ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಮುಂಗಾರು ಹಂಗಾಮಿನಲ್ಲಿ ನಿರಂತರ ರಸಗೊಬ್ಬರ ಪೂರೈಕೆ ಖಾತ್ರಿಗೆ ರಸಗೊಬ್ಬರ ಕಂಪನಿಗಳ ಜೊತೆ ವಿಡಿಯೋ ಸಂವಾದ

Posted On: 16 JUN 2020 5:09PM by PIB Bengaluru

ಮುಂಗಾರು ಹಂಗಾಮಿನಲ್ಲಿ ನಿರಂತರ ರಸಗೊಬ್ಬರ ಪೂರೈಕೆ ಖಾತ್ರಿಗೆ ರಸಗೊಬ್ಬರ ಕಂಪನಿಗಳ ಜೊತೆ ವಿಡಿಯೋ ಸಂವಾದ:

ಕೇಂದ್ರ ಸಚಿವ  ಸದಾನಂದ ಗೌಡ

ಕೊರೊನಾ ಬಿಕ್ಕಟ್ಟಿನ ಪ್ರತಿಕೂಲ ಪರಿಣಾಮಗಳ ನಿಯಂತ್ರಣಕ್ಕೆ ಸಹಕಾರ ನೀಡುತ್ತಿರುವ ರಸಗೊಬ್ಬರ ಉದ್ಯಮದ ಬಗ್ಗೆ  ಸಚಿವರ ಮೆಚ್ಚುಗೆ

ಕಾರ್ಮಿಕರ ಕೊರತೆ, ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಆಮದು ನಿರ್ಬಂಧ ಮತ್ತು ಇಎಸ್ಎಸ್ ಯೋಜನೆಗಳು ಮತ್ತು ಪುನಶ್ಚೇತನ ಕಾರ್ಯಗಳಿಗೆ ಯಂತ್ರೋಪಕರಣ ಮತ್ತು ಉಪಕರಣಗಳ ಆಮದು ನಿರ್ಬಂಧಗಳಂತಹ ಸವಾಲುಗಳಿಂದ ಹೊರಬರಲು

ರಸಗೊಬ್ಬರ ಉದ್ಯಮಕ್ಕೆ ಸರ್ಕಾರದಿಂದ ನೆರವು

 

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯ ರಸಗೊಬ್ಬರ ಪೂರೈಕೆಯನ್ನು ಖಾತ್ರಿಪಡಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಸಗೊಬ್ಬರ ಉದ್ಯಮಕ್ಕೆ ಸಂಬಂಧಿಸಿದ ಭಾಗಿದಾರರ ಜೊತೆ ಸಭೆ ನಡೆಸಿದರು.

ಸಂದರ್ಭದಲ್ಲಿ ಮಾತನಾಡಿದ  ಸಚಿವರು ಕೊರೊನಾ ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಹಕಾರ ನೀಡುತ್ತಿರುವ ಹಾಗೂ ಇಲ್ಲಿ ಸೇರಿರುವ ಉದ್ಯಮದ ಎಲ್ಲ ಮುಖ್ಯಸ್ಥರಿಗೆ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ. ಬಿಕ್ಕಟ್ಟು ಮತ್ತು ಆನಂತರದ ಲಾಕ್ ಡೌನ್ ನಿಂದಾಗಿ ಹಲವು ಸವಾಲುಗಳು ಎದುರಾಗಿದ್ದು, ಅದರಿಂದಾಗಿ ದೇಶಾದ್ಯಂತ ರಸಗೊಬ್ಬರ ಲಭ್ಯತೆ ಮೇಲೆ ಪ್ರತಿಕೂಲ ಪರಿಣಾಮಗಳಾಗಿವೆ. ಅದೃಷ್ಟವೆಂದರೆ ನಾವೆಲ್ಲರೂ ಒಗ್ಗೂಡಿ ಸಮಯೋಚಿತವಾಗಿ ಮುಂಬರುವ ಮುಂಗಾರು ಹಂಗಾಮಿಗೆ ರಸಗೊಬ್ಬರ ಲಭ್ಯತೆಯ ಖಾತ್ರಿಪಡಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆಎಂದು ಹೇಳಿದರು.

