PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 26 JUN 2020 6:29PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

 

ಕೋವಿಡ್-19 ಹೊಸ ಮಾಹಿತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತ ಮಾಹಿತಿ:

ಚೇತರಿಕೆಯ ಪ್ರಕರಣಗಳು ಸಕ್ರಿಯ ಪ್ರಕರಣಗಳಿಗಿಂತ 96,000ಕ್ಕಿಂದ ಹೆಚ್ಚಾಗಿವೆ.  ಕೋವಿಡ್-19 ಚೇತರಿಕೆಯ ಪ್ರಮಾಣ 58.24% ಕ್ಕೆ ಸುಧಾರಿಸಿದೆ.  ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳಿಗಿಂತ  96,173ಷ್ಟು  ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ, ಒಟ್ಟು 13,940 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದ್ದು, ಇದರಿಂದಾಗಿ ಒಟ್ಟು ಸಂಖ್ಯೆಯು 2,85,636 ರಷ್ಟಾಗಿದೆ. ಚೇತರಿಕೆಯ ಪ್ರಮಾಣವು 58.24% ಅನ್ನು ತಲುಪಿದೆ. ಪ್ರಸ್ತುತ, 1,89,463 ಸಕ್ರಿಯ ಪ್ರಕರಣಗಳಿವೆ ಮತ್ತು ಇವೆಲ್ಲವೂ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ. ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳ ಜಾಲವನ್ನು ದೇಶಾದ್ಯಂತ ವಿಸ್ತರಿಸುವ ಕಾರ್ಯದಲ್ಲಿ ಐಸಿಎಂಆರ್ ಕಳೆದ 24 ಗಂಟೆಗಳಲ್ಲಿ 11 ಹೊಸ ಪ್ರಯೋಗಾಲಯಗಳನ್ನು ಸೇರಿಸಿದೆ.  ಭಾರತದಲ್ಲಿ ಈಗ ಕೋವಿಡ್-19 ಕ್ಕೆ  ಮೀಸಲಾಗಿರುವ 1016 ಡಯಗ್ನೊಸ್ಟಿಕ್ ಲ್ಯಾಬ್‌ಗಳಿವೆ. ಇದು ಸರ್ಕಾರಿ ವಲಯದಲ್ಲಿ 737 ಮತ್ತು 279 ಖಾಸಗಿ ಪ್ರಯೋಗಾಲಯಗಳನ್ನು ಒಳಗೊಂಡಿದೆ.  ಕಳೆದ 24 ಗಂಟೆಗಳ ಅವಧಿಯಲ್ಲಿ, ಪ್ರಯೋಗಾಲಯಗಳಲ್ಲಿ 2,15,446 ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ  ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 77,76,228.

ವಿವರಗಳಿಗಾಗಿ : https://pib.gov.in/PressReleasePage.aspx?PRID=1634478

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಈಶಾನ್ಯ ರಾಜ್ಯಗಳಿಗೆ ಕೇಂದ್ರವು ಸಹಾಯ ಹಸ್ತ ನೀಡಿತು

ಕೋವಿಡ್-19 ರ ವಿರುದ್ಧ ಹೋರಾಡಲು   ಈಶಾನ್ಯ ರಾಜ್ಯಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸಲು ಕೇಂದ್ರವು ಪೂರ್ವಭಾವಿಯಾಗಿ ಮತ್ತು ಪ್ರಬಲವಾಗಿ ನೆರವನ್ನು ಒದಗಿಸಿದೆ. ಈಶಾನ್ಯ (ಎನ್‌ಇ) ರಾಜ್ಯಗಳು ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಕೋವಿಡ್ -19 ಪ್ರಕರಣಗಳನ್ನು ಹೊಂದಿವೆ. ‍ಪ್ರಸ್ತುತ ಸಕ್ರಿಯ ಪ್ರಕರಣಗಳು 3731 ಆಗಿದ್ದರೆ, ಚೇತರಿಸಿಕೊಂಡವರ ಸಂಖ್ಯೆ 5715 ಕ್ಕೆ ಮೀರಿದೆ. ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಲ್ಲಿ ಯಾವುದೇ ಸಾವು ಸಂಭವಿಸದೆ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಕೇಂದ್ರವು ಗಮನವನ್ನು ಕೇಂದ್ರೀಕರಿಸಿದ ಪರಿಣಾಮವಾಗಿ, ಈಶಾನ್ಯ ರಾಜ್ಯಗಳು ಈಗ ಸಾರ್ವಜನಿಕ ವಲಯದಲ್ಲಿ 39 ಮತ್ತು ಖಾಸಗಿ ವಲಯದಲ್ಲಿ ಮೂರು ಪರೀಕ್ಷಾ ಪ್ರಯೋಗಾಲಯಗಳನ್ನು ಹೊಂದಿದೆ. ಐಸಿಯು ಹಾಸಿಗೆಗಳು, ಪ್ರತ್ಯೇಕ ಹಾಸಿಗೆಗಳು, ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಕೇಂದ್ರವು ಈಶಾನ್ಯ ರಾಜ್ಯಗಳಿಗೆ ನೆರವು ನೀಡಿದೆ ಮತ್ತು ಎನ್ 95 ಮುಖಗವಸುಗಳು, ಪಿಪಿಇ ಕಿಟ್‌ಗಳು ಮತ್ತು ಎಚ್‌ಸಿಕ್ಯು ಮಾತ್ರೆಗಳ ಲಭ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕೋವಿಡ್-19 ಪ್ರಕರಣಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1634434

'ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜರ್ ಅಭಿಯಾನ್' ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜರ್ ಅಭಿಯಾನ್' ಉದ್ಘಾಟಿಸಿದರು. ಇದರ ಅಡಿಯಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸಲಾಗುವುದು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲರೂ ತೊಂದರೆಗಳನ್ನು ನಿವಾರಿಸಬಹುದಾಗಿದೆ. ಲಸಿಕೆ ದೊರೆಯುವವರೆಗೂ, ಎರಡು ಗಜ  ದೂರ ವನ್ನು ಕಾಪಾಡಿಕೊಳ್ಳುವುದು, ಮುಖಗವುಸಿನಿಂದ ಮುಖವನ್ನು ಮುಚ್ಚಿಕೊಳ್ಳುವುದು ಉತ್ತಮ ಮುನ್ನೆಚ್ಚರಿಕೆಗಳು ಎಂದು ಅವರು ಒತ್ತಿ ಹೇಳಿದರು. ಉತ್ತರ ಪ್ರದೇಶವು ಈ ದುರಂತವನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿದ ರೀತಿಯ ಬಗ್ಗೆ ,  ಈ ಸಾಂಕ್ರಾಮಿಕ ಸಮಯದಲ್ಲಿ ಜನರು ತೊಡಗಿಸಿಕೊಂಡ ರೀತಿಯ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಇತರ ರಾಜ್ಯಗಳು 'ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜರ್ ಅಭಿಯಾನ್' ನಿಂದ ಸಾಕಷ್ಟು ಕಲಿಯಲಿವೆ ಮತ್ತು ಅದರಿಂದ ಸ್ಫೂರ್ತಿ ಪಡೆಯಲಾಗುವುದು ಎಂದು ಅವರು ಹೇಳಿದರು. ಜಗತ್ತಿನಲ್ಲಿ ಕೊರೊನಾದಿಂದಾಗಿ ಇಷ್ಟು ದೊಡ್ಡ ಬಿಕ್ಕಟ್ಟಿನಲ್ಲಿದ್ದಾಗ ಉತ್ತರ ಪ್ರದೇಶ ತೋರಿಸಿದ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ರಾಜ್ಯವು ಯಶಸ್ವಿಯಾದ ರೀತಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಭೂತಪೂರ್ವವಾಗಿದೆ ಮತ್ತು ಇದು ಪ್ರಶಂಸನೀಯವಾಗಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿ ವೈದ್ಯರು, ಪ್ಯಾರಾ-ಮೆಡಿಕೋಸ್, ನೈರ್ಮಲ್ಯ ಸಿಬ್ಬಂದಿ, ಪೊಲೀಸ್, ಆಶಾ, ಅಂಗನವಾಡಿ ಕಾರ್ಮಿಕರು, ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು, ಸಾರಿಗೆ ಸೇವೆಗಳು, ಕಾರ್ಮಿಕರ ಕೊಡುಗೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1634472

