ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕರ್ನಾಟಕದಲ್ಲಿ ಆಶಾ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರ  ಸ್ಫೂರ್ತಿ ದಾಯಕ ಸೇವೆ

Posted On: 03 JUL 2020 2:08PM by PIB Bengaluru

ಕರ್ನಾಟಕದಲ್ಲಿ: ಆಶಾ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರ  ಸ್ಫೂರ್ತಿ ದಾಯಕ ಸೇವೆ

42ಸಾವಿರ ಆಶಾಕಾರ್ಯಕರ್ತೆಯರಿಂದ ಸೂಕ್ಷ್ಮ ಪ್ರದೇಶಗಳ ಗುರುತಿಸುವ ಸಮೀಕ್ಷೆ,

1.59 ಕೋಟಿ ಮನೆಗಳಿಗೆ ಭೇಟಿ

 

  

ಅನ್ನಪೂರ್ಣ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತುಂಗಾನಗರದಲ್ಲಿ ಕೆಲಸ ಮಾಡುತ್ತಿರುವ ಆಶಾಕಾರ್ಯಕರ್ತೆ, ರಾಷ್ಟ್ರೀಯ ಆರೋಗ್ಯ ಮಿಷನ್ ಭಾಗವಾಗಿ ಪರಿಚಯಿಸಲಾದ ನಗರ ಆಶಾ ಕಾರ್ಯಕರ್ತೆಯಾಗಿ 2015ರಿಂದೀಚೆಗೆ ಆಕೆ ಕೆಲಸ ಮಾಡುತ್ತಿದ್ದು, ಕೊಳಚೆ ಪ್ರದೇಶದ 3000 ಜನಸಂಖ್ಯೆಯ ಆರೋಗ್ಯ ರಕ್ಷಣೆಯ ಮೇಲ್ವಿಚಾರಣೆ ನೋಡಿಕೊಳ್ಳುವರು. ಕೋವಿಡ್-19 ಚಟುವಟಿಕೆಗಳ ಭಾಗವಾಗಿ ಆಕೆಯ ಒಂದು ಪ್ರಮುಖ ಕಾರ್ಯವರೆಂದರೆ ಮನೆ ಮನೆ ಸಮೀಕ್ಷೆ ನಡೆಸುವುದು.

ಕೋವಿಡ್-19 ನಿಯಂತ್ರಣದಲ್ಲಿ ರಾಜ್ಯದ ಯಶಸ್ಸಿನಲ್ಲಿ ಕರ್ನಾಟಕದ 42,000 ಆಶಾ ಕಾರ್ಯಕರ್ತೆಯರು ಅತ್ಯಂತ ಪ್ರಮುಖ ಪಾತ್ರವಹಿಸಿದ್ದು, ಅವರು ಆಧಾರಸ್ಥಂಬವಾಗಿ ಹೊರಹೊಮ್ಮಿದ್ದಾರೆ. ಅವರು ಕೋವಿಡ್-19 ಮನೆ ಮನೆ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದೇ ಅಲ್ಲದೆ, ಅಂತರ್ ರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಕೋವಿಡ್-19 ಸೋಂಕಿರುವ ಸಮುದಾಯದ ಇತರರನ್ನು ತಪಾಸಣೆ ನಡೆಸುವ ಕೆಲಸವನ್ನೂ ಸಹ ಮಾಡುತ್ತಿದ್ದಾರೆ. ಕೋವಿಡ್-19 ಕೆಲವೊಂದು ಸೂಕ್ಷ್ಮ ವರ್ಗದ ಜನರಿಗೆ ತಗುಲುವ ಅಪಾಯ ಹೆಚ್ಚಿರುವುದನ್ನು ಪರಿಗಣಿಸಿ, ವೃದ್ಧರು, ಅನಾರೋಗ್ಯಪೀಡಿತರು ಮತ್ತು ನ್ಯೂನ್ಯತೆ ಇರುವಂತಹ ಸಾರ್ವಜನಿಕರು ಸೇರಿ ಸುಮಾರು 1.59 ಕೋಟಿ ಮನೆಗಳಿಗೆ ಭೇಟಿ ನೀಡಿ ಒಂದು ಬಾರಿ ಸಮೀಕ್ಷೆ ನಡೆಸುವ ಕಾರ್ಯ ಮಾಡಿದ್ದಾರೆ. ಆಶಾಕಾರ್ಯಕರ್ತೆಯರು ಆಗಿಂದಾಗ್ಗೆ ತಮ್ಮ ಕಾರ್ಯವ್ಯಾಪ್ತಿಯ ಪ್ರದೇಶದಲ್ಲಿನ ಅಪಾಯ ಎದುರಿಸುತ್ತಿರುವ ವರ್ಗದವರ ಆರೋಗ್ಯದ ಮೇಲೆ ನಿಗಾ ಇರಿಸುತ್ತಾರೆ. ಅವರು ಕೆಲವೊಮ್ಮೆ ನಿರ್ಬಂಧಿತ ವಲಯಗಳಲ್ಲಿ ದಿನಕ್ಕೊಂದು ಬಾರಿ ಮತ್ತು ಇತರೆ ಪ್ರದೇಶಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಅವರು ಐಎಲ್ಐ/ಎಸ್ಎಆರ್ (ಸಾರಿ) ಲಕ್ಷಣಗಳುಳ್ಳ ವ್ಯಕ್ತಿಗಳ ಮನೆಗೆ ಹಾಗೂ ರಾಜ್ಯ ಆರೋಗ್ಯ ಇಲಾಖೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರುವ ಹೆಚ್ಚಿನ ಅಪಾಯ ಎದುರಿಸುತ್ತಿರುವಂತಹ ಸಾರ್ವಜನಿಕರ ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ.

ಕೋವಿಡ್-19 ಮತ್ತು ಕೋವಿಡ್-19ಯೇತರ ಸೇವೆಗಳನ್ನು ನೀಡುವ ಕುರಿತಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇತೃತ್ವದಲ್ಲಿ ರಚಿಸಲಾಗಿರುವ ಗ್ರಾಮೀಣ ಕಾರ್ಯಪಡೆಯ ಭಾಗವಾಗಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಫೀವರ್ ಕ್ಲಿನಿಕ್ ಮತ್ತು ಗಂಟಲುದ್ರವ ಸಂಗ್ರಹಣಾ ಕೇಂದ್ರದಲ್ಲಿ ನಡೆಸುತ್ತಿರುವ ನಾನಾ ಬಗೆಯ ಜಾಗೃತಿ ಮೂಡಿಸುವ ಕಾರ್ಯದಲ್ಲಿ  ನಗರ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದಾರೆ. ಅಲ್ಲದೆ ಅವರು ನಗರ ಪ್ರದೇಶಗಳಲ್ಲಿ ಐಎಲ್ಐ ಮತ್ತು ಎಸ್ಎಆರ್ ಪ್ರಕರಣಗಳ ಸಕ್ರಿಯ ತಪಾಸಣೆಯನ್ನು ಮಾಡುತ್ತಿದ್ದಾರೆ. ಅವರು ಅಂತರ್ ರಾಜ್ಯ ಮತ್ತು ಅಂತಾರಾಷ್ಟ್ರೀಯ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆ ನಡೆಸುವ ತಂಡಗಳ ಭಾಗವಾಗಿಯೂ ಕೆಲಸ ಮಾಡುತ್ತಿದ್ದಾರೆ.

***



(Release ID: 1636131) Visitor Counter : 1050