ಎಲ್ಲ ಅಡೆತಡೆಗಳ ನಡುವೆಯೂ ರಸಗೊಬ್ವರ ಉದ್ಯಮ ತನ್ನ ಘಟಕಗಳ ಕಾರ್ಯ ನಿರ್ವಹಣೆ ಮುಂದುವರಿಸಿರುವುದಕ್ಕೆ ಕೇಂದ್ರ ಸಚಿವ  ಸದಾನಂದ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.  

https://ci4.googleusercontent.com/proxy/heEGcZbfaj0BuQCetojfl6F40NlYAATXPyz86Mypkc0HNz2bcNlgGdodjq27PtDOt-tMA_RlsNTny1mM2y6r7YAjgpdzbl0cmKqZvg8uT-agiiKnqsFB=s0-d-e1-ft#https://static.pib.gov.in/WriteReadData/userfiles/image/image001RLP2.jpg

https://ci6.googleusercontent.com/proxy/o46UOmtlOe83ymZpdnKI-kblZ2QW6o1phEbYfwOyE4WcL34TPZWKpg-gDixxTWcROVY5pkExyBSek_XpO6dULa5A3BI5m_IJKMSJStyztyydXZjEq-KC=s0-d-e1-ft#https://static.pib.gov.in/WriteReadData/userfiles/image/image002DPNM.jpg

ಮುಂಗಾರು ಹಂಗಾಮು ಈಗಾಗಲೇ ಆರಂಭವಾಗಿದೆ. ದೇಶದ ನಾನಾ ಭಾಗಗಳಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. ವರ್ಷ ಉತ್ತಮ ಮುಂಗಾರು ಮಳೆಯಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ವರ್ಷವೂ ರಸಗೊಬ್ಬರ ಬೇಡಿಕೆ ಪ್ರಮಾಣ ಹೆಚ್ಚಿನ ಮಟ್ಟದಲ್ಲಿಯೇ ಮುಂದುವರಿಯುತ್ತದ, ಕಳೆದ ವರ್ಷಕ್ಕೆ ಹೋಲಿಸಿದರೆ ಯೂರಿಯಾ ಮತ್ತು (ಫಾಸ್ಪರಸ್ ಮತ್ತು ಪೊಟ್ಯಾಷಿಯಂ) ಪಿ ಅಂಡ್ ಕೆ ರಸಗೊಬ್ಬರ, ಡಿಬಿಟಿ ಮಾರಾಟ ಪ್ರಮಾಣ ವರ್ಷದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅಧಿಕವಾಗಿದೆ.

ವರ್ಷ ಮುಂಗಾರು ಹಂಗಾಮಿನಲ್ಲಿ 170 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ ಎಂದು ಅಂದಾಜಿಸಲಾಗಿದ್ದು, ಸದ್ಯ ಅದರ ಉತ್ಪಾದನೆ ಪ್ರಮಾಣ ಸುಮಾರು 133 ಲಕ್ಷ ಮೆಟ್ರಿಕ್ ಟನ್  ಇದೆ. ಉಳಿದ ಪ್ರಮಾಣವನ್ನು ಆಮದು ಮೂಲಕ ಲಭ್ಯವಾಗುವಂತೆ ಮಾಡಲಾಗುವುದು. ಈಗಾಗಲೇ ಎರಡು ಜಾಗತಿಕ ಟೆಂಡರ್ ಗಳನ್ನು ಕರೆಯಲಾಗಿದೆ ಮತ್ತು ಇಲಾಖೆ ದೇಶಾದ್ಯಂತ ರೈತರ ಅಗತ್ಯತೆಗಳನ್ನು ಪೂರೈಸಲು ಯೂರಿಯಾ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲಿದೆ.