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆತ್ಮಾನಿರ್ಭರ್ ಉತ್ತರ ಪ್ರದೇಶ ರೋಜರ್ ಅಭಿಯಾನ್  ಚಾಲನೆಯ ಸಂದರ್ಭದಲ್ಲಿ   ಪ್ರಧಾನ ಮಂತ್ರಿಯವರ ಭಾಷಣದ ಪಠ್ಯ

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1634502

ಗರಿಬ್ ಕಲ್ಯಾಣ್ ರೋಜರ್ ಅಭಿಯಾನ್ ವೆಬ್ ಪೋರ್ಟಲ್  ಅನ್ನು ಆರಂಭಿಸಲಾಗಿದೆ

ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಗರಿಬ್ ಕಲ್ಯಾಣ್ ರೋಜರ್ ಅಭಿಯಾನ್  ವೆಬ್ ಪೋರ್ಟಲ್  ಗೆ ಇಂದು ಚಾಲನೆ ನೀಡಿದರು. ಗರಿಬ್ ಕಲ್ಯಾಣ್ ರೋಜರ್ ಅಭಿಯಾನ್ ಭಾರತ ಸರ್ಕಾರದ ಬೃಹತ್ ಉದ್ಯೋಗ ಉತ್ಪಾದನೆ ಮತ್ತು ಗ್ರಾಮೀಣ ಮೂಲಸೌಕರ್ಯ ಸೃಷ್ಟಿಸುವ ಕಾರ್ಯಕ್ರಮವಾಗಿದ್ದು, ಇದನ್ನು ಜೂನ್ 20ಮ 2020ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು,  ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾಗುವ ಪರಿಸ್ಥಿತಿಯ ಕಾರಣದಿಂದಾಗಿ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ಮುಂದಿನ ನಾಲ್ಕು ತಿಂಗಳುಗಳವರೆಗೆ .ತಮ್ಮ ಸ್ವಂತ ಊರಿನಲ್ಲಿ ಉದ್ಯೋಗ ನೀಡುವುದು ಇದರ ಉದ್ದೇಶ.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1634566

ಜೂನ್ 21 ರಂದು ದೆಹಲಿಯಲ್ಲಿ ಕೋವಿಡ್-19 ಬಗ್ಗೆ ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಪರಿಶೀಲನಾ ಸಭೆ ನಡೆಸಿದರು

ಕೇಂದ್ರ ಗೃಹ ಕಾರ್ಯದರ್ಶಿಯವರು ನಡೆಸಿದ ಸಭೆಯಲ್ಲಿ, ನಿರ್ಧಾರಗಳನ್ನು ಸುಗಮವಾಗಿ ಮತ್ತು ಸಮಯೋಚಿತವಾಗಿ ಜಾರಿಗೊಳಿಸಲಾಗುತ್ತಿದೆ ಮತ್ತು ದೆಹಲಿಗೆ ಕೋವಿಡ್-19ರ ಪ್ರತಿಸ್ಪಂದನೆಯ  ಯೋಜನೆಯನ್ನು ಅಂತಿಮಗೊಳಿಸಲಾಗಿದೆ ಎಂದು ಸ್ಪಷ್ಟವಾಗಿ ಗಮನಿಸಲಾಗಿದೆ. ಕೋವಿಡ್-19 ಸಂಬಂಧಿತ ಕಾರ್ಯಗಳಿಗಾಗಿ ಜಿಲ್ಲಾ ಮಟ್ಟದ ತಂಡಗಳನ್ನು ಸಹ ರಚಿಸಲಾಯಿತು. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾರವರು ನಿಗದಿಪಡಿಸಿದ ಸಮಯದ ಪ್ರಕಾರ ದೆಹಲಿಯಲ್ಲಿ ಕೋವಿಡ್ -19 ಹರಡಿರುವ ಎಲ್ಲಾ ಕ್ಲಸ್ಟರ್‌ಗಳನ್ನು ಒಳಗೊಂಡಂತೆ ನಿಯಂತ್ರಣ ವಲಯಗಳ ಮರುವರ್ಗೀಕರಣವು  ಜೂನ್ 26 ರೊಳಗೆ ಪೂರ್ಣಗೊಳ್ಳಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಮನೆ ಮನೆಯ ಆರೋಗ್ಯ ಸಮೀಕ್ಷೆಯನ್ನು ಜೂನ್ 30 ರೊಳಗೆ ಪೂರ್ಣಗೊಳಿಸಲಾಗುವುದು.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1634499

ಕೋವಿಡ್ -1 ಕಾರಣದಿಂದಾಗಿ ಉಂಟಾಗಿರುವ  ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 2020 ಜುಲೈ 1 ರಿಂದ 15 ರವರೆಗೆ ನಿಗದಿಯಾಗಿದ್ದ 10 ಮತ್ತು 12ನೆಯ  ತರಗತಿಗಳ ಪರೀಕ್ಷೆಗಳನ್ನು ಸಿಬಿಎಸ್ ರದ್ದುಗೊಳಿಸಿದೆ.

ವಿವಿಧ ರಾಜ್ಯ ಸರ್ಕಾರಗಳಿಂದ ಪಡೆದ ಕೋರಿಕೆ ಮತ್ತು ಕೋವಿಡ್ 19 ರ ಕಾರಣದಿಂದಾಗಿ ಉಂಟಾಗಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, 2020 ಜುಲೈ 1 ರಿಂದ 15ರವರೆಗೆ ನಡೆಯಬೇಕಿದ್ದ 10 ಮತ್ತು 12ನೆಯ ತರಗತಿಗಳ ಪರೀಕ್ಷೆಗಳನ್ನು ರದ್ದುಗೊಳಿಸಲು ಸಿಬಿಎಸ್‌ಇ ನಿರ್ಧರಿಸಿದೆ. ಇಂದು ಸುಪ್ರೀಂ ಕೋರ್ಟ್ ಪರೀಕ್ಷೆಯನ್ನು ರದ್ದುಗೊಳಿಸುವ ಸಿಬಿಎಸ್‌ಇ ಪ್ರಸ್ತಾವನೆಯನ್ನು ಹಾಗು ಹತ್ತು ಮತ್ತು ಹನ್ನೆರಡನೇ ತರಗತಿಯ ಕಡೆಯ ಪರಿಕ್ಷೆಗಳಲ್ಲಿನ ವಿದ್ಯಾರ್ಥಿಗಳ ಅಂತಿಮ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ಯೋಜನೆಗೆ ಒಪ್ಪಿಗೆ ನೀಡಿದೆ. ಸಿಬಿಎಸ್‌ಇಯ ಸಮರ್ಥ ಸಮಿತಿ ಸೂಚಿಸಿದಂತೆ ಮೌಲ್ಯಮಾಪನ ಯೋಜನೆಯ ಆಧಾರದ ಮೇಲೆ ರದ್ದಾದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಯಿಂದ ಮೌಲ್ಯಮಾಪನ ಮಾಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಹೇಳಿದರು. ಸಿಬಿಎಸ್‌ಇ ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ಹತ್ತ ಮತ್ತು ಹನ್ನೆರಡನೆಯ ತರಗತಿಗಳ ಐಚ್ಛಿಕ ಪರೀಕ್ಷೆಯನ್ನು 2020 ಜುಲೈ 1 ರಿಂದ 15 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಮೌಲ್ಯಮಾಪನ ಯೋಜನೆಯ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸುವ ಅಭ್ಯರ್ಥಿಗಳು ಬಯಸಿದಲ್ಲಿ ಅವರ ಕಾರ್ಯಕ್ಷಮತೆಯನ್ನು ಸುಧಾರಿಸಲು ಈ ಐಚ್ಛಿಕ ಪರೀಕ್ಷೆಗಳಲ್ಲಿ ಹಾಜರಾಗಲು ಅನುಮತಿಸಲಾಗುತ್ತದೆ.  ಹತ್ತನೇ ತರಗತಿಯ ಅಭ್ಯರ್ಥಿಗಳಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಅವರು ಹೇಳಿದರು. ಮೇಲಿನ ಮೌಲ್ಯಮಾಪನ ಯೋಜನೆಯ ಆಧಾರದ ಮೇಲೆ 2020 ಜುಲೈ 15 ರೊಳಗೆ ಫಲಿತಾಂಶಗಳನ್ನು ಘೋಷಿಸಲಾಗುವುದು ಇದರಿಂದ ಅಭ್ಯರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಗೆ ಅರ್ಜಿ ಸಲ್ಲಿಸಬಹುದು ಮತ್ತು ಪ್ರವೇಶ ಪಡೆಯಬಹುದು.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1634520

ಭಾರತದಲ್ಲಿ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿಗಾಗಿ ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸುವುದು ಮುಖ್ಯವಾಗಿದೆ -  ಶ್ರೀ ನಿತಿನ್ ಗಡ್ಕರಿ

ಸಾಂಕ್ರಾಮಿಕ ಪರಿಸ್ಥಿತಿಯ ನಂತರದ ಕ್ಷೇತ್ರದ ಬೆಳವಣಿಗೆಯ ಕುರಿತು ಚರ್ಚಿಸಲು ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ನಿನ್ನೆ ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಲಾಕ್ ಡೌನ್ ಸಮಯದಲ್ಲಿ ಆರ್ಥಿಕತೆಯ ಪ್ರತಿಯೊಂದು ವಲಯವು ಅಲ್ಪಾವಧಿಯ ತೊಂದರೆಗಳನ್ನು ಎದುರಿಸುತ್ತಿದ್ದರೂ, "ಸಕಾರಾತ್ಮಕತೆ ಮತ್ತು ಆತ್ಮ ವಿಶ್ವಾಸ" ತಕ್ಷಣದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸುವ ಮೂಲಕ ಶ್ರೀ ಗಡ್ಕರಿ ಅವರು ತಜ್ಞರ ತಂಡವನ್ನು ಪ್ರೇರೇಪಿಸಿದರು. ಎಂಎಸ್‌ಎಂಇ ವಲಯವು ಪ್ರಸ್ತುತ ದೇಶದ ರಫ್ತಿಗೆ ಸುಮಾರು 48% ನಷ್ಟು ಕೊಡುಗೆ ನೀಡುತ್ತಿದೆ ಮತ್ತು ತಾಂತ್ರಿಕ ಉನ್ನತೀಕರಣ ಮತ್ತು ಉತ್ಪನ್ನಗಳ ಅಭಿವೃದ್ಧಿಯ ಮೂಲಕ ಇದನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಸಾಗಾಣಿಕೆ, ಸಾರಿಗೆ ಮತ್ತು ಕಾರ್ಮಿಕವೇತನದ ವೆಚ್ಚದಲ್ಲಿ ಗಣನೀಯ ಇಳಿಕೆ ಭಾರತದ ಉತ್ಪಾದನಾ ಉದ್ಯಮದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಕೋವಿಡ್-ಸಾಂಕ್ರಾಮಿಕವನ್ನು ಜಗತ್ತು ಕ್ರಮೇಣ ನಿಭಾಯಿಸುತ್ತಿರುವಾಗ, ದೇಶವು ರಫ್ತುಗಳನ್ನು ಬೆಂಬಲಿಸಲು ಅಭಿವೃದ್ಧಿಪಡಿಸಬೇಕಾದ ಇತರ ಪ್ರಮುಖ ಅಂಶವೆಂದರೆ ಪ್ಯಾಕೇಜಿಂಗ್ ಮತ್ತು ಮಾನದಂಡದ ಸೌಲಭ್ಯಗಳು.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1634438

ಎನ್ಐಟಿಐ ಆಯೋಗವು ವರ್ತನೆಯ ಬದಲಾವಣೆಯ ಅಭಿಯಾನವಾದ 'ನ್ಯಾವಿಗೇಟ್ ದಿ ನ್ಯೂ ನಾರ್ಮಲ್' ಮತ್ತು ಜಾಲತಾಣವನ್ನು (ಎಲ್ಲರೂ ಮುಖಗವಸು ಧರಿಸುವ ಬಗ್ಗೆ ಅಗತ್ಯ ಗಮನ) ಪ್ರಾರಂಭಿಸಿದೆ

ಎನ್ಐಟಿಐ ಆಯೋಗ್, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ (ಬಿಎಂಜಿಎಫ್), ಅಶೋಕ ವಿಶ್ವವಿದ್ಯಾಲಯದ ಸಾಮಾಜಿಕ ಮತ್ತು ವರ್ತನೆಯ ಬದಲಾವಣೆ ಕೇಂದ್ರ (ಸಿಎಸ್‌ಬಿಸಿ) ಮತ್ತು ಎಚ್‌ಎಫ್‌ಡಬ್ಲ್ಯೂ ಮತ್ತು ಡಬ್ಲ್ಯೂಸಿಡಿ ಸಚಿವಾಲಯಗಳ ಸಹಭಾಗಿತ್ವದಲ್ಲಿ 'ನ್ಯಾವಿಗೇಟ್ ದಿ ನ್ಯೂ ನಾರ್ಮಲ್' ಎಂಬ ವರ್ತನೆಯ ಬದಲಾವಣೆಯ ಅಭಿಯಾನವನ್ನು ಮತ್ತು ಅದರ ಜಾಲತಾಣವನ್ನು ನಿನ್ನೆ ಪ್ರಾರಂಭಿಸಿತು,. ಈಗಿರುವ ಸಾಂಕ್ರಾಮಿಕ ರೋಗದ ‘ಅನ್ಲಾಕ್’ ಹಂತದಲ್ಲಿ, ವಿಶೇಷವಾಗಿ ಮುಖಗವಸುಗಳನ್ನು ಧರಿಸಿ, ಕೋವಿಡ್-ಸುರಕ್ಷಿತ ವರ್ತನೆಗಳ ಮೇಲೆ ಕೇಂದ್ರೀಕರಿಸಿದ ಈ ಅಭಿಯಾನದ ವಾಸ್ತವೋಪಮ (ವರ್ಚುವಲ್) ಚಾಲನೆಯಲ್ಲಿ 92,000 ಎನ್‌ಜಿಒಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಭಾಗವಹಿಸಿದವು. ಭಾರತ ಸರ್ಕಾರ ರಚಿಸಿದ ಮತ್ತು ಸಿಇಒ, ಎನ್ಐಟಿಐ ಆಯೋಗ್ ಅವರ ಅಧ್ಯಕ್ಷತೆಯಲ್ಲಿ ಎಂಪವರ್ಡ್ ಗ್ರೂಪ್ 6 ರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಈ ಅಭಿಯಾನವು ಎರಡು ಭಾಗಗಳನ್ನು ಹೊಂದಿದೆ. ಮೊದಲನೆಯದು ವೆಬ್‌ಪೋರ್ಟಲ್, http://www.covidthenewnormal.com/ , ಇದು ವರ್ತನೆಯ ವಿಜ್ಞಾನದಿಂದ ತಿಳಿಸಲಾದ ಸಂಪನ್ಮೂಲಗಳನ್ನು ಒಳಗೊಂಡಿರುತ್ತದೆ ಮತ್ತು ಈಗಿರುವ ಅನ್‌ಲಾಕ್ ಹಂತದಲ್ಲಿ ಕೋವಿಡ್ ಸುರಕ್ಷಿತ ನಡವಳಿಕೆಯ ರೂಢಿಗಳಿಗೆ ಸಂಬಂಧಿಸಿದ ನಡ್ಜ್ ಮತ್ತು ಸಾಮಾಜಿಕ ರೂಢಿ ಸಿದ್ಧಾಂತದ ಬಳಕೆ ಮತ್ತು ಎರಡನೆಯದು ಒಂದು ಮಾಧ್ಯಮ ಪ್ರಚಾರವು ಮುಖವಾಡಗಳನ್ನು ಧರಿಸುವುದರ ಮೇಲೆ ಕೇಂದ್ರೀಕರಿಸಿದೆ. ಅನ್ಲಾಕ್ ಹಂತದಲ್ಲಿ ಈ ನಾಲ್ಕು ಪ್ರಮುಖ ನಡವಳಿಕೆಗಳನ್ನು ಸುಲಭವಾಗಿ ಅನುಷ್ಠಾನಗೊಳಿಸುವ ಬಗ್ಗೆ ಪೋರ್ಟಲ್ ಗಮನಹರಿಸುತ್ತದೆ: ಮುಖವಾಡ ಧರಿಸುವುದು, ಸಾಮಾಜಿಕ ಅಂತರವಿರುವುದು, ಕೈ ನೈರ್ಮಲ್ಯ ಮತ್ತು. ಸಾರ್ವಜನಿಕವಾಗಿ ಉಗುಳದೇ ಇರುವುದು.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1634328

ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವರು ಎಲ್ಲಾ ರಾಜ್ಯಗಳನ್ನು ಮತ್ತು ಹೂಡಿಕೆದಾರರನ್ನು ಭಾರತದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಸವಾಲುಗಳಾಗಿ ಪರಿವರ್ತಿಸಲು ಆಹ್ವಾನಿಸಿದರು

ವಿಶೇಷ ಹೂಡಿಕೆ ವೇದಿಕೆಯ ಆಹಾರ ಸಂಸ್ಕರಣಾ ಆವೃತ್ತಿಯ ಎರಡನೇ ಸರಣಿಯ ಅಧ್ಯಕ್ಷತೆಯನ್ನು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ  ಸಚಿವರಾದ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ವಹಿಸಿದ್ದರು. ಮೊದಲಿನಿಂದಲೂ ದೇಶದ ಮೂಲೆ ಮೂಲೆಯಲ್ಲಿ ಅಗತ್ಯ ವಸ್ತುಗಳನ್ನು ವಿಶೇಷವಾಗಿ ಆಹಾರವನ್ನು ಲಭ್ಯವಾಗುವಂತೆ ಮಾಡುವ ಸರ್ಕಾರದ ಪ್ರಯತ್ನದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಯಶಸ್ವಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಔಪಚಾರಿಕಗೊಳಿಸಲು 2020 ರ ಜೂನ್ 29 ರಂದು ಪ್ರಾರಂಭಿಸಲಿರುವ ಸಚಿವಾಲಯದ ಹೊಸ ಯೋಜನೆಯ ಬಗ್ಗೆ ಸಚಿವರು ಮಾಹಿತಿ ನೀಡಿದರು, ಇದು ಇತ್ತೀಚಿನ ಜ್ಞಾನ, ಕೈಗೆಟುಕುವ ಸಾಲ ಮತ್ತು ಹೊಸ ಮಾರುಕಟ್ಟೆಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಆಹಾರ ಸಂಸ್ಕರಣೆಯಲ್ಲಿನ ಒಟ್ಟು ಉದ್ಯೋಗದ 74%  ಭಾಗವು ಅಸಂಘಟಿತ ವಿಭಾಗದಲ್ಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.  ನಮಗೆ ತಿಳಿದಿರುವ 25 ಲಕ್ಷ ಘಟಕಗಳಲ್ಲಿ 60% ಗ್ರಾಮೀಣ ಪ್ರದೇಶಗಳಲ್ಲಿದೆ ಮತ್ತು ಇವುಗಳಲ್ಲಿ 80% ಕುಟುಂಬ ಒಡೆತನದಲ್ಲಿದೆ. ಈ ವಿಭಾಗ ಮಾತ್ರ ‘ಆತ್ಮನಿರ್ಭರ ಭಾರತ್’ ನ ಭವಿಷ್ಯವಾಗಬಹುದು ಮತ್ತು ಉಪಕ್ರಮವನ್ನು ಯಶಸ್ವಿಗೊಳಿಸಬಹುದು.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1634533

ಆಪರೇಷನ್  ಸಮುದ್ರ ಸೇತು ಐಎನ್ಎಸ್ ಜಲಾಶ್ವ ಭಾರತೀಯರನ್ನು ಇರಾನ್ ದೇಶದ ಬಂದರ್ ಅಬ್ಬಾಸ್ ನಿಂದ ಹೊತ್ತು ಹೊರಟಿತು  

ಭಾರತೀಯ ನೌಕಾಪಡೆಯ ಹಡಗು ಐಎನ್‌ಎಸ್ ಜಲಾಶ್ವ 24 ನೇ ಸಂಜೆ ಇರಾನ್‌ನ ಬಂದರ್ ಅಬ್ಬಾಸ್‌ನಿಂದ ಹೊರಟು ನಿನ್ನೆ ಬಂದರಿಗೆ ಪ್ರವೇಶಿಸಿತು. ಭಾರತೀಯ ನೌಕಾಪಡೆಯ ‘ಆಪರೇಷನ್ ಸಮುದ್ರ ಸೇತು’ ಕಾರ್ಯಾಚರಣೆಯ ಅಡಿಯಲ್ಲಿ ಮತ್ತೊಂದು ಕಾರ್ಯಾಚರಣೆಗಾಗಿ. ಕಡ್ಡಾಯ ವೈದ್ಯಕೀಯ ಮತ್ತು ಬ್ಯಾಗೇಜ್ ತಪಾಸಣೆಯ ನಂತರ ಹಡಗು 687 ಭಾರತೀಯ ನಾಗರಿಕರನ್ನು ಹೊತ್ತು ಹೊರಟಿತು. ಭಾರತೀಯ ನೌಕಾಪಡೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಎರಡು ಏರ್ ಇವಾಕ್ಯುಯೇಶನ್ ಪಾಡ್‌ಗಳನ್ನು ಈ ನೌಕಾಪಡೆಯು ಇರಾನಿನ ಅಧಿಕಾರಿಗಳಿಗೆ ಹಸ್ತಾಂತರಿಸಿತು.

ವಿವರಗಳಿಗಾಗಿ ನೋಡಿ: https://www.pib.gov.in/PressReleseDetail.aspx?PRID=1634421

ಪಶ್ಚಿಮ ರೈಲ್ವೆಯ ಸರಕು ಸಾಗಾಣಿಕೆಯು 12.304 ಮಿಲಿಯನ್ ಟನ್ ತಲುಪಿದೆ

ಕೋವಿಡ್-19 ಹರಡುವಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೊರತಾಗಿಯೂ, ಪಶ್ಚಿಮ ರೈಲ್ವೆಯು (ಇಆರ್) ತನ್ನ ಸರಕು ಸಾಗಣೆ ಸೇವೆಗಳನ್ನು  ಇಪ್ಪತ್ತನಾಲ್ಕು ಗಂಟೆಗಳ ಕಾಲ ಮುಂದುವರೆಸಿತು. ಪಶ್ಚಿಮ ರೈಲ್ವೆಯು 2020 ರ ಏಪ್ರಿಲ್ 1 ರಿಂದ 2020 ರ ಜೂನ್ 24 ರವರೆಗೆ 12.304 ಮಿಲಿಯನ್ ಟನ್ ಸರಕು ಸಾಗಣೆಯನ್ನು ನೋಂದಾಯಿಸಿದೆ. ಇದು  11.612 ಮಿಲಿಯನ್ ಟನ್ ಗುರಿಯನ್ನು ಮೀರಿದೆ. ಕೇವಲ ಕಲ್ಲಿದ್ದಲು ಸಾಗಣಿಕೆಯು  ಸಾಗಣೆಯ ಪ್ರಮುಖ ಭಾಗವಾದ 7.963 ಮಿಲಿಯನ್ ಟನ್ಗಳಷ್ಟಿದ್ದರೆ, ಇತರ ಸರಕುಗಳ ಸಾಗಾಣಿಕೆಯು ಈ ಅವಧಿಯಲ್ಲಿ 4.341 ಮಿಲಿಯನ್ ಟನ್ ಎಂದು ಅಳೆಯಲಾಗುತ್ತದೆ.

ವಿವರಗಳಿಗಾಗಿ ನೋಡಿರಿ: https://pib.gov.in/PressReleasePage.aspx?PRID=1634270

ಪಿ ಬಿ ಕ್ಷೇತ್ರ ಕಚೇರಿಗಳ ಮಾಹಿತಿ

  • ಚಂಡೀಗಢ: ಚಂಡೀಗಢದ ಆಡಳಿತಾಧಿಕಾರಿ ಎಲ್ಲಾ ಅಧಿಕಾರಿಗಳಿಗೆ ಜಾಗರೂಕತೆಯನ್ನು ಹೆಚ್ಚಿಸಲು ಮತ್ತು ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಮತ್ತು ಇತರ ನೈರ್ಮಲ್ಯ ಸೂಚನೆಗಳನ್ನು ಉಲ್ಲಂಘಿಸುತ್ತಿರುವ ಎಲ್ಲರಿಗೂ ನಗರದ ವಿವಿಧ ಭಾಗಗಳಲ್ಲಿ ಮೀಸಲಾದ ತಂಡಗಳು ನಡೆಸುವ ವಿಶೇಷ ಅಭಿಯಾನದ  ಮೂಲಕ ದಂಡ ವಿಧಿಸಬೇಕು ಎಂದು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿದರು.  
  • ಪಂಜಾಬ್: ಕೋವಿಡ್ ವಿರುದ್ಧದ ಯುದ್ಧವನ್ನು ಗೆಲ್ಲಲು ಜನರ ಸಹಕಾರ ಅತ್ಯಗತ್ಯ ಎಂದು ಪಂಜಾಬ್ ಸಾಮಾಜಿಕ ನ್ಯಾಯ, ಸಬಲೀಕರಣ ಮತ್ತು ಅಲ್ಪಸಂಖ್ಯಾತ ಸಚಿವರು ಹೇಳಿದ್ದಾರೆ,  ಜನರ ಸಹಕಾರದಿಂದ ಮಾತ್ರ ಅಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಬಹುದು. ಸೋಪ್ ಅಥವಾ ಸ್ಯಾನಿಟೈಜರ್ನೊಂದಿಗೆ ನಿಯಮಿತವಾಗಿ ಕೈ ತೊಳೆಯುವುದು ಸೇರಿದಂತೆ ಎಲ್ಲಾ ಆರೋಗ್ಯದ ಶಿಷ್ಟಾಚಾರಗಳನ್ನು  ಪಾಲಿಸಬೇಕು ಎಂದು ಅವರು ಜನರಿಗೆ ಮನವಿ ಮಾಡಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿ ಬಾರಿ ಹೊರಗೆ ಹೋಗುವಾಗ ಮುಖಗವಸುಗಳನ್ನು ಧರಿಸುವುದು ಮುಖ್ಯವಾಗಿದೆ.
  • ಹಿಮಾಚಲ ಪ್ರದೇಶ: 71 ದೇಶಗಳು / ನಗರಗಳಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ 444 ಜನರನ್ನು ವಿದೇಶದಿಂದ ಹಿಮಾಚಲ ಪ್ರದೇಶಕ್ಕೆ ಕರೆತರಲಾಗಿದೆ. ಎಲ್ಲ ವ್ಯಕ್ತಿಗಳನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಆಯಾ ವಿಮಾನ ನಿಲ್ದಾಣಗಳಲ್ಲಿ ಸ್ವೀಕರಿಸಿದರು ಮತ್ತು ಅವರನ್ನು ಸಾಂಸ್ಥಿಕ ಸಂಪರ್ಕತಡೆಯಲ್ಲಿರಿಸಿ  ರಾಜ್ಯಕ್ಕೆ ಮರಳಿ ತಲುಪಲು ಅನುಕೂಲ ಮಾಡಿಕೊಟ್ಟರು.
  • ಕೇರಳ: ವಲಸಿಗರನ್ನು ಮರಳಿ ಕರೆತರಲು ಕೇರಳವು ಕೋರಿರುವ ರಾಜ್ಯ-ನಿರ್ದಿಷ್ಟ ಪ್ರೋಟೋಕಾಲ್ಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ವಿದೇಶ ವ್ಯವಹಾರ ರಾಜ್ಯ ಸಚಿವ  ವಿ.ಮುರಳೀಧರನ್ ಹೇಳುತ್ತಾರೆ. ಏತನ್ಮಧ್ಯೆ, ರಾಜ್ಯಕ್ಕೆ ಮರಳುವ ವಲಸಿಗರಿಗೆ ಆಂಟಿಬಾಡಿ ಪರೀಕ್ಷೆಯನ್ನು ನಡೆಸಲು ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ. ಕೊಚ್ಚಿಗೆ ಇಂದು ಒಟ್ಟು 21 ವಿಮಾನಗಳು ಆಗಮಿಸುತ್ತಿವೆ. 20 ವಿಮಾನಗಳು ಕೊಲ್ಲಿಯಿಂದ ಮತ್ತು ಒಂದು ವಿಮಾನ ಜಾರ್ಜಿಯಾದಿಂದ ಬಂದಿದೆ. ವಿದೇಶದಿಂದ ಬಂದ ನಂತರ ಕೊಟ್ಟಾಯಂನಲ್ಲಿ ಹೋಂ ಕ್ಯಾರೆಂಟೈನ್ನಲ್ಲಿದ್ದ ಯುವಕನ ಸಾವಿಗೆ ಕೋವಿಡ್ -19 ಕಾರಣವಲ್ಲ ಎಂದು ದೃಢಪಡಿಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಮಾಹಿತಿಯ ರೇಖಾಚಿತ್ರದ ವಕ್ರರೇಖೆಯನ್ನು ಚಪ್ಪಟೆಗೊಳಿಸಿದ್ದಾಗಿ ಹೇಳಿಕೊಂಡಿದ್ದ ಕೇರಳ, ಅನಿವಾಸಿ ಕೇರಳಿಗರು ಲಾಕ್ಡೌನ್ ನಿರ್ಬಂಧಗಳನ್ನು ಸರಾಗಗೊಳಿಸುವ ಮೂಲಕ ಮರಳಲು ಪ್ರಾರಂಭಿಸಿದಾಗಿನಿಂದ ನಿಯಮಿತವಾಗಿ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ನಿನ್ನೆ, 123 ಕೋವಿಡ್-19 ಪ್ರಕರಣಗಳು ವರದಿಯಾಗಿವೆ, ರಾಜ್ಯದಲ್ಲಿ ಒಟ್ಟು ಸೋಂಕಿತರ  ಸಂಖ್ಯೆ 3,726 ಕ್ಕೆ ತಲುಪಿದೆ. ಪ್ರಸ್ತುತ ರಾಜ್ಯದಲ್ಲಿ 1,761 ರೋಗಿಗಳು ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
  •  ತಮಿಳುನಾಡು: ಪುದುಚೇರಿಯಲ್ಲಿ 30 ಹೊಸ ಕೋವಿಡ್ -19 ರೋಗಿಗಳ ಪ್ರಕರಣಗಳು, ಸೌಮ್ಯ ಪ್ರಕರಣಗಳನ್ನು ಐಜಿಎಂಸಿಆರ್ಐನಿಂದ ಆರೈಕೆ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ. ಒಟ್ಟಾರೆಯಾಗಿ, ಇಂದು 16 ಸೇರಿದಂತೆ 203 ರೋಗಿಗಳನ್ನು ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ ಮತ್ತು ಒಂಬತ್ತು ಮಂದಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ಗೆ ಬಲಿಯಾಗಿದ್ದಾರೆ. ನಿನ್ನೆ 3,509 ಕೋವಿಡ್ -19 ಪ್ರಕರಣಗಳೊಂದಿಗೆ ತಮಿಳುನಾಡು  ಈವರೆಗಿನ ಗರಿಷ್ಠ ಏರಿಕೆಯನ್ನು ದಾಖಲಿಸಿದೆ. ಇದರೊಂದಿಗೆ ರಾಜ್ಯವು 70,977 ದೃಢಪಡಿಸಿದ ಪ್ರಕರಣಗಳನ್ನು ಮುಟ್ಟಿದೆ. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 18969 ಮತ್ತು ನಿನ್ನೆಯ ತನಕ ರಾಜ್ಯದಲ್ಲಿ ಒಟ್ಟು 911  ಕೋವಿಡ್ ಸಾವುಗಳು ಸಂಭವಿಸಿವೆ.
  • ಕರ್ನಾಟಕ: ಬೆಂಗಳೂರು ನಗರದಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಮತ್ತೆ ಲಾಕ್ಡೌನ್ ವಿಧಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಹಾಸಿಗೆಯ ಸಾಮರ್ಥ್ಯವನ್ನು 10,000 ಕ್ಕೆ ಹೆಚ್ಚಿಸಲಾಗುವುದು ಮತ್ತು ಅಸ್ತಿತ್ವದಲ್ಲಿರುವ ಲಾಕ್ಡೌನ್ ಮಾನದಂಡಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಮುಖ್ಯ ಮಂತ್ರಿಯವರು ಹೇಳಿದರು. ಎಲ್ಲಾ 400 ನಿಯಂತ್ರಣ ವಲಯಗಳಲ್ಲಿ ಅಗತ್ಯ ವಸ್ತುಗಳ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ. ಐದನೇ ತರಗತಿಯವರೆಗೆ ಆನ್ಲೈನ್ ತರಗತಿಯನ್ನು ನಿಷೇಧಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರವನ್ನು ಬೆಂಬಲಿಸುತ್ತದೆ. ಏತನ್ಮಧ್ಯೆ, ಕೋವಿಡ್ ಚಿಕಿತ್ಸೆಗಾಗಿ 11 ಖಾಸಗಿ ಮತ್ತು ಒಂದು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 2304 ಹಾಸಿಗೆಗಳನ್ನು ಕಾಯ್ದಿರಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಸೂಚಿಸಿದೆ. ಐಎಲ್ ಮತ್ತು ಎಸ್ ಆರ್ (ಸಾರಿ) ಪ್ರಕರಣಗಳನ್ನು ಪರಿಶೀಲಿಸಲು ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು ತೆರೆಯಲು ಆರೋಗ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ರಾಜ್ಯವು ನಿನ್ನೆ 442 ಹೊಸ ಪ್ರಕರಣಗಳು ಮತ್ತು 6 ಸಾವುಗಳನ್ನು ವರದಿ ಮಾಡಿದೆ, ಒಟ್ಟು ಪ್ರಕರಣಗಳು ಈಗ 10,560 ಮತ್ತು ಒಟ್ಟು ಸಾವುಗಳು 170 ಕ್ಕೆ ತಲುಪಿದೆ.
  • ಆಂಧ್ರಪ್ರದೇಶ: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೊಡುಮುರು (ಕರ್ನೂಲ್) ಶಾಸಕ ಸುಧಾಕರ್ ಅವರು ಜೂನ್ 25 ರಂದು ಕೊರೊನಾವೈರಸ್ಗೆ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತು. ಒಂದು ವಾರದ ಅವಧಿಯಲ್ಲಿ ವೈರಸ್ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ಎರಡನೇ ಶಾಸಕರಾಗಿದ್ದಾರೆ.  ಯುಕೆ ಉಪ ಹೈಕಮಿಷನರ್ ಆಂಡ್ರ್ಯೂ ಫ್ಲೆಮಿಂಗ್ ಅವರು ಶುಕ್ರವಾರ ಟ್ವೀಟ್ ನಲ್ಲಿ ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಒಳಗೊಂಡಿರುವಲ್ಲಿ ಆಂಧ್ರಪ್ರದೇಶ ಸರ್ಕಾರ ಕೈಗೊಂಡಿರುವ ಕಾರ್ಯತಂತ್ರ, ವಿಧಾನ ಮತ್ತು ಕ್ರಮಗಳನ್ನು ಶ್ಲಾಘಿಸಿದ್ದಾರೆ.  ಕರ್ನೂಲ್ ವೈದ್ಯಕೀಯ ಕಾಲೇಜು ಪ್ಲಾಸ್ಮಾ ಚಿಕಿತ್ಸೆಗೆ ಐಸಿಎಂಆರ್ ಅನುಮೋದನೆ ಪಡೆಯಿತು. 22,305 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 605 ಹೊಸ ಪ್ರಕರಣಗಳು, 191 ಗುಣಮುಖರಾಗಿರುವ ಮತ್ತು 10 ಸಾವುಗಳು ವರದಿಯಾಗಿವೆ.  605 ಪ್ರಕರಣಗಳಲ್ಲಿ 34 ಅಂತರ್ ರಾಜ್ಯ ಪ್ರಕರಣಗಳು ಮತ್ತು ಒಂದು ವಿದೇಶದಿಂದ ಬಂದ ಪ್ರಕರಣಗಳಾಗಿವೆ. ಒಟ್ಟು ಪ್ರಕರಣಗಳು: 11,489, ಸಕ್ರಿಯ ಪ್ರಕರಣಗಳು: 6147, ಗುಣಮುಖರಾಗಿರುವುದು: 5196, ಸಾವು: 146.
  • ತೆಲಂಗಾಣ: ಕೋವಿಡ್ -19 ಮತ್ತು ಲಾಕ್ಡೌನ್ ಪರಿಸ್ಥಿತಿಯಿಂದಾಗಿ ದೋಹಾದಲ್ಲಿ ಸಿಲುಕಿಕೊಂಡಿದ್ದ 153 ತೆಲಂಗಾಣ ವಲಸಿಗರು ಕತಾರ್ನಿಂದ ಹೈದರಾಬಾದ್ಗೆ ಚಾರ್ಟರ್ಡ್ ವಿಮಾನದ ಮೂಲಕ ಆಗಮಿಸಿದರು. ಒಂದೇ ದಿನದಲ್ಲಿ 920 ಸಕಾರಾತ್ಮಕ ಪ್ರಕರಣಗಳು ವರದಿಯಾಗುತ್ತಿದ್ದಂತೆ, ತೆಲಂಗಾಣ ಸರ್ಕಾರವು  ಪರೀಕ್ಷೆಗಳ ನಿಖರತೆಯನ್ನು ಪ್ರಶ್ನಿಸುತ್ತಿದೆ. ಏಳು ಐಸಿಎಂಆರ್ ಅನುಮೋದಿತ ಖಾಸಗಿ ಲ್ಯಾಬ್ಗಳಿಂದ ಬರುವ ಕೋವಿಡ್ -19 ಪರೀಕ್ಷಾ ಫಲಿತಾಂಶಗಳ ನಿಖರತೆಯ ಬಗ್ಗೆ ರಾಜ್ಯವು ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದೆ. ಒಟ್ಟು ಪ್ರಕರಣಗಳು: 11364, ಸಕ್ರಿಯ ಪ್ರಕರಣಗಳು: 6446, ಗುಣಮುಖವಾಗಿರುವುದು: 4688.
  • ಮಹಾರಾಷ್ಟ್ರ: ಮಹಾರಾಷ್ಟ್ರವು ಅತಿ ಹೆಚ್ಚು ಏಕದಿನ ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು,  ರೋಗ ಹರಡುವಿಕೆಯ ನಂತರ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 1.4 ಲಕ್ಷ ಮೀರಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 4,841 ಹೆಚ್ಚಿನ ರೋಗಿಗಳ ಸೋಂಕು ದೃಢಪಟ್ಟ ನಂತರ ಒಟ್ಟು ದೃಢಪಡಿಸಿದ ರೋಗಿಗಳ ಸಂಖ್ಯೆ 1,47,741 ಕ್ಕೆ ಏರಿದೆ. ಇದರೊಂದಿಗೆ, ರಾಜ್ಯದಲ್ಲಿ 192 ವೈರಸ್ ಸಂಬಂಧಿತ ಸಾವುನೋವುಗಳು ವರದಿಯಾಗಿರುವುದರಿಂದ ಸಾವಿನ ಸಂಖ್ಯೆ 6,931 ಕ್ಕೆ ಏರಿದೆ.  ಸಾವಿನ ಪ್ರಮಾಣ 4.69%. ರಾಜ್ಯದಲ್ಲಿ  ಸಕ್ರಿಯ ಪ್ರಕರಣಗಳು ಈಗ 63,342 ರಷ್ಟಿದೆ ಮತ್ತು 77,453 ರೋಗಿಗಳನ್ನು  ಯಶಸ್ವಿಯಾಗಿ ಚೇತರಿಸಿಕೊಂಡ ನಂತರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.
  • ಗುಜರಾತ್: ಈವರೆಗೆ ಪತ್ತೆಯಾದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 29,578 ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 577 ಹೊಸ ಪ್ರಕರಣಗಳು ವರದಿಯಾಗಿವೆ. ಅಹಮದಾಬಾದ್ ನಗರದಿಂದ ಗರಿಷ್ಠ ಹೊಸ ಪ್ರಕರಣಗಳು, ಅಂದರೆ 225 ರೋಗಿಗಳು ವರದಿಯಾಗಿವೆ. ಇದಲ್ಲದೆ ಸೂರತ್ನಿಂದ 152 ಹೊಸ ಪ್ರಕರಣಗಳು ವರದಿಯಾಗಿದ್ದರೆ, 44 ಹೊಸ ಪ್ರಕರಣಗಳು ವಡೋದರಾದಿಂದ ವರದಿಯಾಗಿವೆ. ಗುರುವಾರ 410 ರೋಗಿಗಳು ಗುಣಮುಖರಾಗಿ ಬಿಡುಗಡೆಯಾದ ನಂತರ, ರಾಜ್ಯದಲ್ಲಿ ಕೋವಿಡ್ 19 ರಿಂದ ಚೇತರಿಸಿಕೊಂಡ ಒಟ್ಟು ರೋಗಿಗಳ ಸಂಖ್ಯೆ 21,506 ಕ್ಕೆ ಏರಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 3.45 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.
  • ರಾಜಸ್ಥಾನ: ಇಂದು ಬೆಳಿಗ್ಗೆ 91 ಹೊಸ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದ್ದು, ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 16,387 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,072 ಆಗಿದ್ದರೆ, 380 ಸಾವುಗಳು ಸಹ ಇಲ್ಲಿಯವರೆಗೆ ಸಂಭವಿಸಿವೆ. ಕೋಟಾ ಗರಿಷ್ಠ ಸಂಖ್ಯೆಯ ಹೊಸ ಪ್ರಕರಣಗಳನ್ನು ಅಂದರೆ 23 ರೋಗಿಗಳು ಸೋಂಕಿತರಾಗಿರುವುದನ್ನು ವರದಿ ಮಾಡಿದೆ, , ನಂತರ ಭರತ್ಪುರದಲ್ಲಿ 17 ರೋಗಿಗಳು ಮತ್ತು ಜೈಪುರದಲ್ಲಿ 15 ಹೊಸ ರೋಗಿಗಳಿದ್ದಾರೆ.
  • ಮಧ್ಯಪ್ರದೇಶ: 147 ಕೋವಿಡ್-19 ಹೊಸ ಪ್ರಕರಣಗಳ ವರದಿಯಿಂದಾಗಿ ರಾಜ್ಯದಲ್ಲಿ ಒಟ್ಟು 12,595 ಪ್ರಕರಣಗಳಾಗಿವೆ ಇದರಲ್ಲಿ 2,434 ಸಕ್ರಿಯ ಪ್ರಕರಣಗಳಾದರೆ, 9,619 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 542 ಸಾವುಗಳು ಇಲ್ಲಿಯವರೆಗೆ ಸಂಭವಿಸಿವೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಬೆಳವಣಿಗೆಯ ಪ್ರಮಾಣವು  1.46% ಆಗಿದೆ, ಇದು ಇತರ ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಒಟ್ಟು 76.4% ಚೇತರಿಕೆ ಪ್ರಮಾಣದೊಂದಿಗೆ ಮಧ್ಯಪ್ರದೇಶವು ರಾಜಸ್ಥಾನದ ಹಿಂದೆ ಇದ್ದು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ
  • ಛತ್ತೀಸ್ಘಡ್: 33 ಹೊಸ ಪ್ರಕರಣಗಳಿಂದಾಗಿ ಕೋವಿಡ್-19 ರೋಗಿಗಳ ಸಂಖ್ಯೆಯು 2,456 ಆಗಿದೆ.  ರಾಜ್ಯದಲ್ಲಿ 715 ಸಕ್ರಿಯ ಪ್ರಕರಣಗಳಿದ್ದರೆ, 1729 ರೋಗಿಗಳು ಇಲ್ಲಿಯವರೆಗೆ ಚೇತರಿಸಿಕೊಂಡಿದ್ದಾರೆ. ಕ್ಲಬ್ಗಳು, ಶಾಪಿಂಗ್ ಮಾಲ್ಗಳು, ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳನ್ನು ಮತ್ತೆ ತೆರೆಯಲು ಛತ್ತೀಸ್ಘಡ್ ಸರ್ಕಾರ ಅನುಮತಿ ನೀಡಿದೆ.
  • ಗೋವಾ: 44 ಹೊಸ ರೋಗಿಗಳಲ್ಲಿ ಕೋವಿಡ್-19 ದೃಢಪಟ್ಟಿದೆ ಎಂದು ಗುರುತಿಸಲಾಗಿದೆ. ಇದು ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಮಾಣವನ್ನು 995 ಕ್ಕೆ ಏರಿಸಿದೆ, ಪೈಕಿ 658 ಸಕ್ರಿಯ ಪ್ರಕರಣಗಳಾಗಿವೆ.
  • ಅಸ್ಸಾಂ: ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ, ಅಸ್ಸಾಂ ರಾಜ್ಯ ಸರ್ಕಾರ ಗುವಾಹಟಿಯಲ್ಲಿ ಜೂನ್ 28 ಭಾನುವಾರ, ಸಂಜೆ 7 ರಿಂದ 2020 ಜುಲೈ 12 ರವರೆಗೆ ಲಾಕ್ಡೌನ್ ಆದೇಶಿಸಿದೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ, ಇದುವರೆಗೆ ಕೋವಿಡ್-19  ಪರೀಕ್ಷೆಗೆ ಒಟ್ಟು 21,274 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸಕ್ರಿಯ ಪ್ರಕರಣಗಳು 129, ಚೇತರಿಸಿಕೊಂಡಿರುವವರು 42 ಮತ್ತು 1441 ಮಾದರಿಗಳ ಫಲಿತಾಂಶಗಳನ್ನು ಕಾಯಲಾಗುತ್ತಿದೆ.
  • ಮಣಿಪುರ: ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್-19 ಸೋಂಕಿನ ಪ್ರಕರಣಗಳು 162 ವರದಿಯಾಗಿದೆ, ಚುರಚಂದ್ಪುರದಲ್ಲಿ  116 ಮತ್ತು ಉಕ್ರುಲ್ ನಲ್ಲಿ  111 ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳು 702 ಮತ್ತು 354 ಚೇತರಿಸಿಕೊಂಡಿರುವ ಪ್ರಕರಣಗಳು
  • ಮಿಜೋರಾಂ: ಮಿಜೋರಾಂನಲ್ಲಿ, ಚೇತರಿಸಿಕೊಂಡ 17 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ, ಒಟ್ಟು ಕೋವಿಡ್-19 ಪ್ರಕರಣವು 147, ಸಕ್ರಿಯ ಪ್ರಕರಣಗಳು 100 ಮತ್ತು ಗುಣಮುಖರಾದವರು 47.
  • ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿ 16 ಹೊಸ ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 371.  ಸಕ್ರಿಯ ಪ್ರಕರಣಗಳು 211 ಮತ್ತು 160 ಚೇತರಿಸಿಕೊಂಡ ಪ್ರಕರಣಗಳಾಗಿವೆ.

***



(Release ID: 1636019) Visitor Counter : 211