣಗಳು, 2357 ಚೇತರಿಕೆಗಳು ಮತ್ತು 64 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು: 42955, ಸಾವುಗಳು: 1385, ಬಿಡುಗಡೆ: 58378, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 23581.
- ಕರ್ನಾಟಕ: ಕೋವಿಡ್ ಲಕ್ಷಣರಹಿತ ಪ್ರಕರಣಗಳ ಮನೆ ಪ್ರತ್ಯೇಕತೆ ಮತ್ತು ಕೋವಿಡ್ ಸೋಂಕಿತರ ಮೃತ ದೇಹಗಳ ಅಂತ್ಯಕ್ರಿಯೆಗಾಗಿ ರಾಜ್ಯವು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬೂತ್ ಮಟ್ಟದ ಕಾರ್ಯಪಡೆ ಸಮಿತಿಗಳನ್ನು ರಚಿಸಲಾಗಿದೆ ಮತ್ತು ಇದು ಕೋವಿಡ್ ನಿರ್ವಹಣೆಗೆ ಮೂಲ ರಚನಾತ್ಮಕ ಮತ್ತು ಕ್ರಿಯಾತ್ಮಕ ಘಟಕವಾಗಿ ಕೆಲಸ ನಿರ್ವಹಿಸಲಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆಗಾಗಿ ಕೇಂದ್ರೀಕೃತ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ ಮತ್ತು ಅದರ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಬೆಂಗಳೂರು ನಗರದಲ್ಲಿ 400 ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುವುದು, ಪ್ರತಿ ವಾರ್ಡ್ಗೆ 2 ಮೀಸಲಿಡಲಾಗುತ್ತದೆ. ಮನೆ ಪ್ರತ್ಯೇಕ ಮಾರ್ಗಸೂಚಿಗಳು ಮತ್ತು ಅಂತ್ಯಕ್ರಿಯೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಇಂದು ಇಡೀ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್, ತುರ್ತು ಸೇವೆಗಳು ಮಾತ್ರ ಲಭ್ಯವಿರುತ್ತವೆ. 1694 ಹೊಸ ಪ್ರಕರಣಗಳು, 471 ಬಿಡುಗಡೆಗಳು ಮತ್ತು 21 ಸಾವುಗಳು ನಿನ್ನೆ ವರದಿಯಾಗಿವೆ; ಬೆಂಗಳೂರು ನಗರದಲ್ಲಿ 994 ಪ್ರಕರಣಗಳು. ಒಟ್ಟು ಸಕಾರಾತ್ಮಕ ಪ್ರಕರಣಗಳು: 19710, ಸಕ್ರಿಯ ಪ್ರಕರಣಗಳು: 10,608 ಹಾಗೂ ಸಾವುಗಳು: 293.
- ಆಂಧ್ರಪ್ರದೇಶ: ಮರಣಪಟ್ಟ ವ್ಯಕ್ತಿಯಿಂದ ಕನಿಷ್ಠ 4-6 ಗಂಟೆಗಳ ಕಾಲದ ನಂತರ ಕೋವಿಡ್ -19 ಹರಡುವುದಿಲ್ಲ, ಎಂದು ತಿಳಿಸಿದ ವಿಶೇಷ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಶ್ರೀ ಕೆ.ಎಸ್.ಜವಾಹರ್ ರೆಡ್ಡಿ ಅವರು ಕೋವಿಡ್ ಸಂತ್ರಸ್ತರ ಶವ ಸಂಸ್ಕಾರಕ್ಕೆ ಅಡ್ಡಿಯಾಗದಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಪ್ರೋಟೋಕಾಲ್ ಪ್ರಕಾರ ಕೋವಿಡ್ -19 ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಅಧಿಕಾರಿಗಳಿಗೆ ಸಹಾಯ ಮಾಡಲು ಶ್ರೀಕಾಕುಲಂನ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸ್ವಯಂಸೇವಕರು ಮುಂದಾಗಿದ್ದಾರೆ. ಕೋವಿಡ್ -19 ಸಂತ್ರಸ್ತರ ಅಂತಿಮ ವಿಧಿಗಳನ್ನು ಗೌರವಯುತವಾಗಿ ನಡೆಸಲು ಮುಂದಾಗಿರುವ ತಮಿಳುನಾಡಿನ ಮುಸ್ಲಿಂ ಎನ್.ಜಿ.ಒ.ದಿಂದ ಪ್ರೇರಿತರಾಗಿ ಜಿಲ್ಲಾಧಿಕಾರಿ ಶ್ರೀ ಜೆ. ನಿವಾಸ್ ಅವರು ಮಾತನಾಡಿ, ಇದನ್ನು ಜಿಲ್ಲೆಯಲ್ಲಿಯೂ ಪುನರಾವರ್ತಿಸಲಾಗಿದೆ. 24,962 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 765 ಹೊಸ ಪ್ರಕರಣಗಳು, 311 ಬಿಡುಗಡೆ ಮತ್ತು 12 ಸಾವುಗಳು ವರದಿಯಾಗಿವೆ. 765 ಪ್ರಕರಣಗಳಲ್ಲಿ 32 ಅಂತರರಾಜ್ಯ ಪ್ರಕರಣಗಳು ಮತ್ತು 6 ಪ್ರಕರಣಗಳು ವಿದೇಶದಿಂದ ಬಂದವು. ಒಟ್ಟು ಪ್ರಕರಣಗಳು: 17,699, ಸಕ್ರಿಯ ಪ್ರಕರಣಗಳು: 9473, ಸಾವು: 218, ಬಿಡುಗಡೆ: 8008.