2020 ಜೂನ್ 9ರಂದು ನಾನಾ ರಾಜ್ಯಗಳ ಕೃಷಿ ಇಲಾಖೆಗಳ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ವರದಿಯಾಗಿರುವಂತೆ ದೇಶಾದ್ಯಂತ ಸದ್ಯ ರಸಗೊಬ್ಬರದ ಲಭ್ಯತೆ ಸೂಕ್ತ ರೀತಿಯಲ್ಲಿ ಮುಂದುವರಿದಿದೆ ಎಂದು ಸದಾನಂದ ಗೌಡ ಹೇಳಿದರು. ಕಳೆದ ಆರು ವರ್ಷಗಳ ಸಂಪ್ರದಾಯವನ್ನು ಮುಂದುವರಿಸಲಾಗುವುದು, ವರ್ಷವೂ ಯಾವುದೇ ರೀತಿಯಲ್ಲೂ ರಸಗೊಬ್ಬರ ಕೊರತೆಯಾಗುವುದಿಲ್ಲ ಎಂಬ ಖಚಿತ ಭರವಸೆ ನನಗಿದೆ ಎಂದು ಸಚಿವರು ಹೇಳಿದರು. ಉದ್ಯಮವನ್ನು ಶ್ಲಾಘಿಸಿದ ಅವರು, ಅವರ ಅವಿರತ ಪ್ರಯತ್ನಗಳಿಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು.

ರಸಗೊಬ್ಬರ ಇಲಾಖೆಯ ಅಧಿಕಾರಿಗಳ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಲಾಕ್ ಡೌನ್ ಸಮಯದಲ್ಲಿ ಅವರು ಹಗಲಿರುಳು ದುಡ್ಡಿದಿದ್ದಾರೆ ಮತ್ತು ರಾಜ್ಯ ಸರ್ಕಾರಗಳು, ರೈಲ್ವೆ ಸಚಿವಾಲಯ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜೊತೆ ನಿಕಟ ಸಮನ್ವಯ ಸಾಧಿಸಿ, ರಸಗೊಬ್ಬರ ಘಟಕಗಳು, ಕಚ್ಚಾ ಸಾಮಗ್ರಿ, ಸಿಬ್ಬಂದಿ ಮತ್ತು ರಸಗೊಬ್ಬರ ಸಾಗಣೆಗೆ ಸಂಬಂಧಿಸಿದಂತೆ ಎದುರಿಸುತ್ತಿದ್ದ ಸಾರಿಗೆ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದರು.

ರಸಗೊಬ್ಬರ ಸಬ್ಸಿಡಿ ವಿಚಾರ ಕುರಿತಂತೆ ಮಾತನಾಡಿದ ಶ್ರೀ ಸದಾನಂದ ಗೌಡ, ಇಲಾಖೆ ಪಿ ಮತ್ತು ಕೆ ರಸಗೊಬ್ಬರಕ್ಕೆ ಪೌಷ್ಠಿಕಾಂಶ ಆಧರಿತ ಸಬ್ಸಿಡಿಯನ್ನು ನಿಗದಿಪಡಿಸುವಲ್ಲಿ ತ್ವರಿತ ಅನುಮೋದನೆಯನ್ನು ಪಡೆದುಕೊಂಡಿತು ಎಂದರು. ಅದಿಲ್ಲದೆ ಇದ್ದರೆ ಸಬ್ಸಿಡಿ ಲೆಕ್ಕಾಚಾರದಲ್ಲಿ ಅನಿಶ್ಚಿತತೆ ಉಂಟಾಗಿ ಅದು ರಸಗೊಬ್ಬರ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿದ್ದವು ಎಂದರು.

ಇಲಾಖೆಯಿಂದ ಸಬ್ಸಿಡಿ ಬಿಲ್ ಗಳ ಬಾಕಿ ಪಾವತಿ ವಿಳಂಬದಿಂದಾಗಿ ರಸಗೊಬ್ಬರ ಕಂಪನಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ನಮಗೆ ಚೆನ್ನಾಗಿಯೇ ಅರಿವಿದೆ ಎಂದು ಅವರು ಹೇಳಿದರು. ನಾವು ಸಮಸ್ಯೆ ಬಗೆಹರಿಸಲು ಹಣಕಾಸು ಸಚಿವಾಲಯದೊಂದಿಗೆ ಕಾರ್ಯೋನ್ಮುಖವಾಗಿದ್ದೇವೆ ಎಂದು ಹೇಳಿದರು.

ರಸಗೊಬ್ಬರ ಇಲಾಖೆ, ವೆಚ್ಚ ಇಲಾಖೆಯ ಜೊತೆ ಇಂಧನ ದಕ್ಷತೆ ಮಾನದಂಡ ವಿಚಾರಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದೆ ಎಂದು ಶ್ರೀ ಸದಾನಂದ ಗೌಡ ವಿವರಿಸಿದರು.

ರಸಗೊಬ್ಬರ ಉದ್ಯಮ ಎದುರಿಸುತ್ತಿರುವ ಪ್ರಮುಖ ಸವಾಲುಗಳೆಂದರೆ, () ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಿರುವ ಕಾರಣ ಉಂಟಾಗಿರುವ ಕಾರ್ಮಿಕರ ಕೊರತೆ, (ಬಿ) ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಆಮದಿಗೆ ನಿರ್ಬಂಧ, (ಸಿ) ಇಎಸ್ಎಸ್ ಯೋಜನೆಗಳ ಮತ್ತು ಪುನಶ್ಚೇತನ ಕಾರ್ಯಗಳಿಗೆ ಯಂತ್ರೋಪಕರಣ/ಉಪಕರಣಗಳ ಆಮದು ನಿರ್ಬಂಧ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಒಟ್ಟಾರೆ ಕಂಪನಿ ಅಧಿಕಾರಿಗಳು ಹಂಚಿಕೊಂಡಿರುವ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಚಿವಾಲಯ ಕೈಗೊಳ್ಳಲಿದೆ ಎಂದು ಶ್ರೀ ಸದಾನಂದ ಗೌಡ ಭರವಸೆ ನೀಡಿದರು.

ಸಹಾಯಕ ಸಚಿವ ಶ್ರೀ ಮನ್ಸೂಖ್ ಮಾಂಡವೀಯ ಅವರು, ಸಮುದ್ರ ಮಾರ್ಗಗಳಲ್ಲಿ ರಸಗೊಬ್ಬರ ಸಾಗಾಣೆ ಮತ್ತು ಬಂದರುಗಳಲ್ಲಿ ರಸಗೊಬ್ಬರ ಕೈಗಾರಿಕೆಗಳು ಎದುರಿಸುವ ಸಮಸ್ಯೆಗಳ ಕುರಿತಂತೆ ಚರ್ಚಿಸಿದರು.

ರಸಗೊಬ್ಬರ ಇಲಾಖೆ ಕಾರ್ಯದರ್ಶಿ ಶ್ರೀ ಛಬಿಲೇಂದ್ರ ರೌಲ್, ಕೋವಿಡ್ ಸಮಯದಲ್ಲಿ ರಸಗೊಬ್ಬರ ಸಾಗಾಣೆಗೆ ಎದುರಾಗಿದ್ದ ಸಮಸ್ಯೆಗಳನ್ನು ಬಗೆಹರಿಸಲು ರೈಲ್ವೆ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ಇತರ ಸಂಸ್ಥೆಗಳ ಜೊತೆ ಸಮನ್ವಯ ನಡೆಸಿದ ಪ್ರಯತ್ನಗಳನ್ನು ವಿವರಿಸಿದರು.

ಎಫ್ಎಐನ ಡಿಜಿ, ಸಾರ್ವಜನಿಕ ವಲಯದ ಉದ್ದಿಮೆಗಳ ಸಿಎಂಡಿ/ಎಂಡಿ, ಸಹಕಾರ ಸಂಸ್ಥೆಗಳು ಮತ್ತು ರಸಗೊಬ್ಬರ ಸಂಸ್ಥೆಗಳು ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಭಾಗಿಯಾಗಿದ್ದರು.

***



(Release ID: 1632253) Visitor Counter : 186