ಪ್ರಧಾನ ಮಂತ್ರಿಯವರ ಕಛೇರಿ

ಕೋರಿಯನ್ ಯುದ್ಧದ 70 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಿಂದ ಕೋರಿಯಾ ಅಧ್ಯಕ್ಷರೂ ಹಾಗು ಕೋರಿಯಾ ಗಣತಂತ್ರದ ಜನತೆಗೆ ಅಭಿನಂದನೆ

Posted On: 25 JUN 2020 6:22PM by PIB Bengaluru

 

1950 ರಲ್ಲಿ ಆರಂಭಗೊಂಡಿದ್ದ ಕೋರಿಯನ್ ಯುದ್ಧಕ್ಕೆ 70 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಕೋರಿಯನ್ ದ್ವೀಪದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಹೋರಾಡಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗೌರವ ಸಲ್ಲಿಸಿದ್ದಾರೆ.

ಕೋರಿಯಾ ಗಣರಾಜ್ಯದ ಸಿಯೋಲ್ ನಲ್ಲಿ ಈ ಆಘಾತಕಾರಿ ಘಟನೆಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ವಿಡಿಯೋ ಸಂದೇಶವನ್ನು ಪ್ರದರ್ಶಿಸಲಾಯಿತು. ಈ ಸಮಾರಂಭವನ್ನು ದೇಶಭಕ್ತರು ಮತ್ತು ಅನುಭವಿಗಳ ವ್ಯವಹಾರಗಳ ಆರ್ ಒ ಕೆ ಸಚಿವಾಲಯ ಆಯೋಜಿಸಿದೆ ಮತ್ತು ಆರ್ ಒ ಕೆ ಅಧ್ಯಕ್ಷ ಶ್ರೀ ಮೂನ್ ಜೆ ಇನ್ ಇದರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಮಂತ್ರಿ ಮೋದಿಯವರ ಸಂದೇಶದಲ್ಲಿ ಆರ್ ಒ ಕೆ ಯುದ್ಧ ಸಂದರ್ಭದಲ್ಲಿ ಭಾರತದ ಪಾಲುದಾರಿಕೆಯನ್ನು ನೆನೆದರು. 60 ಪ್ಯಾರಾ ಫೀಲ್ಡ್ ಆಸ್ಪತ್ರೆಯನ್ನು ನಿಯೋಜಿಸುವ ರೂಪದಲ್ಲಿ ಅದು ಹೊರಹೊಮ್ಮಿದೆ ಎಂದು ಅವರು ಹೇಳಿದರು. ಆಸ್ಪತ್ರೆಯು ಯುದ್ಧ ಕಾಲದಲ್ಲಿ ಮಹತ್ತರ ಸೇವೆಯನ್ನು ಸಲ್ಲಿಸಿದೆ ಹಾಗೂ ಸೈನಿಕರು ಮತ್ತು ನಾಗರಿಕರಿಗೆ ಅವಶ್ಯಕ ವೈದ್ಯಕೀಯ ನೆರವನ್ನು ಒದಗಿಸಿದೆ. ಯುದ್ಧದ ಭಸ್ಮದಿಂದ ಮತ್ತೆ ಬೃಹತ್ ರಾಷ್ಟ್ರ ನಿರ್ಮಾಣ ಮಾಡಲು ಶ್ರಮಿಸಿದ ಕೋರಿಯಾದ ಜನತೆಯ ಕಠಿಣ ಪರಿಶ್ರಮ ಮತ್ತು ಪುನರ್ ನಿರ್ಮಾಣದ ದಾರ್ಢ್ಯತೆಗೆ ಪ್ರಧಾನ ಮಂತ್ರಿಗಳು ಅಭಿನಂದಿಸಿದರು. ಕೋರಿಯಾ ದ್ವೀಪವನ್ನು ಸುಭದ್ರಗೊಳಿಸಿ ಶಾಂತಿ ಕಾಪಾಡುವಂತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಆರ್ ಒ ಕೆ ಸರ್ಕಾರದ ಶ್ರಮವನ್ನು ಶ್ಲಾಘಿಸಿದರು. ಕೋರಿಯಾ ಪರ್ಯಾಯ ದ್ವೀಪಗಳಲ್ಲಿ ಶಾಶ್ವತ ಶಾಂತಿ ನೆಲೆಸಲಿ ಎಂಬ ಭಾರತ ಸರ್ಕಾರ ಮತ್ತು ಜನತೆಯ ಶುಭಾಶಯಗಳನ್ನು ತಿಳಿಸಿದರು.

ಅಧ್ಯಕ್ಷ ಮೂನ್ ಅಲ್ಲದೆ ರಾಷ್ಟ್ರೀಯ ರಕ್ಷಣಾ ಸಚಿವರು, ಇತರ ಸಂಸತ್ ಸಚಿವರುಗಳು, ಯುದ್ಧ ಸಮಯದಲ್ಲಿ ಆರ್ ಒ ಕೆ ಗೆ ಸಹಾಯ ನೀಡಿದ ರಾಷ್ಟ್ರಗಳನ್ನು ಪ್ರತಿನಿಧಿಸುವ ರಾಯಭಾರಿಗಳು ಮತ್ತು ಕೋರಿಯಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
 

***



(Release ID: 1634495) Visitor Counter : 186