- ತೆಲಂಗಾಣ: ರಾಜ್ಯದಲ್ಲಿ ಸೋಂಕಿತರಿಂದ ಮನೆ ಪ್ರತ್ಯೇಕಿಸುವ ಕಾರ್ಯತಂತ್ರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ, ರಾಜ್ಯದಲ್ಲಿ ಸುಮಾರು 12,000 ಸಕಾರಾತ್ಮಕ ರೋಗಿಗಳು , ಈಗಾಗಲೇ ಕೋವಿಡ್ -19 ರ ವಿರುದ್ಧ ಹೋರಾಡಲು ‘ಮನೆ ಪ್ರತ್ಯೇಕತೆ’ ಮಾರ್ಗವನ್ನು ತೆಗೆದುಕೊಂಡರು ಮತ್ತು ಅವರಲ್ಲಿ ಅರ್ಧದಷ್ಟು ಜನರು ಚೇತರಿಸಿಕೊಂಡಿದ್ದಾರೆ. ನಿನ್ನೆ ವರದಿಯಾದ ಒಟ್ಟು ಪ್ರಕರಣಗಳು: 20462, ಸಕ್ರಿಯ ಪ್ರಕರಣಗಳು: 9984 ಸಾವುಗಳು: 283, ಬಿಡುಗಡೆ: 10195.
- ಅರುಣಾಚಲ ಪ್ರದೇಶ: ಇಟಾನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ, ಅರುಣಾಚಲ ಪ್ರದೇಶ ಸರ್ಕಾರವು ಸೋಮವಾರ ಜುಲೈ 6, 2020 (ಬೆಳಿಗ್ಗೆ 5) ರಿಂದ ಜುಲೈ 12 2020 ರವರೆಗೆ ಇಟಾನಗರ ರಾಜಧಾನಿ ಪ್ರದೇಶದಲ್ಲಿ ಲಾಕ್ಡೌನ್ ಘೋಷಿಸಿದೆ. ಇಟಾನಗರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಶ್ರೀ ನರೇಶ್ ಕುಮಾರ್ ಅವರು ಈ ಕುರಿತು ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು. ಅರುಣಾಚಲ ಪ್ರದೇಶದಲ್ಲಿ ಗುರುವಾರ ಒಂದೇ ದಿನ ಕೋವಿಡ್ -19 ಪ್ರಕರಣದಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ, 37 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಮತ್ತು ನಿನ್ನೆ ರಾಜ್ಯವು 20 ಹೊಸ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳನ್ನು ದಾಖಲಿಸಿದೆ, ಅದರ ಒಟ್ಟು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 252 ಕ್ಕೆ ಏರಿದೆ, ಅದರಲ್ಲಿ 176 ಸಕ್ರಿಯ ಪ್ರಕರಣಗಳು ಮತ್ತು 75 ಪ್ರಕರಣಗಳು ಚೇತರಿಕೆ ಕಂಡಿವೆ
- ಮಿಜೋರಾಂ: ಮಿಜೋರಾಂನಲ್ಲಿ ಮೂರು ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈಗ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಒಟ್ಟು 32 ಆಗಿದ್ದರೆ, ಈವರೆಗೆ 130 ರೋಗಿಗಳು ಚೇತರಿಸಿಕೊಂಡಿದ್ದಾರೆ.
ವಾಸ್ತವ ಪರಿಶೀಲನೆ
***
(Release ID: 1636916)
Visitor Counter : 230
Read this release in:
Assamese
,
English
,
Hindi
,
Marathi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam